ಸಿನೆಮಾ

Share This Article To your Friends

ಈ ದೇಶದಲ್ಲಿ ಶೇ 97 ರಷ್ಟು ಮಹಿಳೆಯರನ್ನು ರೇಪ್ ಮಾಡಿದ್ದಾರಂತೆಹಾಂಕಾಂಗ್‌ : ಏಷ್ಯಾದಲ್ಲಿನ ಒಂದು ದೇಶದಲ್ಲಿ ಶೇ 97 ರಷ್ಟು ಮಹಿಳೆಯರು ಅತ್ಯಾಚಾರಕ್ಕೆ ಒಳಗಾದವರೇ ಇದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಇಲ್ಲಿನವರಲ್ಲಿ ಶೇ 62 ಕ್ಕಿಂತಲೂ ಹೆಚ್ಚಿನ ಜನರು ರೇಪಿಸ್ಟ್ಗಳು ಇದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಅದ್ರಲ್ಲೂ ಶಾಲೆಗೆ ಹೋಗುವ ಹುಡುಗಿಯರನ್ನೇ ನೆರವಾಗಿ ಟಾರ್ಗೆಟ್ ಮಾಡಿ ರೇಪ್ ಮಾಡ್ತಿದ್ರಂತೆ ಕಾಮುಕರು.

ವಿದೇಶೀ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶ್ರೀಲಂಕಾ, ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಪಪುವ ನ್ಯೂಗಿನಿ ದೇಶಗಳ ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಆದ್ರೆ ಎಲ್ಲಾ ದೇಶಗಳಿಗಿಂತ ಹೆಚ್ಚು ರೇಪ್ ಮಾಡುವವರು ಎಂದರೆ, ನ್ಯೂಗಿನಿ ದೇಶದವರು. ಇಲ್ಲಿನ ಶೇ 62 ಕ್ಕೂ ಹೆಚ್ಚು ಜಕನರು ರೇಪ್ ಮಾಡಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಅದೂ ಒಂದು ಮಹಿಳೆಯ ಮೇಲೆ ಅಲ್ಲ, ಒಬ್ಬ ಪುರುಷ ಕಡಿಮೆ ಎಂದರೂ ಮೂವರು ನಾಲ್ವರ ಮೇಲೆ ರೇಪ್ ಮಾಡಿದ್ದಾರಂತೆ..!

ಬಾಂಗ್ಲಾ ದೇಶದಲ್ಲಿ ಶೇ 12 ಜನರು, ಕಾಂಬೋಡಿಯಾದಲ್ಲಿ ಶೇ 21 ರಷ್ಟು, ಚೀನಾದಲ್ಲಿ ಶೇ 23 ರಷ್ಟು, ಇಂಡೋನೇಷಿಯಾ ದಲ್ಲಿ ಶೇ 32 ರಷ್ಟು ಮತ್ತು ನ್ಯೂಗಿನಿ ದೇಶದಲ್ಲಿ ಶೇ 62 ರಷ್ಟು ಜನರು ರೇಪ್ ಮಾಡಿರುವುದು ತಿಳಿದು ಬಂದಿದೆ.

ರೇಪ್ ಮಾಡಿದ್ದು ಹೇಗೆ ಒಪ್ಪಿಕೊಂಡರು?
ಯಾರೂ ಕೂಡ ರೇಪ್ ಮಾಡಿರುವುದನ್ನು ನೃವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ, ಸಮೀಕ್ಷೆಯಲ್ಲಿ "ರೇಪ್ / ಅತ್ಯಾಚಾರ" ಎಂಬ ಪದವನ್ನು ಬಳಸುವ ಬದಲು "ಬಲವಂತದ ಸಂಭೋಗ" ಎಂಬ ಪದವನ್ನು ಬಳಸಲಾಗಿತ್ತು.

ನೀವು ಯಾವುದಾದರೂ ಮಹಿಳೆ ಅಥವ ಹುಡುಗಿಯರ ಜೊತೆ ಬಲವಂತವಾಗಿ ಸಂಭೋಗ ಮಾಡಿದ್ದೀರಾ?

ನಿಮ್ಮ ಜೊತೆ ಲೈಂಗಿಕ ಕ್ರಿಯೆ ನಡೆಸಲು ಇಷ್ಟವಿಲ್ಲದ ಹುಡುಗಿಯ ಜೊತೆ ನೀವು ಲೈಂಗಿಕ ಕ್ರಿಯೆ ನಡೆಸಿದ್ದೀರ?

ಲೈಂಗಿಕ ಕ್ರಿಯೆಯಲ್ಲಿ ಇಷ್ಟವಿಲ್ಲ ಎಂದು ಹೇಳಿದ ಹುಡುಗಿಯ ಜೊತೆ ಎಂದಾದರೂ ಒತ್ತಾಯ ಪೂರಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರ?
ಎಂಬಂತಹ ಹಲವು ಮನೋವೈಜ್ಞಾನಿಕ ರೀತಿಯ ಪ್ರೆಶ್ನೆಗಳನ್ನು ಕೇಳಲಾಯಿತು. ಆಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾರೆ ರೇಪಿಸ್ಟ್ಗಳು.

ಯಾರು ಯಾರು ಎಷ್ಟು ಹುಡುಗಿಯರನ್ನು ರೇಪ್ ಮಾಡಿದ್ದಾರೆ

. ಶೇ 55.4 ರಷ್ಟು ಜನರು ಕೇವಲ 1 ಮಹಿಳೆಯ ಜೊತೆಯಲ್ಲಿ ಮಾತ್ರವೇ ಬಲವಂತದ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

. ಇನ್ನು ಶೇ 28.3 ರಷ್ಟು ಜನರು 2 ರಿಂದ 3 ಮಹಿಳೆಯರನ್ನು ರೇಪ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

. ಶೇ 12 ರಷ್ಟು ಜನರು 4 ರಿಂದ 10 ಜನರೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಹೇಳಿದ್ದಾರೆ.

. ಇನ್ನು ಶೇ 4.2 ರಷ್ಟು ಜನರು 10 ಕ್ಕಿಂತಲೂ ಹೆಚ್ಚಿನ ಮಹಿಳೆಯರನ್ನು ರೇಪ್ ಮಾಡಿದ್ದೇವೆ ಎಂದು ನಾಚಿಕೆ ಬಿಟ್ಟು ಒಪ್ಪಿಕೊಂಡಿದ್ದಾರೆ ಕಾಮುಕರು.

 
ಹುಡಗರನ್ನೂ ರೇಪ್ ಮಾಡಿದ್ದಾರಂತೆ ಇಲ್ಲಿನ ಕ್ರೂರ ಕಾಮಿಗಳು..!

ಇಲ್ಲಿ ಇನ್ನೊಂದು ಅಪಾಯಕಾರಿ ಸಂಗತಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಶೇ 8 ರಷ್ಟು ಜನರು ಪುರಷರನ್ನೇ ರೇಪ್ ಮಾಡಿದ್ದಾರಂತೆ. ಸಲಿಂಗದವರ ಜೊತೆ ಎಂದಾದರೂ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿದ್ದೀರಾ ಎಂದೂ ಕೂಡ ಪ್ರೆಶ್ನಿಸಲಾಗಿತ್ತು. ಆದ್ರೆ ಇದಕ್ಕೂ ಇಲ್ಲಿನ ಪುರುಷರು ಸೈ ಎಂದು ಉತ್ತರಿಸಿದ್ದಾರೆ. ಶೇ 8 ರಷ್ಟು ಜನರು ಪುರುಷರೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆಯನ್ನು ನಡೆಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಒಟ್ಟಾರೆಯಾಗಿ ಸಮೀಕ್ಷೆ ನಡೆಸಿದ ದೇಶಗಳಲ್ಲಿ ಶೇ 72 ರಿಂದ 97 ರಷ್ಟು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಯಾವುದೇ ರೀತಿಯ ಕಾನೂನು ಹೋರಾಕ್ಕೆ ಇಳಿಯದೇ ತಮ್ಮ ಮೇಲಿನ ಅತ್ಯಾಚಾರವನ್ನು ಬಲವಂತವಾಗಿ ಅದುಮಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು