ಸಿನೆಮಾ

Share This Article To your Friends

ಆ ಕೆರೆಯ ನೀರಿನಲ್ಲಿ ಅಡಗಿ ಕುಳಿತಿದ್ದವನು ಯಾರು?

ಅವನ ಹೆಸರು ಗೋಪಾಲನ್..  ಅವನಿಗೆ ಸುಮನ್ ಅನ್ನೋ ಆಪ್ತ ಗೆಳೆಯ ಇದ್ದ.. ಒಬ್ಬರನ್ನು ಬಿಟ್ಟು ಒಬ್ಬರು ಇರ್ತಾ ಇರಲಿಲ್ಲ.. ಒಂದಿನ ಸುಮನ್ ಕೆರೆಯಲ್ಲಿ ಮುಳುಗಿ ತೀರಿಕೊಂಡು ಬಿಟ್ಟ.. ಆದರೆ ಸುಮನ್ ಗೆ ಅವನನ್ನು ಬಿಟ್ಟು ಇರೋದಕ್ಕೆ ಆಗಲಿಲ್ಲ.. ಅದಿಕ್ಕೆ ಸುಮನ್ ಪ್ರೇತಾತ್ಮವಾಗಿ ಆಗಾಗ ಅವನ ಕಣ್ಣಿಗೆ ಕಾಣಿಸಿಕೊಳ್ತಾ ಇದ್ದ.. ಇದರಿಂದ ಗೋಪಾಲನ್ ಗೆ ಭಯ ಆಯ್ತು.. ಇದರಿಂದ ಸುಮನ್ ಗೆ ಕೋಪ ಬಂತು.. ಆಪ್ತ ಮಿತ್ರ ಜೊತೆಗೆ ಇರ್ತಾ ಇದ್ದ,. ಈಗ ನನ್ನನ್ನು ಇಷ್ಟೋಂದು ನೋಯಿಸ್ತಾ ಇದ್ದಾನಲ್ವಾ ಅಂತ ಕಣ್ಣೀರು ಬಂತು.. ಆದರೆ ಒಂದು ದಿನ ಗೋಪಾಲನ್ ನ ತಾಯಿ ತನ್ನ ಮಗನನ್ನು ಮಂತ್ರವಾದಿ ಹತ್ರ ಕರ್ಕೊಂಡು ಹೋಗಿ ದೆವ್ವ ಪೀಡೆ ಪಿಶಾಚಿಗಳು ಬಾರದಂತೆ ತಾಯಿತ ಹಾಕಿಸಿಬಿಟ್ಟಳು. ಇದರಿಂದಾಗಿ ದೆವ್ವ ಆಗಿದ್ದ ಸುಮನ್ ಗೋಪಾಲನ್ ಹತ್ರ ಹೋಗೋಕೆ ಆಗಲಿಲ್ಲ.. ಇದ್ರಿಂದ ದೆವ್ವಕ್ಕೆ ಇನ್ನೂ ಕೋಪ ಹೆಚ್ಚಾಯ್ತು.. ನನ್ನ ಸ್ನೇಹಿತ ನನ್ನೊಂದಿಗೆ ಇರಬೇಕು.. ಅದಿಕ್ಕೆ ಅವನನ್ನು ಸಾಯಿಸಿ ನನ್ನ ಜೊತೆ ಕರೆದುಕೊಂಡು ಹೋಗಬೇಕು ಅನ್ನೋ ನಿರ್ಧಾರ ಮಾಡಿತು..

 ಒಂದಿನ ಸ್ನಾನ ಮಾಡುವಾಗ ಗೋಪಾಲನ್ ಕತ್ತಿನಲ್ಲಿ ಇದ್ದ ತಾಯತ ಕಡಿದು ಬಿಟ್ಟಿತು.. ತಕ್ಷಣ ದೆವ್ವ ಅವನ ಮೈ ಒಳಗೆ ಸೇರಿತು. ಅಮಾವಾಸೆ ದಿನದವರೆಗೂ ಯಾರಿಗೂ ಅನುಮಾನ ಬಾರದಂತೆ ಗೋಪಾಲನ್ ಮೈ ಒಳಗೆ ಆ ದೆವ್ವ ಇತ್ತು. ಆವತ್ತು ಅಮವಾಸೆ ಬಂದು.. ಮಧ್ಯರಾತ್ರಿ ಎದ್ದು ಮನೆಯಿಂದ ಹೊರಗೆ ಬಂದ.. ಆ ತಕ್ಷಣ ದೆವ್ವ ಅವನ ಮೈಯಿಂದ ಹೊರಗೆ ಬಂತು.. “ಗೋಪಾಲ, ನಾನು ನಿನ್ ಫ್ರೆಂಡು.. ಸುಮನ್ ಕಣೋ.. ಬಾರೋ.. ಆಟ ಆಡೋಣ ಬಾರೋ” ಅಂತ ಹೇಳಿತು.. ಆ ದೆವ್ವದ ಮಾತಿಗೆ ಮಂಕು ಕವಿದವನಾದಂತೆ ಆದನು..  ತನ್ನ ಸ್ನೇಹಿತ ಸತ್ತುಹೋಗಿದ್ದಾನೆ ಅನ್ನೋ ಕಲ್ಪನೆಯೇ ಅವನಿಗೆ ಬರಲಿಲ್ಲ.. ಅವನ ಜೊತೆ ಹೋಗ್ತಾ ಇದ್ದ.. ಆ ದೆವ್ವ ಅವನನ್ನು ಒಂದು ಕೆರೆಯ ಹತ್ತಿರ ಕರೆದುಕೊಂಡು ಹೋಯ್ತು. ಅದು ನಿಧಾನವಾಗಿ ಕೆರೆಯ ಒಳಗೆ ಇಳೀತಾ ಇತ್ತು.. ಗೋಪಾಲನ್ ಕೂಡ ಅರಿವಿಲ್ಲದೇ ಕೆರೆಯ ಒಳಗೆ ಇಳೀತಾ ಇದ್ದ..  ನೀರು ಮುಖದವರೆಗೂ ಬಂದಿತು. ಆಗ ಗೋಪಾಲನ್ ಗೆ ಎಚ್ಚರವಾಯ್ತು.. ಭಯದಲ್ಲಿ ಕೂಗಿದ.. ಆದ್ರೆ ಯಾರೂ ಸಹಾಯಕ್ಕೆ ಬರಲಿಲ್ಲ.. ಆ ದೆವ್ವ ನೀರಿನ ಒಳಗೆ ಕುಳಿತು ಗೋಪಾಲನ್ ನನ್ನು ಹಿಡಿದು ಒಳಗೆ ಎಳೆದುಕೊಂಡಿತು.. ಎಷ್ಟೇ ಕಷ್ಟ ಪಟ್ಟರೂ ಅದರಿಂದ ಬಿಡಿಸಿಕೊಳ್ಳಲಾಗಲಿಲ್ಲ.. ಯಾಕಂದ್ರೆ ಆ ದೆವ್ವ ಅಷ್ಟು ಬಿಗಿಯಾಗಿ ಅವನನ್ನು ನೀರಿನ ಒಳಗೆ ಹಿಡಿದಿಟ್ಟುಕೊಂಡಿತ್ತು.. ಒದ್ದಾಡಿ ಒದ್ದಾಡಿ ಅವನು ಜೀವ ಬಿಟ್ಟ..!!  ಕೊನೆಗೂ ಆ ದೆವ್ವ ತನ್ನ ಆಪ್ತ ಮಿತ್ರನ ಜೀವವನ್ನೇ ತೆಗೆದಿತ್ತು.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು