ಸಿನೆಮಾ

Share This Article To your Friends

ಚುಯಿಂಗಮ್ ನಿಂದ ಹೋಯ್ತು ಜೀವ.,??
ಮಂತ್ರವಾದಿ- ಹೇ ಲಲಿತ.. ಆವಾಹ ಯಾಮಿ..!! ಆವಾಹ ಯಾಮಿ..


ಲಲಿತ ದೆವ್ವ : ಹೇಳಿ ಮಂತ್ರವಾದಿಗಳೇ.. ನನ್ನಿಂದ ಏನಾಗಬೇಕು..??


ಮಂತ್ರವಾದಿ : ಹೇ ಲಲಿತೆ.. ನೀನು ಹುಣ್ಣಿಮೆ ದಿನ ವಿಜಯ್ ದೇಹಾನ ಸೇರ್ಕೊಂಡು, ಅವನು ರಕ್ತ ಕಾರಿ ಸಾಯೋ ಹಾಗೆ ಮಾಡ್ಬೇಕು..!!


ಲಲಿತ : ಇಲ್ಲ.. ನಾನು ಅಂಥ ಕೆಟ್ಟ ಕೆಲಸ ಮಾಡಲ್ಲ

ಮಂತ್ರವಾದಿ
 
: ಹ ಹ ಹ.. ಆಗಲ್ಲ ಅಂದ್ರೆ ಮಂತ್ರಗಳ ಮೂಲಕ ನಿನ್ನನ್ನು ದಿಗ್ಭಂಧನ ಹಾಕ್ತೀನಿ..!! ಚುಯಿಂಗ್ ಗಮ್ ತಿನ್ನಿಸ್ತೀನಿ.. ಹುಷಾರ್..!!


ಲಲಿತ : ನೋಡು ಮಂತ್ರವಾದಿಗಳೇ.. ನೀವು ಏನ್ ಬೇಕಾದ್ರೂ ಮಾಡಿ.. ಆದ್ರೆ ಚುಯಿಂಗ್ ಗಮ್ ಮಾತ್ರ ತಿನ್ನಿಸ್ಬೇಡಿ..


ಮಂತ್ರವಾದಿ : ಹ ಹ.. ಹೇ ಲಲಿತೆ..!! ನಿನ್ನ ಹೇಗೆ ಟಾರ್ಚರ್ ಕೊಡ್ಬೇಕು ಅಂತ ನಂಗೆ ಗೊತ್ತು.. ಹೇ ಚುಯಿಂಗ್ ಗಮ್ ತಗೊಂಡು ಬಾರೋ..!!

ಲಲಿತೆ : ಬೇಡ.. ಬೇಡ..!!


ಮಂತ್ರವಾದಿ : ತಗೋ ತಿನ್ನು

ಲಲಿತೆ: ಬೇಡ ಬೇಡ ಅಯ್ಯೋ..!! ಬೇಡ.. ನೀವ್ ಹೇಳಿದಂಗೆ ಕೇಳ್ತೀನಿ.. ನೀವು ಹೇಳಿದಂಗೆ ಕೇಳ್ತೀನಿ..


ಮಂತ್ರವಾದಿ : ಹ ಹ ಹ.. ನಾಕು ತೆಲಿಸು.. ನೀಕು ಎಲಾ ಒಪ್ಪಿಂಚಾಲೋ..!!


ಸುಜಾತ ದೆವ್ವ- ಲಲಿತಮ್ಮ..!! ಮಂತ್ರಗಳು ನಿಂಬೆ ಹಣ್ಣಿಗೆ ದೆವ್ವ ಭೂತಗಳು ಹೆದರುತ್ತೆ ಅಂತಾರೆ.. ಆದ್ರೆ ನೀನು ಚುಯಿಂಗ್ ಗಮ್ ಗೆ ಹೆದರ್ತೀಯಲ್ವಾ..?? ಯಾಕೆ,,??


ಲಲಿತೆ : ನನ್ನ ಜೀವ ಹೋಗಿದ್ದೇ ಚುಯಿಂಗ್ ಗಮ್ ನಿಂದ ಸುಜಾತ.. ನಾನು ಬೆಂಗಳೂರಿನ ಪ್ರೊಡಕ್ಷನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲ್ಸ ಮಾಡ್ತಿದ್ದೆ.. ನಂಗೆ ಚುಯಿಂಗ್ ಗಮ್ ಅಂದ್ರೆ ತುಂಬಾ ಇಷ್ಟ..!! ಚುಯಿಂಗ್ ಗಮ್ ಇಲ್ದೇ ಒಂದು ಕ್ಷಣ ಕೂಡ ಇರ್ತಾ ಇರಲಿಲ್ಲ.. ಕೆಲಸ ಮಾಡ್ತಿದ್ರೂ ಬಾಯಲ್ಲಿ ಚುಯಿಂಗ್ ಗಮ್.. ಸ್ನಾನ ಮಾಡ್ತಿದ್ರೂ ಚೂಯಿಂಗ್ ಗಮ್ ತಿಂತಾ ಇದ್ದೆ..


ಆದ್ರೆ ಅದ್ಯಾಕೋ ಗೊತ್ತಿಲ್ಲ.. ಶಂಕರ್ ಕಡೆ ನನ್ನ ಮನಸ್ಸು ವಾಲಿತು.. ಅವನು ನನ್ನ ಕೈ ಕೆಳಗೆ ಕೆಲಸ ಮಾಡ್ತಿದ್ದ. ಅವನು ಬರಿಯೋ ಒಂದೋಂದು ಲವ್ ಸ್ಟೋರಿ ಕೂಡ ನನ್ನ ಇಂಪ್ರೆಸ್ ಮಾಡಿಬಿಟ್ತು.. ಆ ಸ್ಟೋರಿಗೆ ಅವನ ಆಲೋಚನಾ ಶಕ್ತಿಗೆ ಸೋತುಹೋದೆ..
ಆವತ್ತೊಂದಿನ ನನ್ನ ಆಸೆಯನ್ನು ಶಂಕರ್ ಗೆ ಹೇಳಬೇಕು ಅಂತ ಅನಿಸಿತು..
ನಮ್ಮ ಮನೆ ಪಾರ್ಟಿ ಗೆ ಕರೆದೆ..!! ಅವನಿಗೆ 24 ವರ್ಷ.. ನನಗೆ 30 ವರ್ಷ.. ಆದ್ರೇನಂತೆ..?? ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅಲ್ವಾ..?? ಪಾಕಿಸ್ತಾನದ ಹೀನಾ ರಬ್ಬಾನಿಕರ್, ಮತ್ತ್ತು ಭಿಲಾವ್ ಭುಟ್ಟೋ ಲವ್ ಮಾಡಿಲ್ವಾ..?? ಹಾಗೇನೇ ನಮ್ಮ ಪ್ರೇಮಾ ಕೂಡ ಅಂತ ಗಟ್ಟಿ ಧೈರ್ಯ ಮಾಡಿ ಅವನಿಗೆ ಹೇಳಿಬಿಟ್ಟೆ.. ಅದಿಕ್ಕೆ ಅವನು 


ಶಂಕರ್- ಮೇಡಂ. ನಾನು ನಮ್ಮ ಪ್ರೋಗ್ರಾಮ್ ಆಂಕರ್ ಶರ್ಮಿಳಾ ನ ಪ್ರೀತಿಸ್ತಾ ಇದ್ದೀನಿ.. ಅಂದು ಬಿಟ್ಟಡ..!!


ನನಗೆ ಅವಮಾನ ಆಯ್ತು.. ಹೇಗಾದ್ರೂ ಮಾಡಿ ಅವನನ್ನು ಪಡ್ಕೋಬೇಕು ಅನಿಸಿತು.. ಅವನ ಕಾಲಿಗೆ ಬಿದ್ದು ಕೇಳಿದೆ.. ಆದ್ರೂ ಅವನು ಕರಗಲಿಲ್ಲ.. ಬದಲಾಗಿ ನನಗೆ ಅವಮಾನ ಮಾಡಿಬಿಟ್ಟ..!! ನೀನು ಮುದುಕಿ.. ನನ್ನ ಇಷ್ಟ ಪಡೋಕೆ ನಾಚಿಕೆ ಆಗೋದಿಲ್ವ ಅಂತ ಅವಮಾನ ಮಾಡಿಬಿಟ್ಟ.. ನನಗೆ ಸಹಿಸೋಕೆ ಆಗಲಿಲ್ಲ. ಅದಿಕ್ಕೆ ನಾನು ಹೇಗಾದ್ರೂ ಮಾಡಿ ಅವರಿಬ್ಬರ ಪ್ರೇಮಕ್ಕೆ ಕೊಡಲಿ ಪೆಟ್ಟು ಹಾಕ್ಬೇಕು ಅಂತ ನಿರ್ಧಾರ ಮಾಡಿದೆ.


ಒಂದಿನ ನಾನೇ ಒಂದು ಗ್ರಾಫಿಕ್ಸ್ ಸಿ.ಡಿ.ಯನ್ನು ಮಾಡಿ ಅದನ್ನು ಅನಾಮಧ್ಯೇಯ ಹೆಸರಿನಲ್ಲಿ  ಕೊರಿಯರ್ ಮೂಲಕ ನಮ್ಮ ಆಫೀಸಿಗೆ ಕಳಿಸಿದೆ.. ಅದ್ರಲ್ಲಿ ಶಂಕರ್ ಪ್ರೀತಿಸ್ತಾ ಇದ್ದ ಹುಡುಗಿ ಶರ್ಮಿಳಾ ಬೇರೆ ವ್ಯಕ್ತಿ ಜೊತೆಗೆ ಸರಸ ಆಡ್ತಾ ಇರೋ ಹಾಗೆ ಗ್ರಾಫಿಕ್ಸ್ ಮಾಡಿದ್ದೆ.. ಆ ಸಿ.ಡಿ ಯಲ್ಲಿ ಏನಿರಬಹುದು ಅಂತ ಶರ್ಮಿಳಾ ಎಲ್ಲರ ಎದುರಿಗೇ ಸಿ,.ಡಿ ಆನ್ ಮಾಡಿದ್ಳು.. ಆಗ ಅವಳ ಮರ್ಯಾದೆ ಎಲ್ಲರೆದುರು ಹರಾಜಾಯ್ತು.. ಜನ ಆಡೋ ಮಾತುಗಳಿಗೆ ಶರ್ಮಿಳಾ ದಿಕ್ಕೆಟ್ಟು ಹೋದಳು.. ಆದ್ರೆ ನನಗೆ ಖುಷಿ ಅಯ್ತು.. ಯಾಕಂದ್ರೆ ಶರ್ಮಿಳಾ ಸರಿ ಇಲ್ಲ ಅಂದಾಗ ಶಂಕರ್ ನನ್ನ ಕಡೆ ತಿರುಗಬಹುದು ಅನ್ನೋ ಆಸೆ.. ಚುಯಿಂಗಮ್ ತಿನ್ನುತ್ತಾ ಖುಷಿ ಪಡ್ತಾ ಇದ್ದೆ.. ಬೆಳಿಗ್ಗೆ ಆಫೀಸಿಗೆ ಬರುವಾಗ ಶರ್ಮಿಳಾ ನೇಣು ಹಾಕಿಕೊಂಡಿದ್ದಾಳೆ ಅನ್ನೋ ವಿಷ್ಯ ತಿಳೀತು.


ಅದೇ ನೋವಿನಲ್ಲಿ ಇದ್ದ ಶಂಕರ್ ಗೆ ಸಮಾಧಾನದ ಮಾತು ಆಡಿ ಅವನನ್ನು ನನ್ನ ಹತ್ರ ಕರ್ಕೊಂಡೆ.,. ನಿಧಾನವಾಗಿ ಅವನ ಮನಸ್ಸನ್ನು ನನ್ನ ಕಡೆ ತಿರುಗಿಸಿಕೊಂಡೆ.. ಅವಳು ಸರಿ ಇಲ್ಲ.. ನಿನ್ನ ಪ್ರೀತಿಗೆ ಮೋಸ ಮಾಡಿ ಸರಸ ಸಲ್ಲಾಪ ಆಡಿದ್ದಾಳೆ.. ಎಷ್ಟೇ ಆದ್ರೂ ಆಕ್ಟ್ ಮಾಡೋಳು.. ನಿನ್ನ ಲೈಫ್ ನಲ್ಲೇ ಆಟ ಆಡಿದ್ಳು ಅಂತ ಇನ್ನಷ್ಟು ಅವಳ ಮೇಲೆ ಕೋಪ ಬರೋ ಹಾಗೆ ಮಾತಾಡಿದೆ.. ಅವನು ಅದೆಲ್ಲವನ್ನೂ ನಂಬಿಬಿಟ್ಟ..!! ಸಂಪೂರ್ಣವಾಗಿ ನನ್ನವನಾಗಿಬಿಟ್ಟ..!!ಒಂದಿನ ಅವನು ಕುಡಿಯೋಕೆ ಯಾವುದೋ ಫಾರಿನ್ ಡ್ರಿಂಕ್ಸ್ ತಂದಿದ್ದ..!! ನನಗೂ ಕುಡಿಯುವಂತೆ ಬಲವಂತ ಮಾಡಿದ.. ನಾನು ನಿನ್ನ ಇಷ್ಟೋಂದು ಪ್ರೀತಿಸ್ತೀನಿ.. ನನಗೋಸ್ಕರ ಸ್ವಲ್ಪ ಕುಡಿ ಅಂತ ಬಲವಂತ ಮಾಡಿದ.. ಎಷ್ಟೇ ಆದ್ರೂ ಅವನು ನನ್ನವನಾಗಿಬಿಟ್ಟನಲ್ಲ.. ಇನ್ನೇನಿದೆ ಅಂತ ಚುಯಿಂಗ್ ಗಮ್ ತಿನ್ನುತ್ತಲೇ ಕುಡಿಯೋಕೆ ಶುರು ಮಾಡಿದೆ.. ಇಬ್ಬರೂ ಕೋಣೆಗೆ ಬಂದೆವು.. ಮಧ್ಯದ ಮತ್ತಲ್ಲಿ ತಬ್ಬಿ ನಿಂತೆವು.. ಪ್ರೀತಿಯ ಉನ್ಮಾದ ಮತ್ತು ನಶೆಯ ಪ್ರಭಾವ ಹೆಚ್ಚಾಗಿತ್ತು.. ಆಗ ಶಂಕರ್ ಕೇಳಿದ.. ಶರ್ಮಿಳಾ ಮಾಡಿದ ಹಾಗೆ ನೀನು ನಂಗೆ ಮೋಸ ಮಾಡಲ್ಲಾ ತಾನೆ..?? ನನ್ನಿಂದ ದೂರ ಆಗಲ್ಲ ತಾನೆ ಅಂತ ಕೇಳಿದ ಶಂಕರ್. ಇಲ್ಲ.. ನಾನು ನಿನ್ನ ತುಂಬಾ ಪ್ರೀತಿಸ್ತೀನಿ.. ನೀನು ನನ್ನವನಾಗಬೇಕು. ಅಂತ ಹೇಳಿದೆ..!! 


 
ಆಗ ಅವನು ಅಷ್ಟೋಂದು ನನ್ನ ಮೇಲೆ ಪ್ರೀತೀನ..?? ನಾನು ಶರ್ಮಿಳಾನ ಮದ್ವೆ ಆಗಿದ್ರೆ ಏನ್ ಮಾಡ್ತಿದ್ದೆ ಅಂತ ಕೇಳಿದ. ಚುಯಿಂಗ್ ಗಮ್ ಅಗೆಯುತ್ತ ಅಗೆಯುತ್ತ ನನಗೆ ನಶೆ ಹೆಚ್ಚಾಗ್ತಾ ಇತ್ತು.. ನೀವು ಮದ್ವೆ ಆಗಬಾರದು.. ನಿಮ್ಮಿಬ್ಬರ ಪ್ರೀತಿ ಮುರಿಬೇಕು ಅಂತಾನೆ ಅವಳ ಬಗ್ಗೆ ಅಪ ಪ್ರಚಾರದ ಸಿಡಿ ಹುಟ್ಟು ಹಾಕಿದೆ.. ಎಲ್ಲ ನಿನಗೋಸ್ಕರ. ನೀನು ನನ್ನವನಾಗಬೇಕು ಅಂತ ಅಷ್ಟೇ.. ಅಂದೆ.. ಕ್ಷಣ ಹೊತ್ತು ಯೋಚಿಸಿ ನಿಧಾನವಾಗಿ ನನ್ನನ್ನು ಮಂಚದ ಮೇಲೆ ಮಲಗಿಸಿದ ನನ್ನ ಬಾಯಲ್ಲಿ ಚುಯಿಂಗ್ ಗಮ್ ಇತ್ತು..  ಅವನು ಪ್ರೀತಿಯಿಂದ ನನ್ನ ಮೂಗನ್ನು ಕಚ್ಚಿದ.. ಅಮಲಿನಲ್ಲಿದ್ದ ನನಗೆ ಉಸಿರು ಎಳೆದುಕೊಳ್ಳೋಕೆ ಆಗಲಿಲ್ಲ..  ಬಾಯಿಯಿಂದ ಉಸಿರು ಜೋರಾಗಿ ಎಳೆದುಕೊಂಡು ಬಿಟ್ಟೆ.. ಬಾಯಲ್ಲಿದ್ದ ಚುಯಿಂಗ್ ಗಮ್ ಗಂಟಲಿಗೆ ಬಂದು ಅಂಟಿಕೊಂಡಿತು..  ಚುಯಿಂಗ್ ಗಮ್ ಗಂಟಲಿನ ಸುತ್ತ ಸುತ್ತಿಕೊಂಡಿತ್ತು.. ಉಸಿರನ್ನು ಎಳೆದುಕೊಳ್ಳೋಕೆ ಆಗಲೇ ಇಲ್ಲ. ವಿಲ ವಿಲನೆ ಒದ್ದಾಡಿದೆ.. ಏನೇ ಆದ್ರೂ ಚುಯಿಂಗ್ ಗಮ್ ಹೊರಗೂ ಬರದೇ, ಒಳಗೂ ಹೋಗದೇ ಗಂಟಲಿನಲ್ಲೇ ಸುತ್ತಿಕೊಂಡಿತ್ತು.. ನಶೆಯ ಗುಂಗಲ್ಲಿ, ಒಂದೇ ನಿಮಿಷದಲ್ಲಿ, ಆ ಚುಯಿಂಗ್ ಗಮ್ ನನ್ನ ಜೀವಾನೇ ತೆಗೆದುಬಿಟ್ಟಿತ್ತು.. ಮಧುಚಂದ್ರಕ್ಕೆ ಹೋಗಬೇಕಾಗಿದ್ದ ನಾನು ಮಸಣದ ದಾರಿ ಹಿಡಿಯಬೇಕಾಯ್ತು.. ಅದಿಕ್ಕೆ ಯಾರೂ ಚುಯಿಂಗ್ ಗಮ್ ತಿನ್ನಬೇಡಿ.. ಎಲ್ಲದಕ್ಕೂ ಮಿತಿ ಇದೆ.. ಮಿತಿ ಮೀರಿದ್ರೆ ಎಲ್ಲದರಿಂದಲೂ ಅಪಾಯ ಇದೆ.. ನನ್ನ ಮಾತು ಕೇಳಿಲ್ಲ ಅಂದ್ರೆ ನೀವೂ ನನ್ ಥರ ದೆವ್ವ ಆಗಿ ಆಸೆಗಳು ಇಡೇರಿಸಿಕೊಳ್ಳೋಕೆ ಆಗದೇ ಒದ್ದಾಡಬೇಕಾಗುತ್ತೆ..

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು