ಸಿನೆಮಾ

Share This Article To your Friends

ಫೋಟೋ ತೆಗೆದವಳು ಸತ್ತು ಬಿದ್ದಿದ್ದಳು!

ಅದೊಂದು ಬೆಂಗಳೂರಿನ ಪ್ರಸಿದ್ಧ ಪಾರ್ಕ..  ಪ್ರೇಮಿಗಳನ್ನು ಆಕರ್ಷಿಸೋ ಸುಂದರ ತಾಣ.. ಆದ್ರೆ ಅಲ್ಲಿ ಕೆಲವು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ರು. ಹೀಗಾಗಿ ಅವರು ಪ್ರೇತವಾಗಿ ತಿರುಗಾಡ್ತಾರೆ ಅನ್ನೋ ಸುದ್ದಿಗಳೂ ಕೇಳಿ ಬರ್ತಾ ಇದ್ದವು..  ಇಬ್ಬರು ನವ ಪ್ರೇಮಿಗಳು ಸುತ್ತಾಡೋದಕ್ಕೆ ಆ ಪಾರ್ಕಿಗೆ ಬಂದ್ರು.. ಎಲ್ಲಾ ಕಡೆ ಸುತ್ತಾಡಿ ಫೋಟೋ ತೆಗೆಸಿಕೊಳ್ತಾ ಇದ್ರು.. ಅಲ್ಲೇ ಇದ್ದ ಒಂದು ಆಲದ ಮರದ ಹತ್ರ ಬಂದರು.. ಅದು ಏನೋ ಆಕರ್ಷಕವಾಗಿತ್ತು.. ಅದಿಕ್ಕೆ ಆ ಹುಡುಗ “ ಶ್ವೇತ.. ಈ ಮರ ತುಂಬಾ ಚೆನ್ನಾಗಿದೆ.. ನಾನು ಇಲ್ಲಿ ನಿಂತ್ಕೊಂಡಿರ್ತೀನಿ.. ಒಂದೇ ಒಂದು ಫೋಟೋ ತೆಗಿ..” ಅಂತ ತನ್ನ ಪ್ರೇಯಸಿಗೆ ಹೇಳಿದ ಅವಳು ಫೋಟೋ ತೆಗೆಯೋದಕ್ಕೆ ಶುರು ಮಾಡಿದಳು.. ಕ್ಯಾಮೆರಾದೊಳಗೆ ಕಣ್ಣು ಇಟ್ಟು ತನ್ನ ಹುಡುಗನನ್ನು ನೋಡಿದಳು.. ಇನ್ನೇನು ಕ್ಲಿಕ್ಕಿಸಬೇಕು ಅನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಕುಸಿದು ಕೆಳಗೆ ಬಿದ್ದಳು..

 ಆ ಹುಡುಗ ಗಾಬರಿಯಿಂದ ಅವಳ ಹತ್ರ ಬಂದ.. ಅವಳನ್ನು ನೋಡಿದ.. ಎದ್ನೋ ಬಿದ್ನೋ ಅಂತ ಅವಳನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ.. ವಿಚಿತ್ರವೋ ವಿಪರ್ಯಾಸವೋ ಗೊತ್ತಿಲ್ಲ.. ಅವಳಿಗೆ  ಹೃದಯಾಘಾತವಾಗಿತ್ತು.. ಜೀವ ಪರಮಾತ್ಮನ ಪಾದ ಸೇರಿತ್ತು.. ಚೆನ್ನಾಗಿ ಇದ್ದವಳು ಇದ್ದಕ್ಕಿದ್ದಂತೆ ಸತ್ತಳಲ್ಲ ಅಂತ ಇವನಿಗೆ ಹುಚ್ಚೇ ಹಿಡಿದಿತ್ತು.. ಒಂದಿನ ಅವಳೊಂದಿಗೆ ತೆಗೆಸಿಕೊಂಡ  ಫೋಟೋಗಳನ್ನು ನೋಡ್ತಾ ಕುಳಿತಿದ್ದ.,. ಆ ಪಾರ್ಕಿನಲ್ಲಿ ತೆಗೆಸಿಕೊಂಡ ಫಟೋಗಳನ್ನು ನೋಡಿ ಕಣ್ಣೀರು ಹಾಕ್ತಿದ್ದ.. ಆ ಕ್ಯಾಮೆರಾದಲ್ಲಿ ಇದ್ದ ಕೊನೇ ಫೋಟೋವನ್ನು ನೋಡಿದ.. ಆ ಫೋಟೋ ತೆಗೆಯುವಾಗಲೇ ಸತ್ತಿದ್ದಳು.. ಆ ಫೋಟೋ ನೋಡಿ ಅವನಿಗೆ ಅಚ್ಚರಿಯಾಯ್ತು.. ದಿಗ್ಭ್ರಾಂತವಾಯ್ತು.. ಆ ಫೋಟೋನಲ್ಲಿ ಇವನು ಆ ಆಲದ ಮರದ ಹತ್ರ ನಿಂತಿದ್ದ.. ಅವನ ಪಕ್ಕದಲ್ಲಿ ಒಂದು ಹೆಣ್ಣು ಮೋಹಿನಿ ಇವನ ಪಕ್ಕದಲ್ಲಿ ನಿಂತಿದ್ದು ಕಾಣಿಸಿತು.. ಅದೂ ಅವನಿಗೆ ಮುತ್ತುಕೊಡುಂತೆ ನಿಂತಿತ್ತು.. ಇದನ್ನ  ಕಂಡ ಆ ಅವನ ಪ್ರೇಯಸಿಗೆ ಆಘಾತ ತಡೆಯಲಾಗದೇ ಹೃದಯಾಘಾತಕ್ಕೆ ಈಡಾಗಿದ್ದಳು.. ಅವಳ ಸಾವಿಗೆ ಆ ದೆವ್ವವೇ ಕಾರಣವಾಗಿತ್ತು.. ಹಸೆ ಮಣೆ ಏರಬೇಕಿದ್ದ ಹುಡುಗಿ ಸ್ಮಶಾನದ ಹಾದಿ ತುಳಿದಿದ್ದಳು..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು