ಸಿನೆಮಾ

Share This Article To your Friends

ಮೊಡವೆ ಮಾಡಿಸಿದ ಮರ್ಡರ‍್

ಹ ಹ ಹ.. ಹೇಯ್.. ನಂಗೆ ಪೌಡ್ರು ಬೇಕು.. ನಂಗೆ ಫೇಶಿಯಲ್ ಕಿಟ್ ಬೇಕು.. ಇಲ್ನೋಡು ಇಲ್ನೋಡು.. ನನ್ ಮುಖದಲ್ಲಿ ಮೊಡವೆ ಆಗಿದೆ... ಮೊಡವೆ ಆದ್ರೆ ನನ್ ಗಂಡ ಕೊಲೆ ಮಾಡ್ತಾನೆ...
<Feel BGM> 
ನಾನು ರಮಣಿ. 23 ವರ್ಷ.. ಮದ್ವೆ ಆಗಿ ಜೀವನ ಸುಂದರವಾಗಿತ್ತು.. ಆದ್ರೆ ಏನಾಯ್ತೋ ಏನೋ ಗೊತ್ತಿಲ್ಲ ನನ್ನ ಮುಖದಲ್ಲಿ ಇದ್ದಕ್ಕಿದ್ದಂಗೆ ಮೊಡವೆಗಳು ಆಗೋಕೆ ಶುರುವಾದವು.. ಯಾವ ಡಾಕ್ಟರ್ ಗೆ ತೋರಿಸಿದ್ರೂ ಏನೂ ಪ್ರಯೋಜನ ಆಗಲಿಲ್ಲ..  ಇಷ್ಟು ದಿನ ಪ್ರೀತಿ ಮುಖ್ಯ ಅಂತಿದ್ದ ನನ್ ಗಂಡ ನಿನ್ ಮುಖ ನೋಡೋಕೆ ಆಗ್ತಿಲ್ಲ.. ನಿನ್ ಜೊತೆ ಸಂಸಾರ ಮಾಡೋಕೆ ಆಗ್ತಿಲ್ಲ ಡೈವರ್ಸ ಕೊಡು ಅಂತ ಹಿಂಸೆ ಮಾಡೋಕೆ ಶುರು ಮಾಡಿದ್ರು.. 
ನಾನು ಕಣ್ಣೀರು ಹಾಕದ ಕ್ಷಣಗಳೇ ಇರಲಿಲ್ಲ.. ಪ್ರೀತಿ ಪ್ರೇಮ, ಸಂಸಾರ ಅನ್ನೋ ನೂರಾರು ಕನಸುಗಳನ್ನು ಹೊತ್ತು ಬಂದಿದ್ದ ನನಗೆ ಕಣ್ಣೀರೇ ಜೀವನಾಡಿಯಾಯ್ತು.. 
ಅದೇ ಸಮಯಕ್ಕೆ ನಮ್ಮ ಯಜಮಾನರಿಗೆ ಯಾವುದೋ ಕಾಲೇಜ್ ಹುಡುಗಿ ಜೊತೆ ಸಂಪರ್ಕ ಬೆಳೀತು.. ಅದು ಪ್ರೀತಿ ಆಯ್ತು. ಅವಳ ಮೇಲೆ ಅತಿಯಾಗಿ ಅನುರಕ್ತನಾದ ಪಾಪಿ ಪತಿಗೆ ನನ್ನ ಜೀವದ ಬೆಲೆ ತಿಳಿಯಲೇ ಇಲ್ಲ..  ಆವತ್ತು ರಾತ್ರಿ ಕುಡಿದು ಬಂದು "ನಿನ್ ಮುಖ ನೋಡೋಕೆ ಆಗ್ತಿಲ್ಲ.. ಡೈವರ್ಸ ಕೊಡು ನಂಗೆ.. ನಾನು ಬೇರೆ ಮದ್ವೆ ಆಗಬೇಕು,. " ಅಂತ ಹೇಳಿ ಹೊಡೀತಾ ಇದ್ರು.. ಕುಡಿತದ ಅಮಲಿನಲ್ಲಿದ್ದ ಅವರು ಪಕ್ಕದಲ್ಲೇ ಇದ್ದ ಬ್ಲೇಡ್ ತಗೊಂಡು ನನ್ನ ಕತ್ತು ಕೂಯ್ದು ಬಿಟ್ರು.. ವಿಲ ವಿಲನೆ ಒದ್ದಾಡ್ತಿದ್ರೂ ಬದುಕಿಸುವವರೂ ಯಾರೂ ಇರಲಿಲ್ಲ.. ವೈವಹಿಕ ಜೀವನದ ಸುಂದರ ಕನಸು ಕಂಡಿದ್ದ ನನಗೆ ಪತಿರಾಯ ನೀಡಿದ ಮೊಡವೆಯ ಕೊಡುಗೆ ನನ್ನ ಜೀವನವನ್ನೇ ಕಿತ್ತಿಕೊಂಡಿತ್ತು..

ಮನಸು ನೋಡಿ ಇಷ್ಟ ಪಡ್ತಾರಾ ಅಥವ ಮುಖ ನೋಡಿ ಇಷ್ಟ ಪಡ್ತಾರಾ..?? ಜೀವನ ಅಂದ್ರೆ ಕೇವಲ ದೈಹಿಕ ಸುಖಕ್ಕೆ ಮಾತ್ರಾನಾ..??  ಪ್ರೀತಿ ಪ್ರೇಮ ಅನ್ನೋದಕ್ಕಿಂತ ಕಾಮವೇ ದೊಡ್ಡದಾ..?? ಒಂದೂ ತಿಳಿಯದ ನಾನು ಈಗ ಸ್ಮಶಾನವಾಸಿಯಾಗಿದ್ದೇನೆ..!! 
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು