ಸಿನೆಮಾ

Share This Article To your Friends

ನಮ್ಮೂರಿನ ದಾರಿಯಲ್ಲಿ ಅಡ್ಡ ಬಂದವರು ಯಾರು?


ಆವತ್ತು ಅಮವಾಸೆ ರಾತ್ರಿ......... ಸಂತೆ ಮುಗಿಸ್ಕೊಂಡು ಬಸ್ಸು ಹತ್ತಿ ನಮ್ಮೂರಿನ ಕ್ರಾಸ್ ವರೆಗೆ ಬಂದೆ........... ಆ ಕ್ರಾಸ್ ನಿಂದ ನಮ್ಮೂರಿಗೆ ಮೂರು ಕಿಲೋಮೀಟ್ರು ಕತ್ತಲಲ್ಲಿ ನಡ್ಕೋಂಡ್ ಹೋಗ್ಬೇಕು.. ಅಲ್ಲಿಂದ ನಾನು ನಡ್ಕೋಂಡು ಬರ್ತಾ ಇದ್ದೆ.... ಜೋರಾಗಿ ಗಾಳಿ ಬೀಸ್ತಾ ಇತ್ತು.......... ನಾಯಿಗಳೆಲ್ಲಾ ಕೂಗ್ತಾ ಇದ್ವು.......  ಆ ರೋಡಲ್ಲಿ,, ಯಾರ್ ಯಾರಿಗೋ ದೆವ್ವಗಳು ಕಾಣಿಸಿಕೊಂಡಿವೆ ಅಂತ ಜನ ಮಾತಾಡ್ಕೋತಾ ಇದ್ರು..... ಕೆಲವರಿಗೆ ಎಮ್ಮೇ ಥರ ಕಾಣಿಸಿಕೊಂಡಿತ್ತಂತೆ....... ಮತ್ತೆ ಕೆಲವರಿಗೆ ಕಪ್ಪೆ ಥರ ಕಾಣಿಸಿತ್ತಂತೆ..... ಆದ್ರೆ ಕೆಲವರಿಗೆ ಮಾತ್ರ ಬರೀ ದೆವ್ವದ ಧ್ವನಿ ಮಾತ್ರ ಕೇಳಿಸಿದ್ಯಂತೆ......... ಒಂದೊಂದ್ಸಲ ಎಲ್ಲೋ ದೂರದಲ್ಲಿ ಯಾರೋ ಹೆಣ್ಮಗಳು ಅಳೋ ಥರ ಕೇಳಿಸುತ್ತಂತೆ....... ಹತ್ರ ಹೋದ್ರೆ ಸಾಕು, ಇದ್ದಕ್ಕಿದ್ದಂತೆ ಜೋರಾಗಿ ನಗೋ ಶಬ್ಧ ಕೇಳ್‌ಸುತ್ತಂತೆ...

ಎಷ್ಟೋಸಲ ರಾತ್ರೋ ರಾತ್ರಿ ನಾನ್ ಒಬ್ಬಳೇ ಈ ರೋಡಲ್ಲಿ ಓಡಾಡಿದ್ದೆ... ಏನೂ ಅನಿಸಿರಲಿಲ್ಲ..... ಆದ್ರೆ ಆವತ್ತು ಅಮವಾಸೆ ಆಗಿದ್ರಿಂದ ಈ ಕಥೆಗಳು ಥಟ್ ಅಂತ ನೆನಪಾಯ್ತು....... ಈ ಕಥೆಗಳು ನೆನಪಾದ ತಕ್ಷಣ ಸ್ವಲ್ಪ ಭಯ ಶುರುವಾಯ್ತು... ಭಯ ಪಡದೇ ನಡ್ಕೊಂಡು ಹೋಗ್ತಾ ಇದ್ದೆ..... ಸ್ವಲ್ಪ ದೂರ ಹೋದ ತಕ್ಷಣ ಯಾರೋ ಅಳ್ತಾ ಇರೋ ಶಬ್ಧ ಕೇಳಿಸ್ತು... ಒಂದ್ ಕ್ಷಣ ಎದೆ ಝಲ್ ಅಂತು...... ಅದು ದೆವ್ವಾನೇ....... ನಾನು ಭಯಡದೇ ಯಾರು ಅಂತ ಕೂಗಿದೆ.... ತಕ್ಷಣ ಆ ಅಳು ನಿಂತೋಯ್ತು..... ನಾನು ಹಾಗೇ ಮುಂದೆ ನಡ್ಕೊಂಡು ಹೋಗ್ತಾ ಇದ್ದೆ.. ಎಮ್ಮೇ ಅಡ್ಡ ಬಂತು... ಮಧ್ಯ ದಾರೀಲಿ ನಿಂತ್ಕೊಂತು... ಅದೇ ಸಮಯಕ್ಕೆ ಸರಿಯಾಗಿ ಕತ್ತಲಲ್ಲಿ ಯಾರೋ ನಡ್ಕೊಂಡು ಬರ್ತಿರೋ ಸೌಂಡು.... ಅದು ಇನ್ನೊಂದು ದೆವ್ವ ಅಂತ ನಂಗೆ ಗೊತ್ತಾಯ್ತು.. ಅವತ್ತು ಅಮವಾಸೆ ಆಗಿದ್ರಿಂದ ಇರೋಬರೋ ದೆವ್ವಗಳು ನನ್ನನ್ನು ಸುತ್ತುಕೊಳ್ತಾ ಇವೆ ಅಂತ ನಂಗ್ ಗೊತ್ತಾಯ್ತು.. ಆ ಕಡೆಯಿಂದ ಬರ್ತಾ ಇರೋ ವ್ಯಕ್ತಿ ಆ ಎಮ್ಮೇ ಹತ್ರ ಬಂದು.. ನಡೀ.. ಹೋಗೋರಿಗೆ ದಾರಿ ಬಿಡು.. ತೊಂದ್ರೆ ಕೊಡ್ಬೇಡ ಅಂತ ಹೇಳಿದ.. ಆ ಎಮ್ಮೆ ದೆವ್ವ ಎದ್ದು ಪಕ್ಕಕ್ಕೆ ಹೋಯ್ತು.. ಆದ್ರೆ ಮನುಷ್ಯ ರೂಪದಲ್ಲಿರೋ ದೆವ್ವ ನನ್ ಕಡೇನೇ ಬರ್ತಾ ಇತ್ತು.....

 ನೋಡೋಕೆ ಕರ್ರಗೆ ಇತ್ತು....... ಭಯಾನಕವಾಗಿತ್ತು........ ಅದು ನನ್ ಕಡೆ ಬರ್ತಿದ್ರೆ ನನ್ ಎದೆ ಬಡಿತ ಜಾಸ್ತಿ ಆಗ್ತಾ ಇತ್ತು....... ಅದು ನನ್ ಎದುರಿಗೆ ಬಂದು ನಿಂತು ಜೋರಾಗಿ ನಗೋಕೆ ಶುರು ಮಾಡಿತು...... ನಾನು ಕಿಟಾರನೆ ಕಿರುಚಿಕೊಂಡು ಓಡೋಕೆ ಶುರು ಮಾಡಿದೆ..... ಅದು ನನ್ನ ಹಿಂದೆ ಓಡಿ ಬರ್ತಾ ಇತ್ತು...... ನಾನು ಓಡಿ, ಓಡಿ ನನ್ನ ಮನೆ ಹತ್ರ ಬಂದೆ.. ಆದ್ರೂ ಅದು ನನ್ನ ಹಿಂದೇನೇ ಬರ್ತಾ ಇತ್ತು.... ನಾನು ಜೋರಾಗಿ “ಬಾರೋ.. ಬಾ.. ಹೇ ದೆವ್ವ.. ನನ್ ಗಂಡ ಒಳಗಿದ್ದಾನೆ.. ಅವನಿಗೆ ಮಂತ್ರ ತಂತ್ರ ಎಲ್ಲಾ ಗೊತ್ತು.. ನಿನ್ ಆಟ ಏನೂ ನಡಿಯಲ್ಲ... ಬಾ.. ಅಂತ ಜೋರಾಗಿ ಕೂಗಿ ಹೇಳಿದೆ... ಆ ದೆವ್ವ ಇನ್ನಷ್ಟು ಜೋರಾಗಿ ನಗೋಕೆ ಶುರು ಮಾಡ್ತು... ನಿಧಾನವಾಗಿ ನನ್ನ ಹತ್ತಿರ ಬಂತು..... “ಲೇ ನಾನೇ ಕಣೆ ನಿನ್ ಗಂಡ.... ರಾತ್ರಿ ಆದ್ರೂ ನೀನ್ ನೀನ್ ಬರ್ಲಿಲ್ಲ.. ಅದಿಕ್ಕೆ ಹುಡುಕೊಂಡು ಬಂದೆ.. ನೀನು ನನ್ನನ್ನೇ ನೋಡಿ ಹೆದರ್ಕೊಂಡು ಓಡ್ತಿದ್ಯಲ್ವೇ..” ಅಂತ ಅಂದ... ಅಬ್ಬಾ.. ಒಂದು ಕ್ಷಣ ಜೀವವೇ ಝಲ್ ಅಂದಿತ್ತು ನನಗೆ.. ಅವತ್ತಿಂದ ನನ್ ಗಂಡನಿಗೆ ರಾತ್ರಿ ಎಲ್ಲೂ ಓಡಾಡ್ಬೇಡಿ ಅಂತ ಹೇಳಿದ್ದೀನಿ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು