ಸಿನೆಮಾ

Share This Article To your Friends

ದೀಪಾವಳಿಯ ಹಿನ್ನೆಲೆ, ಮಹತ್ವ

ದೀಪಾವಳಿಯ ಹಿನ್ನೆಲೆ, ಮಹತ್ವವನ್ನು ಹೇಳೋದಕ್ಕಿಂತ ಮೊದಲು ನಿಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಗೆ ನಿಮಗೆ ಹೃತ್ಪೂರ್ವಕ ಶುಭಾಷಯಗಳು.ನಿಮ್ಮ ಬಾಳಲ್ಲಿ ಬೆಳಕು ಇನ್ನಷ್ಟು ಪ್ರಖರವಾಗಿರಲಿ.. ಖುಷಿ ಮೂಡಲಿ ಅಂತ ಹಾರೈಸುತ್ತೇನೆ 

1.ರಾಮಾಯಣದ ಸಮಯದಲ್ಲಿ ಶ್ರೀ ರಾಮಚಂದ್ರನು ರಾವಣನೊಂದಿಗೆ ಯುದ್ಧ ಮಾಡಿ ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳುತ್ತಾನೆ.. ಆಗ ಕತ್ತಲೆಯಲ್ಲಿ ಮುಳುಗಿದ್ದ ಅಯೋಧ್ಯೆಗೆ ಬೆಳಕು ಬಂದಂತಾಗುತ್ತದೆ. ಈ   ಸಮಯವನ್ನು ಬೆಳಕಿನ ಹಬ್ಬ ದೀಪಾವಳಿಯನ್ನಾಗಿ ಕೆಲವರು ಆಚರಿಸುತ್ತಾರೆ..2.
   
ಅಮಾವಾಸ್ಯೆಯ ಹಿಂದಿನ ದಿನ ಅಂದ್ರೆ ಚತುರ್ದಶಿ ದಿನದಂದು  ಶ್ರೀ ಕೃಷ್ಣ ಪರಮಾತ್ಮನು ರಕ್ಕಸನಾದ ನರಕಾಸುರನನ್ನು ಸಂಹರಿಸುತ್ತಾನೆ.. ಈ  ದಿನವನ್ನೇ ದೀಪಾವಳಿಯನ್ನಾಗಿ ಆಚರಿಸಲಾಗುತ್ತಿದೆ ಎಂದೂ ಕೂಡ ಹೇಳಲಾಗುತ್ತದೆ


3.   ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಹಬ್ಬವನ್ನು ಬಹು ಮುಖ್ಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. 1620 ರಲ್ಲಿ ಸಿಕ್ಖರ ಆರನೆಯ ಗುರು ಆದಂಥ ಹರಗೋಬಿ೦ದ್ ಸಿ೦ಗ್ ರವರು ಗ್ವಾಲಿಯರ್ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸುತ್ತಾರೆ. ಕತ್ತಲೆ ಕೋಣೆಯಿಂದ ಮುಕ್ತರಾದ ಸಿಕ್ ರಾಜರುಗಳು ಆ ದಿನವನ್ನು ಬೆಳಕಿನ ಹಬ್ಬವನ್ನಾಗಿ ಆಚರಿಸಲು ಶುರು ಮಾಡಿದ್ರು. ಅದೇ ಈಗ ದೀಪಾವಳಿಯಾಗಿದೆ ಎಂಬುದು ಒಂದು ಗಮನಾರ್ಹ ವಿಷಯ
4.    ಕ್ರಿ.ಪೂ 527 ಅಕ್ಟೋಬರ್ 15 ರ ದೀಪಾವಳಿಯ ಕಾರ್ತಿಕ ಚತಿರ್ದಶಿಯಂದು ಜೈನ ಧರ್ಮದ ಕಡೆಯ ತೀರ್ಥಂಕರ ಮಹಾವೀರರು ಪಾವಾಪುರಿಯಲ್ಲಿ ಮೋಕ್ಷ ಹೊಂದುತ್ತಾರೆ.. ಹೀಗಾಗಿ ಜೈನಧರ್ಮದಲ್ಲಿಯೂ ಈ ದಿನ ಮುಖ್ಯವಾಗಿ ಪರಿಗಣಿತವಾಗಿದೆ. ಹೀಗಾಗಿ ಜೈನ ಧರ್ಮದಲ್ಲಿ ಈ ದಿನವು ಮೋಕ್ಷದ ದಿನ ಎಂದು ಆಚರಿಸಲ್ಪಡುತ್ತದೆ


5.    ಕ್ರಿ.ಪೂ ಮೂರನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತಗ್ರಂಥದಲ್ಲಿರುವಂತೆ ಮಹಾವೀರರು ನಿರ್ವಾಣ ಹೊಂದಿದ ಸಮಯದಲ್ಲಿ ದೇವತೆಗಳಲ್ಲಿ ಗಾಡಾಂಧಕಾರವು ಆವರಿಸಿತಂತೆ..  ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ 16 ಗಣ-ಚರ್ಕವರ್ತಿ, 9 ಮಲ್ಲ ಮತ್ತು 9 ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಹೀಗಾಗಿ ಜೈನರಿಗೆ ಇದು ವರ್ಷದ ಪ್ರಾರಂಭ ಎಂದು ಭಾವಿಸಲಾಯ್ತು..


6.       ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರುಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.


7.      ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ, ಹೀಗಾಗಿ ದೀಪಾವಳಿ ಹಬ್ಬವು ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ  ಅಮಾವಾಸ್ಯೆ     ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿಯೇ ದೀಪಾವಳಿಯನ್ನು  ಆಚರಿಸಲಾಗುತ್ತದೆ. ಎಷ್ಟೇ  ವರ್ಷಗಳಾದ್ರೂ ಈ ದಿನಗಳಲ್ಲೇ ದೀಪಾವಳಿ ಬರುತ್ತದೆ ಎಂಬುದು ಗಮನಾರ್ಹ


8.     ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು


9.        ದೀಪಾವಳಿ ಹಬ್ಬವನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನದಂದು ಕತ್ತಲೆ ಇರುವುದರಿಂದ ಕತ್ತಲೆಯ ಬಾಳಿಗೆ ಬೆಳಕು ಬರಲಿ ಎಂಬ ಉದ್ದೇಶದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ


10.  ದೀಪಾವಳಿಯ ಮಾರನೆಯ ದಿನ ಬಲಿ ಪಾಡ್ಯಮಿ ಎಂದು ಆಚರಿಸಲಾಗುತ್ತದೆ.. ಯಾಕೆ ಅಂದ್ರೆ ಬಲಿ ಚಕ್ರವರ್ತಿಯ ತ್ಯಾಗದ ಸಂಕೇತವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.


11.    ಅಕ್ಟೋಬರ್ ನ ಕೊನೆಯ ವಾರದಲ್ಲಿ ಅಂತರ್ಜಾಲದ ಶೋಧ ಯಂತ್ರವಾದ ಗೂಗಲ್ ನಲ್ಲಿ ಎರಡನೆ ಅತಿ ಹೆಚ್ಚು ಶೋಧಗಳು ದೀಪಾವಳಿಯ ಗ್ರೀಟಿ೦ಗ್ ಕಾರ್ಡ್ ಗಳಿಗಾಗಿ ನಡೆದವು ಎಂಬುದು ಬಹಳ ಗಮನಾರ್ಹ ಅಂಶವಾಗಿದೆ.!

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು