ಸಿನೆಮಾ

Share This Article To your Friends

ಚಕ್ರವರ್ತಿಯಾಗೋ ಆಸೆ ಈ ಬಾಲಕನಿಗೆ..!!

ಪುಟ್ಟ ಬಾಲಕನ ದಿಟ್ಟ ಆಕಾಂಕ್ಷೆ ಚಕ್ರವರ್ತಿಯಾಗಬೇಕು ಅನ್ನೋದು..!! ಆದರೆ ಅವನ ಕೈರೇಖೆಗಳು ಏನ್ ಹೇಳಿತು..?? ಗೊತ್ತಾ..??

ಮ್ಯಾಸಿಡೋನಿಯಾದ ಊರಿನಲ್ಲಿ ಒಬ್ಬ ಜ್ಯೋತಿಷಿ ಬಂದಿದ್ದ.. ಅವನು ಹೇಳಿದ್ದೆಲ್ಲ ಸತ್ಯವಾಗುತ್ತೆ ಅಂತ ಜನರೆಲ್ಲಾ ಮಾತಾಡಿಕೊಳ್ತಾ ಇದ್ರು.. ಒಬ್ಬ ಪುಟ್ಟ ಬಾಲಕ ಆ ಜ್ಯೋತಿಷಿಗಳ ಹತ್ತಿರ ಬಂದು ತನ್ನ ಕೈಯನ್ನು ಆ ಜ್ಯೋತಿಷಿಗಳಿಗೆ ತೋರಿಸಿ ನಾನು ಚಕ್ರವರ್ತಿ ಆಗ್ತೀನ ಅಂತ ಕೇಳಿದನು.. ಕೊಳಕು ಬಟ್ಟೆಯ ಆ ಪುಟ್ಟ ಬಾಲಕನ ದಿಟ್ಟ ಪ್ರೆಶ್ನೆಗೆ ಆ ಜ್ಯೋತಿಷಿ ಬೆರಗಾಗಿ ಹೋದ.. ಆ ಹುಡುಗನ ಕೈಯನ್ನು ನೋಡಿದ.. ಸ್ವಲ್ಪ ಮರುಕ ಪಟ್ಟು ಹೇಳಿದ “ ಹೇ ಬಾಲಕ… ನಿನ್ನ ಕೈರೇಖೆಗಳು ಅದ್ಭುತವಾಗಿವೆ.. ಆದರೆ ಅಂಗೈನಲ್ಲಿ ಇನ್ನೊಂದು ರೇಖೆ ಬಂದಿದ್ದರೆ, ನೀನು ಖಂಡಿತವಾಗ್ಲೂ ಚಕ್ರವರ್ತಿ ಆಗ್ತಾ ಇದ್ದೆ.. ಆದ್ರೆ ಈಗ ಕಷ್ಟ ಅಂತ ಹೇಳಿ ಮರುಕ ಪಟ್ಟ.. ಆದ್ರೆ ಆ ಹುಡುಗ ಬೇಸರ ಪಟ್ಟುಕೊಳ್ಳಲಿಲ್ಲ.. ತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದು ತನ್ನ ಅಂಗೈ ಮೇಲೆ ಕೂಯ್ದುಕೊಂಡನು.. “ ಈಗ ಹೇಳಿ ಇನ್ನು ಎಲ್ಲಿ ಗೆರೆ ಬರಬೇಕು ಅಂತ.. ಒಟ್ಟಿನಲ್ಲಿ ನಾನು ಚಕ್ರವರ್ತಿಯಾಗಬೇಕು ಅಷ್ಟೇ.. ಅಂತ ಹೇಳ್ತಾನೆ.. ಹುಡುಗನ ಆ ದಿಟ್ಟ ಧೈರ್ಯವನ್ನು ನೋಡಿ ಜ್ಯೋತಿಷಿಯೇ ದಂಗಾಗಿ ಹೋಗ್ತಾನೆ.. “ಚಕ್ರವರ್ತಿಯಾಗಲು ಎಂಥಾ ಅಡತಡೆಗಳನ್ನು ಎದುರಿಸಬಲ್ಲನು ಎಂದು ತಿಳಿದು ಮೆಚ್ಚಿಕೊಳ್ಳುತ್ತಾನೆ” ನಗುವನ್ನು ಬೀರುತ್ತೆ “ನಿನಗೆ ಈ ರೇಖೆಗಳ ಅವಶ್ಯಕಥೆ ಇಲ್ಲ.. ನಿನ್ನ ಈ ಸಾಹಸ ಮತ್ತು ಛಲ ಮಾತ್ರ ಸಾಕು.. ನೀನು ಚಕ್ರವರ್ತಿ ಆಗೇ ಆಗ್ತೀಯ ಹೋಗು ಎಂದು ಹೇಳಿದನಂತೆ.. ಆ ಹುಡುಗ ದೊಡ್ಡವನಾಗಿ ಮ್ಯಾಸಿಡೋನಿಯಾದ ಅರಸನಾದ.. ಅವನೇ ಅಲೆಗ್ಸಾಂಡರ‍್.. ಇಡೀ ಭೂಮಂಡಲವನ್ನೇ ತನ್ನ ಕೈಯಲ್ಲಿ ಹಿಡಿದಿಟ್ಟುಕೊಳ್ಳಲು ಹವಣಿಸಿದ ಮಹತ್ವಾಕಾಂಕ್ಷೆಯ ಚಕ್ರವರ್ತಿ ಆದ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು