ಸಿನೆಮಾ

Share This Article To your Friends

ಶಿವ ಪೂಜೆಯ ವಿಧಿ-ವಿಧಾನಗಳು


·          1.  ಶಿವಲಿಂಗಕ್ಕೆ ಕೇವಲ ತಣ್ಣೀರಿನಿಂದ ಮಾತ್ರವೇ ಅಭಿಷೇಕವನ್ನು ಮಾಡಬೇಕು.. ಹಾಲು ಮತ್ತು ತುಪ್ಪಗಳಿಂದ ಅಭಿಷೇಕ ಮಾಡುವುದು ಸೂಕ್ತವಲ್ಲ.. ಯಾಕಂದ್ರೆ ಹಾಲು ಮತ್ತು ತುಪ್ಪ ಇವು ಸ್ಥಿತಿಯ ಪ್ರತೀಕವಾಗಿರುವುದರಿಂದ ಲಯದ ದೇವತೆಯಾಗಿರುವ ಶಂಕರನ ಪೂಜೆಯಲ್ಲಿ ಅವುಗಳನ್ನು ಉಪಯೋಗಿಸುವಂತಿಲ್ಲ... 


2.         ಶಿವನನ್ನು ಪೂಜಿಸುವಾಗ ಅರಿಶಿನ ಮತ್ತು ಕುಂಕುಮವನ್ನು ಸಮರ್ಪಿಸಬಾರದು.. ಅರಿಶಿನವು ಭೂಮಿಯಲ್ಲಿ ತಯಾರಾಗುತ್ತದೆ.. ಹೀಗಾಗಿ ಅದು ಉತ್ಪತ್ತಿಯ ಪ್ರತೀಕವಾಗಿದೆ. ಕುಂಕುಮವನ್ನು ಅರಿಶಿನದಿಂದಲೇ ತಯಾರಿಸುತ್ತಾರೆ, ಹೀಗಾಗಿ ಲಯದ ದೇವತೆಯಾಗಿರುವ ಶಿವನ ಪೂಜೆಯಲ್ಲಿ ಉತ್ಪತ್ತಿಯ ಪ್ರತೀಕವಾಗಿರುವ ಅರಿಶಿನ-ಕುಂಕುಮವನ್ನು ಉಪಯೋಗಿಸುವುದಿಲ್ಲ. ಭಸ್ಮವು ಲಯದ ಪ್ರತೀಕವಾಗಿರುವುದರಿಂದ ಅದನ್ನು ಮಾತ್ರ ಉಪಯೋಗಿಸುತ್ತಾರೆ.

3.         ಶಿವ ಲಿಂಗದ ಮುಂದಿನ ಭಾಗದ ಮೇಲೆ ಭಸ್ಮದ ಮೂರು ಅಡ್ಡ ಪಟ್ಟೆಗಳನ್ನು ಎಳೆಯಬೇಕು.. ಅದರ ಮಧ್ಯದಲ್ಲಿ ಒಂದು ವೃತ್ತವನ್ನು ಬಿಡಿಸಬೇಕು.. ಇದಕ್ಕೆಶಿವಾಕ್ಷಎನ್ನುತ್ತಾರೆ. ನಂತರ ಬಿಲ್ವಪತ್ರೆ ಎಲೆಗಳನ್ನು ಶಿವಲಿಂಗಕ್ಕೆ ಸಮರ್ಪಿಸುವುದರ ಮೂಲಕ ಶಿವನಾಮ ಸ್ಮರಣೆ ಮಾಡಬೇಕು

4.         ಲಿಂಗದ ಪೂಜೆಯನ್ನು ಮಾಡುವಾಗ ಬಿಳಿ ಬಣ್ಣದ ಅಕ್ಷತೆಗಳನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಅಕ್ಷತೆಯು ವೈರಾಗ್ಯದ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಅಕ್ಷತೆಗಳೆಡೆಗೆ ನಿರ್ಗುಣಕ್ಕೆ ಸಂಬಂಧಿಸಿದ ಮೂಲ ಉಚ್ಚದೇವತೆಗಳ ಲಹರಿಗಳು ಆಕರ್ಷಿತವಾಗುತ್ತವೆ. ಶಂಕರನು ಉಚ್ಚದೇವತೆಯಾಗಿದ್ದು ಅವನು ಅತಿಹೆಚ್ಚು ಪ್ರಮಾಣದಲ್ಲಿ ನಿರ್ಗುಣಕ್ಕೆ ಸಂಬಂಧಿಸಿರುವುದರಿಂದ ಲಿಂಗಪೂಜೆಯಲ್ಲಿ ಅಕ್ಷತೆಯನ್ನು ಉಪಯೋಗಿಸುವುದರಿಂದ ಶಿವತತ್ತ್ವದಿಂದ ಹೆಚ್ಚು ಲಾಭವಾಗುತ್ತದೆ.

5.         ಶಿವಪೂಜೆ ಮಾಡುವಾಗ ಯಾವ ಯಾವ ಹೂಗಳನ್ನು ಸಮರ್ಪಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು.. ಎಲ್ಲಾ ಹೂವುಗಳನ್ನು ಶಿವನಿಗೆ ಸಮರ್ಪಿಸುವಂತಿಲ್ಲ.. ಕೇವಲ ಧೋತ್ರಾ, ಶ್ವೇತಕಮಲ, ಶ್ವೇತಕಣ್ಹೆರ, ಚಮೇಲಿ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶರ, ರಾತ್ರಿರಾಣಿ, ಜೂಯಿ, ಜಾಜಿ ಹಾಗೂ ಬಿಳಿ ಹೂವುಗಳನ್ನು ಶಿವನಿಗೆ ಅರ್ಪಿಸಬೇಕು. ಆದರೆ ಶಿವರಾತ್ರಿ ದಿನವನ್ನು ಹೊರತುಪಡಿಸಿ ಬೇರೆ ಯಾವ ದಿನವೂ ಶಿವನಿಗೆ ಕೇದಗೆ ಹೂವನ್ನು ಸಮರ್ಪಿಸುವಂತಿಲ್ಲ.. ಕೇದಿಗೆಯು ಶಿವನಿಗೆ ನಿಷಿದ್ಧವಾಗಿದೆ.

6.         ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದುದ್ದು.. ಹೀಗಾಗಿ ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು,,. ಬಿಲ್ವಪತ್ರೆ ಇಲ್ಲದೇ ಶಿವನನ್ನು ಪೂಜಿಸುವಂತಿಲ್ಲ.. ಶಿವರಾತ್ರಿಯ ಸಮಯದಲ್ಲಿ ಉಪವಾಸವಿದ್ದು ಶಿವನ ಸ್ಮರಣೆ ಮಾಡಿ ಪೂಜಿಸಬೇಕು.  ಉಪವಾಸ ಮಾಡದೇ ಶಿವನನ್ನು ಪೂಜಿಸುವುದು ಸೂಕ್ತವಲ್ಲ..

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು