ಸಿನೆಮಾ

Share This Article To your Friends

ಹೊಸ ವರ್ಷಕ್ಕೆ ಒಳ್ಳೇದ್ ಮಾಡಿ೧.       ಈ ಹೊಸ ವರ್ಷದಿಂದ ಯಾರ್ ಮೇಲೂ ಕೋಪ ಮಾಡ್ಕೊಳ್ಳಲ್ಲ, ಶಾಂತಿ, ಸಮಾಧಾನದಿಂದ ಎಲ್ಲರ ಜೊತೆಯಲ್ಲೂ ಮಾತಾಡ್ತೀನಿ ಅಂತ ಶಪಥ ಮಾಡಿ..

೨.       ಈ ಹೊಸ ವರ್ಷದಿಂದ ಮಧ್ಯಪಾನ ಮಾಡಲ್ಲ, ಧೂಮ ಪಾನ ಮಾಡಲ್ಲ ಅಂತ ಸಂಕಲ್ಪ ಮಾಡಿ.. ದೇಹಕ್ಕೆ ಮಾರಕವಾಗೋ ಚಟುವಟಿಕೆಗಳಿಂದ ದೂರ ಇರ್ತೀನಿ ಅಂತ ದೃಢ ನಿರ್ಧಾರ ಮಾಡಿ

೩.       ಈ ಹೊಸ ವರ್ಷದಿಂದ ಆಫೀಸಿಗೆ ಸರಿಯಾದ ಸಮಯಕ್ಕೆ ಹೋಗ್ತೀನಿ.. ಮತ್ತು ಆಫೀಸಿನಲ್ಲಿ ಕಾಲ ಹರಣ ಮಾಡದೇ ಶ್ರದ್ಧೆ ಹಾಗೂ ನಿಷ್ಟೆಯಿಂದ ಕೆಲಸ ಮಾಡ್ತೀನಿ ಅಂತ ಶಪಥ ಮಾಡಿ.. ಲಂಚ ತಗೊಳ್ಳೋದಿಲ್ಲ, ಭ್ರಷ್ಟನಾಗೋದಿಲ್ಲ ಅಂತ ಆತ್ಮ ಸಂಕಲ್ಪ ಮಾಡಿ

೪.         ಹೊಸ ವರ್ಷದಿಂದ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಸೋದಿಲ್ಲ.. ಸಿಗ್ನಲ್ ಜಂಪ್ ಮಾಡೋದಿಲ್ಲ, ಮತ್ತು ಟ್ರಾಫಿಕ್ ರೂಲ್ಸ್ ನ ಪಾಲನೆ ಮಾಡ್ತೀನಿ ಅಂತ ಪ್ರಮಾಣ ಮಾಡಿ.

೬.       ಈ ಹೊಸ ವರ್ಷದಿಂದ “ನಾಳೆ ಕೆಲಸವನ್ನು ಈವತ್ತು ಮಾಡ್ತೀನಿ.. ಈವತ್ತಿನ ಕೆಲಸವನ್ನು ಈಗ್ಲೇ ಮಾಡ್ತೀನಿ..  ಮತ್ತು ಯಾವುದೇ ಕಾರಣಕ್ಕೂ ಕೆಲಸದಲ್ಲಿ ಕಾಲಹರಣ ಮಾಡಲ್ಲ ಹಾಗೂ ಸುಳ್ಳು ಹೇಳೀ ಕೆಲಸದಿಂದ ಜಾರಿಕೊಳ್ಳೋದಿಲ್ಲ ಅಂತ ಪ್ರಮಾಣ ಮಾಡಿ..

೭.       ಈ ಹೊಸ ವರ್ಷದಿಂದ ಹಣವನ್ನು ಅನಾವಶ್ಯವಾಗಿ ಖರ್ಚು ಮಾಡೋದಿಲ್ಲ.. ಸಾಧ್ಯವಾದಷ್ಟು ಹಣ ಉಳಿಸ್ತೀನಿ ಅಂತ ಪ್ರಮಾಣ ಮಾಡಿ

೮.       ಈ ಹೊಸ ವರ್ಷದಿಂದ ಬೆಳಿಗ್ಗೆ ಬೇಗ ಏಳ್ತೀನಿ ಅಂತ ಸಂಕಲ್ಪ ಮಾಡಿ.. ಬೆಳಿಗ್ಗೆ ಬೇಗ ಎದ್ದು ಆಫೀಸಿಗೆ ಸರಿಯಾದ ಸಮಯಕ್ಕೆ ಹೋಗ್ತೀನಿ ಅಂತ ಪ್ರಮಾಣ ಮಾಡಿ

೯.       ಈ ಹೊಸ ವರ್ಷದಿಂದ ನಾನು ಚೆನ್ನಾಗಿ ಓದ್ತೀನಿ. ಜಾಸ್ತಿ ಮಾರ್ಕ್ಸ್ ತಗೋತೀನಿ ಅಂತ ಪ್ರಮಾಣ ಮಾಡಿ.

೧೦.     ಈ ಹೊಸ ವರ್ಷದಿಂದ ನಾನು ಆ ಕೆಲಸ ಮಾಡ್ತೀನಿ.. ಈ ಕೆಲಸ ಮಾಡ್ತೀನಿ ಅಂತ ಮಾತಲ್ಲಿ ಹೇಳಬೇಡಿ.. ನೀವು ಏನ್ ಮಾಡ್ಬೇಕು ಅಂತಿದ್ದೀರೋ ಅದನ್ನು ಸಾಧಿಸಿ ನಂತರ ಈ ಹೊಸ ವರ್ಷದಲ್ಲಿ ನೀವು ಏನ್ ಮಾಡಿದ್ರಿ ಅನ್ನೋದನ್ನು ತಿಳಿಸಿ.

 Creative Resolutions- ಹೊಸ ವರ್ಷಕ್ಕೆ ವಿನೋದಮಯ ಪ್ರಮಾಣವಚನಗಳು


೧.       ಕೆಲಸ ಯಾವಾಗ್ಲೂ ಇದ್ದೇ ಇರುತ್ತೆ.. ಆದ್ರೆ ಹೊಸ ವರ್ಷ ವರ್ಷಕ್ಕೆ ಒಂದೇ ಸಲ ಬರುತ್ತೆ.. ಇಂಥಾ ಅಮೂಲ್ಯವಾದ ಈ ಹೊಸ ವರ್ಷದ ಆರಂಭದ ದಿನವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಳೀಬೇಕು ಅಂತ ಸಂಕಲ್ಪ ಮಾಡಿ.. ಆ ಅಮೂಲ್ಯ ದಿನವನ್ನು ಅವಿಸ್ಮರಣೀಯ ದಿನವನ್ನಾಗಿಸಿ..

೨.       ಹಿಂದಿನ ವರ್ಷ ಏನ್ ನಡೀತು ಅಂತ ಚಿಂತೆ ಮಾಡ್ಬೇಡಿ. ಆದ್ರೆ ಈ ಹೊಸ ವರ್ಷದಲ್ಲಿ, ಹಿಂದಿನ ವರ್ಷಕ್ಕಿಂತ ಯಶಸ್ವಿಯಾಗಿ ಕೆಲಸ ಮಾಡ್ತೀನಿ ಅನ್ನೋ ನಿರ್ಧಾರ ಮಾಡಿ.. ಹೊಸ ವರ್ಷ ಮುಗಿಯೋಷ್ಟ್ರಲ್ಲಿ ಅಂದುಕೊಂಡ ಗುರಿಯನ್ನು ಮುಟ್ಟೇ ಮುಟ್ತೀನಿ ಅಂತ ನಿರ್ಧಾರ ಮಾಡಿ.. ಯಾಕಂದ್ರೆ ಮನಸ್ಸಿದ್ಧರೆ ಮಾರ್ಗ ಅನ್ನೋದು ನಿಮಗೆ ತಿಳಿದಿರಲಿ..

೩.       ಹೊಸ ವರ್ಷದಲ್ಲಿ ಏನಾದ್ರೂ ಒಳ್ಳೇ ಹವ್ಯಾಸವನ್ನು ರೂಢಿ ಮಾಡ್ಕೊಳ್ಳಿ.. ಪರಿಸರದ ಬಗ್ಗೆ ಕಾಳಜಿವಹಿಸಿ.. ಹೊಸ ವರ್ಷದ ಮೊದಲ ದಿನವೇ ಸಸಿಯನ್ನು ನೆಡಿ.. ಮತ್ತು ವರ್ಷ ಪೂರ್ತಿ ಅದನ್ನು ಪ್ರೀತಿಯಿಂದ ನೀರು ಹಾಕಿ ಬೆಳೆಸಿ.. ಆ ಗಿಡ ನಿಮ್ಮ ಮನೆ ಹಾಗೂ ಮನಸ್ಸಿಗೆ ತಂಪು ನೀಡುತ್ತೆ. ಪರಿಸರಕ್ಕೂ ಒಳ್ಳೇದಾಗುತ್ತೆ.

೩.       ದೇಹವೇ ಆಸ್ತಿ ಅಂತ ದೊಡ್ಡೋರ್ ಹೇಳಿದ್ದಾರೆ.  ಉತ್ತಮ ದೈಹಿಕ ಆರೋಗ್ಯಕ್ಕಾಗಿ ಪ್ರತಿ ದಿನವೂ ವ್ಯಾಯಾಮ ಮಾಡ್ಬೇಕು.. ನೀವು ವ್ಯಾಯಮ ಮಾಡೋದಿಲ್ಲ ಅಂದ್ರೆ ಈ ಹೊಸ ವರ್ಷದ ಮೊದಲ ದಿನದಿಂದಲೇ ವ್ಯಾಯಾಮ ಶುರು ಮಾಡಿ..  ವ್ಯಾಯಾಮದಿಂದ ನಿಮ್ಮ ಸೂಪ್ತ ಮನಸ್ಸು ಸಚೇತನಗೊಳ್ಳುತ್ತೆ.. ಮುಖದಲ್ಲಿ ಕಾಂತಿ ಹಾಗೂ ದೇಹಕ್ಕೆ ಚೈತನ್ಯ ನೀಡುತ್ತೆ..

೪.       ಹೊಸ ವರ್ಷ ನೆನಪಲ್ಲಿ ಉಳಿಬೇಕು.. ಜೀವ್ನಕ್ಕೂ ಪ್ಲಸ್ ಪಾಂಯಿಂಟ್ ಆಗ್ಬೇಕು ಅಂದ್ರೆ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಬಿಡ್ತೀನಿ.. ಬಾರಿಗ್ ಹೋದೋನ್ ಬರ್ ಬಾದ್ ಆಗ್ತಾನೆ.. ಸಿಗ್ರೇಟ್ ಸೇದಿದೋನ್ ಸ್ಮಶಾನ ಸೇರ್ತಾನೆ.. ಅವೆಲ್ಲವನ್ನೂ ಬಿಟ್ಟು, ಹೊಸ ವರ್ಷದಿಂದ ಹೊಸದಾಗಿ ಬಾಳ್ತೀನಿ ಅಂತ ಮಾನಸಿಕವಾಗಿ ಸಂಕಲ್ಪ ಮಾಡಿ.

೫.       ನ್ಯೂಟನ್ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಗೂ ಪ್ರತಿ ಕ್ರಿಯೆ ಇದ್ದೇ ಇರುತ್ತಂತೆ.. ಹೀಗಿರುವಾಗ ನಾವು ಇನ್ನೊಬ್ರನ್ನು ಪ್ರೀತಿಸಿದ್ರೆ ಅವರೂ ನಮ್ಮನ್ನು ಪ್ರೀತಿಸ್ತಾರೆ.  ನೀವು ಕೆಲಸ ಮಾಡೋ ಸ್ಥಳಗಳಲ್ಲಿ ಅನಾವಷ್ಯಕವಾಗಿ ಜಗಳ ಆಡಿ ಬಾಂಧವ್ಯಕ್ಕೆ ಧಕ್ಕೆ ಮಾಡ್ಕೋಬೇಡಿ.. ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸಿ.. ಮತ್ತು ಎಲ್ಲರಿಗೂ ಅಚ್ಚು ಮೆಚ್ಚಿನ ಗೆಳೆಯ / ಗೆಳತಿಯರಾಗಿ ಇರ್ತೀನಿ ಅಂತ ಸಂಕಲ್ಪ ಮಾಡಿ.

೬.       ಕೋಪ ಮಾಡ್ಕೊಂಡ್ರೆ ಬ್ಲಡ್ ಪ್ರೆಶರ್ ಜಾಸ್ತಿ ಆಗುತ್ತೆ.. ಬ್ಲಡ್ ಪ್ರಶರ್ ಜಾಸ್ತಿ ಅದ್ರೆ ಹಾರ್ಟ ಅಟ್ಯಾಕ್ ಆಗುತ್ತೆ.. ಹಾರ್ಟ ಅಟ್ಯಾಕ್ ಆದ್ರೆ ಜೀವಾನೇ ಹೊಗುತ್ತೆ.. ಈಗ್ ಹೇಳಿ.. ಈ ಕೋಪ ಯಾಕ್ ಬೇಕು ಹೇಳಿ..?? ಈ ಹೊಸ ವರ್ಷದಿಂದಲೇ ಯಾರ್ ಮೇಲೂ ಕೋಪ ಮಾಡ್ಕೊಳ್ಳಲ್ಲ ಅಂತ ಶಪಥ ಮಾಡಿ.. ಎಲ್ಲರೊಂದಿಗೂ ಖಷಿ ಹಾಗೂ ನಗು ಮುಖದಿಂದಿರಿ. ಇದ್ರಿಂದ ನಿಮಗೆ ಉಲ್ಲಾಸ ಹೆಚ್ಚಗುತ್ತೆ. ಉಲ್ಲಾಸ ತುಂಬಿದ ಮನುಷ್ಯ ಸದಾ ಆರೋಗ್ಯವಾಗಿ ಇರ್ತಾನೆ

೭.       ಮನುಷ್ಯ ವ್ಯಕ್ತಿತ್ವದಲ್ಲಿ ತೂಕವಾಗಿರಬೇಕು.. ಆದ್ರೆ ಕೆ.ಜಿ.ನಲ್ಲಿ ಜಾಸ್ತಿ ತೂಕ ಇದ್ರೆ ಅದು ಆರೋಗ್ಯಕ್ಕೆ ಮಾರಕವಾಗುತ್ತೆ.. ದಪ್ಪ ದೇಹದಿಂದ ಆಯಾಸ ಜಾಸ್ತಿ ಆಗುತ್ತೆ.. ಆಯಸ್ಸು ಕಡಿಮೆ ಆಗುತ್ತೆ.. ನೀವು ತುಂಬಾ ದಪ್ಪ ಇದ್ದೀರಿ ಅನ್ನೋದಾದ್ರೆ ನಿಮ್ಮ ದೇಹದ ತೂಕವನ್ನು ಈ ಹೊಸವರ್ಷದಲ್ಲಿ ಇಳಿಸೇ ಇಳಿಸ್ತೀನಿ ಅಂತ ಸಂಕಲ್ಪ ಮಾಡಿ..
 
೮.       ಬೀರು ದುಡ್ ಕೊಟ್ರೆ ಸಿಗುತ್ತೆ.. ನೀರು ಈಗ ಫ್ರೀಯಾಗ್ ಸಿಗುತ್ತೆ.. ನೀರನ್ನು ಹೀಗೇ ಅನಗತ್ಯವಾಗಿ ವೇಸ್ಟ್ ಮಾಡ್ತಿದ್ರೆ ಬೀರಿಗಿಂತಲೂ ಜಾಸ್ತಿ ದುಡ್ಡು ಕೊಟ್ಟು ನೀರನ್ನು ಖರೀದಿ ಮಾಡ್ಬೇಕಾಗುತ್ತೆ.. ಅಮೂಲ್ಯವಾದ ನೀರನ್ನು ಉಳಿಸಿ.. ಎಲ್ಲಾದ್ರೂ ನೀರು ಪೋಲಾಗ್ತಿದ್ರೆ ಅದನ್ನು ನಿಲ್ಲಿಸ್ತೀನಿ ಅಂತ ಸಂಕಲ್ಪ ಮಾಡಿ. ಹೊಸ ವರ್ಷದಲ್ಲಿ ನೀರಿನ ಸದ್ಬಳಕೆಗೆ ಶ್ರಮಿಸಿ..

೯.       ಈ ಹೊಸ ವರ್ಷದಿಂದ ಸಾಧ್ಯವಾದಷ್ಟು ಕರೆಂಟ್ ಉಳಿಸ್ತೀನಿ ಅಂತ ಆತ್ಮ ಸಂಕಲ್ಪ ಮಾಡಿ. ನಮ್ಮ ಮುಂದಿನ ಪೀಳಿಗೆಯ ಬದುಕು ಬೆಳಕಾಗಬೇಕೆ ಹೊರತು ಕತ್ತಲಾಗಬಾರದು. ನಾವು ಬೇಕಾ ಬಿಟ್ಟಿ ಕರೆಂಟ್ ಬಳಸಿದ್ರೆ ನಮ್ಮ ಮುಂದಿನ ಪೀಳಿಗೆ ಕರೆಂಟ್ ಅನ್ನು ಫೋಟೋದಲ್ಲಿ ನೋಡುವಂತಾಗುತ್ತೆ.  


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು