ಸಿನೆಮಾ

Share This Article To your Friends

“ಕಿಸ್” ಮಾಡುತ್ತಿದ್ದವರು “ಕೈಲಾಸ” ಸೇರಿದ್ರು.
ಕಿಸ್+ಮತ್ತುಎರಡೂ ಅಲ್ಲಿ ಹೆಚ್ಚಾಗಿತ್ತು.. ಆದ್ರೆ ಕಿಸ್ಮತ್ತು (ಹಣೆಬರಹ) ಮಾತ್ರ ಸರಿ ಇರಲಿಲ್ಲ... ನೈಟ್ ಪಾರ್ಟಿಗೆ ಬಂದವರು ಮತ್ತೆ ಮನೆಗೆ ಹೋಗಲೇ ಇಲ್ಲ...

ಹೌದು.. ಇದೊಂದು ದುರಂತದ ಸುದ್ದಿ.. ಪ್ರಣಯದ ಉನ್ಮಾದದಲ್ಲಿ ತೇಲುತ್ತಿದ್ದ ಹದಿಹರೆಯದ ಹೃದಯಗಳು ಪ್ರೇಮದ ಬಿಸಿಯಲ್ಲೇ ಬೆಂದು ಹೋಗಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ..  ಬ್ರೆಜಿಲ್ ನಲ್ಲಿನ ಸಂತ ಮರಿಯಾ ಸಿಟಿಯಲ್ಲಿ ನಡೆಯುತ್ತಿದ್ದ ನೈಟ್ ಕ್ಲಬ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಪಾರ್ಟಿಯನ್ನು ಆನಂದಿಸುತ್ತಿದ್ದರು.. ಪರಸ್ಪರ ಮುದ್ದಾಡುತ್ತಾ ಅಧರದ ಸವಿಯನ್ನು ಸವಿಯುತ್ತಿದ್ದರು.. ಜೊತೆಗೆ ಮದ್ಯದ ಅಮಲು ಕಾಲುಗಳಿಗೆ ಬ್ರೇಕ್ ಇಲ್ಲದಂತೆ ಕುಣಿಸುತ್ತಿತ್ತು.. ತಮ್ಮ ತಮ್ಮ ಪ್ರೇಮಿಯೊಂದಿಗೆ,, ಆಪ್ತ ಸ್ನೇಹಿತರೊಂದಿಗೆ ಬಂದ ಯುವಜನರು ಸೆಂಟ್ ಮಾರಿಯಾ ಸಿಟಿಯ ಕಿಸ್ ಕ್ಲಬ್ ನಲ್ಲಿ ಖುಷಿ ಪಡುತ್ತಾ ತೇಲುತ್ತಿದ್ದರು.. ನಾವು ಭೂಮಿಯಲ್ಲಿದ್ದೇವೆ ಎಂಬ ಪರಿವೇ ಇಲ್ಲದೇ, ಸ್ವರ್ಗದಲ್ಲಿ ವಿಹರಿಸುತ್ತಿದ್ದವರಿಗೆ ಇದ್ದಕ್ಕಿಂದತೆ ಅಗ್ನಿದೇವ ಪ್ರತ್ಯಕ್ಷನಾಗಿಬಿಟ್ಟಿದ್ದಾನೆ.. ಇದು ಕನಸೋ ನನಸೋ ಎಂದು ಆಲೋಚಿಸುವಷ್ಟರಲ್ಲೇ ನೂರಕ್ಕೂ ಹೆಚ್ಚು ಜನರು ಬೆಂಕಿಗಾಹುತಿಯಾಗಿದ್ದರೆ..

          ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿರುವಂತೆಯೇ ಎಚ್ಚೆತ್ತ ಜನರು ಅಲ್ಲಿಂದ ಓಡಿಹೋಗಿದ್ದಾರೆ., ಆದರೆ ಜನಜಂಗುಳಿಯ ಮಧ್ಯೆ ಮತ್ತು ದಟ್ಟ ಹೊಗೆಯ ಮಧ್ಯೆ ಪಾರಾಗಲು ಪರದಾಡುತ್ತಿದ್ದ ಮತ್ತೊಂದಿಷ್ಟು ಜನ ಅಮಲಿನಲ್ಲೇ ಸುಟ್ಟು ಕರಕಲಾಗಿದ್ದಾರೆ.. ದಟ್ಟ ಹೊಗೆಯ ಆರ್ಭಟಕ್ಕೆ ಮತ್ತು ಅಗ್ನಿಯರುದ್ರ ನರ್ತನಕ್ಕೆ ಜನರು ಉಸಿರು ಕಟ್ಟಿ ಸತ್ತಿದ್ದರೆ ಎಂದು ಅಲ್ಲಿನ ರಕ್ಷಣಾಪಡೆಯ ಮುಖಂಡರು ತಿಳಿಸಿದ್ದಾರೆ.. ಕಿಸ್ ನೈಟ್ ಕ್ಲಬ್ಬಿಗೆ ಹೋಗಿದ್ದವರು ಕಿಸ್ ಮಾಡುತ್ತಲೆ ಕೈಲಾಸ ಸೇರಿಬಿಟ್ರು ಆ ಹದಿ ಹರೆಯದ ಜೋಡಿಗಳು..
ಇದುವರೆಗಿನ ಅಂದಾಜಿನ ಪ್ರಕಾರ (ಅಧಿಕೃತ ಮಾಹಿತಿ ಪ್ರಕಾರ) ಒಟ್ಟು 250 ಜನರು ಸಾವಿಗೀಡಾಗಿದ್ದು, ಅದರಲ್ಲಿ 180 ದೇಹಗಳ ಗುರುತನ್ನು ಪತ್ತೆಹಚ್ಚಲಾಗಿದೆ..  ಇನ್ನುಳಿದ ದೇಹಗಳು ಗುರುತಿಸಲು ಸಾಧ್ಯವಾಗದಷ್ಟರಮಟ್ಟಿಗೆ ಬೆಂಕಿಯಲ್ಲಿ ಬೆಂದು ಹೋಗಿವೆ.. ಇಷ್ಟೇ ಅಲ್ಲ.. ಸುಮಾರು 200 ಕ್ಕೂ ಹೆಚ್ಚು ಜನರಿಗೆ ತೀವ್ರವಾದ ಗಾಯಗಳಾಗಿದ್ದು ಅದರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬ್ರೆಜಿಲ್ ವೈದ್ಯರು ಹೇಳಿದ್ದಾರೆ.

ಈ ಎಲ್ಲಾ ಅನಾಹುತಕ್ಕೆ ಕಾರಣವೇನು..??

ಬ್ರೆಜಿಲ್ ನಲ್ಲಿ ನಲ್ಲಿನ ಸೆಂಟ್ ಮರಿಯಾ ಕಿಸ್ ಕ್ಲಬ್ ನಲ್ಲಿ ಮದ್ಯ ಮತ್ತು ಸಂಗೀತ ಎರಡೂ ಜೋರಾಗೇ ಇತ್ತು.. ರಾತ್ರಿ ಹೊತ್ತಾಗಿದ್ದರಿಂದ ಮಂದ ಬೆಳಕಿನಲ್ಲಿ ಕುಣಿಯುತ್ತ ಕುಡಿಯುತ್ತಿದ್ದರು.. ಬ್ಯಾಂಡ್ ಬಾರಿಸುವವರಲ್ಲಿ ಒಬ್ಬ ವ್ಯಕ್ತಿ ಬಾಯಿಯಿಂದ ಸೀಮೆ ಎಣ್ಣೆಯನ್ನು ಉಗಿದು ಫೈಯರಿಂಗ್ ಮಜಾ ತೋರಿಸುತ್ತಿದ್ದ.. ಎಲ್ಲರಿಗೂ ಅದೊಂಥರ ಖುಷಿ ಕೊಡುತ್ತಿತ್ತು.. ಆದರೆ ಸ್ವಲ್ಪದರಲ್ಲೇ ಗ್ರಹಚಾರ ತಪ್ಪಿ ಮೇಲಿನ ಸೀಲಿಂಗ್ ಗೆ ಬೆಂಕಿ ತಗುಲಿದೆ.. ಸ್ಪಂಜಿನಂತಿರುವ ಸೀಲಿಂಗ್ ಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಎಲ್ಲಾಕಡೆಗೂ ಪಸರಿಸಿದೆ.. ಪರಿಣಾಮವಾಗಿ ದಟ್ಟ ಹೊಗೆ ಕೂಡ ಆವರಿಸಿದೆ.. ಹೀಗಾಗಿ ದಾರಿ ಕಾಣದೇ ದಿಕ್ಕೆಟ್ಟು ಓಡುತ್ತಿರುವ ಸಂದರ್ಭದಲ್ಲಿ ಉಸಿರುಗಟ್ಟಿ ಬಹಳಷ್ಟು ಜನರು ಪ್ರಾಣಬಿಟ್ಟಿದ್ದಾರೆ.. ಇನ್ನುಳಿದವರು ಧಗ ಧಗನೆ ಹೊತ್ತಿ ಉರಯುತ್ತಿರುವ ಅಗ್ನಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾರೆ..

ಪರಿಣಾಮ ಏನಾಗುತ್ತೆ..??

ಬ್ರೆಜಿಲ್ ನಲ್ಲಿ 2014 ರಲ್ಲಿ ಫೀಫಾ ವರ್ಲ್ಡ ಕಪ್ ನಡೆಯಲಿದೆ.. ಮತ್ತು 2016 ರಲ್ಲಿ ಒಲಂಪಿಕ್ ಪಂದ್ಯಗಳು ನಡೆಯಲಿವೆ.. ಈ ಹಿನ್ನೆಲೆಯಲ್ಲಿ ಶನಿವಾರ ತಡರತ್ರಿ ನಡೆದ ಈ ದುರಂತ ಘಟನೆ ಬಹಳಷ್ಟು ಆತಂಕವನ್ನು ಸೃಷ್ಟಿಸಿದೆ.. ಸೂಕ್ತ ಭದ್ರತೆ ಕಾಣದಿದ್ದರೆ ಪಂದ್ಯಗಳು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಗಳಿವೆಯೆಂದು ಶಂಕಿಸಲಾಗಿದೆ..

ಏನೂ ಆಗಲ್ಲ..!!

ಇದು ನೈಟ್ ಕ್ಲಬ್ಬಿನಲ್ಲಿ ನಡೆದ ದುರ್ಗಟನೆ.. ಹೀಗಾಗಿ ಒಲಂಪಿಕ್ ಹಾಗೂ ಫೀಫಾ ಪಂದ್ಯಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.. ಪಂದ್ಯಗಳಿಗೆ ಬೇಕಾದ ಎಲ್ಲಾ ವಿಧವಾದ ಸುರಕ್ಷತೆಯನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಬ್ರೆಜಿಲ್ ನ ಅಧ್ಯಕ್ಷರು ಹೇಳಿದ್ದಾರೆ..

ಹಿಂದೆ ಇಂಥಾ ಅಗ್ನಿ ದುರಂತ ನಡೆದಿತ್ತಾ..???
ಹೌದು.. ಹಿಂದೆಯೂ ಕೂಡ ಇಂಥಾ ಅಗ್ನಿ ದುರಂತಗಳು ಸಂಭವಿಸಿದ್ದು ನೂರಾರು ಜನರು ಸತ್ತಿರುವ ಉದಾಹರಣೆಗಳಿವೆ..
1)      November – 28, 1942 : U.S ನ ಬೋಸ್ಟನ್ ಪ್ರದೇಶದ ನೈಟ್ ಕ್ಲಬ್ ನಲ್ಲಿ ಇಂಥದ್ದೇ ಒಂದು ಅಗ್ನಿ ದುರಂತ ಸಂಭವಿಸಿದ್ದು ಆಗ 492 ಮಂದಿ ಸಾವಿಗೀಡಾಗಿದ್ರು..

2)      December – 17, 1961 : ಇದೇ ಬ್ರೆಜಿಲ್ ನಲ್ಲಿ ನಿಟೆರಾಯ್ ನಲ್ಲಿ ಸರ್ಕಸ್ ನಡೆಯುತ್ತಿರುವಾಗ ಅಗ್ನಿ ದುರಂತವೊಂದು ಸಂಭವಿಸಿತ್ತು.. ಪರಿಣಾಮವಾಗಿ 323 ಸಾವಿಗೀಡಾಗಿದ್ರು.. ಆದೇನು ವಿಚಿತ್ರವೋ ಏನೋ.. ಈಗ 232 ಜನರು ಸಾವಿಗೀಡಾಗಿದ್ದಾರೆ..  ಅಂಕಿ ಅಂಶಗಳ ಅದಲು ಬದಲು ಮಾತ್ರ ಇಲ್ಲಿ ಆಗಿದೆ..

3)      March – 29, 2000 ಚೀನಾದ ಜಿಯಾಜುವೋ ನಲ್ಲಿ ವಯಸ್ಕರ ಸಿನೆಮಾ ನೋಡುತ್ತಿರುವಾಗ ಸಿನೆಮಾ ಥಿಯೇಟರ್ ನಲ್ಲಿ ಅಗ್ನಿ ದುರಂತ ಸಂಭವಿಸಿತು.. ಪರಿಣಾಮವಾಗಿ 74 ಜನರು ಸಾವಿಗೀಡಾಗಿದ್ದರು

4)      December – 25, 2000 : ಚೀನಾದ ಲುಯಾಂಗ್ ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸ್ಕೋತೆಕ್ ನಲ್ಲಿ ಕುಣಿದು ಕುಪ್ಪಳಿಸುತ್ತಿದ್ರು ಚೀನಾ ಜನರು.. ಆಗ ಇದ್ದಕ್ಕಿದ್ದಂತೆ ಅಗ್ನಿದುರಂತವಾಗಿ 309 ಜನರು ಅಗ್ನಿಗೆ ಆಹುತಿಯಾದ್ರು.


5)      December – 01, 2001 : ವೆನೆಜುಲಾ ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ ಸಂಭವಿಸಿ 50 ಜನರು ಸಾವಿಗೀಡಾಗಿದ್ದರು

6)      February – 20, 2003 : ಐಸ್‌ಲ್ಯಾಂಡ್ ನ ವೆಸ್ಟ್‌ವಾರ್ ವಿಕ್ ನ ನೈಟ್ ಕ್ಲಬ್ ನಲ್ಲಿ ಇಂಥದ್ದೇ ಅಗ್ನಿದುರಂತವೊಂದು ಸಂಭವಿಸಿದ್ದರ ಪರಿಣಾಮ 100 ಜನರು ಅಗ್ನಿಗಾಹುತಿಯಾಗಿದ್ರು..

7)      December – 30, 2004 :Buenos Aires ನೈಟ್ ಕ್ಲಬ್ ನಲ್ಲಿ ನ್ಯೂ ಇಯರ್ ಪಾರ್ಟಿ ನಡೀತಿತ್ತು.. ಆಗ ಇದ್ದಕ್ಕಿದ್ದಂತೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ 192 ಜನರು ಅಸುನೀಗಿದ್ರು

8)      January -01, 2009 : ಬ್ಯಾಂಕಾಕ್ ನಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರು ಸಂಭ್ರಮದಲ್ಲೇತಮ್ಮ ಜೀವ ಬಿಟ್ಟರು


9)      December 05, 2009  : ರಷ್ಯಾದಲ್ಲಿ ನೈಟ್ ಕ್ಲಬ್ ನಡೆಯುತ್ತಿರುವಾಗ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿತು ಪರಿಣಾಮವಗಿ 155 ಜನರು ಜೀವ ಕಳೆದುಕೊಂಡಿದ್ದರು.ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತಗಳ ಪಟ್ಟಿ ಹೀಗಿದೆ..!!


1) April 16, 1990: ಬಿಹಾರದ ಪಾಟ್ನಾದಲ್ಲಿ ಸಂಭವಿಸಿದ ರೈಲು ಅಗ್ನಿ ದುರಂತದಲ್ಲಿ ಸುಮಾರು 70 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ..

2) December 23, 1995: ಹರ್ಯಾಣದ ದಬ್ವಾಲಿ ಯಲ್ಲಿ ಶಾಲೆಯ ಮಕ್ಕಳೆಲ್ಲಾ ಅಂದು ಖುಷಿಯಲ್ಲಿ ತೇಲುತ್ತಿದ್ದರು.. ಅದು ಶಾಲಾ ವಾರ್ಷಿಕೋತ್ಸವದ ಸಂಭ್ರಮ.. ಆ ಪುಟ್ಟ ಮಕ್ಕಳು ಸ್ಟೇಜಿನ ಮೇಲೆ ಕುಣಿದು ಕುಪ್ಪಳಿಸುತ್ತಿದ್ದರು.. ಇದ್ದಕ್ಕಿದ್ದಂತೆ ಒಳಗೆ ಶಾರ್ಟ ಸರ್ಕ್ಯೂಟ್ ಸಂಭವಿಸಿದೆ.. ಪರಿಣಾಮವಾಗಿ ಮಕ್ಕಳು ಹಾಗೂ ಹಿರಿಯರು ಸೇರಿ ಒಟ್ಟು 442 ಜನರು ಪ್ರಾಣ ತೆತ್ತಿದ್ದಾರೆ.. ಇದು ಕಳೆದ ಹತ್ತು ವರ್ಷಗಳಲ್ಲೇ ಅತಿ ದೊಡ್ಡ ಅಗ್ನಿ ದುರಂತ ಎಂದು ಹೇಳಲಾಗುತ್ತಿದೆ

3) August 6, 2001: ತಮಿಳುನಾಡಿನ ಎರವಾಡಿ ಎಂಬಲ್ಲಿ ಇರುವ ಮಾನಸಿಕ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತವೊಂದು ಸಂಭವಿಸಿತ್ತು ಪರಿಣಾಮವಾಗಿ ಅಲ್ಲಿದ್ದ 28 ಜನರು ಸಜೀವವಾಗಿ ಸುಟ್ಟು ಕರಕಲಾದರು.. ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದಂತೆ ಅವರೆಲ್ಲರ ಕಾಲುಗಳಿಗೆ ಸರಪಳಿ ಹಾಕಿ ಬಂದಿಸಲಾಗಿತ್ತು.. ಹೀಗಾಗಿ ಯಾರೂ ತಪ್ಪಿಸಿಕೊಂಡು ಹೋಗಲು ಸಾಧ್ತವಾಗದೇ ಬೆಂಕಿಗೆ ಆಹುತಿಯಾಗಿದ್ದು ನಿಜಕ್ಕೂ ಮನ ಕರಗುವಂತಿತ್ತು..

4) January 23, 2004:  ತಮಿಳುನಾಡಿನ ಶ್ರೀರಂಗಂ ಪ್ರದೇಶದಲ್ಲಿ ಮದುವೆ ಕಾರ್ಯವೊಂದು ನಡೆಯುತ್ತಿತ್ತು.. ಎಲ್ಲರೂ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.. ಖುಷಿಯ ಸಂಭ್ರಮದಲ್ಲಿ ಅಗ್ನಿದೇವ ಗಹ ಗಹಿಸಿ ಆರ್ಭಟಿಸಿದ.. ಶಾರ್ಟ ಸರ್ಕ್ಯೂಟ್ ಪರಿಣಾಮವಾಗಿ ಅಗ್ನಿ ದುರಂತ ಸಂಭವಿಸಿತ್ತು.. ಇದ್ರಲ್ಲಿ ಸುಮಾರು 49 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು ಸುಮಾರು 40 ಜನರು ಗಾಯಗೊಂಡಿದ್ದರು..

5) July 16, 2004: ತಮಿಳುನಾಡಿನ ಕುಂಬಕೋಣಂ ಪ್ರದೇಶ ಅದು.,. ಅಬ್ಬಾ.. ಅದನ್ನಂತೂ ಯಾರೂ ಮರೆಯಲಾಗದು.. ಸುಮಾರು 900 ಮಕ್ಕಳು ಶ್ರೀಕೃಷ್ಣಾ ಗರ್ಲ್ಸ್ ಶಾಲೆಯಲ್ಲಿ ಓದುತ್ತಾ ಕುಳಿತಿದ್ದರು.. ಪಕ್ಕದಲ್ಲಿ ಊಟಕ್ಕಾಗಿ ಅಡುಗೆ ತಯಾರಾಗುತ್ತಿತ್ತು... ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ.. ಅಡುಗೆ ಮನೆಯಿಂದ ಸ್ಪೋಟವೊಂದು ಸಂಭವಿಸಿತು.. ನೋಡ ನೋಡುತ್ತಿದ್ದಂತೆ ಕೊತ ಕೊತ ಕುದಿಯುತ್ತಿರುವ ಅಡುಗೆಯಲ್ಲಿ ಅರ್ಧಕ್ಕರ್ಧ ಮಕ್ಕಳು ಬಿದ್ದಿದ್ದರು.. ಇತ್ತ ಒಂದು ರೂಮಿನ ಛಾವಣಿ ಕುಸಿದು ಅದರಲ್ಲಿದ್ದ ಹಲವು ಮಕ್ಕಳು ಸಾವಿನ ಮನೆಯ ಕದ ತಟ್ಟಿದ್ದರು.. ಈ ಅಗ್ನಿ ದುರಂತದಲ್ಲಿ ಮಡಿದ ಒಟ್ಟು ಮಕ್ಕಳ ಸಂಖ್ಯೆ 94 ಕ್ಕೂ ಹೆಚ್ಚು..

6) September 15, 2005:  ಬಿಹಾರದ ಮೂರು ಸ್ಪೋಟಕದ ಗೋಡೌನ್ ಗಳಲ್ಲಿ ಕಾಣಿಸಿಕೊಂಡಿದ್ದ ಬಯಾನಕ ಬೆಂಕಿಗೆ 35 ಜನರು ಸಾವಿಗೀಡಾಗಿದ್ದರು.. ಜೊತೆಗೆ 50 ಜನರು ಬೆಂಕಿಯ ನರ್ತನಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದರು

7) April 10, 2006: ಮೀರತ್ ನಲ್ಲಿ ಅಂದು ಗ್ರಾಹಕರ ವ್ಯಾಪಾರ ಮೇಳ ನಡೀತಿತ್ತು.. ಜನರೆಲ್ಲರೂ ಮುಗಿಬಿದ್ದು ತಮಗಿಷ್ಟ ಬಂದದ್ದನ್ನು ಖರೀದಿಸುವ ಉತ್ಸಾಹದಲ್ಲಿ ಬಂದಿದ್ದರು.. ಇದ್ದಕ್ಕಿದ್ದಂತೆ ಮಳಿಗೆಯ ಒಂದು ಭಾಗದಲ್ಲಿ ಸದ್ದಿಲ್ಲದೇ ಶಾರ್ಟ ಸರ್ಕ್ಯೂಟ್ ಆಗಿದೆ.. ಪರಿಣಾಮವಾಗಿ ಕ್ಷಣಾರ್ಧದಲ್ಲಿ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿದೆ.. ಬೆಂಕಿಯ ರೌದ್ರ ನರ್ತನಕ್ಕೆ 64 ಜನರು ಬಲಿಯಾಗಿ ಹೋದರು.. ಜೊತೆಗೆ 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

8) March 23, 2010: ಕಲ್ಕತ್ತಾದ old mansion ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 25 ಜನರು ಪ್ರಾಣ ತೆತ್ತಿದ್ದರು

9) November 20, 2011:  ರಾಷ್ಟ್ರ ರಾಜಧಾನಿ ದೆಹಲಿ ಪೂರ್ವಭಾಗದಲ್ಲಿ ಇರುವಂಥ ಸಮುದಯಭವನದಲ್ಲಿ ಮಂಗಳಮುಖಿಯರ (ಹಿಜಡಾಗಳ) ಕಾರ್ಯಕ್ರಮ ನಡೀತಿತ್ತು.. ಸಮುದಾಯಭವನದೊಳಗೆ ಶಾರ್ಟ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಬೆಂಕಿಯಲ್ಲಿ 15 ಜನರು ಅಸುನೀಗಿದ್ರು.. ಸುಮಾರು 30 ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದರು..

10) December 9, 2011: ಕಲ್ಕತ್ತಾದಲ್ಲಿ ಇರುವ AMRI Hospital ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಶಾರ್ಟ ಸರ್ಕ್ಯೂಟ್ ನಿಂದಾಗಿ ಸುಮಾರು 73 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು..

11) Feb 8, 2012: ಹರಿದ್ವಾರದ electronic factory ನಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಸುಮಾರು 11  ಜನ ಕಾರ್ಮಿಕರು ಬೆಂಕಿಗಾಹುತಿಯಾಗಿದ್ದರು.. ಇಲ್ಲು ಕೂಡ ಶಾರ್ಟ ಸರ್ಕ್ಯೂಟ್ ಇದಕ್ಕೆಲ್ಲಾ ಕಾರಣವಾಗಿತ್ತು..

12) July 30, 2012: ಇದು ತಮಿಳುನಾಡಿನಲ್ಲಿ ನಡೆದ ರೈಲು ದುರ್ಘಟನೆ.. ಊರು ಸೇರುವ ಖುಷಿಯಲ್ಲಿ, ಚೆನ್ನೈಗೆ ತೆರಳುತ್ತಿದ್ದ Tamil Nadu Express ರೈಲಿನಲ್ಲಿ ಕೂತಿದ್ದ ಜನರಿಗೆ ಆತಂಕವೊಂದು ಕಾದಿತ್ತು.. ಬೋಗಿಯಿಂದರಲ್ಲಿ ಕಾಣಿಸಿಕೊಂಡ ಅಗ್ನಿ ಅನಾಹುತದಲ್ಲಿ ಸುಮಾರು 32 ಜನರು ಕೊಲ್ಲಲ್ಪಟ್ಟರು.. 

13) Aug 27, 2012: ಕೇರಳದ ಉತ್ತರ ಭಾಗದಲ್ಲಿರುವ Kannur ನಲ್ಲಿ LPG tanker ನಲ್ಲಿ ಹೆಚ್ಚಾಗಿ ತುಂಬಿದ್ದ ಇಂಧನದ ಪರಿಣಾಮದಿಂದ ಟ್ಯಾಂಕರ್ ಸ್ಪೋಟಗೊಂಡಿತ್ತು.. ಪರಿಣಾಮವಾಗಿ 19 ಜನರು ಸಾವಿಗೀಡಾಗಿದ್ದರು
 Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು