ಸಿನೆಮಾ

Share This Article To your Friends

ಶಿವ ಪುರಾಣ - ೨- ಭೀಷ್ಮ ಹೇಳಿದ ಬೇಡನ ಕಥೆ


ಅದೊಂದು ದಟ್ಟವಾದ ಕಾಡು... ಬೇಡನೊಬ್ಬ ಬೇಟೆಗಾಗಿ ಕಾಡಿಗೆ ತೆರಳಿದ್ದ.. ದಿನವಿಡಿ ಎಷ್ಟೆ ಅಲೆದಾಡಿದ್ರೂ ಅವನಿಗೆ ಬೇಟೆ ಸಿಗಲೇ ಇಲ್ಲ. ವಾಪಾಸ್ ಗುಡಿಸಲಿಗೆ ಹೋಗೋದಕ್ಕೆ ದಾರಿ ಕೂಡ ತಪ್ಪಿ ಹೋಯ್ತು..  ಸಂಜೆ ಆದ್ರೂ ದಾರಿನೂ ಸಿಗ್ಲೇ ಇಲ್ಲ... ಬೇಟೇನೂ ಸಿಗ್ಲಿಲ್ಲ... ಕಾಡಿನ ಕ್ರೂರ ಪ್ರಾಣಿಗಳು ಅವನನ್ನು ಸುತ್ತುವರಿಯ ತೊಡಗಿದವು. 

ಭಯಗ್ರಸ್ತನಾದ ಬೇಡ ಪಕ್ಕದಲ್ಲೇ ಇದ್ದ ಮರವನ್ನು ಏರಿ ಕೂತುಬಿಟ್ಟ.. ರಾತ್ರಿ ಎಲ್ಲಾ ಎಚ್ಚರವಿದ್ದ... ಬೇಸರವಾಗಿ ಮರದ ಎಲೆಗಳನ್ನು ಒಂದೊಂದೇ ಕಿತ್ತು ಕಿತ್ತು ಕೆಳಗೆ ಬಿಸಾಕ್ತಾ ಇದ್ದ.. ಅವನು ಬಿಸಾಕಿದ ಎಲೆಗಳು ಅವನಿಗೆ ತಿಳೀದೇ ಕೆಳಗಿದ್ದ ಶಿವಲಿಂಗದ ಮೇಲೆ ಬೀಳ್ತಾ ಇದ್ದವು.

ಇನ್ನು ಒಂದು ವಿಚಿತ್ರ ಅಂದ್ರೆ ಆ ಬೇಡ ಏರಿದ್ದ ಮರ "ಬಿಲ್ವಮರ" ಆಗಿತ್ತು.. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಕಾಡು ಪ್ರಾಣಿಗಳಿಂದ ರಕ್ಷಿಸಿದ.. 

ಅಷ್ಟೆ ಅಲ್ಲ ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದನೆಂದು ಪ್ರತೀತಿ ಇದೆ.. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದ ಅಂತ ನಂಬಲಾಗಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು