ಸಿನೆಮಾ

Share This Article To your Friends

ಚಿಂಪಾಂಜಿ ಮಾನವ.!


ಮಂಗನಿಂದ ಮಾನವ ಅಂತಾರೆ.. ಅದಿಕ್ಕೆ ಇರಬೇಕು.. ಮಾನವ ಈಗಲೂ ಆಗಾಗ ಮಂಗನಂತೆ ಆಡ್ತಾನೆ.. "ಮಂಗ ಜಾತಿಗೆ ಸೇರಿದ ಮಾನವನು ಹಲವಾರು ವರ್ಷಗಳಿಂದ ವಿಕಾಸವಾದ ಪರಿಣಾಮವಾಗಿ ಈ ರೂಪವನ್ನು ಪಡೆದಿದ್ದಾನೆ” ಅನ್ನೋದು ಹಲವು ವಿಜ್ಞಾನಿಗಳ ಅಭಿಪ್ರಾಯ. ಮಾನವನ ರೂಪಕ್ಕೆ ಅತ್ಯಂತ ಹೆಚ್ಚು ಹೋಲಿಕೆಯನ್ನು ಹೊಂದಿರೋದು ಚಿಂಪಾಂಜಿ. ಹಿಂದಿನ ಕಾಲದಲ್ಲಿ ಇದ್ದ ಆದಿ ಮಾನವನೂ ಕೂಡ ಚಿಂಪಾಂಜಿಯಂತೆ ಇದ್ದ ಎಂಬುದು ಗಮನಾರ್ಹ ವಿಷಯ. ಆದ್ರೆ ಇದೆಲ್ಲಾ ಈಗ್ಯಾಕೆ ಅಂತಿದ್ದೀರಾ..?? ಈ ಕೆಳಗಿನ ಚಿತ್ರವೊಂದನ್ನು ನೋಡಿ.. ಇವನು ಆಧುನಿಕ “ಚಿಂಪಾಂಜಿ ಮಾನವ” ಅರ್ಧ ಚಿಂಪಾಂಜಿ ರೂಪ.. ಇನ್ನರ್ಧ ಮಾನವ ರೂಪ”


ಈ ಅರೆಬರೆ ಮಾನವನ ಚಿತ್ರ ಎಂದೋ ತೆಗೆದ ಹಳೆಯ ಚಿತ್ರವಲ್ಲ.. ಆದಿ ಮಾನವ, ಅಥವ ಯಾವುದೋ ಕಾಡು ಮನುಷ್ಯನ ಚಿತ್ರವೂ ಅಲ್ಲ. ಇದು ಅಪ್ಪಟ ನಾಡು ಮನುಷ್ಯನ ಚಿತ್ರ..   ಇಂಥಾ ವಿಚಿತ್ರ ವ್ಯಕ್ತಿಯ ಹೆಸರು “ಜಾಂಗ್ ಹೊಂಗ್ಮಿಂಗ್”
         
ಜಾಂಗ್ ಹುಟ್ಟಿದ್ದು ಭಾರತದ ಗಡಿ ದೇಶವಾದ ಚೀನಾ ದೇಶದಲ್ಲಿ. “ಚೊಂಗ್‌ಕಿಂಗ್” ಪ್ರದೇಶದಲ್ಲಿ ಇರೋ ಈ ಚಿಂಪಾಂಜಿ ಮಾನವನ ದೇಹದ ಮೇಲೆ ಅರ್ಧದಷ್ಟು ಭಾಗ ಬರೀ ಕೂದಲುಗಳೇ ಹರಡಿಕೊಂಡಿವೆ.. ಆ ಕೂದಲು ಹರಡಿಕೊಂಡಿರುವ ಭಾಗ ಸಂಪೂರ್ಣವಾಗಿ ಕಂದು ಬಣ್ಣದಿಂದ ಕೂಡಿದೆ.. ಚಿಂಪಾಂಜಿಯ ದೇಹವನ್ನು ನೀವೇನಾದ್ರೂ ನೋಡಿದ್ರೆ ಈ ಮಾನವನ ದೇಹದ ಬಣ್ಣ ಮತ್ತು ಕೂದಲಿನ ಬಗ್ಗೆ ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ...

          ಜಾಂಗ್ ಹುಟ್ಟುವಾಗ ಹೀಗೆ ಇರಲಿಲ್ಲ.. ಆತ ಹುಟ್ಟಿದಾಗ ಅವನ ಮೈ ಮೇಲೆ ಚಿಕ್ಕದಾದ ಕಪ್ಪು ಮಚ್ಚೆ ಇತ್ತು.. "ಮನುಷ್ಯರು ಅಂದಮೇಲೆ ಕೆಲವೊಂದು ಮಚ್ಚೆಗಳು ಇದ್ದೇ ಇರುತ್ತೆ ಹೀಗಾಗಿ ಅದರಿಂದ ಏನೂ ಆಗದು" ಅಂತ ಎಲ್ಲರೂ ಭಾವಿಸಿದ್ದರು. ಅದೂ ಅಲ್ಲದೇ ಚಿಕ್ಕವನಾಗಿದ್ದರಿಂದ ಆ ಮಚ್ಚೆಯ ಬಗ್ಗೆ ಯಾರೂ ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಅವನು ಎಂಟು ವರ್ಷದವನಾದ ನಂತರದಲ್ಲಿ ಚಿಕ್ಕದಾಗಿದ್ದ ಆ ಮಚ್ಚೆ ಇದ್ದಕ್ಕಿದ್ದಂತೆ ಬೆಳೆಯಲಾರಂಭಿಸಿತು.. ಅಷ್ಟೇ ಅಲ್ಲ, ಆ ಮಚ್ಚೆ ಬೆಳೆದ ಜಾಗದ ತುಂಬೆಲ್ಲಾ ಕೂದಲುಗಳು ಬೆಳೆಯೋದಕ್ಕೆ ಶುರುವಾಯ್ತು. ಇದು ಜಾಂಗ್ ಮತ್ತು ಅವರ ಕುಟುಂಬದವರಿಗೆ ಇರುಸು ಮುರುಸು ಉಂಟು ಮಾಡಿತು. ಆದ್ರೆ “ಜಾಂಗ್” ಅತ್ಯಂತ ಬಡ ಕುಟುಂಬದವನಾಗಿದ್ದರಿಂದ ಚಿಕಿತ್ಸೆ ಕೊಡಿಸುವಷ್ಟು ಹಣ ಆತನಲ್ಲಾಗಲೀ ಆತನ ಕುಟುಂಬದವರಲ್ಲಾಗಲೀ ಇರಲಿಲ್ಲ. ಯಾರೊಬ್ಬರೂ ಸಹ ಆತನ ಸಹಾಯಕ್ಕೆ ಬರಲಿಲ್ಲ.. 

ಜಾಂಗ್ ದಾರಿಯಲ್ಲಿ ಹೋದಾಗಲೆಲ್ಲಾ ಆತನನ್ನು ನೋಡಿದ ಜನರು ಚಿಂಪಾಂಜಿ, ಕಾಡು ಮನುಷ್ಯ ಅಂತ ಏನೇನೋ ಹೇಳಿ ಆತನನ್ನು ಅವಮಾನಗೊಳಿಸ್ತಾ ಇದ್ರು.. ಹೀಗಾಗಿ ಹೊರಗಿನ ಜನರೊಂದಿಗೆ ಆತ ಬೆರೆಯಲೇ ಇಲ್ಲ. ಕಣ್ಣೀರು ಅವಮಾನಗಳಿಂದ ಪರಿತಪಿಸುತಿದ್ದ ಆತನಿಗೆ ಈಗ “ಹುವಾ ಮೇಯ್ ಪ್ಲಾಸ್ಟಿಕ್ ಸರ್ಜರಿ” ಆಸ್ಪತ್ರೆಯ ವೈದ್ಯರುಗಳು ಸಹಾಯ ಹಸ್ತವನ್ನು ಚಾಚಿದೆ. ಆತನ ಚಿಂಪಾಂಜಿ ರೂಪವನ್ನು ಹೋಗಲಾಡಿಸಲು ಮುಂದಾಗಿದೆ.. ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ವೈದ್ಯಾಧಿಕಾರಿಗಳು ಹೇಳಿದ್ದಾರೆ.  ಪ್ಲಾಸ್ಟಿಕ್ ಸರ್ಜರಿಯ ಮೂಲಕ ಆತನ ಕಪ್ಪು ಮಚ್ಚೆಗೆ ಅಂತ್ಯ ಕಾಣಿಸುವುದಾಗಿ ವೈದ್ಯರು ಭರವಸೆ ನೀಡಿದ್ದರೆ.. ಚಿಕಿತ್ಸೆಯ ಮೊದಲ ಹಂತ ಈಗಾಗಲೇ ಆರಂಭವಾಗಿದ್ದು ಚಿಂಪಾಂಜಿ ಮಾನವ ಇದೀಗ ಪೂರ್ಣ ಮಾನವನಾಗಿ ಬದಲಾಗುತ್ತಿದ್ದಾನೆ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು