ಸಿನೆಮಾ

Share This Article To your Friends

ದೆವ್ವಗಳ ಜೊತೆ ಮಲಗಿದ್ದು.!!

ಒಂದಿನ ರಾತ್ರಿ ನಾನು ಗುಲ್ಬರ್ಗಾದ ಚಿತ್ತಾಪುರ ರೈಲ್ವೇ ಸ್ಟೇಷನ್ ಗೆ ಹೋಗಿದ್ದೆ.. ರಾತ್ರಿ 1 ಗಂಟೆ ಆಗಿದ್ರೂ ಅಲ್ಲಿ ಜಾತ್ರೆ ಸಂತೆ ನಡೀತಿತ್ತು.. ಅಲ್ಲೆಲ್ಲಾ ಓಡಾಡಿದೆ.. ನಂಗೆ ನಿದ್ದೆ ಬಂತು. ಅಲ್ಲೇ ಪಕ್ಕದಲ್ಲಿ ಜಿಲೇಬಿ ಮಾರುವವನ ಹತ್ರ ಹೋಗಿ “ಸರ್ ನನ್ ಸೂಟ್ ಕೇಸ್ ನಿಮ್ ಹತ್ರ ಇಟ್ಟುಕೊಳ್ಳಿ.. ನಿದ್ರೆ ಬರ್ತಿದ್ದೆ,, ಸ್ವಲ್ಪ ನಿದ್ದೆ ಮಾಡ್ತೀನಿ ಅಂತ ಹೇಳಿದೆ.. ಅದಕ್ಕೆ ಆ ವ್ಯಕ್ತಿ ಒಪ್ಪಿದ.. ಬೆಳಿಗ್ಗೆ ಎದ್ದು ನೋಡಿದ್ರೆ ಅಲ್ಲಿ ಯಾರೂ ಇರಲಿಲ್ಲ.. ನನ್ ಸೂಟ್ ಕೇಸ್ ಕೂಡ ಇರಲಿಲ್ಲ.. ನಮ್ ಮನೆಗೆ ಬಂದು ನಡೆದಿದ್ದೆಲ್ಲಾ ಹೇಳಿದೆ.. ಆಗ ನಮ್ ಊರಿನ ಮಂತ್ರಿವಾದಿಗಳು ಹೇಳಿದ್ರು.. “ನೋಡು ನೀನು ಹೋಗಿದ್ದು ಅಮವಾಸೆ ದಿನ.. ಆವತ್ತು ದೆವ್ವಗಳು ಜಾತ್ರೆ ಮಾಡ್ತಾ ಇದ್ವು.. ನೀನು ಮುಂದಿನ ಅಮಾವಾಸೆಗೆ ಭಯ ಪಡದೇ ಅಲ್ಲಿಗೆ ಹೋಗು.. ನಿನ್ ಸೂಟ್ ಕೇಸ್ ಸಿಗುತ್ತೆ ಅಂತ ಹೇಳಿದ್ರು. ಭಯ ಇದ್ರೂ ಕೂಡ ಅಮಾವಾಸೆ ದಿನ ಮತ್ತೆ ಹೋದೆ.. ಅದೇ ಥರ ಜಾತ್ರೆ ನಡೀತಿತ್ತು.. ಅದೇ ಜಾಗದಲ್ಲಿ ಅದೇ ಜಿಲೇಬಿ ಮಾರೋ ವ್ಯಕ್ತಿ ಇದ್ದ.. ಹೋಗಿ “ಸ್ವಾಮಿ ಆವತ್ತು ನಾನು ನಿಮಗೆ ಸೂಟ್ ಕೇಸ್ ಕೊಟ್ಟಿದ್ದೆ ಅದು ಕೊಡ್ತೀರ ಅಂತ ಕೇಳಿದೆ.. ಆ ದೆವ್ವಾ ನನ್ ಕಡೆ ನೋಡಿ “ತಗೊಳ್ಳಿ” ಅಂತ ಕೊಟ್ಟಿತು.. ನಾನು ತಗೊಂಡು ಹಾಗೇ ವಾಪಸ್ ಬಂದುಬಿಟ್ಟೆ.. ರಾತ್ರಿ ಪೂರ್ತಿ ಚಿತ್ತಾಪುರ ರೈಲ್ವೇ ಸ್ಟೇಷನ್ ನಲ್ಲಿ ಕೂತಿದ್ದೆ.. ಬೆಳಿಗ್ಗೆ ಎದ್ದು ಮತ್ತೆ ಆ ರಸ್ತೇಲಿ ಹೋದ್ರೆ ಅಲ್ಲಿ ಯಾರೂ ಇರಲಿಲ್ಲ.. ಆದ್ರೆ ನನ್ ಸೂಟ್ ಕೇಸ್ ನಂಗೆ ಸಿಕ್ತು ಅಂತ ಖುಷಿ ಪಟ್ಟು ವಾಪಸ್ ಬಂದು ಬಿಟ್ಟೆ. 
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು