Share This Article To your Friends

ಕರೀ ಬೆಕ್ಕು ಮಾಡಿದ್ದೇನು..??


ಒಂದು ದಂಪತಿಗಳಿಗೆ ಸಾಕು ಪ್ರಾಣಿಗಳು ಅಂದ್ರೆ ಅದೇನೋ ಪ್ರೀತಿ.. ಅದಕ್ಕೆ ಬಹಳಷ್ಟು ಸಾಕು ಪ್ರಾಣಿಗಳನ್ನು ತಮ್ಮ ಮನೆಯಲ್ಲಿ ಸಾಕಿದ್ರು. ಅದೊಂದು ದಿನ ಮನೆ ಮಾಲೀಕ ಕಂಠ ಪೂರ್ತಿ ಕುಡಿದು ಮನೆಗೆ ಬರ್ತಾನೆ. ಆಗ ಆ ಬೆಕ್ಕಿನ ಹತ್ರ ಮಾತಾಡೋಕೆ ಹೋಗ್ತಾನೆ.. ಆಗ ಆ ಬೆಕ್ಕು ತನ್ನ ಮಾಲೀಕನನ್ನೇ ಕಚ್ಚಿ ಓಡುತ್ತೆ. ಕೋಪಗೊಂಡ ಆ ಬೆಕ್ಕನ್ನು ಹಿಡ್ಕೊಂಡು ತನ್ನ ಮನೆಯ ಎದುರಿದ್ದ ಮರಕ್ಕೆ ನೇಣು ಹಾಕ್ತಾನೆ... 

ಆತ ತನ್ನ ರೂಮಿಗೆ ಹೋಗಿ ಮಲಗಿದ ತಕ್ಷಣ ಮನೆಗೆ ಅಚ್ಚರಿಯ ರೀತಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ.. ಆದ್ರೂ ಹೇಗೋ ಬದುಕುಳೀತಾರೆ.. ಆದ್ರೆ ಅವರ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ರೂ ಕೂಡಾ ಅಚ್ಚರಿ ಎಂಬಂತೆ ಒಂದೇ ಒಂದು ಗೋಡೆ ಮಾತ್ರ ಉಳಿಯುತ್ತೆ... ಆ ಗೋಡೆ ಬೇರೆ ಯಾವುದೂ ಅಲ್ಲ.. ಆ ಬೆಕ್ಕು ಕುಳಿತುಕೊಳ್ಳುತ್ತಿದ್ದ ಗೋಡೆ ಅದು.. ಮಾಲೀಕನಿಗೆ ಕುಡಿದ ಅಮಲೆಲ್ಲಾ ಇಳಿದಿತ್ತು. ಅವನು ನಿಧಾನಕ್ಕೆ ಆ ಗೋಡೆಯ ಹತ್ರ ಹೋದ.. ಆ ಗೋಡೆಯ ಮೇಲೆ ಇದ್ದಕ್ಕಿಇದ್ದಂತೆ ಅದೇ ಬೆಕ್ಕಿನ ಚಿತ್ರ ಅಸ್ಪಷ್ಟವಾಗಿ ಕಾಣುತ್ತೆ...ಆಮೇಲೆ ಅದು ದೊಡ್ಡದಾಗ್ತಾ ಸ್ಪಷ್ಟ ರೂಪವನ್ನು ತಾಳಿತು.. ಅದನ್ನು ನೋಡಿದ  ಮಾಲೀಕನಿಗೆ ಭಯದಿಂದ ರಾತ್ರಿಯ ಛಳಿಯಲ್ಲೂ ಕೂಡಾ ಬೆವರು ಕಿತ್ತಿಕೊಂಡು ಬರುತ್ತೆ..

ಒಂದು ದಿನ ಬೆಕ್ಕನ್ನು ಕೊಂದ ಆ ಮಾಲೀಕ ಹೊಸ ಮನೆಗೆ ಹೋಗ್ತಾನೆ..  ಅದೊಂದು ದಿನ ರಾತ್ರಿ ಮಾಲೀಕನ ಮಡದಿ ಮನೆಯ ನೆಲ ಮಾಳಿಗೆಗೆ ಅದೇನೋ ಕೆಲಸ ಅಂತ ಹೋದಳು.. ಅಲ್ಲಿ ತುಂಬಾ ಕತ್ತಲಾಗಿರುತ್ತೆ... ಅದೇನೋ ಒಂದು ಪ್ರಾಣಿ ಅವಳ ಮೈ ಮೇಲೆ ಎಗರಿದಂತಾಗುತ್ತದೆ.. ಹೆಂಡತಿ ಕಿಟಾರನೆ ಕಿರುಚುತ್ತಾಳೆ.. 
ಆಮೇಲೆ ಗಂಡ ಓಡಿ ಬರ್ತಾನೆ.. ಅದೊಂದು ಮೂಲೆಯಲ್ಲಿ ಆ ಬೆಕ್ಕು ಇವರನ್ನೇ ದುರುಗುಟ್ಟಿಕೊಂಡು ನೋಡುತ್ತೆ... ಮಾಲೀಕ ಆ ಬೆಕ್ಕನ ಆಕೃತಿಯನ್ನು ನೋಡಿ ದಂಗಾಗಿ ಹೋಗ್ತಾನೆ.. ಭಯದಲ್ಲಿ ಏನು ಮಾಡಬೇಕೋ ಗೊತ್ತಾಗೋದಿಲ್ಲ.. ಆ ಬೆಕ್ಕನ್ನು ಕೊಂದು ಬಿಡಬೇಕು ಅಂತ ನಿಧರಿಸ್ತಾನೆ.. ಅಲ್ಲೇ ಪಕ್ಕದಲ್ಲಿ ಇದ್ದ ಕೊಡಲಿಯನ್ನು ಕೈಗೆ ಎತ್ತಿಕೊಳ್ತಾನೆ.. ಜೋರಾಗಿ ಕೊಡಲಿ ಹಿಡಿದ ಕೈಯನ್ನು ಬೀಸಿ ಹೊಡೀತಾನೆ.. ಆದ್ರೆ ವಿಧಿಯ ಆಟ ವಿಚಿತ್ರವಾಗಿತ್ತು.. ಆ ಕೊಡಲಿ ಅವನ ಕೈ ಯಿಂದ ಪಾರಾಗಿ ತನ್ನ ಹೆಂಡತಿಯ ಕುತ್ತಿಗೆಯನ್ನೇ ಸೀಳಿ ಹಾಕಿತ್ತು... ಅಷ್ಟರಲ್ಲಾಗಲೇ ಆಬೆಕ್ಕು ಕಣ್ಮರೆಯಾಗಿ ಹೋಗಿತ್ತು.

 ಆ ಕೊಲೆಯ ವಿಚಾರ ಹೊರಗೆ ಹೋದ್ರೆ ಪೋಲೀಸರು ತನ್ನನ್ನ ಕೊಂದು ಬಿಡ್ತಾರೆ ಅಂದು ಕೊಂಡು ತನ್ನ ಹೆಂಡತಿಯನ್ನು ಒಂದು ಗೋಡೆಯಲ್ಲಿಟ್ಟು ಮುಚ್ಚಿ ಬಿಟ್ಟ... ಪೋಲೀಸರು ಬಂದು ಹುಡುಕಿದ್ರೂ ಯಾವ ಒಂದು ಸುಳಿವೂ ಕೂಡಾ ಸಿಗಲಿಲ್ಲ.. ಆದ್ರೆ ಅದೊಂದು ದಿನ ನೆಲ ಮಾಳಿಗೆಯನ್ನು ಶೋಧಿಸೋಕೆ ಬಂದ ಪೋಲೀಸರಿಗೆ ಬೆಕ್ಕಿನ ಕಿರುಚಾಟ ಕೇಳಿಸಿತು..ಅದು ಅವನ ಹೆಂಡತಿಯನ್ನು ಮುಚ್ಚಿಟ್ಟಿದ್ದ ಗೋಡೆಯಿಂದ....... ಪೋಲೀಸರಿಗೂ ಭಯ ಆಗಿ ಹೋಯ್ತು...ಅದೇನದು ಗೋಡೆ ಮಾತಾಡುತ್ತಾ..? ಅಂತ.. ಯಾರದು ಅಂತ ಭಯದಲ್ಲೇ ಪೋಲೀಸರು ಕೇಳಿದ್ರು.. ನಾನು ಈ ಮನೆ ಮಾಲೀಕನ ಹೆಂಡತಿ.. ಗೋಡೆಯೊಳಗೆ ಇದ್ದೀನಿ ಅಂತ ಧ್ವನಿ ಬಂತು.. ಛಳಿಗಾಲದ ಸಮಯದಲ್ಲೂ ಕೂಡಾ ಪೋಲೀಸರು ಬೆವೆತು ಹೋದ್ರು.. ಆಮೇಲೆ ಆ ಗೋಡೆಯನ್ನು ಒಡೆಯೋಕೆ ಆ ಮಾಲೀಕನಿಗೆ ಹೇಳಿದ್ರು. ಅವನು ಗೋಡೆ ಒಡೀತಾ ಇದ್ದ.. ಅಚ್ಚರಿ ಅಂದ್ರೆ ಅವನ ಹೆಂಡತಿಯ ದೇಹ ದೊಡ್ಡ ಕರಿ ಬೆಕ್ಕಿನ ರೂಪಕ್ಕೆ ತಿರುಗಿತು.. ಅದನ್ನು ನೋಡಿದ ಮಾಲೀಕನ ಹೃದಯ ಒಂದು ಕ್ಷಣ ನಿಂತಂತಾಯ್ತು.. ಆಮೇಲೆ ಆಬೆಕ್ಕಿನ ರೂಪದ ಹೆಂಡತಿ ಇದ್ದಕ್ಕಿದ್ದಂತೆ ಘೋರ ರೂಪವನ್ನು ತಾಳಿ ಅವನನ್ನು ಆ ಗೋಡೆಯೊಳಗೆ ಎಳೆದುಕೊಂಡು ಬಿಟ್ಟಿತು.. ಗೋಡೆ ತನ್ನಷ್ಟಕ್ಕೆ ತಾನೇ ಮತ್ತೆ ಕಟ್ಟಿಕೊಂಡಿತು.. ಪೋಲೀಸರು ಅಲ್ಲಿ ಎನು ನಡೀತಿದೆ ಅಂತ ಯೋಚಿಸೋಷ್ಟ್ರಲ್ಲಿ ಎಲ್ಲವೂ ನಡೆದು ಹೋಗಿತ್ತು.. ಅವರೂ ಕೂಡಾ ಜೀವ ಉಳಿದ್ರೆ ಸಾಕು ಅಂತ ಓಡಿ ಹೋದ್ರು..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು