ಸಿನೆಮಾ

Share This Article To your Friends

ರಾವಣನ ಆತ್ಮಲಿಂಗದ ಕಥೆ
ಶಿವನಿಂದ ಆತ್ಮಲಿಂಗ ಪಡೀಬೇಕು ಅಂತ ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದ. ರಾವಣನ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷವಾಗಿ ವರವನ್ನು ಕರುಣಿಸಿದ.. ಆದರೆ ಒಂದು ಶರತ್ತನ್ನು ವಿಧಿಸಿದ.. ಯಾವುದೇ ಕಾರಣಕ್ಕೂ ಲಿಂಗವನ್ನು ನೆಲದಲ್ಲಿ ಇಡಬಾರದು. ಎಲ್ಲಿ ನೆಲದ ಸ್ಪರ್ಶವಗುತ್ತದೋ ಅಲ್ಲೇ ಶಿವಲಿಂಗ ಶಾಶ್ವತವಾಗಿ ನೆಲೆಸುತ್ತದೆ ಎಂದು ಹೇಳಿದ.. 

ರಾವಣ ಒಪ್ಪಿಕೊಂಡು ಆತ್ಮಲಿಂಗವನ್ನು ಪಡೆದು ಅಲ್ಲಿಂದ ಹೊರಟ... ರಾವಣ ಗೋಕರ್ಣ ಸಮೀಪಿಸುತ್ತಲೇ ವಿಷ್ಣುದೇವ ಸೂರ್ಯನಿಗೆ ಅಡ್ಡಬಂದ.. ಜಗತ್ತಿಗೆ ಕತ್ತಲು ಕವೀತು.. ಸಂಜೆಯಾಯಿತೆಂದು ಭಾವಿಸಿದ ರಾವಣ ಸಂಧ್ಯಾವಂದನೆ ಮಾಡೋಕೆ ಮುಂದಾದ.. ಆದ್ರೆ ಲಿಂಗವನ್ನು ಕೈಯಲ್ಲಿ ಹಿಡಿದು ಸಂದ್ಯಾವಂದನೆ ಮಾಡುವಂತಿಲ್ಲ.. ಹೀಗಾಗಿ ಅಲ್ಲೇ ಇದ್ದ ಬ್ರಾಹ್ಮಣ ವೇಷಧಾರಿಗೆ ಆತ್ಮ ಲಿಂಗವನ್ನು ನೀಡಿ ಸಂಧ್ಯಾವಂದನೆ ಪೂರ್ಣಗೊಳ್ಳುವ ತನಕ ಹಿಡಿದುಕೊಳ್ಳುವಂತೆ ವಿನಂತಿಸಿದ.. ಯಾವುದೇ ಕಾರಣಕ್ಕೂ  ನೆಲದಲ್ಲಿ ಇರಿಸದಂತೆ ಕೇಳಿಕೊಂಡ. 

ಇದಕ್ಕೆ ಪ್ರತಿಯಾಗಿ ಬ್ರಾಹ್ಮಣ ವೇಷಧಾರಿಯಾಗಿದ್ದ  ಗಣಪತಿ ಒಪ್ಪಿದ.. ಆದರೆ ಲಿಂಗವೇನಾದರೂ ಭಾರವಾದರೆ ಮೂರು ಬಾರಿ ನಿನ್ನನ್ನು ಕೂಗುತ್ತೇನೆ.. ನೀನು ಬಾರದೇ ಇದ್ದರೆ ಲಿಂಗವನ್ನು ನೆಲದಲ್ಲಿರಿಸುವುದಾಗಿ ಹೇಳಿದ. ರಾವಣ ಸಂಧ್ಯಾವಂದನೆ ಶುರು ಮಾಡಿದ.. ಸಮಯ ನೋಡಿ ಗಣಪತಿ, ರಾವಣನನ್ನು ಕೂಗಿದ.. ಆದರೆ ಸಂಧ್ಯಾವಂದನೆಯನ್ನು ಅರ್ಧದಲ್ಲಿಯೇ ಬಿಟ್ಟು ಬರಲು ಸಾಧ್ಯವಿಲ್ಲ.. ಹೀಗಾಗಿ ತನ್ನ ಕೆಲಸ ಮುಂದುವರಿಸಿದ.. ಸಂಧ್ಯಾವಂದನೆ ಮುಗಿಯುವ ಮುನ್ನವೇ ಮತ್ತೆ ಎರಡು ಸಲ ಕೂಗಿದ.. ಒಟ್ಟು  ಮೂರು ಬಾರಿ ಕೂಗಿದ.. ಆತ್ಮಲಿಂಗ ಭೂಸ್ಪರ್ಶವಾಗುತ್ತದೆಂದು ತಿಳಿದ ರಾವಣ ಓಡೋಡಿ ಬಂದ.. ಆದರೆ ರಾವಣ ಓಡಿ ಬರುವಷ್ಟರಲ್ಲೇ ಗಣಪತಿಯು ಲಿಂಗವನ್ನು ನೆಲದಲ್ಲಿರಿಸಿದ.....  ರಾವಣ ಆತ್ಮಲಿಂಗವನ್ನು ಬುಡಮೇಲು ಮಾಡಲು ಎಷ್ಟೆ ಯತ್ನಿಸಿದನಾದರೂ  ಪ್ರಯೋಜನವಾಗಲಿಲ್ಲ. ಶಿವನ ಆತ್ಮ ಲಿಂಗ ಇರುವ ಆ ಸ್ಥಳವೇ ಇದೀಗ ಗೋಕರ್ಣವಾಗಿದೆ.. 
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು