ಸಿನೆಮಾ

Share This Article To your Friends

ಎಸ್.ಎಂ.ಕೃಷ್ಣ ಧಿಡೀರ‍್ ರಾಜಿನಾಮೆ ಹಿಂದೆ ಶಡ್ಯಂತ್ರ

ಎಸ್.ಎಂ.ಕೃಷ್ಣ ಧಿಡೀರ‍್ ರಾಜಿನಾಮೆ ಹಿಂದೆ ಶಡ್ಯಂತ್ರ ರೂಪಿತವಾಗಿದೆ ಎನ್ನುವ ಮಾತುಗಳು ಕೇಳಿ ಬರ‍್ತಿವೆ.
ಹೌದು.. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಧಿಡೀರ‍ನೇ ರಾಜಿನಾಮೆ ನೀಡಿದ್ದಾರೆ.. ಆದ್ರೆ ಧಿಡೀರನೆ ರಾಜಿನಾಮೆ ನೀಡಿರುವುದರ ಹುನ್ನಾರ ಏನೆಂಬುದು ರಹಸ್ಯವಾಗಿ ಉಳಿದಿದೆ. ಆದ್ರೆ ಬಲ್ಲ ಮೂಲಗಳ ಪ್ರಕಾರ ಇದೇ ಅಕ್ಟೋಬರ‍್ 28 ರಂದು ಕೇಂದ್ರ ಸಂಪುಟ ಸಭೆಯ ಪುನರ‍್ ರಚನೆಯಾಗಲಿದೆ. ಬೇಡಿಕೆಯ ಅಭ್ಯರ್ಥಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಹುನ್ನಾರದಲ್ಲಿ ಕಾಂಗ್ರೇಸ್ ಸರ್ಕಾರ ಎಸ್ ಎಂ ಕೃಷ್ಣ ರವರಿಂದ ರಾಜಿನಾಮೆ ಪಡೆದಿದೆ ಎಂಬ ಮಾತುಗಳು ಕೇಳಿ ಬರ್ತಿವೆ.. ಅಷ್ಟೇ ಅಲ್ಲ, ಡಿ.ಎಂ.ಕೆ ಮತ್ತು ತೃಣಮೂಲ ಕಾಂಗ್ರೇಸ್ ಪಕ್ಷಗಳಿಂದ ತತ್ತರಗೊಂಡ ಕೇಂದ್ರ ಕಾಂಗ್ರೇಸ್ ಸರ್ಕಾರ ಬಹುಮತವನ್ನು ಉಳಿಸಿಕೊಳ್ಳಲು ಈ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗ್ತಿದೆ.
          ಹೀಗಾಗಿ ಕಾಂಗ್ರೇಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಮಾತಿನ ಮೇರೆಗೆ ಕೃಷ್ಣ ರಾಜಿನಾಮೆ ನೀಡಿದ್ದಾರೆ. ಎಂಬುದು ಸ್ಪಷ್ಟವಾಗಿದೆ.. ಈ ಹಿಂದೆ ಸೋನಿಯಾ ನಿದೇರ್ಶನದ ಮೇರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೃಷ್ಣ ನೇಮಕವಾಗಿದ್ರು. ಈಗಲೂ ಕೂಡ ಸೋನಿಯಾ ನಿದೇರ್ಶನದ ಮೇರೆಗೆ ರಾಜಿನಾಮೆ ನೀಡಿದ್ದಾರೆ.  ಆದ್ರೆ ಕೃಷ್ಣರವರಿಗೆ ಸೂಕ್ತ ಸ್ಥಾನಮನ್ನು ಕೊಡಿಸುವುದಾಗಿ ಸೋನಿಯಾ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರವರನ್ನು ಸಾರಥಿಯನ್ನಾಗಿಸುವ ಚಿಂತನೆ ಕೆಂದ್ರ ನಾಯಕರಲ್ಲಿದೆ. ಹೀಗಾಗಿ ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುವ ಸಂಭವ ಹೆಚ್ಚಾಗಿದೆ..

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು