ಸಿನೆಮಾ

Share This Article To your Friends

ಗುಣನಿಧಿ ಎಂಬ ಜೂಜುಕೋರನ ಕಥೆ


ಗುಣನಿಧಿ ಒಬ್ಬ ಜೂಜುಕೋರ.. ಆದರೆ ಬ್ರಾಹ್ಮಣ ಮನೆತನದಲ್ಲಿ ಜನಿಸಿದ್ದ.. ತಾಯಿ ಎಷ್ಟು  ಹೇಳಿದರೂ ಗುಣನಿಧಿ ತನ್ನ ಕೆಟ್ಟ ಚಾಳಿಯನ್ನು ಬಿಡಲೇ ಇಲ್ಲ.. ಒಂದಿನ ತಂದೆ ಯಜ್ಞ ದತ್ತ ದೀಕ್ಷಿತರಿಗೆ ಮಗನ ಜೂಜಾಟದ ವಿಷಯ ತಿಳಿತು, ತಕ್ಷಣವೇ ಅವನನ್ನು ತಮ್ಮ ಕುಲದಿಂದ ಹೊರಹಾಕಿದ್ದರು. ದಿನನಿತ್ಯ ಮನೆಯಲ್ಲಿ ಮಾಡಿದ್ದ ರುಚಿ ರುಚಿ ಅಡುಗೆಯನ್ನು ತಿಂದಿದ್ದ ಗುಣನಿಧಿಗೆ ಹಸಿವು ತಾಳಲಾಗಲಿಲ್ಲ.. ದಣಿದು.. ಸುಸ್ತಾಗಿ.. ಮರದ ಕೆಳಗೆ ಕುಳಿತುಬಿಟ್ಟ.. 

ಅದೇ ದಾರಿಯಲ್ಲಿ ಒಬ್ಬ ಶಿವಭಕ್ತನೊಬ್ಬ ಕುಟುಂಬ ಸಮೇತನಾಗಿ ಬರ್ತಾ ಇದ್ದ.. ಅವನ ಕೈಯಲ್ಲಿ ಬಗೆ ಬಗೆಯ ಹಣ್ಣು ಹಂಪಲುಗಳು.. ನೈವೇದ್ಯೆ ಎಲ್ಲಾ ಇತ್ತು.. ಹೊಟ್ಟೆ ಹಸೀತಿದ್ರಿಂದ ಅವುಗಳನ್ನು ತಿನ್ನೋ ಮನಸ್ಸಾಯಿತು ಗುಣನಿಧಿಗೆ.. ಅವರನ್ನೇ ಹಿಂಬಾಲಿಸಿಕೊಂಡು ಹೋದ.. ಅವರೆಲ್ರೂ ಶಿವನ ದೇವಾಲಯದ ಒಳಗೆ ಹೋದ್ರು.. ಗುಣನಿಧಿ ದೇವಾಲಯದ ಹೊರಗಿದ್ದ ಮರ ಏರಿ ಅವರು ಮಲಗುವುದನ್ನೇ ಕಾಯುತ್ತಿದ್ದ.. ಶಿವಭಕ್ತರು ಶಿವನ ಸ್ತೋತ್ರಗಳನ್ನು ಜಪಿಸಿ, ಪೂಜಿಸಿದರು.. 

ಗುಣನಿಧಿ ಹೊರಗಿಂದಲೇ ಅದೆಲ್ಲವನ್ನೂ ಕೇಳಿಸಿಕೊಳ್ತಾ ಇದ್ದ.. ಪೂಜೆ ಮುಗಿಸಿ ಎಲ್ರೂ ಮಲಗಿದ ಮೇಲೆ ಗುಣನಿಧಿ ದೇವಾಲಯದ ಒಳಗೆ ಹೋದ.. ದೀಪ ಸಣ್ಣಗೆ ಉರೀತಿದ್ದರಿಂದ ಏನೂ ಕಾಣಿಸ್ತಾ ಇರಲಿಲ್ಲ.. ಅವನು ತನ್ನ ಪಂಚೆಯನ್ನೇ ಸ್ವಲ್ಪ ಹರಿದು ಅದ್ರಿಂದಾನೇ ದೀಪ ಹಚ್ಚಿ ನೈವೇದ್ಯವನ್ನು ಹುಡುಕಿದ.. ನೈವೇದ್ಯವನ್ನು ಕೈಯಲ್ಲಿ ಹಿಡ್ಕೊಂಡು ಹೊರಗೆ ಬರ್ತಿರಬೇಕಾದ್ರೆ ಅವಸರದಲ್ಲಿ ಯಾರೋ ಒಬ್ಬನನ್ನು ತುಳಿದುಬಿಟ್ಟ..

 ಅವನು ಇದ್ದಕ್ಕಿದ್ದಂತೆ ಎದ್ದು “ಅಯ್ಯೋ ಕಳ್ಳ ಕಳ್ಳ.... ಹಿಡೀರಿ ಹಿಡೀರಿ..” ಅಂತ ಕೂಗಿದ.. ಜನರೆಲ್ಲರೂ ಅವನನ್ನು ಕೊಡೆದು ಕೊಂದುಬಿಟ್ಟರು.. ಗುಣನಿಧಿ ಸತ್ತು ಯಮಲೋಕಕ್ಕೆ ಬಂದ.. ಆದರೆ ಅಷ್ಟರಲ್ಲಿ ಶಿವಧೂತರು ಯಮಲೋಕಕ್ಕೆ ಬಂದು ಗುಣನಿಧಿಗೆ ಯಾವುದೇ ಶಿಕ್ಷೆ ನೀಡುವಂತಿಲ್ಲ.. ಅವನನ್ನು ಕೈಲಾಸಕ್ಕೆ ಕಳಿಸಬೇಕು ಇದು ಶಿವನ ಆಜ್ಞೆ ಅಂತ ಹೇಳಿದ್ರು.. ಯಮನಿಗೆ ಅಚ್ಚರಿಯಾಯಿತು.. ಗುಣನಿಧಿ ಅಧರ್ಮಿ.. ಜೂಜುಕೋರ.. ಅವನು ಹೇಗೆ ಶಿವಭಕ್ತನಾಗುತ್ತಾನೆ ಅಂತ ಯಮದೇವ ಪ್ರೆಶ್ನಿಸಿದ.. 

ಆಗ ಶಿವಧೂತರು “ಅವನು ಉಪವಾಸವಿದ್ದು ಶಿವನ ಸ್ತೋತ್ರಗಳನ್ನು ಕೇಳಿದ್ದಾನೆ.. ಹೀಗಾಗಿ ಅವನ ಪಾಪ ಕರ್ಮಗಳು ಕಳೆದು ಹೋಗಿವೆ.. ಅದೂ ಅಲ್ಲದೇ ಶಿವ ಲಿಂಗವು ಕತ್ತಲೆಯಲ್ಲಿದ್ದಾಗ ತನ್ನ ಪಂಚೆಯಿಂದ ದೀಪ ಬೆಳಗಿಸಿದ್ದಾನೆ.. ಹೀಗಾಗಿ ಗುಣನಿಧಿಯು ಶಿವನ ಅನುಗ್ರಹಕ್ಕೆ ಪಾತ್ರನಾಗಿದ್ದಾನೆ.. ಅಂತ ಹೇಳಿದ್ರು.. ಗುಣನಿಧಿಯನ್ನು ಕೈಲಾಸಕ್ಕೆ ಕರೆತಂದ್ರು.. ಗುಣನಿಧಿ ಸ್ವಲ್ಪ ದಿನಗಳ ಕಾಲ ಕೈಲಾಸದಲ್ಲಿ ನೆಲೆಸಿ, ಮುಂದಿನ ಜನ್ಮದಲ್ಲಿ ಕಳಿಂಗ ರಾಜನ ಮಗನಾಗಿ “ದಮ” ಎಂಬ ಹೆಸರಿನಿಂದ ಮರು ಜನ್ಮ ಪಡೀತಾನೆ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು