ಸಿನೆಮಾ

Share This Article To your Friends

ಕೋಮಲಾಂಗಿಗಾಗಿ ಹೊಟ್ಟೆ ಕರಗಿಸೋಕೆ ಹೊರಟಿದ್ದಾರೆ ಕೋಮಲ್


   ಸಿನೆಮಾದಲ್ಲಿ ಯಾರು ಬೇಕಾದ್ರೂ ಹೀರೋ ಆಗಬಹುದು ಅನ್ನೋದಕ್ಕೆ ನಮ್ಮಲ್ಲಿ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಲೂಸ್ ಮಾದ  ಬಾಡಿನಲ್ಲಿ ಲೂಸ್ ಆಗಿದ್ರೂ ಕೂಡಾ ಆಕ್ಟಿಂಗ್ ನಲ್ಲಿ ಫುಲ್ ಟೈಟ್ ಆಗಿದ್ದಾರೆ. ದುನಿಯಾ ವಿಜಯ್ ಕಲರ್ ನಲ್ಲಿ ಡಿಮ್ ಆಗಿದ್ರು ಕೂಡಾ ಆಕ್ಟಿಂಗ್ ನಲ್ಲಿ ಬ್ರೈಟ್ ಆಗಿದ್ದಾರೆ.. ಅದೇ ನಿಟ್ಟಿನಲ್ಲಿ ಕೋಮಲ್  ಕೂಡಾ ಹಿಟ್ ಆಗ್ತಿದ್ದಾರೆ.. ಅದಕ್ಕೆ ಯಾಕೋ ಅವರ ಹೊಟ್ಟೆ ಅಡ್ಡಾ ಬರ್ತಿದೆ ಅಂತ ಕಾಣುತ್ತೆ.,. ಈಗ ಸಿಕ್ಕಾ ಪಟ್ಟೇ ಜಿಮ್ ಮಾಡೋಕೆ ಶುರು ಮಾಡಿದ್ದಾರಂತೆ.. ಇದಕ್ಕೆ ಕಾರಣ ಕೇಳಿದ್ರೆ ಎಲ್ಲರಿಗೂ ನನ್ನ ಹೊಟ್ಟೇ ಮೇಲೆ ಕಣ್ಣು.. ಅದಕ್ಕೆ ಮುಂದಿನ ಸಿನೆಮಾ  ಅಷ್ಟರಲ್ಲಿ ನನ್ನ ಹೊಟ್ಟೆಯನ್ನು ಇಳಿಸ್ತೀನಿ ಅಂತ ಹೇಳಿದ್ದಾರೆ.. ಆದ್ರೆ ನಮಗೆ ಯಾಕೋ ಡೌಟ್ ಬರ್ತಿದೆ. ಯಾಕಂದ್ರೆ ಮಿಸ್ಟರ್ ಗರಗಸ, ಮರ್ಯಾದೆ ರಾಮಣ್ಣ, ಕಳ್ ಮಂಜ ಮೊದಲಾದ ಸಿನೆಮಾಗಳಲ್ಲಿ ನಾಯಕನಾಗಿ ನಟಿಸಿದಾಗ ಹೊಟ್ಟೆ ಇಳಿಸೋ ಪ್ಲಾನ್ ಮಾಡಲಿಲ್ಲ.. ಆದ್ರೆ ಗೋವಿಂದಾಯ ನಮಃ ಸಿನೆಮಾದ ನಂತರ ಈ ನಿರ್ಧಾರಕ್ಕೆ ಬಂದಿರೋದು ನೋಡಿದ್ರೆ ಕೋಮಲನಿಗೆ ಯಾರೋ ಕೋಮಲಾಂಗಿಯೇ ಹೊಟ್ಟೆ ಕರಗಿಸೋದಕ್ಕೆ ಹೇಳಿರಬೇಕು.. ಅಂತಿದ್ದಾರೆ ನಮ್ ಜನಗಳು.. ಬಹುಷಃ ಇದು ನಿಜ ಇದ್ರೂ ಇರಬಹುದಲ್ವಾ,.,?
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು