ಸಿನೆಮಾ

Share This Article To your Friends

ಮರು ಸಂದರ್ಶನ ಮಾಡಲ್ಲ... ಮಾಡು ಎನ್ನುವ ಹಕ್ಕು ಸರ್ಕಾರಕ್ಕೆ ಇಲ್ಲ : ಕೆಪಿಎಸ್‌ಸಿಬೆಂಗಳೂರು: ಸರ್ಕಾರ ಮರು ಸಂದರ್ಶನ ಮಾಡು ಅಂದುಬಿಟ್ರೆ ನಾವು ಮರು ಸಂದರ್ಶನ ಮಾಡ್ಬೇಕಾ? ಮರು ಸಂದರ್ಶನ ಮಾಡು ಅಂತ ಹೇಳೋದಕ್ಕೆ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಹೀಗಂತ ಖಡಕ್ಕಾಗಿ ಸರ್ಕಾರದ ಆದೇಶವನ್ನು ಧಿಕ್ಕರಿಸಿದೆ ಕೆಪಿಎಸ್ಸಿ.

2011ನೇ ಸಾಲಿನ 362 ಗೆಜೆಟೆಡ್ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲಿ ಅಕ್ರಮ ಆಗಿದೆ ಎಂದು ತನಿಖಾ ಸಮಿತಿ ವರದಿ ಸಲ್ಲಿಸಿದ ನಂತರ, ಮತ್ತೊಮ್ಮೆ ಮರು ಮೌಲ್ಯಮಾಪನ ಹಾಗೂ ಮರು ಸಂದರ್ಶನ ನಡೆಸಲು ಸರ್ಕಾರ ಕೆಪಿಎಸ್ಸಿಗೆ ಸೂಚಿಸಿತ್ತು. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಎಸ್ಸಿ, ಮರು ಸಂದರ್ಶನ ಮಾಡೋದಕ್ಕೆ ಆಗೋದಿಲ್ಲ ಎಂದು ಹೇಳುವುದರ ಮೂಲಕ ಸರ್ಕಾರಿ ಆದೇಶವನ್ನು ಸ್ಪಷ್ಟವಾಗಿ ಧಿಕ್ಕರಿಸಿದೆ. ಮೂಲಕ ತನ್ನ ಮೊಂಡು ಧೋರಣೆಯನ್ನು ಮುಂದುವರಿಸಿದೆ.

ಅಷ್ಟೆ ಅಲ್ಲ, ಮರು ಸಂದರ್ಶನ ಮಾಡಬೇಕೆ ಬೇಡವೆ ಎಂಬ ತೀರ್ಮಾನವನ್ನು ಆಯೋಗ ತೆಗೆದುಕೊಳ್ಳಬಹುದೇ ವಿನಾ ಸರ್ಕಾರಕ್ಕೆ ಹಕ್ಕು ಇಲ್ಲಎಂದು ಕೆಪಿಎಸ್ಸಿ ಪ್ರತಿಪಾದಿಸಿದೆ.

ಆಯೋಗದ ನಿರ್ಧಾರವನ್ನು ಸಂಬಂಧಪಟ್ಟ ನ್ಯಾಯಾಲಯಗಳು (ಕೆಎಟಿ ಅಥವಾ ಹೈಕೋರ್ಟ್) ತಡೆ ಹಿಡಿಯಬಹುದೇ ವಿನಾ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಕೆಲವು ಕೆಪಿಎಸ್ಸಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸರ್ಕಾರದ ಆದೇಶವನ್ನು ಧಿಕ್ಕರಿಸಲು ಕೆಪಿಎಸ್ಸಿ ಚಿಂತನೆ ನಡೆಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಚಟುವಟಿಕೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ 362 ಹುದ್ದೆಗಳ ಭರ್ತಿಗೆ ಮಾಡಿಕೊಂಡ ಮನವಿಯನ್ನು ಸರ್ಕಾರ ವಾಪಸು ಪಡೆಯಬಹುದು. ಹೀಗೆ ಮಾಡಿದರೆ ಮತ್ತೆ ಪೂರ್ವಭಾವಿ ಪರೀಕ್ಷೆಯಿಂದ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು