ಸಿನೆಮಾ

Share This Article To your Friends

ಸಮಾಧಿಯೊಳಗಿನ ಸತ್ಯ- ಇದು10 ರೂಪಾಯಿ ನೋಟಿನ ನಿಗೂಢತೆ

ಕೆಲವು ತಿಂಗಳುಗಳ ಹಿಂದೆ ನಡೆದ “ಪಾಂಟಿ ಛಡ್ಡಾ” ಕೊಲೆ ಪ್ರಕರಣ ನಿಮಗೆ ಗೊತ್ತಿರಬಹುದು..  ಸಾವಿರಾರು ಕೋಟಿ ಒಡೆಯನಾಗಿದ್ದ ಉತ್ತರ ಪ್ರದೇಶದ ಮಧ್ಯದ ದೊರೆ “ಪಾಂಟಿ ಛಡ್ಡ” ಹಾಡು ಹಗಲೇ ಹೆಣವಾಗಿ ಹೋಗಿದ್ದ.. ಅದೂ ತನ್ನ ಸ್ವಂತ ತಮ್ಮನಿಂದಲೇ.. ಸಾವಿರಾರು ಕೋಟಿಯ ಒಡೆಯನೊಬ್ಬ, ಕೇವಲ ನೂರು ಕೋಟಿ ರೂಪಾಯಿಯ ಜಗಳದಲ್ಲಿ ಬೀದಿ ಹೆಣವಾಗಿ ಹೋಗಿದ್ದ ಅಂದ್ರೆ ಅದು ನಿಜಕ್ಕೂ ದೊಡ್ಡ ದುರಂತ.. ಕೋಟಿ ಕೋಟಿ ಇದ್ದರೂ ಅನುಭವಿಸಲಾಗದೇ ಮಣ್ಣು ಸೇರಿಬಿಟ್ಟರು “ಛಡ್ಡಾ ಬ್ರದರ್ಸ್”, ಹಣವೆಂಬ ಲೋಭ ಆ ಇಬ್ಬರಿಗೂ ಸ್ಮಶಾನದ ದಾರಿಯನ್ನು ತೋರಿಸಿತ್ತು..
ಈ ಕೊಲೆ ವಿಚಾರ ಈಗ್ಯಾಕೆ ಅಂತ ನೀವ್ ಅನ್ನಬಹುದು.. ಈ ಹಣ ಹೆತ್ತ ಸಂಬಂಧವನ್ನೇ ದೂರು ಮಾಡುತ್ತೆ.. ಕರುಳ ಬಳ್ಳಿಯನ್ನೇ ಕತ್ತರಿಸುತ್ತೆ.. ನೋವಿನ ಶೂಲಕ್ಕೆ ಏರಿಸುತ್ತೆ ಅನ್ನೋದನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ..
ಈಗ ಹೇಳೋಕೆ ಹೊರಟಿರೋ ಕಥೆ ನಿಜಕ್ಕೂ ಅಚ್ಚರಿಯ ಕಥೆ.. ಆತಂಕವನ್ನು ಹುಟ್ಟಿಸುವ ಕಥೆ.. ಅದೇ ಹತ್ತು ರೂಪಾಯಿಯ ಸುತ್ತಲು ಹೆಣೆದಿರುವ ಕಥೆ..
ಹತ್ತು ರೂಪಾಯಿಯ ನೋಟೊಂದು ಕ್ರೂರತೆಯನ್ನು ಮೆರೆದಿತ್ತು.. ಹೆಣ್ಣಿನ ಕಣ್ಣಲ್ಲಿ ನೀರಿನ ಬದಲಿಗೆ ರಕ್ತವನ್ನೇ ಹರಿಸಿತ್ತು ಅಂದ್ರೆ ನೀವು ನಂಬೋಕೆ ಸಾಧ್ಯಾನೇ ಇಲ್ಲ..
ಆ ಹತ್ತು ರೂಪಾಯಿಯಿಂದ ಆಕೆಯ ಜೀವನ ಆಗಿತ್ತು ತತ್ತರ..
ಅದು ಹೇಗೆ ಅಂತ ತಿಳ್ಕೋಬೇಕು ಅನ್ನೋದು ನಿಮ್ಮ ಕಾತರ..ಅಲ್ವಾ..?
ಹಾಗಾದ್ರೆ ಕೇಳಿ..
ಅದು 1970 ರ ಸಮಯ..  ಒಂದು ಗಾಢಾಂಧಕಾರದ ಹಳ್ಳಿ..  ಅದು ಒಂದು ರೀತಿಯಲ್ಲಿ ದೇವದಾಸಿಯೂರು ಎನ್ನಬಹುದು. ಬಂದವರು ಬರುತ್ತಾರೆ.. ಕೆಲಸ ಮುಗಿಸಿಕೊಂಡು ಹೋಗುತ್ತಾರೆ.. ಬಂದವರು ಬಿಟ್ಟು ಹೋಗೋದು ಒಂದೇ ಒಂದು.. ಅವರು ತಂದಿದ್ದ ಹಣ..  ಅಂಥ ಊರಲ್ಲಿ ಹುಟ್ಟಿದವಳು ಲಕ್ಷ್ಮಿ.  ಚಿಕ್ಕವಳಾಗಿದ್ದಾಗ ಯಾವ ಚಿಂತೆಯೂ ಇಲ್ಲದೇ ಬೆಳೆದಳು.. ಆದರೆ ಆಕೆ ಮಾಡಿದ ತಪ್ಪು ಎಂದರೆ ಆಕೆ ಬೆಳೆದದ್ದು”..!!
ಹೌದು.. ಒಂದು ದಿನ ಪಕ್ಕದ ಊರಿನ ಪಟೇಲಪ್ಪ ಆ ಊರಿಗೆ ಬಂದ.. ಯಾರದ್ದೋ ಮನೆಗೆ ಹೋಗುವ ಆತುರದಲ್ಲಿದ್ದ ಪಟೇಲಪ್ಪ ಲಕ್ಷ್ಮಿಯ ಮನೆ ಮುಂದೆ ಹಾದು ಹೋಗಬೇಕಾಗಿತ್ತು.. ಅದೇ ಸಮಯಕ್ಕೆ ಲಕ್ಷ್ಮಿ ತನ್ನ ಮನೆಯ ಮುಂದೆ ನಿಂತು ಬಟ್ಟೆ ಒಗೀತಾ ಇದ್ಳು. ಹೋಗಬೇಕಾದ ಮನೆಯನ್ನು ಮರೆತ ಪಟೇಲಪ್ಪ, ನೇರವಾಗಿ ಲಕ್ಷ್ಮಿಯ ಮನೆಯೊಳಗೆ ಹೊಕ್ಕ.. ಲಕ್ಷ್ಮಿಯ ತಂದೆಗೆ ಹತ್ತು ರೂಪಾಯಿ ಕೊಟ್ಟು ನಿನ್ನ ಮಗಳೊಂದಿಗೆ ಈ ದಿನ ಕಳೆಯಬೇಕು ಎಂದು ಹೇಳಿದ. ಆದ್ರೆ ಲಕ್ಷ್ಮಿಯ ತಂದೆ ತನ್ನ ಮಗಳಿಗೆ ಇದೆಲ್ಲದರ ಅರಿವಿಲ್ಲ ಎಂದು ಹೇಳಿದನು.. ಆದ್ರೆ ಪಟೇಲಪ್ಪ ಕೇಳಲಿಲ್ಲ “ಮನೆಗೆ ಬಂದವರ ತನುವನ್ನು ಸತ್ಕರಿಸದೇ ಕಳಿಸುವುದು ನಿಮ್ಮ ಸಂಪ್ರದಾಯ ಅಲ್ಲ. ಸಂಪ್ರದಾಯ ಮರೆತರೆ ದೈವತ್ವಕ್ಕೆ ಮಾಡಿದ ದ್ರೋಹ ನೆನಪಿರಲಿ” ಎಂದು ಭಯ ಹುಟ್ಟಿಸಿದನು. ದೇವರಿಗೆ ವಿರುದ್ಧವಾಗಿ ನಡೆದರೆ ಸರ್ವನಾಶವಾಗುತ್ತೇವೆ ಎಂಬ ಭಯ ಲಕ್ಷ್ಮಿಯ ತಂದೆಯಲ್ಲಿ ಕಾಡಿತು. ಹೀಗಾಗಿ ಹತ್ತು ರೂಪಾಯಿಯನ್ನು ನೋಡುತ್ತ, ನಿಧಾನವಾಗಿ ತನ್ನ ಕೈಯನ್ನು ಹತ್ತು ರೂಪಾಯಿಯ ಕಡೆಗೆ ನೀಡುತ್ತ ತನ್ನ ಸಮ್ಮತಿಯನ್ನು ಸೂಚಿಸಿದನು..
ಪಟೇಲಪ್ಪ ನಿಧಾನವಾಗಿ ಲಕ್ಷ್ಮಿಯ ಕೋಣೆಯೊಳಗೆ ಬಂದ.. ಅವನನ್ನು ಕಂಡ ಲಕ್ಷ್ಮಿ ಅಮ್ಮ ಅಂತ ಕಿರುಚಿದಳು. ಅದ್ರೆ ಅವರ ಅಪ್ಪ-ಅಮ್ಮ ಕೇಳಿದ್ರೂ ಕೇಳದವರಂತೆ ಹತ್ತು ರೂಪಾಯಿಯನ್ನೇ ನೋಡುತ್ತ ಕುಳಿತಿದ್ರು. “ಹತ್ತು ರೂಪಾಯಿ ಕೊಟ್ಟು ನಿಮ್ಮ ಅಪ್ಪ ಅಮ್ಮನಿಗೆ ಒಪ್ಪಿಸಿದ್ದೀನಿ.. ಅವರೇ ನನ್ನನ್ನು ನಿನ್ ಹತ್ರ ಬಿಟ್ಟಿದ್ದು ಅಂತ ಹೇಳಿದ ಪಟೇಲಪ್ಪ. ಅದನ್ನು ಕೇಳಿಸಿಕೊಂಡ ಲಕ್ಷ್ಮಿಗೆ ಆಘಾತವಾಯ್ತು.. ಹಣಕ್ಕಾಗಿ ಹೆತ್ತವರೇ ಹೀಗೆ ಮಾಡಿಬಿಟ್ರಾ ಅಂತ ಆತಂಕವಾಯ್ತು. ಆದ್ರೆ ಆಕೆಯ ಕಣ್ಣೀರಿಗೆ ಸ್ಪಂದಿಸುವವರು ಯಾರೂ ಇರಲಿಲ್ಲ.. ಆಕೆಯ ಕಣ್ಣೀರು ಕೂಡ ಅವಳ ಜೊತೆ ಇರಲಾಗದೇ ಜಾರಿ ನೆಲ ಸೇರುತ್ತಿದ್ದವು. ಪಾಪಿ ಪಟೇಲಪ್ಪನಿಗೆ ಅದ್ಯಾವುದೂ ಅರಿವಿಗೆ ಬರಲಿಲ್ಲ.. ಮದದಿಂದ ಅವಳ ಕೈ ಹಿಡಿದು ಎಳೆದ.  ಗಾಜಿನ ಬಳೆಗಳು ಪಟ ಪಟನೆಂದು ನೆಲ ಸೇರಿದವು.. ಏನು ಮಾಡ್ಬೇಕು ಅಂತ ತಿಳಿಯದೇ ಅಲ್ಲೇ ಬಿದ್ದಿದ್ದ ತನ್ನ ಒಡೆದ ಬಳೆಯನ್ನು ಎತ್ತಿಕೊಂಡು ಪಟೇಲಪ್ಪನ ಕಣ್ಣಿಗೆ ಚುಚ್ಚಿಬಿಟ್ಟಳು. ಕಿಟಾರನೆ ಕಿರುಚಿಕೊಂಡ ಪಟೇಲಪ್ಪ.. ಕೋಪಗೊಂಡಿದ್ದ ಲಕ್ಷ್ಮಿ ಮತ್ತೊಂದು ಬಳೆಯನ್ನು ಕಿತ್ತು ಇನ್ನೊಂದು ಕಣ್ಣಿಗೂ ಚುಚ್ಚಿಬಿಟ್ಟಳು.. ಹೊಟ್ಟೆಗೂ ಚುಚ್ಚಿ ಚಾಕುವಿನಂತೆ ಕೂಯ್ದು ಬಿಟ್ಟಳು.. ಹೊರಗೆ ಕುಳಿತಿದ್ದ ಆಕೆಯ ಅಪ್ಪ ಅಮ್ಮನಿಗೆ ಆ ಚೀರಾಟ ಕೇಳಿಸುತ್ತಿದ್ದರೂ ಅವರು ಏನು ಅಂತ ನೋಡುವ ಗೋಜಿಗೇ ಹೋಗಲಿಲ್ಲ.. ಪ್ರಥಮ ಸಮಾಗಮದಲ್ಲಿ ಚೀರಾಟ, ನರಳಾಟ ಮಾಮೂಲಿ ಅಂತ ಜಾಣ ಮೌನ ವಹಿಸಿದರು. ಹತ್ತು ರೂಪಾಯಿಯನ್ನೇ ಎವೆ ಇಕ್ಕದೇ ನೋಡುತ್ತ ಕುಳಿರು ಬಿಟ್ಟರು. ಆದರೆ ಒಳಗಡೆ ಪಟೇಲಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಕಾಳಿಯಂತೆ ನಿಂತು  ಬಾಗಿಲು ತೆಗೆದು ಹೊರ ಬಂದಳು ಲಕ್ಷ್ಮಿ.. “ಹತ್ತು ರೂಪಾಯಿ”ಗೆ ಮಗಳನ್ನೇ ಮಾರಿಬಿಟ್ರಲ್ಲಾ ಅಂತ ನೋವು ತಡಿಯೋಕೆ ಆಗದೇ, ಅಲ್ಲೇ ಮೂಲೆಯಲ್ಲಿ ಇದ್ದ ಒನಕೆಯಿಂದ ತನ್ನ ತಂದೆ ತಾಯಿಗೂ ಹೊಡೆದುಬಿಟ್ಟಳು. ರೋಷದ ಏಟಿಗೆ ಎರಡು ತಲೆಗಳಿಂದ ರಕ್ತ ಚಿರ‍್ರನೆ ಹಾರತೊಡಗಿತ್ತು.. ಸತ್ತರೂ ಆ ಹತ್ತು ರೂಪಾಯಿ ಬಿಡಲಿಲ್ಲ ಆಕೆಯ ಅಪ್ಪ.. ಅದನ್ನು ನೋಡಿದ ಲಕ್ಷ್ಮಿ ಗೆ ಒಂದೆಡೆ, ಈ ಹತ್ತು ರೂಪಾಯಿಯಿಂದಲೇ ಇಷ್ಟೆಲ್ಲಾ ಅವಾಂತರ ಆಯ್ತಲ್ವಾ ಅಂತ ಆಕೆಗೆ ಭಯ ಶುರುವಾಯಿತು.. ಮತ್ತೊಂದೆಡೆ ಪಟೇಲನ ಹೆಣ ನೋಡಿದರೆ ಊರಿವರು ಬಿಟ್ಟಾರಾ..?? ಕತ್ತು ಕೂಯ್ದು ಹೂತು ಬಿಡ್ತಾರೆ ಅಂತ ಜೀವ ಭಯ ಕೂಡ ಕಾಡತೊಡಗಿತ್ತು. ಅಬಲೆಯ ಮನ ಅಕ್ಷರಶಃ ಅಲುಗಾಡ ತೊಡಗಿತು.. ದುಗುಡ, ಭಯ ಒಟ್ಟಿಗೆ ಆವರಿಸಿ ಮನೆ ಬಿಟ್ಟು ಓಡಿ ಹೋಗಲು ನಿರ್ಧರಿಸಿದಳು. ಅವಸರದಿಂದಾಗಿ ಆಕೆಯ ಕಾಲು ಕಲ್ಲೊಂದಕ್ಕೆ ಎಡವಿ ಬಿಟ್ಟಿತು. ಪರಿಣಾಮವಾಗಿ, ತಮ್ಮ ಮನೆಯ ಮುಂದೆ ನಿಂತಿದ್ದ ಎತ್ತಿನ ಮೇಲೆ ಬಿದ್ದುಬಿಟ್ಟಳು. ಕ್ಷಣಾರ್ಧದಲ್ಲಿ ಎತ್ತಿನ ಕೊಂಬು ಆಕೆಯ ಹೊಟ್ಟೆಯನ್ನು ಸೇರಿಬಿಟ್ಟಿತ್ತು.. ಸಿಟ್ಟಿಗೆದ್ದ ಎತ್ತು ಜೋರಾಗಿ ತಲೆಯಾಡಿಸಿದ್ದೇ ತಡ, ಸುಂದರ ಯುವತಿ ತನ್ನ ಮನೆಯ ಜಗುಲಿಯ ಮೇಲೆ ಹೋಗಿ ಬಿದ್ದು ಬಿಟ್ಟಳು.. ರಕ್ತ ಆಕೆಯ ಸೌಂದರ್ಯವನ್ನು ಮುಚ್ಚಿ ಬಿಟ್ಟಿತ್ತು.  ಇದ್ದಕ್ಕಿದ್ದಂತೆ ಆ ಹತ್ತು ರೂಪಾಯಿ ಗಾಳಿಗೆ ಹಾರಿ ಆಕೆಯ ಎದೆಯ ಮೇಲೆ ಬಂದು ಕೂತುಬಿಟ್ಟಿತ್ತು..

ಅದನ್ನು ಕಂಡ ಆಕೆಗೆ ಇದು ಹಣವೋ ಅಥವ ವಿಧಿಯ ರೂಪವೋ ಅನ್ನೋ ದ್ವಂದ್ವ ಕಾಡ ತೊಡಗಿತ್ತು. ಸುಂದರವಾಗಿದ್ದ ಲಕ್ಷ್ಮಿಯ ಜೀವನವನ್ನು ಆ ಹತ್ತು ರೂಪಾಯಿ ನಾಶ ಮಾಡಿಬಿಟ್ಟಿತ್ತು. ಅದನ್ನು ಆಲೋಚಿಸುತ್ತಿರವಾಗಲೇ ಅಲ್ಲಿ ನಾಲ್ಕು ಹೆಣಗಳು ಧರೆಗುರುಳಿದ್ದವು.. ಆ ಹತ್ತು ರೂಪಾಯಿ “ಅಮಾಯಕ ಬಾಲೆ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿತ್ತು”
 
ಗೋಲಿ ಆಡುವ ಹುಡುಗನೊಬ್ಬ ಗೋಲಿ ಆಡುತ್ತ ಅತ್ತ ಬಂದಾಗ ಈ ದೃಶ್ಯವನ ನು ಕಂಡು ಊರಿನವರಿಗೆ ತಿಳಿಸಿದ. ಕಾರಣಗಳು, ಸಾವಿನ ನಿಗೂಢತೆಗಳು ತಿಳಿಸಲು ಅಲ್ಲಿ ಯಾರೂ ಬದುಕಿರಲಿಲ್ಲ.. ಹೆಣಗಳೇ ಎದ್ದು ಸಾವಿನ ಸ್ಟೋರಿ ಹೇಳಬೇಕಾದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು . ಹೀಗಾಗಿ ಹಳ್ಳಿ ಜನ ಅದ್ಯಾವುದರ ಗೋಜಿಗೂ ಹೋಗಲಿಲ್ಲ.. ತಮ್ಮ ಸಂಪ್ರದಾಯದಂತೆ ಹೆಣಗಳನ್ನು ತೆಗೆದು ವಿಧಿ ವಿಧಾನದೊಂದಿಗೆ ಸಮಾಧಿ ಮಾಡಿದರು.. ಸಮಾಧಿ ಮಾಡಿ ಬರುವಾಗ ಆ ಪುಟ್ಟ ಗೋಲಿಯಾಡುವ ಹುಡುಗ ಹಿಂದೆ ತಿರುಗಿ ನೋಡಿದ. ಸಮಾಧಿಯ ಮೇಲೆ ಯಾವುದೋ ಒಂದು ಕಾಗದ ಅಲುಗಾಡತೊಡಗಿತ್ತು. ಹತ್ತಿರಕ್ಕೆ ಹೋಗಿ ನೋಡಿದ.. ಅದು ಬೇರೇನೂ ಅಲ್ಲ,,,,, ಅದೇ ಹತ್ತು ರೂಪಾಯಿಯ ನೋಟು.. ಸಮಾಧಿಯೊಳಗೆ ಮಲಗಿದ್ದ ಆ ಆತ್ಮಗಳು ಶಾಂತವಾಗಿತ್ತು.. ಆದರೆ ರಕ್ತದೋಕುಳಿಯನ್ನು ಆಡಿದ್ದ ಆ ಹತ್ತು ರೂಪಾಯಿ ಮೂರು ಹೆಣಗಳ ಸಮಾಧಿಯ ಮೇಲೆ ಕುಳಿತು ಗೆಲುವಿನ ನಗೆ ಬೀರುತ್ತಿತ್ತು….

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು