ಸಿನೆಮಾ

Share This Article To your Friends

ಗಣೇಶನ ಅವತಾರ- ಹಾಸ್ಯ ನಾಟಕ


ಆರಂಭದಲ್ಲಿ ರಮೇಶ ಪೆಪ್ಸಿ ಬಾಟಲಿಯನ್ನು ಮುಂದೆ ಇಟ್ಕೊಂಡು ಕೂತಿರ‍್ತಾನೆ.,.

ವಿಶ್ವ-             ಯಾಕೋ ರಮೇಶಸದಾನಂದ ಗೌಡರ ರಥ ನಗ್ತಾ ನಗ್ತಾ ಇದ್ದೋನು, ಯಡ್ಯೂರಪ್ಪನ ಥರ ಕಣ್ಣೀರ‍್ ಹಾಕ್ತಾ ಇದ್ಯಲ್ಲೋ…!! ಏನಾಯ್ತೋ..!!

ರಮೇಶ        ವಿಶ್ವ ನಾನ್‌  ಚಿಕ್ಕೋನಾಗಿದ್ದಾಗ ನಮ್ಮಪ್ಪ ಒಂದ್ಮಾತ್ಹೇಳ್ತಿದ್ರು ಕಣೋ!!  ಮಗನೇ.. ಮಾನ ಮುಚ್ಚಬೇಕು ಅಂದ್ರೆ ಚಡ್ಡಿ ಎಷ್ಟು ಮುಖ್ಯಾನೋ,,  ಬದುಕುಬೇಕು ಅಂದ್ರೆ ದುಡ್ಡು ಅಷ್ಡೇ ಮುಖ್ಯ ಅಂತ ಹೇಳ್ತಿದ್ರು

ವಿಶ್ವ -            ಹೌದು!! ನಿಮ್ಮಪ್ಪ ನಿಂಗೆ ಚಡ್ಡಿ  ಹಾಕುವಾಗೆಲ್ಲಾ ಇದೇ ಮಾತ್ಹೇಳ್ತಿದ್ರು!! ನಂಗೂ ಗೊತ್ತು..!! ಆದ್ರೇ ಈಗ ನೀನು      ಚಡ್ಡಿನೇ ಹಾಕ್ತಿಲ್ವಲ್ಲ….. ಚಿಂತೆಯಾಕೆ ???

ರಮೇಶ್ -        ಹಾಂಹಾಕ್ತಿನೋ 

ವಿಶ್ವ -            ಚಡ್ಡಿ ಮೇಲೆ ಪ್ಯಾಂಟ್ ಹಾಕ್ತೀಯಲ್ಲ ..!! ಈಗ ಯಾಕೆ ಆ ಚಡ್ಡಿ ವಿಷ್ಯಾ…. ಅಂದೆ???

ರಮೇಶ -        ಅವರ ಮಾತು ಕೇಳ್ದೆ ಹುಡುಗಿ ಹಿಂದೆ ಬಿದ್ದೆ..!!  ಲವ್ವು ಗಿವ್ವು ಅಂತ ಹಾಳಾದೆ..!! ಓದಿಗೆ ಫುಲ್ಸ್ಟಾಫ್ಬಿತ್ತು ದುಡ್ಡಿಗೆ ಪಂಗನಾಮ ಬಿತ್ತು..

ಗೋವಿಂದ -     (ರಮೇಶ ಮತ್ತು ವಿಶ್ವನ ಮಧ್ಯ ಬರ‍್ತಾನೆ) (ಗೋವಿಂದಾಯ ನಮಃ ಹಾಡು) ಗೋವಿಂದಾ... ಗೋವಿಂದಾ...!! ರಮೇಶ ಗೋವಿಂದಾ!! ಈ ನಾಮಮು ಪೆಟ್ಟುಕೋ ಗೋವಿಂದಾ!! ಅಂತ ಕಷ್ಟಗಳೂ ಓಡಿ ಹೋಗುತ್ತೆ…..

ವಿಶ್ವ -            ಹೇ!! ಗೋವಿಂದಾ.. ಏನಿದು? ಅವನ ಲೈಫೇ ಯಕ್ಕುಟ್ಟೋಗಿದೆ.. ನೀನು ನಾಮ ಹಾಕೋಕೆ ಬರ‍್ತಾತಿದ್ಯಲ್ಲ ? ಬೇರೆ ಯಾರೂ ಸಿಕ್ಲಿಲ್ವ ನಿಂಗೆ ?

ಗೋವಿಂದ -     ಇವರ ಹಣೆ ಖಾಲಿ ಇತ್ತಲ್ವ .. ಅದಿಕ್ಕೆ ನಾಮ ಹಾಕಾಣೋ ಅಂತ ಅನಿಸಿತು ಅದಿಕ್ಕೆ ಕೇಳಿದೆ.

ರಮೇಶ -        ನನ್ಹಣೆ ಖಾಲಿ ಇದೆ ಅಂತ .. ಎಲ್ರೂ ನಾಮ ಹಾಕೋ ಆಗೋದ್ರು ಹೋಗೋ ಆಕಡೆ.

ಗೋವಿಂದ -     ಏನ್ಮಾಡೋದ್ಗೋವಿಂದ.. ನಿನ ಮುಖ ನೋಡಿದ್ರೆ ನಾಮ ಹಾಕ್ಬೇಕು ಅಂತ ಅನ್ಸುತ್ತೆ

ರಮೇಶ -        (ಕೋಪದಲ್ಲಿ) ಈಗ ಜಾಗ ಬಿಟ್ಹೋಗ್ತೀಯೋ ಅಥವಾ ಪ್ರಾಣ ಬಿಟ್ಹೋಗ್ತೀಯೋ ?...
(ವಿಶ್ವ ಸಮಾಧಿನ ಮಾಡ್ತಾನೆ ಜಗಳ ಬಿಡಿಸ್ತಾನೆ)

ರಮೇಶ -        ನೋಡೋ ನನ್ಮಗ ನಂಗೆ ನಾಮ ಹಾಕ್ತಾನಂತೆ..!! ನನ್ಹಣೆ ಏನು Governament ಸೈಟಾ? MLA MP ಗಳೆಲ್ರೂ ಬಂದು ಗುದ್ದುಲಿ ಪೂಜೆ ಮಾಡೋಕೆ?

ವಿಶ್ವ -            ಕೂಲ್‌… ಕೂಲ್ಕೂಲ್‌…. ಆಗೋ (ಎಂದು ಹೇಳುತ್ತಾ ಮುಂದೆ ಇದ್ದ ಕೂಲ್ಡ್ರಿಂಕ್ಸ್ಕುಡಿತಾನೆ)

ರಮೇಶ -        ನಂಗೆ ಕೂಲ್ಕೂಲ್ಅಂತ ಹೇಳಿ .. ನಾನ್ಕುಡಿಬೇಕಾಗಿರೋ ಕೂಲ್ಡ್ರಿಂಕ್ನೀನು ಕುಡಿದಲ್ವೋ?

ವಿಶ್ವ-             ಯಮೋಷನ್ ಜಾಸ್ತಿ ಆಗಿ.. ನಿಂಗೆ ಕುಡಿಸೋ ಬದಲು ನಾನೇ ಕುಡಿದುಬಿಟ್ಟೆ ಕಣೊ.. ಸಾರಿ ಸಾರಿ..

ರಮೇಶ-           ತಗೋ ಮಗನೇ ಪಾನಿ ಪೂರಿ (ವಿಶ್ವನ ಕೆನ್ನೆಗೆ ಒಂದು ಬಾರಿಸುತ್ತಾನೆ)

ಪ್ರಭು -           ಹೇ ಏನ್ಆಯ್ತೋ ಕೈಗೆ ಬ್ಯಾಂಡೇಜ್ಹಾಕೊಂಡಿದಿಯಾ…?

ರಮೇಶ -        ನನ್ಲೈಫಲ್ಲಿ ನಾನ್ಏನ್ಅಂದುಕೊಳ್ತಿನೋ ಎಲ್ಲಾ ಎಡ್ವಟ್ಟಾಗ್ತಿದೆ ಕಣೋ…. ನಾನ್ಕುಡಿಬೇಕು ಅಂದ್ಕೊಂಡ ಕೂಲ್ಡ್ರಿಂಕ್ಸ್ವಿಶ್ವ ಕುಡಿದ.. ನಾನು ಮದ್ವೆ ಆಗ್ಬೇಕು ಅಂದ್ಕೊಂಡ ಹುಡುಗಿ ಪಕ್ಕದ್ಮನೆಯವನ ಮದ್ವೆ ಆದಳು

ಪ್ರಭು-            ನಿನ್ನ ಕೂಲ್ಡ್ ಡ್ರಿಂಕ್ಸ್ ನ ಇವನು ಕುಡಿದಿದ್ದಕ್ಕೂ... ನಿನ್ನ ಹುಡುಗಿ ಬೇರೆಯವನನ್ನು ಮದ್ವೆ ಆಗಿದ್ದಕ್ಕೂ,,, ನಿನ್ನ ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದಕ್ಕೂ ಏನ್ ಸಂಬಂಧ..??

ರಮೇಶ-         ನನ್ನ ಹುಡುಗಿ ಕೈ ಕೊಟ್ಳು ಅಂತ ಮನೇ ಮೇಲಿಂದ ಬಿದ್ದು ಸಾಯಬೇಕು ಅಂತ ಹೋದೆ.

ಪ್ರಭು-            ಮೇಲಿಂದ ಬಿದ್ರೆ, ಬಾಡೀ ಫುಲ್ ಡ್ಯಾಮೇಜ್ ಆಗಿರಬೇಕು.. ಕೈ ಮಾತ್ರ ಡ್ಯಾಮೇಜ್ ಆಗಿದ್ಯಲ್ಲ..??
                   (ಫುಲ್ ಹೇಳೋದ್ ಕೇಳೋ ಅಡ್ಕಸ್ಬಿ..!! ಅಡ್ಡ ಬಾಯ್ ಹಾಕ್ಬೇಡ..!)

ರಮೇಶ-         ನಾನು ಬೀಳ್ತಾ ಇರೋದನ್ನು ನಮ್ಮ ಮನೆ ನಾಯಿ ನೋಡಿತು.. ಯಜಮಾನ ಬೀಳ್ತಾ ಇದ್ದಾನೆ ಕಾಪಾಡಬೇಕು ಅಂತ ಕೈ ಗೆ ಬಾಯಿ ಹಾಕಿ ಹಿಡ್ಕೊಂಡ್ತು.. ಬಿದ್ದು ಸಾಯೋ ಬದಲು ಕೈ ಗೆ ಮಾತ್ರ ಡ್ಯಾಮೇಜ್ ಆಯ್ತು..

ಪ್ರಭು-            ಮೊಸ್ಟ್ಲಿ ನಿಮ್ ಮನೇಲಿ ಇರೋದು ನೀಯತ್ತಿನ ನಾಯಿ ಅನಿಸುತ್ತೆ..!!! ಅಯ್ಯೋ..!! ಆಮೇಲೆ ಏನಾಯ್ತು.??

ರಮೇಶ-         ಸಾಯೋಣ ಅಂತ ಪೆಪ್ಸಿ ಬಾಟಲ್ ನಲ್ಲಿ ವಿಷ ಹಾಕಿ, ಕುಡೀಬೇಕು ಅಂತ ಕೂತಿದ್ದೆ.. ಅಷ್ಟರಲ್ಲಿ, ಈ ವಿಶ್ವ ಕುಡಿದ.. ವಿಶ್ವಾನೇ ಬಿಟ್ಟು ಹೋದ..

ಪ್ರಭು-            ಅಯ್ಯೋ ವಿಶ್ವ..!!! ಚೆನ್ನಾಗಿತ್ತಲ್ಲೋ ನಿನ್ನ ನಗೆ..!! ಹಾಕೊಂಡು ಬಿಟ್ಯಲ್ಲೋ ನಿಂಗೆ ನೀನೇ ಹೊಗೆ..!!
                  (ಎಂದು ಹೇಳುತ್ತ ವಿಶ್ವನನ್ನು ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಬೇಕೆಂದು ಹೊತ್ತುಕೊಂಡು ಹೋಗ್ತಾನೆ)
                   (ಈ ದೇಹದಿಂದ ದೂರವಾದೆ ಯಾಕೆ ಆತ್ಮನೆ..!! ಹಾಡು)

ರಂಗ-            ಲೋ ರಮೇಶ.. ನಡಿಯೋ.. ನಿನ್ನ ಜೊತೆ ನಾನೂ ಬರ‍್ತೀನಿ..!!

ರಮೇಶ-         ಇದೇನೋ ರಂಗ..?? ಮೈಮೇಲೆಲ್ಲಾ ಚಿನ್ನ..!! ಮುಖದ ಮೇಲೆಲ್ಲಾ ಗುನ್ನ..??

ರಂಗ-            ಏನ್ ಮಾಡೋದಪ್ಪ..!! ನೀವೆಲ್ಲಾ ಕ್ಲಾಸಲ್ಲಿ ನೈಂಟಿ ತಗೊಂಡು ಸಾಫ್ಟ್ ವೇರ‍್ ಇಂಜಿನಿಯರ‍್ ಆಗೋದ್ರಿ.. ಆದ್ರೆ ನಾನು ಕ್ಲಾಸಲ್ಲಿ ತಗೊಳ್ಲಿಲ್ಲ.. ಬಾರಲ್ಲಿ ನೈಂಟಿ ತಗೊಂಡೆ..!!
                   ನೀವೆಲ್ಲಾ ಕೆಲಸಕ್ಕೆ ಸೇರಿದ್ರಿ.. ನಾನು ರಾಜಕೀಯಕ್ಕೆ ಸೇರಿದೆ..

ರಮೇಶ್-         ಕ್ಲಾಸಿಗೇ ಫಸ್ಟ್ ಬಂದಿರೋ ನಮ್ಮ ಲೈಫು, ಸೀಮೇ ಸುಣ್ಣ..
                   ಕ್ಲಾಸಿಗೆ ಲಾಸ್ಟ್ ಬಂದಿರೋ ನಿಮ್ಮ ಲೈಫು, ಮೈಮೇಲೆಲ್ಲಾ ಚಿನ್ನಾ..!!

ರಂಗ-            ಹೂನಪ್ಪ..!! ರಾಜಕೀಯಕ್ಕೆ ಸೇರಿದೆ..! ಅದಿಕ್ಕೆ ಮೈಮೇಲೆಲ್ಲಾ ಚಿನ್ನಾ..!!

ರಮೇಶ್-         ಮತ್ತೆ ಮುಖದ ಮೇಲಿರೋ ಈ ಗುನ್ನ..??

ರಂಗ-            ಹಗರಣ ಹಗರಣ ಅಂತ ದುಡ್ಡು ನುಂಗಿದ್ವಿ.. ಅದಿಕ್ಕೆ ಈ ಗುನ್ನ..!!

                     (ನರಸಿಂಹ. ಕದ್ದು ಮುಚ್ಚಿ ತಿನ್ನೋದಿತ್ತು ಆವಾಗೆಲ್ಲಾ ಹಾಡು)

ರಮೇಶ್-         ಲೇ.!! ಬಳ್ಳಾರಿ ಭೂಮೀನೇ ಬಗೆದು ಬಾಯಿಗೆ ಹಾಕೊಂಡಿರೋ ನಿಮಗೆ ಇಂಥಾ ಜೀವನ ಬೇಕೇನೋ..??

ರಂಗ-            ಹೌದು.. ಆದ್ರೆ ನಮಗೆ ಈ ಹಾಳಾದ ಜೀವನ ಕೊಟ್ಟಿದ್ದು ಆ ದೇವ್ರು..!! ನಮ್ಮದೇನು ತಪ್ಪು..??

ರಮೇಶ್-         ಹೌದು.. ನಂಗೂ ಈ ಹಾಳಾದ್ ಜೀವನ ಕೊಟ್ಟಿದ್ದು ಆ ದೇವ್ರೆ..!! ಇಂಥಾ ಕಷ್ಟಗಳನ್ನು ಕೊಟ್ಟಿದ್ದು ಆ ದೇವ್ರೇ..!! ಬಾರೋ, ಆ ಗಣೇಶನನ್ನು ಕುರಿತು ತಪಸ್ಸು ಮಾಡೋಣ.. ನಮಗೆ ಯಾಕ್ ಇಂಥಾ ಲೈಫ್ ಕೊಟ್ಟೆ ಅಂತ ಕೇಳೋಣ.

( ಇಬ್ಬರೂ ಒಂದು ಅಗ್ನಾತ ಸ್ಥಳಕ್ಕೆ ಬಂದು ತಪಸ್ಸಿಗೆ ಕೂರುತ್ತಾರೆ.. ಅವರ ತಪ್ಪಸ್ಸಿಗೆ ಮೆಚ್ಚಿ ಧಡೂತಿ ಆಕಾರದ ದೇವರು ಕೈಯಲ್ಲಿ ಜಿಮ್ ಡಂಬಲ್ಸ್ ಹಿಡ್ಕೊಂಡು ವ್ಯಾಯಾಮ ಮಾಡ್ತಾ ಪ್ರತ್ಯಕ್ಷನಾಗುತ್ತಾನೆ)

ಸುಬ್ರಹ್ಮಣ್ಯ-      ಶಿಷ್ಯ..!! ಏನು ನಿನ್ನ ವಿಷ್ಯ..!!

ರಂಗ-            ಅಪ್ಪಾ ಗಣೇಶಪ್ಪ..!! ನಮಗೆ ಯಾಕೆ ಈ ಥರ ಲೈಫ್ ಕೊಟ್ಟೆ..?? ಹೇಳು ಗಣೇಶಪ್ಪ, ಹೇಳು..!!

ಸುಬ್ರಹ್ಮಣ್ಯ-      ಕಂದಾ..!! ನಾನು ಗಣೇಶ ಅಲ್ಲ..!! ಸುಬ್ರಹ್ಮಣ್ಯ..!!

ರಂಗ-            ಹಾಂ..!! ನೀನು ಗಣೇಶ ಅಲ್ವಾ..?? ಹಾಗಾದ್ರೆ ಗಣೇಶ್ ಎಲ್ಲಿ..??

ಸುಬ್ರಹ್ಮಣ್ಯ-      ಗಣೇಶ ಚತುರ್ಥಿ ಅಲ್ವಾ..?? ಅದಿಕ್ಕೆ ಅವನು ತುಂಬಾ ಬಿಸಿಯಾಗಿದ್ದಾನೆ..!! 
                    ಅದಿಕ್ಕೆ ಅವರ ಬದಲಿಗೆ ನಾನು ಬಂದೆ..!!

ರಂಗ-            ಸುಬ್ರಹ್ಮಣ್ಯ..!! ನಂಗೊಂದು ಡೌಟು..!!

ಸುಬ್ರಹ್ಮಣ್ಯ-      ಯಾಕೆ ಲೇಟು..?? ಕೇಳು ನಿನ್ನ ಡೌಟು..!!

ರಂಗ-            ಗಣೇಶ ದಪ್ಪ ಇರ‍್ತಾನೆ..!! ಸುಬ್ರಹ್ಮಣ್ಯ ತೆಳ್ಳಗೆ ಇರ‍್ತಾನೆ ಅಂತ ನಾವು ಪುರಾಣಗಳಲ್ಲಿ ಓದಿದ್ದೆ,.!!
                   ಆದ್ರೆ ನೀನೂ ಗಣೇಶನ ಥರಾನೇ ದಪ್ಪಾ ಇದ್ಯಲ್ಲ..??

ಸುಬ್ರಹ್ಮಣ್ಯ-      ಸ್ಟುಪ್ಪಿಡ್ಸ್,,!! ಪುರಾಣಗಳು ಬರೆದು ಎಷ್ಟೋ ವರ್ಷಗಳಾಯ್ತು..!! ಆವಾಗ ತೆಳ್ಳಗೇ ಇದ್ದೆ.. 
                    ಈಗ 6 ಪ್ಯಾಕ್ ಮಾಡ್ಕೋಬೇಕು ಅಂತ ದಪ್ಪ ಆಗ್ತಿದ್ದೀನಿ..!! 
                  ನಂಗೆ ಟೈಮ್ ಇಲ್ಲ.. ಜಿಮ್ ಗೆ ಹೋಗಬೇಕು.,. ಬಾಯ್,,.

ರಮೇಶ-         ಹಾಂ..!! ಹುಡುಗೀರು ಕೈ ಕೊಡ್ತಾರೆ ಅಂತ ಗೊತ್ತು.. ಆದ್ರೆ ದೇವ್ರು ಈ ರೇಂಜ್ ಗೆ ಕೈ ಕೊಡ್ತಾನಲ್ವೋ..??

ರಂಗ-         ಹೇ ರಮೇಶ.. ಬಿಡೋದು ಬ್ಯಾಡ ಕಣೋ..!! ಮತ್ತೆ ಗಣೇಶನನ್ನು ಕುರಿತು ಡೀಪ್ ತಪಸ್ಸು ಮಾಡೋಣ..!!
            
              (ಮತ್ತೆ ಇಬ್ಬರೂ ಘೋರ ತಪಸ್ಸನ್ನು ಮಾಡ್ತಾರೆ.. ಆಗ ತೆಳ್ಳಗೆ ಇರುವ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಪಿಜ್ಜಾ  ಬರ್ಗರ‍್ ಹಿಡ್ಕೊಂಡು ಮತ್ತೊಂದು ಕೈಯಲ್ಲಿ ಕಂಪ್ಯೂಟರ‍್ ಮೌಸ್ ಹಿಡ್ಕೊಂಡು ಬರ‍್ತಾನೆ)

ಗಣೇಶ-          ಭಕ್ತರೇ.. ನಿಮ್ಮ ಭಕ್ತಿಗೆ ಮೆಚ್ಚಿದ್ದೇನೆ..!! ಸ್ಪೀಕರ‍್ ಆಫ್ ಮಾಡಿ..!! ಮ್ಯಾಟರ‍್ ಆನ್ ಮಾಡಿ..!!

ರಮೇಶ-         ಸ್ವಾಮಿ..!! ನಾವು ಗಣೇಶನನ್ನು ಕುರಿತು ತಪಸ್ಸು ಮಾಡ್ತಾ ಇದ್ದೀವಿ..!! ಸುಮ್ ಸುಮ್ನೇ ಯಾರ‍್ ಯಾರೋ ಬಂದು ಡಿಸ್ಟರ್ಬ ಮಾಡಬೇಡಿ..!! ಮುಚ್ಕೊಂಡು ಹೋಗ್ರಿ..!!

ಗಣೇಶ-          ಎಲವೋ ಅಯೋಗ್ಯ..!! ನಾನೇ ಗಣೇಶ..!!

ರಂಗ-    ಹಾಂ..!! ನೀನು ಗಣೇಶಾ ನಾ..?? ಗಣೇಶನನ್ನು ಗಜ ಮುಖ ಅಂತ ಪುರಾಣಗಳಲ್ಲಿ ಕರೀತಾರೆ..!! ನಿನ್ನ ಮುಖ ಆನೆ ಥರ ಇಲ್ವಲ್ಲ..??

ಗಣೇಶ-          ಮೌಸ್.. ವೇಯ್ಟ್ ಹಿಯರ‍್..        ಭಕ್ತ ಕಮ್ ನಿಯರ‍್..! (ಎಂದು ಗಣೇಶ ಪಢಾರನೆ ರಂಗನಿಗೆ ಹೊಡೆಯುತ್ತಾನೆ).  ಮುಠ್ಠಾಳ..!! ಪುರಾಣಗಳನ್ನು ಬರೆಯುವಾಗ ಟೆಕ್ನಾಲಜಿ ಇರಲಿಲ್ಲ.!! ಅದಿಕ್ಕೆ ನನ್ನ ಮುಖ ಆನೆ ಥರ ಇತ್ತು..!! ಈಗ ಟೆಕ್ನಾಲಜಿ ಬಂದಿದೆ..!! ನನ್ನ ಮುಖಾನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀನಿ..!!

ರಮೇಶ-         ಮತ್ತೆ.. ಮೋದಕ ಹಸ್ತ ಅಂತಾರೆ.. ಅಂದ್ರೆ ಗಣೇಶನ ಕೈಯಲ್ಲಿ ಕಡುಬು ಇರ‍್ತಾವೆ ಅಂತಾರೆ.. ಆದ್ರೆ ನೀನು ಪಿಜ್ಜಾ ಬರ್ಗರ‍್ ಹಿಡ್ಕೊಂಡಿದ್ಯಾ..??

ಗಣೇಶ-          ಭಕ್ತ..!! ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು..!!

ರಂಗ-  ನಮಗೆ ಹೇಳು ಭಗವಂತ..!!

ಗಣೇಶ- ಈಗಿನ ಕಾಲದ ಹುಡುಗಿಯರಿಗೆ, ಕಡುಬು ಮಾಡೋಕೆ ಬರೋದಿಲ್ಲ..!! ಅವರೂ ಪಿಜ್ಜಾ ಬರ್ಗರ‍್ ತಿಂತಾರೆ..!! ನಮಗೂ ಅದನ್ನೇ ಕೊಡ್ತಾರೆ..!! ಅವರು ಕೊಟ್ಟಿದ್ದನ್ನು ನಾವು ತಿನ್ನಬೇಕಲ್ವಾ..??

ರಂಗ-  ಭಗವಂತ.. ಕೈಯಲ್ಲಿ ರಿಯಲ್ ಮೌಸ್ ಹಿಡ್ಕೊಂಡು ಬರೋ ಬದಲು ಕಂಪ್ಯೂಟರ‍್ ಮೌಸ್ ಹಿಡ್ಕೊಂಡು ಬಂದಿದ್ಯಲ್ಲಾ.. ಯಾಕೆ??

ಗಣೇಶ- ಓರಿಜಿನಲ್ ಮೌಸ್ ಇದ್ರೆ ಎಲ್ರೂ ಹೊಡೆದು ಸಾಯಿಸ್ತಾರೆ ಜನಗಳು..!! ಅದಿಕ್ಕೆ ಈಗ ಎಲ್ಲರ ಮನೇಲೂ ಟೇಬಲ್ ಇಟ್ಟು ಮರ್ಯಾದೆ ಕೊಡ್ತಾ ಇರೋದು ಇದೇ ಮೌಸ್ ಗೆ ಅಲ್ವಾ..!!! ಸೋ, ನಾನು ಇದೇ ಮೌಸ್ ನ ಇಟ್ಕೊಂಡಿದ್ದೀನಿ.. ಇದಕ್ಕಾದ್ರೆ ಊಟ ಇಲ್ಲ ಕಡುಬು ಇಲ್ಲ..!! ಪವರ‍್ ಮಿನಿಸ್ಟರ‍್ ಶೋಭಕ್ಕ, ಕರೆಕ್ಟಾಗಿ ಪವರ‍್ ಕೊಟ್ರೆ ಸಾಕು..!!

ರಂಗ- ಭಗವಂತ.. ನೀನು ದೇವ್ರು..!! ನಿನ್ನ ಲೈಫು ಹೆಂಗೋ ಆಗುತ್ತೆ,.!! ಆದ್ರೆ ನನ್ನ ಫ್ರೆಂಡ್ ಹುಡುಗೀನ ಆಸೆ ಪಟ್ಟ.. ಅವನಿಗೆ ಹುಡುಗಿ ಸಿಗಲಿಲ್ಲ..!!

ರಮೇಶ- ಇವನು ಸಿ.ಎಮ್ ಸೀಟಿಗೆ ಆಸೆ ಪಟ್ಟ.. ಅದೂ ಸಿಗಲಿಲ್ಲ..!!
               (ಇಬ್ಬರೂ ಒಟ್ಟಿಗೆ- ನಮ್ಮ ಜೀವನ ಯಾಕ್ ಹಿಂಗೆ ಮಾಡಿದೆ)

ಗಣೇಶ-        ಮಕ್ಕಳೇ..!! ಅದಿಕ್ಕೆ ನಿಮಗೆ, ಅದೆಲ್ಲದರ ಬದಲಿಗೆ ವಿದ್ಯೆ-ಬುದ್ದಿ  ಕೊಟ್ಟಿದ್ದೀನಿ..!! ಶ್ರದ್ಧೆಯಿಂದ ವಿದ್ಯೆ-ಬುದ್ದಿ ಕಲೀರಿ.. ವಿದ್ಯೆ-ಬುದ್ದಿ ಇದ್ರೆ ಜನರು ನಿಮಗೆ ಸಲಾಮ್ ಹೊಡೀತಾರೆ.. ನೀನು ಸಿ,ಎಂ. ಆಗದೇ ಇದ್ರೂ ಹಣ ತಾನಾಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತೆ..

                ರಮೇಶ-   ಮತ್ತೆ ನನ್ನ ಪ್ರೀತಿ.??

             ಗಣೇಶ-          ಹಣ ನೋಡಿ ಬರುವ ಪ್ರೀತಿ ಎಂದೂ ಶಾಶ್ವತವಲ್ಲ..!! ಗುಣ ನೋಡಿ ಬರುವ ಪ್ರೀತಿಯೇ ಶಾಶ್ವತ..!! ಚಿಂತಿಸಬೇಡ.. ಐಶ್ವರ್ಯ ರೈ ಗೆ ಹೆಣ್ಣು ಮಗು ಆಗಿದೆ.. ಮುಂದಿನ ವರ್ಷ ಬಂದಾಗ ಎಂಗೇಜ್ ಮೆಂಟ್ ಬಗ್ಗೆ ಮಾತಾಡೋಣ..!!

                 ರಂಗ-            ಗಣೇಶಪ್ಪ..!! ನಂಗೆ ಕೊನೇದಾಗಿ ಒಂದು ಡೌಟು..!!

                ಗಣೇಶ-          (ಸಂಕಟದಿಂದ) ಅಯ್ಯೋ..!! ಅದೇನ್ ಡೌಟು ಬೇಗ ಬೊಗಳೋ ಬಡ್ಡೇತಾವ..!!

ರಂಗ-            ನಿಂದು ದಪ್ಪಾ ಹೊಟ್ಟೆ ಇತ್ತಲ್ವಾ..?? ಈಗ ನೋಡಿದ್ರೆ ಶಿಳ್ಳೇ ಕ್ಯಾತ ಇದ್ದಂಗಿದ್ಯ..?? ಹೊಟ್ಟೆ ಏನಾಯ್ತು..?? ನೀನು ಜಿಮ್ ಮಾಡ್ತಿದ್ಯಾ..??

ಗಣೇಶ- ಅಯ್ಯೋ..!! ಇಲ್ಲ ಕಣೋ..!! ಮೊನ್ನೆ ನೈವೇದ್ಯ ಎಂತ ತುಂಬಾ ಸ್ವೀಟ್ ತಂದಿದ್ರು..!! ನಾನು ಸಖತ್ ಆಗಿ ತಿಂದು ಬಿಟ್ಟೆ.. ಬಡ್ಡೀ ಮಕ್ಳು ಯಾರೋ ಒಬ್ರು ಅದ್ರಲ್ಲಿ ಬೇದಿ ಮಾತ್ರೆ ಹಾಕಿದ್ದಾರೆ ಅನಿಸುತ್ತೆ.. ಮೂರು ದಿನದಿಂದ ಬಾತ್ ರೂಮಲ್ಲಿ ಸೆಟ್ಲ್ ಆಗಿದ್ದೆ.. ಅದಿಕ್ಕೆ ಹೊಟ್ಟೇ ಕರಗೋಗಿದೆ.. ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ರೆ ನಾನೇ ಕರಗಿ ಹೋಗ್ತೀನಿ..!! ದಾರಿ ಬಿಡ್ರೋ..!!

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು