ಸಿನೆಮಾ

Share This Article To your Friends

ಸ್ವಾಮಿ ಬಾಯ್ಬಿಟ್ಟ ಸತ್ಯ- ಕ್ರಾಂತಿ ಕಿಡಿ ಎಕ್ಸ್‌ಕ್ಲೂಸೀವ್ಇದು ಬಹು ಅಪರೂಪದ ಸುದ್ದಿ.. ಸ್ವಾಮಿಯೊಬ್ಬರು ಬಾಯ್ಬಿಟ್ಟ ಕಠೋರ ಸತ್ಯವಿದು.. ಆ ಸತ್ಯ ನಿಜಕ್ಕೂ ಅಹಿತಕರವಾಗಿದೆ. ಆದ್ರೆ ಸಮಾಜದ ಕಠೋರತೆಗೆ ಹಿಡಿದ ಕೈಗನ್ನಡಿಯಾಗಿದೆ.. ಸ್ವತಃ ಸ್ವಾಮಿಯೊಬ್ಬರು ತಮ್ಮ ಬದುಕಿನ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ.. ಅವರ ಕಣ್ಣೀರಿನ ಕಥೆಗೆ ನೀವೇನ್ ಹೇಳ್ತೀರೋ ಅದು ನಿಮಗೆ ಬಿಟ್ಟಿದ್ದು.. 

ಪ್ರಸ್ತುತವಾಗಿ ನಗರವೊಂದರ ಆಸು ಪಾಸಿನಲ್ಲಿ ಇರುವ ಮಠವೊಂದಕ್ಕೆ ಅವರು ಮಠಾಧಿಪತಿಯಾಗಿದ್ದಾರೆ. ಜನರ ನಂಬಿಕೆಗಳಿಗೆ, ಆಚರಣೆಗಳಿಗೆ ಇನ್ನಷ್ಟು ಭಕ್ತಿಯ ರಸದೌತಣವನ್ನು ಉಣಬಡಿಸಿ, ಸಂಪ್ರದಾಯಕ್ಕೆ ಮೆರುಗು ತಂದಿದ್ದಾರೆ.. ಜೊತೆಗೆ ಸಮಾಜವನ್ನು ಉದ್ದಾರ ಮಾಡುತ್ತಿರುವ ಸಮಾಜ ಸುಧಾರಕರು ಕೂಡ ಹೌದು.. ಆದ್ರೆ ಇದು ಸಮಾಜದ ಕಣ್ಣಿಗೆ ಮಾತ್ರ..  ಆದ್ರೆ ಕಾವಿ ಹಿಂದಿನ ಖತರ್ನಾಕ್ ಕಥೆ ಬೇರೇನೇ ಇದೆ..!! ಆ ಖತರ್ನಾಕ್ ವಿಷಯಕ್ಕೆ ಮೂಕ ಸಾಕ್ಷಿಯಾಗಿದ್ದು ಅವರ ಆತ್ಮ ಮಾತ್ರ..!!

ಪ್ರಸ್ತುತವಾಗಿ ಮಠಾಧಿಪತಿಯಾಗಿರೋ ಅವರು ಮೂಲತಃವಾಗಿ ಮಧ್ಯಮ ವರ್ಗದ ಕುಟುಂಬದವರು.. ಆದ್ರೂ ಇದ್ದಿದ್ರಲ್ಲಿ ಮಗನನ್ನು ಚೆನ್ನಾಗಿ ಓದಿಸಿದ್ರು. ಕಷ್ಟ ಪಟ್ಟು ಆತನ ಅವಶ್ಯಕತೆಗಳನ್ನು ಪೂರೈಸಿದ್ರು. ಹೆಚ್ಚಿನ ಓದಿಗಾಗಿ ವಿದೇಶಕ್ಕೆ ಕಳಿಸಿದ್ರು. ಅತನೂ ಕೂಡ  ಇಂಜಿನಿಯರಿಂಗ್ ಪದವಿಯನ್ನು ಮುಗಿಸಿಕೊಂಡು ಬಂದ.. ಅಲ್ಲಿಂದ ಶುರುವಾಯ್ತು ನೋಡಿ ಕಾಟ.. ರಂಪಾಟ... ಅವರು ಇಷ್ಟೆಲ್ಲಾ ಮಾಡಿದ್ದು ಮಗನ ಮೇಲಿನ ಪ್ರೀತಿಯಿಂದಲ್ಲ... ಓದಿದ ಮಗ ಹಣ ಗಳಿಸಿ ಕೊಡ್ತಾನೆ ಅಂತ.. 

ಓದು ಮುಗಿದು ಮನೇಲಿ ಕುಳಿತಿದ್ದ ಆ ಹುಡುಗನಿಗೆ ಜನರು ನಿಂದಿಸಿದ್ದು ಎಷ್ಟೋ ಗೊತ್ತಿಲ್ಲ.. ಆದ್ರೆ ಅದಕ್ಕಿಂತ ಹೆಚ್ಚು ನಿಂದಿಸಿದ್ದು ಮಾತ್ರ ಕುಟುಂಬವರ್ಗದವರು.. ವಿದೇಶಕ್ಕೆ ಹೋಗಿ ಓದಿ ಬಂದ್ರೂ ಒಂದು ಕೆಲಸ ಗಿಟ್ಟಿಸಿಕೊಳ್ಳೋಕೆ ಆಗಲಿಲ್ವಾ ನಿನ್ನಿಂದ... ಅಂತ ದಿನೇ ದಿನೇ ನಿಂದಿಸುತ್ತಿದ್ರೂ. ಆತ ಊಟಕ್ಕೆ ಕುಳಿತಾಗ ಅದೆಷ್ಟು ಅನ್ನದ ಅಗುಳನ್ನು ತಿನ್ನುತ್ತಿದ್ದನೋ... ಅಷ್ಟು ಬೈಗುಳಗಳು ಆತನ ಮನಕ್ಕೆ ಮುಟ್ಟುತ್ತಿದ್ದವು.. ಊಟ ಮುಗಿಸಿ ಬಂದು ಮಲಗುವಾಗ ಅಷ್ಟೇ ಪ್ರಮಾಣದ ಕಣ್ಣಿರು ದುಃಖದಿಂದ ಹೊರ ಬರುತ್ತಿತ್ತು.. 

ಮಕ್ಕಳನ್ನು ಮಿಷಿನ್ ಗಳಂತೆ ಬಳಸಿಕೊಳ್ಳುವ ತಂದೆ ತಾಯಿಗಗಳನ್ನು ಕಂಡು ತುಂಬಾನೇ ಬಾಜಾರ್ ಆಗಿತ್ತು. ವಿಧಿ ವಿಪರ್ಯಾಸವು ಅಷ್ಟೆ ಪ್ರಮಾಣದಲ್ಲಿ ಇತ್ತು ಅಂತ ಕಾಣುತ್ತೆ.. ವರ್ಷ ಮುಗಿದರೂ ಮೊಗದಲ್ಲಿ ಹರ್ಷ ಕಾಣಲೇ ಇಲ್ಲ..  ನೂರಾರು ಕಂಪೆನಿಗಳಿಗೆ ಅಲೆದರೂ ಅವನಿಗೆ ಕೆಲಸ ಸಿಗಲೇ ಇಲ್ಲ.. 

ಬಾಡಿದ ಮುಖಕ್ಕೆ ಜೀವನವೇ ಬೇಡವಾಗಿ ಹೋಗಿತ್ತು. ಭವ-ಬಂಧನದಿಂದ ಆತ ಬೇಸತ್ತು ಹೋಗಿದ್ದ.. ಅದೊಂದು ದಿನ ಮುಂಜಾನೆ ಸಾವಿನ ಮನೆಯ ಕದ ತಟ್ಟೋಕೆ ಆತ ಸಜ್ಜಾಗುತ್ತಿದ್ದ.. ಅಷ್ಟರಲ್ಲೇ ಅವನ ಮನೆಯ ಬಾಗಿಲು ತಟ್ಟಿದ ಶಬ್ಧ ಬಂತು. ತನ್ನ ಕೆಲಸಕ್ಕೆ ಅಡ್ಡಿಯಾಗಿರೋದು ಯಾರು ಅಂತ ನಿಧಾನವಾಗಿ ಬಾಗಿಲು ತೆರದು ನೋಡಿದ.. ಎದುರಲ್ಲಿ ಒಬ್ಬ ವಯಸ್ಸಾದ ವ್ಯಕ್ತಿ ಇದ್ದ.. ಖಾಕಿ ಬಟ್ಟೆಯನ್ನು ತೊಟ್ಟು ಮಗ್ಗುಲಲ್ಲಿ ಒಂದು ಚೀಲವನ್ನು ಹಾಕಿಕೊಂಡಿದ್ದ.. ಕೈಯಲ್ಲಿ ಕೆಲವು ಕಾಗದಗಳನ್ನು ಹಿಡಿದುಕೊಂಡಿದ್ದ.. ಅವನ ಉಡುಗೆ ತೊಡುಗೆ ವೇಷ ಭೂಷಣ ನೋಡಿದ ತಕ್ಷಣವೇ ಅವನೊಬ್ಬ ಪೋಸ್ಟ್ ಮ್ಯಾನ್ ಅಂತ ತಿಳಿದುಬಿಟ್ಟಿತ್ತು... ಸ್ವಲ್ಪ ಒಡೆದು ಹೋಗಿದ್ದ ಕನ್ನಡಕದಿಂದಲೇ ತನ್ನ ಕೈಯಲ್ಲಿದ್ದ ಒಂದು ಕಾಗದವನ್ನು ಹುಡುಕಿ ಆತನ ಕೈಗೆ ಕೊಟ್ಟು ಅಲ್ಲಿಂದ ಹೊರಟು ಹೋದ.

ಲಕೋಟೆಯನ್ನು ನೋಡಿದ ಆತನಿಗೆ ಅಚ್ಚರಿಯಾಯ್ತು.. ಲಕೋಟೆಯ ಹಿಂಬದಿಯನ್ನು ತಿರುಗಿಸಿ ನೋಡಿದ. ಅದು ವಿದೇಶದಿಂದ ಪತ್ರ..!!

ಕುತೂಹಲದಿಂದ ಒಡೆದು ನೋಡಿದ ಆ ಲಕೋಟೆಯನ್ನು.. ಅದು ಕೇವಲ ಲಕೋಟೆಯಾಗಿರಲಿಲ್ಲ. ಅತನ ಬದುಕನ್ನೇ ಬದಲಾಯಿಸೋ ಹಣೆಬರಹದ ಸಂಗ್ರಹವಾಗಿತ್ತು.. ಹೌದು.. ವಿದೇಶೀ ಸಂಸ್ಥೆಯೊಂದು ಆತನಿಗೆ ಕೆಲಸದ ಆಹ್ವಾನ ನೀಡಿತ್ತು. ವೇತನ ಬರೋಬ್ಬರಿ ಮೂರು ಲಕ್ಷ ರೂಪಾಯಿಗಳು.. ಅದನ್ನೇ ನೋಡುತ್ತ ಕುಳಿತಿದ್ದ ಅವನಿಗೆ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಅಷ್ಟರಲ್ಲಾಗಲೇ ಮನೆಗೆ ಬಂಧ ತಾಯಿ ಅವನ ಖುಷಿಯನ್ನು ಕಂಡು ಪ್ರೆಶ್ನಿಸಿದಳು. “ಒಂದ್ ಕೆಲ್ಸ ಇಲ್ಲ.. ಏನ್ ಸಾಧನೆ ಮಾಡ್ದೆ ಅಂತ ಹಿಂಗ್ ಕಿಸೀತಿದ್ಯೋ” ಅಂತ ಕೇಳಿದ್ಳು.

ತಾಯಿಯ ಮಾತು ಕೇಳಿ ಸ್ವಲ್ಪ ಬೇಜಾರ್ ಆಯ್ತು.. ಅದ್ರೆ ಆ ಮಾತುಗಳಿಗೆಲ್ಲ ಈಗ ಬ್ರೇಕ್ ಬಿತ್ತು ಅನ್ನೋ ಖುಷಿ ಕೂಡ ಒಂದು ಕಡೆ ಆಯ್ತು.. ತನಗೆ ವಿದೇಶದಿಂದ ಕೆಲಸದ ಆಫರ್ ಬಂದಿದೆ ಅನ್ನೋದನ್ನು ವಿವರಿಸಿ ಹೇಳಿದ. ಮೆಣಸಿನ ಕಾಯಿಯಂತೆ ಖಾರವಾಗಿದ್ದ ತಾಯಿಯ ಮುಖ ಇದ್ದಕ್ಕಿದ್ದಂತೆ ಟಮೋಟೋ ಹಣ್ಣಿನಂತಾಯ್ತು. “ನಿಜಾನೇನ್ಲಾ ಮಗಾ..!! ನಂಗೊತ್ತಿತ್ತು.. ನನ್ ಮಗ ಇಂಜಿನಿಯರಿಂಗ್ ಓದವ್ನೆ..!! ಒಳ್ಳೇ ಕೆಲ್ಸ ಸಿಕ್ಕೇ ಸಿಗ್ತದೆ ಅಂತ” ಅಂತ ತಾಯಿ ಖುಷಿಯಿಂದ ಆ ಪತ್ರವನ್ನು ಕೈಯಿಂದ ಕಸಿದುಕೊಂಡು ನೋಡತೊಡಗಿದಳು.

ಅವನಿಗೆ ತನ್ನ ತಾಯಿಯ ಮತ್ತೊಂದು ಬಣ್ಣದ ಪರಿಚಯವಾಗಿ ಹೋಯ್ತು. ಹಣ ಎಂದರೆ ಹೆಣ ಕೂಡ ಬಾಯ್ಬಿಡುತ್ತೆ ಅಂತಾರೆ. ಆದ್ರೆ ತನ್ನ ತಾಯಿ, ಹಣ ಸಿಕ್ಕಾಗ ತನ್ನ ಮಾತೇ ಬದಲಾಯಿಸ್ತಾಳೆ ಅಂತ ಅವನು ಅಂದುಕೊಂಡಿರಲಿಲ್ಲ.. ತಂದೆ ಕೂಡ ಮನೆಗೆ ಬಂದ ತಕ್ಷಣ ಇದೇ ರೀತಿಯ ಕೃತಕ ಭಾವನೆಯ ಪ್ರೀತಿಯನ್ನು ಹೊರ ಚೆಲ್ಲಿದ್ದ.. “ದುಡ್ಡು ಇದ್ರೆ ನನ್ನ ಮಗ.,. ಇಲ್ಲದಿದ್ರೆ ಕತ್ತೆ ನನ್ ಮಗ” ಅಂತ ಬಯ್ಯೋ ತಂದೆ ತಾಯಿಗಳೇ ಈ ಜಗತ್ತಿನಲ್ಲಿ ಇದ್ದಾರೆ ಅನ್ನೋದು ಅವನಿಗಾಗಲೇ ಅರಿವಾಗಿತ್ತು.. ಕೆಲಸ ಸಿಕ್ಕ ಖುಷಿಗಿಂತ ಕೃತಕ ಪ್ರೀತಿಗಾಗಿ ಬದುಕುವ ವಿಪರ್ಯಾಸ ಕಂಡು ಆತನಿಗೆ ಇನ್ನಿಲ್ಲದ ಮುಖಭಂಗವಾಯ್ತು.

ಹಾಗೋ ಹೀಗೋ ಮಾಡಿ ವಿದೇಶಕ್ಕೆ ಪಯಣ ಬೆಳೆಸಿ ತಂದೆ ತಾಯಿಗಳಿಂದ ದೂರವಿರಬೇಕು ಅಂತ ಮನಸ್ಸು ಮಾಡಿ ಬಿಟ್ಟ. ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ವಿದೇಶಕ್ಕೂ ಹೋದ.. ಪ್ರತಿ ತಿಂಗಳೂ ಲಕ್ಷ ಲಕ್ಷ ರೂಪಾಯಿಗಳನ್ನು ತನ್ನ ತಂದೆ ತಾಯಿಗಳಿಗಾಗಿ ಕಳಿಸ್ತಾ ಇದ್ದ.. “ಪ್ರೀತಿಯಿಂದಲ್ಲ, ತನಗೆ ಜೀವ ಕೊಟ್ಟಿರುವುದಕ್ಕೆ ಪ್ರತಿಯಾಗಿ..!!ಆದರೆ ಮಗನ ಹಣದಿಂದ ಹುಚ್ಚಾಪಟ್ಟೆ ಖರ್ಚು ಮಾಡೋಕೆ ಶುರು ಮಾಡಿದ್ರು ಈ ತಂದೆ ತಾಯಿಗಳು. ಒಂದು ವರ್ಷಗಳ ಕಾಲ ಎಲ್ಲವೂ ಚೆನ್ನಾಗೇ ಇತ್ತು.. ಆದ್ರೆ ಹುಚ್ಚಾಪಟ್ಟೆ ಖರ್ಚುಮಾಡುವ ಪ್ರವೃತ್ತಿಯನ್ನು ಮೈಗೂಢಿಸಿಕೊಂಡಿದ್ದ ಆ ಪೋಷಕರು ಇನ್ನಷ್ಟು ಐಷಾರಾಮಿ ಬದುಕು ಸಾಗಿಸಬೇಕೋ ಅನ್ನೋ ಆಲೋಚನೆ ಮೂಡಿತು. ಬಂಗಲೆಯನ್ನು ಕೊಂಡುಕೊಂಡ್ರು, ಕಾರುಗಳಲ್ಲೇ ಸದಾ ಪಯಣ, ಕ್ಲಬ್ಬು ಕಾರ್ಡುಗಳು ಅಂತ ಹಣವನ್ನು ನೀರು ಕುಡಿದಂತೆ ಖಾಲಿ ಮಾಡ್ತಿದ್ರು. ಅಷ್ಟೇ ಅಲ್ಲ, ಇನ್ನಷ್ಟು ಹಣಕ್ಕಾಗಿ ಮಗನಿಗೆ ಪೀಡಿಸತೊಡಗಿದ್ರು.

ಅಲ್ಲಿಗಾಗಲೇ ಅವನ ತಾಳ್ಮೆ ಸತ್ತು ಹೋಗಿತ್ತು.. ಹಗಲು ರಾತ್ರಿ ಎನ್ನದೇ, ಊಟ ಬಟ್ಟೆ ಎನ್ನದೇ ದುಡಿಯುತ್ತಿದ್ದವನ ಶ್ರಮವನ್ನು ಅರ್ಥ ಮಾಡಿಕೊಳ್ಳದೇ ಕೇವಲ ಹಣ ಕೊಡುವ ಮಿಷಿನ್ನಿನಂತೆ ತನ್ನನ್ನು ಬಳಸಿಕೊಳ್ತಿರೋದು ಅವನಿಗೆ ಅಸಹ್ಯವೆನಿಸಿತು.. ಸ್ವಂತ ಜೀವನವೇ ನನಗೆ ಇಲ್ಲವೇ..?? ಎಂದು ಹತಾಶನಾಗಿಬಿಟ್ಟ.  ಕೊನೆಗೆ ಅವನಿಗೆ ಒಲಿದಿದ್ದು “ಭವ ಬಂಧನಗಳನ್ನು ಮೀಟಿ, ಸ್ವಾಮೀಜಿಯಾಗೋ ಕಾಯಕ. ಇಲ್ಲಿ ಯಾರ ಆತಂಕವೂ ಇರಲ್ಲ.. ಮಮತೆ-ಬಂಧನ ಯಾವುದೂ ಇರೋದಿಲ್ಲ. ಸ್ವಾಮಿಜಿಯಾದ್ರೆ ಅವನೊಬ್ಬ ಸಮಾಜದ ಫಕೀರ. ಜೀವನದಿಂದ ಜಿಗುಪ್ಸೆಗೊಂಡು, ಮನಸ್ಪೂರ್ತಿಯಾಗಿ ಇಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ವಿದೇಶದಲ್ಲೇ “ಸ್ವಾಮಿ ಧೀಕ್ಷೆ ಪಡೆದು ಬಿಟ್ಟ”

ತನ್ನ ತಂದೆ ತಾಯಿಗಳಿಗೆ ಈ ವಿಷಯ ತಿಳಿದು ಅತಂಕಗೊಂಡ್ರು. ಬರ್ತಾ ಇದ್ದ ಹಣ, ಹೊಳೇಲಿ ಹರಿದು ಹೋಯ್ತಲ್ಲ ಅಂತ ರೋಧಿಸಿದ್ರು. ಆದ್ರೆ ಅದ್ಯಾವುದನ್ನೂ ಲೆಕ್ಕಸಲಿಲ್ಲ ಈ ಸ್ವಾಮಿಜಿ..  ಈ ಹುಡುಗನ ಸ್ವಾಮಿನಿಷ್ಟೆ, ಶ್ರದ್ಧೆ, ಸೇವೆಯನ್ನು ನೋಡಿದ ದೊಡ್ಡ ಸ್ವಾಮಿಗಳು ಆತನನ್ನು ಬೆಂಗಳೂರು ಆಸುಪಾಸಿನ ಮಠವೊಂದಕ್ಕೆ ಕಳುಸಿ ಜನ ಸೇವೆ ಮಾಡುವಂತೆ ಹೇಳಿದ್ರು. ಅವರ ಆಜ್ಞೆಯಂತೆ ವಿದೇಶ ಬಿಟ್ಟು ಸ್ವದೇಶಕ್ಕೆ ಬಂದು ಬಿಟ್ರು.. ಜನಸೇವೆಯಲ್ಲಿ ಮಗ್ನರಾಗಿ ಹೋದ್ರು. 

ಅದೊಂದು ದಿನ ಮಗನ ಇರುವಿಕೆಯ ಬಗ್ಗೆ  ತಿಳಿದ ತಂದೆ ತಾಯಿಗಳು ಆಶ್ರಮಕ್ಕೆ ಬಂದರು. “ದೀವಾನರಂತೆ ಮೆರೆದಿದ್ದ ಅವರು ಇದೀಗ ಅಕ್ಷರಶಃ ದಿವಾಳಿಯಾಗಿ ಹೋಗಿದ್ರು. ಐಷಾರಾಮಿ ಜೀವನಕ್ಕಾಗಿ ಮಾಡಿದ್ದ ಸಾಲ ಶೂಲದಂತೆ ಚುಚ್ಚುತಿತ್ತು. ಸ್ವಾಮೀಜಿಯ ಬಳಿ ಬಂದು ನಮಸ್ಕರಿಸಿ ಕೇಳಿದ್ರು. “ನೀವು ನನ್ನ ಮಗನಾಗಿ ಮತ್ತೆ ಬರಬೇಕು ಅಂತ ಹೆತ್ತ ಕರುಳುಗಳು ಕೇಳುತ್ತಿವೆ ದಯವಿಟ್ಟು ಬಾ” ಎಂದು ಗೋಗರೆದ್ರು. ಆದ್ರೆ ಸಮಾಜದ ಮಗುವಾಗಿ ಪರಿವರ್ತನೆಗೊಂಡ ಸ್ವಾಮಿ ಮತ್ತೆ ಮನೆ ಮಗನಾಗಿ ಬರೋದಕ್ಕೆ ಸಾಧ್ಯವಿಲ್ಲ ಅದನ್ನು ಧರ್ಮ ಒಪ್ಪುವುದಿಲ್ಲ ಅಂತ ತಂದೆ ತಾಯಿಗಳಿಗೆ ಹೇಳಿ ಸಮಾಧಾನ ಪಡಿಸಿ ಕಳಿಸಿದ್ರು ಕಿರಿಯ ಸ್ವಾಮೀಜಿ.. ಆಸೆಯಿಂದ ಬಂದ ಪೋಷಕರಿಗೆ ನಿರಾಸೆ ಕಣ್ಣೀರಾಗಿ ಭೂಮಿತಾಯಿಯ ಮಡಿಲು ಸೇರಿತ್ತು..

 ಸೇವಾ ಮನೋಭಾವನೆಯಲ್ಲೆ ತಲ್ಲೀನರಾಗಿ, ಸುಮಾರು ಆರು ವರ್ಷಗಳ ಕಾಲ ಮಠದೊಳಗಿದ್ದು ಜನಸೇವೆ ಮಾಡಿದ್ರು. ಆಗಾಗ ಅವರ ತಂದೆತಾಯಿಗಳು ಬಂದು ಬಂದು ಆತನ ಮನಃ ಪರಿವರ್ತನೆಗೆ ಶ್ರಮಿಸಿದರೂ ಅದು ಪ್ರಯೋಜನವಾಗಲಿಲ್ಲ.. ಚಿನ್ನದ ಮೊಟ್ಟೆ ಇಡುವ ಕೋಳಿ ಕೈ ತಪ್ಪಿದ್ದಕ್ಕೆ ಮನದೊಳಗೇ ನೋವುಂಡು ನರಳುತ್ತಿದ್ರು.

ಅದೊಂದು ದಿನ ದೊಡ್ಡ ಸ್ವಾಮಿಜಿಗಳು ವಿದೇಶದಿಂದ ಸ್ವದೇಶಕ್ಕೆ ಬಂದ್ರು.. ಕಿರಿಯ ಸ್ವಾಮೀಜಿಯ ಮಠಕ್ಕೆ ಭೇಟಿ ಕೊಟ್ಟು ಆತನ ಸೇವೆಯನ್ನು ಗಮನಿಸಿದ್ರು.  ತನ್ನ ನಿಸ್ವಾರ್ಥ ಸೇವೆಯಿಂದ ಅದಾಗಲೇ ಸಾಕಷ್ಟು ಹೆಸರುವಾಸಿಯಾಗಿದ್ರು ಕಿರಿಯ ಸ್ವಾಮಿಗಳು.. ಶಿಕ್ಷಣ... ದಾನ ಧರ್ಮ ಗಳಿಂದ ಮಠವನ್ನು ಪ್ರಗತಿಪಥದತ್ತ ನಡೆಸುತ್ತಿದ್ದರು.. ಇದನ್ನು ಕಂಡು ಹಿರಿಯ ಸ್ವಾಮಿಗಳಿಗೆ ಖುಷಿಯಾಯಿತು.. ಸ್ವಾಮೀಜಿಯವರನ್ನು ತನ್ನ ಹತ್ತಿರಕ್ಕೆ ಕರೆದು ಕುಳ್ಳಿರಿಸಿದ್ರು. ಹತ್ತಿರದಿಂದ ನೋಡಿ ಮಾತಾಡಿಸಿದ್ರು. ಅದೇ ಸಮಯಕ್ಕೆ ಸರಿಯಾಗಿ ಕಿರಿಯ ಸ್ವಾಮಿಯ ಪೋಷಕರು ಮತ್ತೆ ಆ ಮಠಕ್ಕೆ ಕಣ್ಣೀರಿಡುತ್ತ ಬಂದರು.. ಸ್ವಾಮೀಜಿಗೆ ನಮಿಸಿ ತಮ್ಮ ಅಹವಾಲನ್ನು ಅವರಿಗೊಪ್ಪಿಸಿದ್ರು..

ಕಿರಿಯ ಸ್ವಾಮಿ ಏನುತಾನೇ ಹೇಳಿಯಾರು..?? ಅದೇ ಆಗದ ಮಾತು...... ಆದರೆ ಹಿರಿಯ ಸ್ವಾಮಿ ಹೇಳಿದ್ದು ಒಂದೇ ಒಂದು ಮಾತು..” ಪೋಷಕರ ಕಣ್ಣೀರು ಒರೆಸುವುದು ಮಗನಾಗಿ ನಿನ್ನ ಕರ್ತವ್ಯ” ಅಂತ ಹೇಳಿ ಅಲ್ಲಿಂದ ಎದ್ದು ನಡೆದರು.. ಹಾಗಾದ್ರೆ ಅವರ ಮಾತಿನ ಅರ್ಥವೇನು..?? ಮಗನಾಗಿ ಅವರ ಮಡಿಲು ಸೆರಬೇಕು ಎನ್ನುವ ತಾತ್ಪರ್ಯವಿತ್ತೇ ಆ ಮಾತಿನಲ್ಲಿ..?? ಇದು ಸ್ವತಃ ಕಿರಿಯ ಸ್ವಾಮಿಗಳಿಗೇ ಅರ್ಥವಾಗಲಿಲ್ಲ

          ಅವರು ಹೇಳಿದ ಮಾತುಗಳು ಸ್ವಾಮಿಯ ಕಿವಿಯಲ್ಲಿ ಗುಯ್ ಗುಟ್ಟುತ್ತಿದ್ದವು.. ಆಲೋಚನೆ ಸ್ವಾಮಿಯ ಮೆದುಳನ್ನೇ ಕಿತ್ತು ತಿನ್ನುತ್ತಿತ್ತು.. ವಿಧಿ ವಿಪರ್ಯಾಸವೋ.. ನೋವಿನ ರುದ್ರ ತಾಂಡವವೋ.... ದಿನಗಳೆದಂತೆ ಹಿರಿಯ ಸ್ವಾಮಿಗಳ ಆರೋಗ್ಯ ಇದ್ದಕ್ಕಿದ್ದಂತೆ ಕ್ಷೀಣಿಸತೊಡಗಿತು.. ಮಠದೊಳಗೇ ಚಿಕಿತ್ಸೆ ನೀಡಲಾಗುತ್ತಿತ್ತು. ದೊಡ್ಡ ಸ್ವಾಮಿಗಳ ಪಾದಸೇವೆ ಮಾಡುತ್ತ, ಮಗುವಿನಂತೆ ನೋಡಿಕೊಂಡರು.. ಆದರೆ ದೇಹಕ್ಕೆ ಅದಾಗಲೇ ಆಯಸ್ಸು ಮುಗಿದು ಹೋಗಿತ್ತು.. ಸಂಜೆ 6 ಗಂಟೆಯ ಸಮಯ.. ಸ್ವಾಮಿಯ ಪಾದಕ್ಕೆ ತಲೆಕೊಟ್ಟು ಕಿರಿಯ ಸ್ವಾಮಿ ಮಲಗಿದ್ದರು. ಇದ್ದಕ್ಕಿದ್ದಂತೆ ಹಿರಿಯ ಸ್ವಾಮಿಗಳ ಉಸಿರಾಟದ ವೇಗ ಹೆಚ್ಚಾಯಿತು.. ದಿಗ್ಭ್ರಾಂತನಾಗಿ ಎದ್ದು ಗಡಿಬಿಡಿಯಲ್ಲಿ ಸ್ವಾಮಿಗೆ ನೀರು ಕುಡಿಸಿದರು.. ತನ್ನ ತಾಯಿಯೇ ತನಗೆ ಹಾಲುಣಿಸುತ್ತಿದ್ದಾಳೇನೋ ಎಂಬ ಭಾವನೆ ಹಿರಿಯ ಸ್ವಾಮಿಗಳಲ್ಲಿ ಮೂಡಿತ್ತು..

ಅದನ್ನು ನೋಡಿ ಸ್ವಾಮಿಗಳು ಹೇಳಿದ್ರು.. “ನೀನು ನನಗೆ ತಾಯಿಯಂತೆ ಕಾಣುತ್ತಿದ್ದೀಯ.. ನೀನು ಈ ಜಗವನ್ನು ಸಲಹುವೆ ಅನ್ನೋ ನಂಬಿಕೆ ನನಗಿದೆ.. ಸಾಧ್ಯವಾದರೆ ನಿನ್ನ ಮಗನಾಗಿ ಹುಟ್ಟಿ ನಿನ್ನ ಋಣ ತೀರಿಸುತ್ತೇನೆ.. ಆದರೆ ನನ್ನದೊಂದು ಮಾತು.... ನಿನ್ನನ್ನು ಹೆತ್ತವರಿಗೆ ಕಣ್ಣೀರನ್ನು ಕೊಡಬೇಡ.. ಅದು ಧರ್ಮವಲ್ಲ ಎಂದು ಹೇಳುತ್ತ ತಮ್ಮ ಕೊನೆ ಮಾತು ಮುಗಿಸಿ ಉಸಿರು ಬಿಗಿ ಹಿಡಿದುಬಿಟ್ಟರು.. ಮತ್ತೆ ಉಸಿರು ಬಿಡಲೇ ಇಲ್ಲ..

ಹಿರಿಯ ಸ್ವಾಮಿಯ ಉಸಿರು ನಿಂತರೂ ಅವರು ಹೇಳಿದ ಆ ಒಂದು ಮಾತ್ರ ತನ್ನ ಶಬ್ಧವನ್ನು ನಿಲ್ಲಿಸಲೇ ಇಲ್ಲ.. ನಿನ್ನನ್ನು ಹೆತ್ತವರಿಗೆ ಕಣ್ಣೀರು ಹಾಕಿಸಬೇಡ” ಎಂದು ಹೇಳಿದ ಕೊನೆಯ ಮಾತು ಮತ್ತೆ ತಲೆ ಕೆಡಿಸಿತು.. ಜಗದ ಸೇವೆ ಮಾಡು ಎಂದು ಆಶೀರ್ವಚನ ಕೊಟ್ಟವರು ಪೋಷಕರನ್ನು ಸಂತೃಪ್ತಿ ಪಡಿಸುವುದು ಎಂದು ಏಕೆ ಹೇಳಿದರು..?? ಎರಡೂ ಕಡೆ ಸಂತೃಪ್ತಿಪಡಿಸುವುದು ಹೇಗೆ..?? ಎಂಬ ಅಲೋಚನೆಯೊಂದಿಗೆ ಹಿರಿಯ ಸ್ವಾಮಿಗಳ ಕಣ್ಣನ್ನು ಮುಚ್ಚಿ ನಿಧಾನವಾಗಿ ಮಂಚಕ್ಕೆ ಒರಗಿಸಿದರು.. 

ಅವರ ಕೈಯಲ್ಲಿ ಬೀಗವಿತ್ತು... ಅದು ಮಠದ ಖಜಾನೆಯ ಬೀಗ.. ಕೋಟಿ ಕೋಟಿ ಹಣ... ಚಿನ್ನ ವಜ್ರಗಳ ಖಜಾನೆಯ ಬೀಗ ಅದು... ಮರು ಮಾತಾಡದೇ ನಿಧಾನವಾಗಿ ಆ ಬೀಗವನ್ನು ಅವರ ಕೈಯಿಂದ ಬಿಡಿಸಿಕೊಂಡು ಖಜಾನೆಯನ್ನು ತೆರೆದು ನೋಡಿದರು... ಅಬ್ಬಬ್ಬಾ.... ಅದು ನಿಜಕ್ಕೂ ಕುಬೇರನ ಖಜಾನೆ.. ಭಕ್ತರ ಭಿಕ್ಷೆಯೇ ಬಹುದೊಡ್ಡ ಖಜಾನೆಯಾಗುವುದೇ ಎಂಬ ಅಚ್ಚರಿಯೊಂದಿಗೆ ಸ್ವಾಮಿ ಒಳಗೆ ಹೋದ..

          ಅಲ್ಲಿ ದೊಡ್ಡ ಸ್ವಾಮಿಗಳ ಅಶರೀರವಾಣಿಯೊಂದು ಕೇಳಿದಂತೆ ಭಾಸವಾಯಿತು.. “ ನಿನ್ನನ್ನು ಹೆತ್ತವರನ್ನು ಕಣ್ಣೀರು ಹಾಕಿಸಬೇಡ.. ಅದು ಧರ್ಮವಲ್ಲ”.. ಕ್ಷಣ ಹೊತ್ತು ಯೋಚಿಸಿದ ಸ್ವಾಮಿ ತನ್ನ ಪೋಷಕರ ಬಗ್ಗೆ ಆಲೋಚಿಸಿದ.. ತನ್ನನ್ನು ಪ್ರೀತಿಯಿಂದ ಮಗನಾಗು ಎಂದು ಪೋಷಕರು ಹೇಳುತ್ತಿಲ್ಲ.. ಬದಲಾಗಿ ದುಡಿಯುವ ಯಂತ್ರವಾಗಿ.. ಹಣ ನೀಡುವ ಮಗನಾಗಿ ತನ್ನನ್ನು ಕರೆಯುತ್ತಿದ್ದಾರೆ ಅನ್ನೋದು ಆತನಿಗೆ ಅರಿವಯಿತು.. ಆದರೆ ದೊಡ್ಡ ಸ್ವಾಮಿಗಳು ಹೇಳಿದ ಮಾತು ಅವರ ತಲೆಯಲ್ಲಿ ಓಡಾಡುತ್ತಿತ್ತು.. ಎರಡಕ್ಕೂ ಒಂದೇ ಉಪಾಯ.. ಪೋಷಕರಿಗೆ ಬೇಕಾದದ್ದು ಹಣ... ಅದನ್ನು ಅವರಿಗೆ ಕೊಟ್ಟರೆ ಮಗನಾಗಿ ನನ್ನ ಜವಾಬ್ದಾರಿ ಮುಗಿಯುತ್ತದೆ.. ಮತ್ತು ಮಠದೊಳಗಿದ್ದು ಸಮಾಜಸೇವೆ ಮಾಡಿದರೆ, ಗುರುಗಳ ಮಾತನ್ನು ಉಳಿಸಿದಂತಾಗುತ್ತದೆ ಎಂದು ನಿರ್ಧಾರಕ್ಕೆ ಬಂದ...

ಅಷ್ಟರಲ್ಲಾಗಲೇ ಮಠದ ಟ್ರಸ್ಟಿಗಳು ಅಲ್ಲಿಗೆ ಧಾವಿಸಿದ್ದರು..  ದೊಡ್ಡ ಸ್ವಾಮಿಗಳು ದೇಹತ್ಯಾಗ ಮಾಡಿದ್ದರೆ ಅನ್ನೋದು ಭಕ್ತರಿಗೆ ಗೊತ್ತಾದ್ರೆ ಜನಜಂಗುಳಿ ಸೇರುತ್ತೆ.. ಮುಂದಿನ ಮಠಾಧಿಪತಿ ಬಗ್ಗೆ ಮಾಧ್ಯಮಗಳು ಸದ್ದು ಮಾಡುತ್ತವೆ.. ಮತ್ತು ಮಠದ ಒಟ್ಟಾರೆ ಆಸ್ತಿಯನ್ನು ಲೆಕ್ಕವನ್ನು ಕೆದಕಿ ಕೇಳುತ್ತವೆ.. ಹೀಗಾಗಿ ಸ್ವಾಮಿಗಳು ಅಸ್ತಂಗತರಾಗಿದ್ದಾರೆ ಅನ್ನೋ ವಿಷಯವನ್ನು ಮುಚ್ಚಿಟ್ಟು,  ಮಠದಲ್ಲಿರುವ ಹಣವನ್ನು ಮೊದಲು ಬೇರೆಡೆಗೆ ಸ್ಥಳಾಂತರಿಸೋಣ ಅಂತ ಎಲ್ಲರೂ ನಿರ್ಧರಿಸಿದ್ರು.. ಟ್ರಸ್ಟಿಗಳಿಗೆ ಬೇಕಾಗಿದ್ದು ಇದೇ.. ವೈದ್ಯರೂ ಕೂಡ ಇದಕ್ಕೆ ಸಮ್ಮತಿಸಿದ್ರು.. 

ಪಾರ್ಥೀವ ಶರೀರ ಕೆಡದಂತೆ ಸಂರಕ್ಷಿಸಿಡಲು ವೈದ್ಯರು ಮುಂದಾದ್ರು.. ಹಣವನ್ನು ಬೇರೆಡೆಗೆ ಸಾಗಿಸುವ ಕುರಿತು ಟ್ರಸ್ಟಿಗಳು ತಂತ್ರ ರೂಪಿಸಿದ್ರು.. ಕಿರಿಯ ಸ್ವಾಮಿಗಳು ಅದೆಲ್ಲದಕ್ಕೂ ಸೂತ್ರಧಾರಿಯಾಗಿದ್ರು.. ಹಣಕ್ಕಾಗಿ ಅಲ್ಲೊಂದು ಕಿಲಾಡಿ ತಂತ್ರವೇ ನಡೆದು ಹೋಗಿತ್ತು.. 

ರಾತ್ರೋ ರಾತ್ರಿ ಮಠದ ಖಜಾನೆಯನ್ನು ಟೆಂಪೋ ಗಳಲ್ಲಿ,,, ಆಟೋಗಳಲ್ಲಿ... ಹಾಲಿನ ಲಾರಿಗಳಲ್ಲಿ.. ಟಾಟಾ ಏಸ್ ಗಳಲ್ಲಿ.. ಹೀಗೆ ವಿವಿಧ ಬಗೆಯ ವಾಹನಗಳಲ್ಲಿ ಗೋಣಿ ಚೀಲದಲ್ಲಿ ಕಟ್ಟಿ,,  ಮೂಟೆ ಮೂಟೆ ಹಣವನ್ನು ಬೇರೆಡೆಗೆ ಸಾಗಿಸಲಾಯಿತು.. ಅದರಲ್ಲಿನ ಒಂದು ಆಟೋವನ್ನು ಚಿಕ್ಕ ಸ್ವಾಮಿಗಳು ತನ್ನ ಪೋಷಕರಿಗೆ ಕಳಿಸಿದ್ರು.. ಎಲ್ಲವೂ ಅಂದುಕೊಂಡಂತೆ,, ಕುಶಲಮತಿಯಿಂದ ಮಾಡಿ ಮುಗಿಸಿಬಿಟ್ರು.. ಖಜಾನೆ ಖಾಲಿಯಾದ ಬಳಿಕ ಮರು ದಿನ ಸ್ವಾಮಿಗಳ ನಿಧನದ ವಾರ್ತೆಯನ್ನು ಜಗಕ್ಕೆ ಸಾರಿದರು..

          ಕಪಟ ನಾಟಕ ಸೂತ್ರಧಾರಿಗಳ ಸೂಕ್ಷ್ಮತೆಯಂತೆ ಕ್ಷಣಾರ್ಧದಲ್ಲಿ ಭಕ್ತರ ದಂಡು ಮಠದತ್ತ ಸಾಗಿ ಬಂತು.. ಮಾಧ್ಯಮದವರು ಮಠ ಮತ್ತು ಸ್ವಾಮಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆದಕೋಕೆ ಶುರು ಮಾಡಿದ್ರು.. ಆದ್ರೆ ಅಷ್ಟರಲ್ಲಾಗಲೇ ಮಠದ ಖಜಾನೆ, ಸೇರಬೇಕಾದ ಜಾಗಕ್ಕೆ ಸೇರಿಬಿಟ್ಟಿತ್ತು.. ಮಠದಲ್ಲಿ ಉಳಿದಿದ್ದು ಚೂರು ಪಾರು ಮಾತ್ರ... ಜೊತೆಗೆ ಸ್ವಾಮಿಯ ಪಾರ್ಥೀವ ಶರೀರ.. ಮಠದ ತುಂಬೆಲ್ಲಾ ಭಕ್ತರ ಆರ್ತನಾಧನ.. ಅಳುವಿನ ಗೋಳಾಟ ಕೇಳಿ ಬರುತ್ತಿತ್ತು.. ಕಣ್ಣೀರಿನ ಹನ ಇಗಳಿಂದ ಮಠ ತುಂಬಿಹೋಗಿತ್ತು.. ಏನೂ ಆಗೇ ಇಲ್ಲವೇನೋ ಎಂಬಂತೆ ಮಠದ ಟ್ರಸ್ಟಿಗಳು.. ಸ್ವಾಮಿಗಳು.. ವೈದ್ಯರು.. ಎಲ್ಲರೂ ಕೂಡ ಮವನವಾಗಿದ್ರು..  ಜನರೊಂದಿಗೆ ಸೇರಿ ಕಣ್ಣೀರು ಹಾಕಿದ್ರು.. ಸ್ವಾಮಿಗಳ ಅಂತ್ಯ ಕ್ರಿಯೆಯನ್ನು ಮಠದ ಸಂಪ್ರದಾಯದಂತೆ ಮಾಡಿ ಮುಗಿಸಿದ್ರು.. ಸ್ವಾಮಿಗಳು ಪಂಚಭೂತಗಳಲ್ಲಿ ಲೀನವಾಗಿ ಹೋದ್ರು..
ದಿನ ಕಳೆದಂತೆ ಮಠದ ಪರಿಸ್ಥಿತಿ ಸುಧಾರಿಸಿತು.. ಕಿರಿಯ ಸ್ವಾಮಿಗಳು ಹಿರಿಯ ಹುದ್ದೆಯನ್ನು ಅಲಕಂರಿಸಿದ್ರು.. 

ಅದೊಂದು ದಿನ   ಕಿರಿಯ ಸ್ವಾಮಿಗಳು ಖಾಸಗಿಯಾಗಿ ತಮ್ಮ ಪೋಷಕರನ್ನು ಭೇಟಿ ಮಾಡಿದ್ರು.. “ನೀವು ಬಯಸಿದ್ದು ಹಣ.. ನಾನು ಯಾವ ಕೆಲಸಕ್ಕೆ ಸೆರಿದ್ರೂ ಇಷ್ಟೊಂದು ಹಣವನ್ನು ಸಂಪಾದಿಸೋದಕ್ಕೆ ಆಗ್ತಾ ಇರಲಿಲ್ಲ.. ಆದ್ರೆ ಈಗ ಅದೆಲ್ಲದಕ್ಕಿಂತಲೂ ಅತಿ ಹೆಚ್ಚು ಹಣವನ್ನು ನಿಮ್ಮ ಮುಂದಿಟ್ಟಿದ್ದೀನಿ.. ಚಿನ್ನ ಒಡವೆಗಳ ಖಜಾನೆಯನ್ನು ನಿಮ್ಮ ಮುಂದಿಟ್ಟಿದ್ದೀನಿ.. ನೀವು ಜೀವನ ಪೂರ್ತಿ ಎಣಿಸಿದರೂ ಆ ಹಣಎಷ್ಟಿದೆ ಅಂತ ಎಣಿಸೋದಕ್ಕೇ ಆಗೋದಿಲ್ಲ.. ಒಬ್ಬ ಮಗನಾಗಿ ಇಷ್ಟು ಬಿಟ್ಟರೆ ನನ್ನಿಂದ ಏನೂ ನಿಮಗೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟ

          ಮಗ ಕೋಟಿ ಕೋಟಿ ಹಣ ಕೊಟ್ಟಿದ್ದಾನೆ ಅಂತ ಖುಷಿ ಪಡಬೇಕಾ..? ಅಥವ ಮಗ ಕೈ ತಪ್ಪಿ ಹೋದನು ಅಂತ ದುಃಖ ಪಡಬೇಕಾ..?? ಅಥವ ಮಠದಲ್ಲಿದ್ದು ಮಗ ಹಣ ಕೊಳ್ಳೆಹೊಡೆದನಲ್ಲಾ ಅಂತ ಅಸಹ್ಯ ಪಡಬೇಕಾ..?? ಒಂದೂ ಗೊತ್ತಾಗಲಿಲ್ಲ ಈ ಪಾಪಿ ಪೋಷಕರಿಗೆ.. ತಮ್ಮ ಹಣದ ದಾಹವೇ ಮಗನ ಭ್ರಷ್ಟತೆಗೆ ಕಾರಣ ಅನ್ನೋ ನಿಜ ಸಂಗತಿ ಅವರಿಗಾಗ ಅರ್ಥವಾಗಿತ್ತು.. ಆದರೆ ಕಾಲ ಮಿಂಚಿಹೋಗಿಬಿಟ್ಟಿತ್ತು..

          ಇತ್ತ ಮಠದ ಹಣವನ್ನು ಬೇಕಾಬಿಟ್ಟಿ ಕೊಳ್ಳೇ ಹೊಡೆದ ಕಳ್ಳ ಸ್ವಾಮಿಗಳ ಪಟ್ಟಿಗೆ “ಉತ್ತಮ” ಎಂದು ಹೊಗಳಿಸಿಕೊಂಡ ಕಿರಿಯ ಸ್ವಾಮಿ ಕೂಡ ಸೇರಿಬಿಟ್ಟ.. ಹಣದ ದಾಹ.. ಜಗದ ಮೋಹ... ಸ್ವಾಮಿ ನಿಷ್ಟೆಯನ್ನೇ ಬದಲಿಸಿಬಿಟ್ಟಿತ್ತು.. ಆದರೆ ಇದ್ಯಾವುದು ಸಮಾಜಕ್ಕೆ ಗೊತ್ತಿಲ್ಲ.. ಅದರೆ ಆ ಕಿರಿಯ ಸ್ವಾಮಿಯ ಆತ್ಮ ಈ ಎಲ್ಲಾ ಕಳ್ಳ ಕೆಲಸಕ್ಕೆ ಮೂಕ ಸಾಕ್ಷಿಯಾಗಿತ್ತು...
 
ಈಗಲೂ ಆ ತಪ್ಪು ಅವನನ್ನು ಕಾಡುತ್ತಿದೆ.. ಆದರೆ ಹಣದ ಕೊಳ್ಳೆ ಹೊಡೆಯುವ ಕಾರ್ಯ ನಿಲ್ಲುತ್ತಿಲ್ಲ.. ಟ್ರಸ್ಟಿಗಳು ಮತ್ತಿತರರು ಹಣವನ್ನು ಬೇಕಾಬಿಟ್ಟಿ ಕೊಳ್ಳೇ ಹೊಡೀತಿದ್ದಾರೆ.. ಭೂಮಿಯನ್ನು ಅಗೆದು ನೀರು ಹೊರತೆಗೆಯುವಂತೆ ಮಠವನ್ನು ಬಗೆದು ಕೊಳ್ಳೆ ಹೊಡೀತಿದ್ದಾರೆ.. ಆದರೆ ಅದೆಲ್ಲವನ್ನು ನೋಡಿಕೊಂಡು ಮರೀ ಸ್ವಾಮಿ (ಬಾಯಿ) ಮುಚ್ಚಿಕೊಂಡು ಕೂತಿದ್ದಾನೆ.. ವಿಷಯ ಹೊರ ತೆಗೆದರೆ ತನ್ನ ಕೆಟ್ಟ ಕೃತ್ಯವೂ ಬಯಲಾಗುತ್ತದೆ ಎಂಬ ಆತಂಕ.... ಇಂಥಾ ಅನಿವಾರ್ಯ ಕಾರಣಗಳಿಂದ ಸ್ವಾಮಿ ನಿಷ್ಟೆಯನ್ನು ಮರೆತುಬಿಟ್ಟಿದ್ದಾನೆ... ಇಂಥಾ  ಭ್ರಷ್ಟ ಸ್ವಾಮಿ.. ಕೊಳ್ಳೆ ಹೊಡೆದ ಕಳ್ಳ ಸ್ವಾಮಿಯು ಸಮಾಜದೆದುರು ಮಾತ್ರ ಶ್ರೇಷ್ಟ... ಸರ್ವ ಶ್ರೇಷ್ಟ..!!!

ಅಂದು ಅಪ್ಪ ಅಮ್ಮನ ಹಣದ ದಾಹಕ್ಕೆ ಬಲಿಯಾದ ವ್ಯಕ್ತಿ.. ಇಂದು ತನಗರಿವಿಲ್ಲದಂತೇ ಕಳ್ಳನಾಗಿಹೋದ...!!!

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು