ಸಿನೆಮಾ

Share This Article To your Friends

ನಮ್ಮ ಬಂಕ್ ಗಳಲ್ಲೇ ಡೀಸೆಲ್ ಹಾಕಿಸಿ; ರಾಜಕೀಯ ಗೋಲ್‌ಮಾಲ್

ಅಬ್ಬಬ್ಬಾ.... ಇದೆಂಥಾ ಅಯೋಮಯ ಕಣ್ರೀ.. ಕೆಟ್ಟು ನಿಂತ ಬಸ್ ಗಳನ್ನು ರಿಪೇರಿ ಮಾಡೋದಕ್ಕೇ BMTC ಗೆ ಸಾಕ್ ಸಾಕಾಗಿದೆ.. ಅಂಥದ್ರಲ್ಲಿ ಈಗ ಡೀಸೆಲನ್ನು ಸಾರ್ವಜನಿಕ ಪೆಟ್ರೋಲ್ ಬಂಕ್ ಗಳಲ್ಲಿ ತುಂಬಿಸುವ ಹಣೆಬರಹ ಕೂಡ ಎದುರಾಗಿದೆ.  

ಪಬ್ಲಿಕ್ ಬಂಕ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ 51 ರೂಪಾಯಿ ಇದೆ.. ಆದ್ರೆ ಕೇಂದ್ರ ಸರ್ಕಾರ, BMTC ಡಿಪೋಗಳಿಗೆ 12 ರೂಪಾಯಿ ಹೆಚ್ಚಿಗೆ ಪಡೆದು ಡೀಸೆಲ್ ನೀಡುತ್ತೆ.. ಅಂದ್ರೆ ಪ್ರತಿ ಲೀಟರ್ ಗೆ 63 ರೂಪಾಯಿಗಳನ್ನು BMTC  ನೀಡಬೇಕು.. ಈ ಹೊರೆಯಿಂದ ತಪ್ಪಿಸಿಕೊಳ್ಳುವಸಲುವಾಗಿ BMTC ಒಂದು ಉಪಾಯವನ್ನೂ ಕಂಡು ಹಿಡ್ಕೊಂಡ್ತು. ಅದೇ ಪಬ್ಲಿಕ್ ಬಂಕ್ ಗಳಲ್ಲಿ ಬಸ್ ಗಳಿಗೆ ಡೀಸೆಲ್ ಹಾಕಿಸೋದು.. 

ಇಷ್ಟೇ ಆಗಿದ್ರೆ ಹೋಗ್ಲಿ ಬಿಡಪ್ಪ ನಮಗ್ಯಾಕೆ ಅಂತ ಸುಮ್ಮನಿರಬಹುದಿತ್ತು. ಆದ್ರೆ BMTC ಬಸ್‌ಗಳಿಗೆ ಡೀಸೆಲ್ ತುಂಬಿಸೋ ವಿಚಾರದಲ್ಲಿ, ಸಾಕಷ್ಟು ಅವ್ಯವಹಾರ ನಡೀತಿದೆಯೇ ಅನ್ನೋ ಸೂಕ್ಷ್ಮತೆಯ ವಾಸನೆ ಇದೀಗ ಬರ್ತಿದೆ, ಅದರಲ್ಲೂ ರಾಜಕೀಯ ನಾಯಕರುಗಳು ಇದ್ರಿಂದ ತಮ್ಮ ಹಣದ ಚೀಲ ತುಂಬಿಸಿಕೊಳ್ತಿದ್ದಾರೆ ಅನ್ನೋ ಅಚ್ಚರಿಯ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಆದ್ರೆ ಇಲ್ಲಿ ಮತ್ತೆ ಹಲವಾರು ಗೋಲ್ ಮಾಲ್ ಗಳು ನಡೀತಿವೆ ಅನ್ನೋದು ಈಗೀಗ ತಿಳಿದು ಬರ್ತಿವೆ.. ಎಲ್ಲೆಲ್ಲಿ ಬಸ್ ಡಿಪೋಗಳು ಇವೆಯೋ ಆ ಎಲ್ಲಾ ಬಸ್ ಡಿಪೋಗಳಿಗೂ ಅಲ್ಲಿನ ನಾಯಕರುಗಳು ಒಂದು ಅನಧಿಕೃತ ಸೂಚನೆಯನ್ನು ನೀಡಿದ್ದಾರೆ.. ತಮ್ಮ ಮಾಲೀಕತ್ವದ ಪೆಟ್ರೋಲ್ ಬಂಕ್ ಗಳಲ್ಲೇ BMTC ಬಸ್ ಗಳಿಗೆ ಡೀಸೆಲ್ ಹಾಕಿಸಿ ಅಂತ ಸೂಚಿಸಿದ್ದಾರೆ.. ಬಹುಷಃ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ.. ಆದ್ರೆ ಅ(ನ)ಧಿಕೃತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಎಲ್ಲಾ BMTC ಬಸ್ ಗಳು ಸಮೀಪದ ರಾಜಕಾರಣಿಗಳ ಅಥವ ಪ್ರಭಾವೀ ವ್ಯಕ್ತಿಗಳ ಬಂಕ್ ಗಳಲ್ಲೇ ಪೆಟ್ರೋಲ್ ಹಾಕಿಸುತ್ತಿವೆ..

ಕಾಮಾಕ್ಯ ಹಾಗೂ ಬನಶಂಕರಿ ಸುತ್ತಮುತ್ತಲಿನ ಬಸ್ ಗಳು ದೇವೇಗೌಡ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನವನ್ನು ತುಂಬಿಸಿಕೊಳ್ಳೋದಕ್ಕೆ ಸಾಲುಗಟ್ಟಿ ನಿಲ್ಲುತ್ತಿವೆ.. ಇನ್ನು ಯಲಹಂಕದ ಪುಟ್ಟೇನಹಳ್ಳಿಯಲ್ಲಿ ಇರುವ ಡಿಪೋದ ಹಣೆ ಬರಹವೂ ಇದೇ ಆಗಿದೆ..  ಅಲ್ಲಿನ ಶಾಸಕರಾದ ಎಸ್ ಆರ್ ವಿಶ್ವನಾಥ್ ಮಾಲೀಕತ್ವದ ರಾಜಾನುಕುಂಟೆಯ ಪೆಟ್ರೋಲ್ ಬಂಕ್ ನಲ್ಲಿ ಬಸ್ ಗಳು ರಸ್ತೆಯುದ್ದಕ್ಕೂ ನಿಲ್ಲುತ್ತಿವೆ.

ಜಯನಗರ, ವಿಲ್ಸನ್ ಗಾರ್ಡನ್, ಯಶವಂತಪುರ, ಪೀಣ್ಯ ಸೇರಿದಂತೆ ವಿವಿಧ ಸ್ಥಳಗಳಲ್ಲಿನ BMTC ಬಸ್ ಗಳು ಸ್ಥಳೀಯ ಪ್ರಭಲ ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿವೆ ಅಂತಾರೆ ಅಲ್ಲಿನ ಸ್ಥಳೀಯರು.. ಹೀಗಾಗಿ ಅವರ ಸೂಚನೆಯ ಬಂಕ್ ಗಳಲ್ಲೇ ಪೆಟ್ರೋಲ್ ಹಾಕಿಸುವ ಒತ್ತಡ ಡಿಪೋ ಮ್ಯಾನೇಜರ್ ಗಳ ಮೇಲೆ ಬಿದ್ದಿದೆ ಎನ್ನುವ ಶಂಕೆ ಕೂಡ ವ್ಯಕ್ತವಾಗುತ್ತವೆ.. ಒಂದೇ ಬಂಕ್ ಬಳಿಯಲ್ಲಿ ಸಾಕಷ್ಟು ಬಸ್ ಗಳು ಸಾಲುಗಟ್ಟಿ ನಿಲ್ಲುತ್ತಿರುವುದನ್ನು ಕಂಡರೆ ಈ ಸಂಶಯ ನಿಜವಿರಬಹುದು ಎಂದೆನಿಸುತ್ತಿದೆ
 

ಏನಾದ್ರೂ ಆಗಲಿ.. ಡೀಸೆಲ್ ನ ಎಲ್ಲಿಯಾದರೂ ಹಾಕಿಸಿಕೊಳ್ಳಲಿ.. ಯಾಕೆ ಅಂದ್ರೆ ಯಾವ ಬಂಕ್ ಆದರೇನು..?? ದುಡ್ಡು ಕೊಟ್ಟರೇನೇ ಡೀಸೆಲ್ ಹಾಕೋದು ಅಲ್ವಾ..? ಬಿಟ್ಟಿಯಾಗಿ ಯಾರೂ ಪೆಟ್ರೋಲ್ ಹಾಕೋದಿಲ್ಲ.. ಅದ್ರೆ ಈಗಾಗಲೇ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ಜನಗಳಿಗೆ, ’BMTC ಯ ಡೀಸೆಲ್ ಜಾಮ್’ ದೊಡ್ಡ ತಲೆಬಿಸಿಯಾಗಿ ಪರಿಣಮಿಸದಿರಲಿ.. ಡೀಸೆಲ್ ಹಾಕಿಸೋದ್ರಲ್ಲಿ ಅವ್ಯವಹಾರ ಆಗದಿದ್ದರೆ ಅಷ್ಟೆ ಸಾಕು.. ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು