ಸಿನೆಮಾ

Share This Article To your Friends

ಉಪೇಂದ್ರ ಲೈಫು ಹುಟ್ಟಿನಿಂದ ಇಲ್ಲೀತನಕ.. ಇದು ಉಪ್ಪಿ ಲೈಫು ಹಿಸ್ಟರಿ
1.    ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಗುರ್ತಿಸಿಕೊಂಡು ವಾಸ್ತವ ಜಗತ್ತಿನ ಕ್ರೂರ ವರ್ತೆಯನ್ನು ಜನರಿಗೆ ತೋರಿಸಿದವರು ಉಪೇಂದ್ರ.. ಉಪೇಂದ್ರ ನಿರ್ದೇಶಕ ನೂ ಹೌದು ಅತ್ಯುತ್ತಮ ನಟನೂ ಹೌದು. ಈ ಮೊದಲು ಕಾಶಿನಾಥ್ ರವರೊಂದಿಗೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡ ಉಪೇಂದ್ರ ಅತ್ಯುತ್ತಮ ನಿದೇರ್ಶಕನಾಗಿ ಹೊರ ಹೊಮ್ಮಿದರು.. ಇವರು ನಿರ್ದೇಶನದ ಮೊದಲ ಚಿತ್ರ ತರ್ಲೆ ನನ್ ಮಗ.. ಇದ್ರಲ್ಲಿ ಜಗ್ಗೇಶ್ ನಾಯಕ ನಟರಾಗಿ ಅಭಿನಯಿಸಿದ್ರು. ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಅನ್ನೋ ಎರಡು ಸ್ಟಾರ್ ಗಿರಿಯನ್ನು ಸಂಪಾದಿಸಿದ ಭರವಸೆಯ ನಟ ಮತ್ತು ನಿರ್ದೇಕ ಈ ಉಪೇಂದ್ರ..

2.    5.9 ಅಡಿ ಎತ್ತರ ಇರುವಂಥ ಈ ಅಜಾನುಬಾಹು ಉಪೇಂದ್ರ ಹುಟ್ಟಿದ್ದು ಕುಂದಾಪುರದ ಕೋಟೇಶ್ವರ ಅನ್ನುವಂಥ ಪುಟ್ಟ ಗ್ರಾಮದಲ್ಲಿ ಸೆಪ್ಟೆಂಬರ್ 18, 1968 ರಲ್ಲಿ ಜನಿಸಿದ್ರು..   ಇವರ ತಂದೆ ಮಂಜುನಾಥ್ ರಾವ್ ಮತ್ತು ತಾಯಿ ಅನುಷ್ಯ.. ಕುಂದಾಪುರದ ಉಪೇಂದ್ರ  ರವರು  ಮದುವೆಯಾದದ್ದು ಮಾತ್ರ ಬೆಂಗಾಳಿ ಹುಡುಗಿ ಪ್ರಿಯಾಂಕ ತ್ರಿವೇದಿಯನ್ನು..  ಈಗ ಉಪೇಂದ್ರರವರಿಗೆ  ಸೂರ್ಯ ಎಂಬ ಒಂದು ಮುದ್ದದ ಗಂಡು ಮಗು ಇದೆ.. ಮತ್ತು ಐಶ್ವರ್ಯ ಅನ್ನೋ ಮುದ್ದು ಮಗಳಿದ್ದಾಳೆ.. ಇಬ್ಬರು ಮಕ್ಕಳನ್ನು ಹೊಂದಿರೋ ಚಿಕ್ಕ ಮತ್ತು ಚೊಕ್ಕ ಸಂಸಾರವಾಗಿದೆ.3.    ಉಪೇಂದ್ರ ಈ ಸಿನೆಮಾ ಜಗತ್ತಿನಲ್ಲಿ ತುಂಬಾ ವಿಭಿನ್ನವಾಗಿ ಗುರ್ತಿಸಿಕೊಂಡಿರುವ ನಟ, ನಿರ್ದೇಶಕ.. ಹೀಗಾಗಿ ಅವರ ಸಿನೆಮಾ  ಗಳಿಗೂ ಬಹಳಷ್ಟು ವಿಚಿತ್ರವಾದ ಹೆಸರುಗಳನ್ನು ಇಡ್ತಾ ಇದ್ರು..  “ಓಂ” ಸ್ವಸ್ತಿಕ್, A, H2O, ಸೂಪರ್” ಹೀಗೆ ಚಿಹ್ನೆಗಳನ್ನೇ ಸಿನೆಮಾ ಹೆಸರಾಗಿ ಇಟ್ಟು ಜನರನ್ನು ಆಕರ್ಶಿಸಿದ ಮೊದಲ ವಿಭಿನ್ನ ನಿದೇರ್ಶಕ .. ಆಗಾಗ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದ ಇವರು ಪೂರ್ಣ ಪ್ರಮಾಣದಲ್ಲಿ ನಟನಾಗಿ ಕಾಣಿಸಿಕೊಂಡಿದ್ದು A ಸಿನೆಮಾದ ಮೂಲಕ.. ಹೊಸ ತಂಡವನ್ನು ಕಟ್ಟಿಕೊಂಡು ಉಪೇಂದ್ರ ಈ ಸಿನೆಮಾದಲ್ಲಿ ನಟಿ ಚಾಂದಿನಿ, ಗಾಯಕ ಗುರು ಕಿರಣ್ ಸೇರಿದಂತೆ ಬಹಳಷ್ಟು ಜನ ಹೊಸಬರಿಗೆ ಅವಕಾಶ ನೀಡಿದ್ರು. ಹೊಸಬರ ತಂಡ ನಿಜಕ್ಕೂ ಹೊಸ ದಾಖಲೆಯನ್ನೇ ಮಾಡಿತ್ತು..

4.    A ಚಿತ್ರದ ನಂತರ ತಮ್ಮ ಹೆಸರನ್ನೇ ತಮ್ಮ  ಮುಂದಿನ ಸಿನೆಮಾಗೆ ಇಟ್ಟು ನಟಿಸಿ, ನಿದೇರ್ಶನ ಮಾಡಿದ್ರು.. ಅದೇ ಉಪೇಂದ್ರ ಸಿನೆಮಾ.. ಇದ್ರಲ್ಲಿ ಬಾಲಿವುಡ್ ನ ರವೀನಾ ಟಂಡನ್ ಸ್ಯಾಂಡಲ್ ವುಡ್ ನ ಪ್ರೇಮ, ಜೊತೆಗೆ ದಾಮಿನಿ ಅನ್ನೋ ಧಾರವಾಡದ ಹುಡುಗಿಯನ್ನು ಸಿನಿ ದುನಿಯಾಗೆ ಪರಿಚಯಿಸಿದ್ರು.. ಈ ಚಿತ್ರ ಬಹಳಷ್ಟು ಹೆಸರು ಮಾಡಿತ್ತು.. ಆದ್ರೆ ಪ್ರೇಮಾ ರವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಅನ್ನೋ ಆಪಾದನೆಗಳೂ ಕೇಳಿ ಬಂದವು.. ನಂತರ ಸೂಪರ್ ಸ್ಟಾರ್ ಚಿತ್ರದ ಮೂಲಕ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು..  ಈ ಚಿತ್ರದಲ್ಲಿನ ಉಪೇಂದ್ರ ರವರ ಎರಡೂ ಪಾತ್ರಗಳ ಅಭಿನಯ ನಿಜಕ್ಕೂ ಶ್ಲಾಘನೀಯ..5.    ರಜಿನಿಕಾಂತ್ ಅಭಿನಯದ ಎಂದಿರನ್ ಚಿತ್ರವು ಭಾರೀ ಯಶಸ್ಸುಗಳಿಸಿತು.. ಆದ್ರೆ ಇದಕ್ಕಿಂತ ಮೊದಲೇ ಇಂಥಾ ಪ್ರಯತ್ನಕ್ಕೆ ಕೈ ಹಾಕಿದವರು ಉಪೇಂದ್ರ ರವರು.. “ಹಾಲೀವುಡ್”  ಅನ್ನೋ ಸಿನೆಮಾ ರೋಬೋಟ್ ಕಥೆಯನ್ನೇ ಹೇಳುತ್ತದೆ.. ಹಾಸ್ಯಮಯವಾಗಿ ವೈಜ್ಞಾನಿಕ ಪ್ರಯೋಗ ಮಾಡಿ ಹಾಲೀವುಡ್ ಸಿನೆಮಾಗಳಂತೆ ಚಿತ್ರ ಮಾಡಿದ್ರು ಉಪೇಂದ್ರ..  ಉಪೇಂದ್ರ ತ್ರಿಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನೆಮಾ ಗೆ ನಿರ್ಮಾಪಕ ರಾಮು ರವರು 16 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ರು.. ವಿಪರ್ಯಾಸ ಅಂದ್ರೆ ಈ ಸಿನೆಮಾ ಕರ್ನಾಟಕದಲ್ಲಿ ಮಾಡಿಲ್ಲ. ಎಲ್ಲವೂ ವಿದೇಶದಲ್ಲೇ ಮಾಡಿದ್ದಾರೆ ಅಂತ ಅಪಸ್ವರ ಎತ್ತಿದ ಚಿತ್ರೋದ್ಯಮ ಚಿತ್ರ ಪ್ರದರ್ಶನವನ್ನು ರದ್ದು ಮಾಡುವ ನಿರ್ಧಾರಕ್ಕೆ ಬಂತು..6.    ಕಾವೇರಿ  ನದಿ ನೀರನ್ನು ಕರ್ನಾಟಕ ಮತ್ತು ತಮಿಳು ನಾಡಿನ ನಡುವೆ ಹಂಚುವ ವಿಷಯವಾಗಿ ಎರಡೂ ರಾಜ್ಯಗಳ ನಡುವೆ ಆಗಾಗ ವಿವಾದಗಳು ಆಗ್ತಾ ಇದ್ವು.. ಅದ್ರ ಇದೇ ವಿವಾದವನ್ನು ಕೇಂದ್ರವಾಗಿರಿಸಿಕೊಂಡು H2O ಸಿನೆಮಾ ಮಾಡಿದ್ರು. ಇಲ್ಲಿ H2 ಅಂದ್ರೆ ಎರಡು ರಾಜ್ಯಗಳು O ಒಂದು ಅಂದ್ರೆ ಒಂದೇ ನದಿ ಅಂತ ಅರ್ಥ.. ಹೀಗೆ  ಕಾವೇರಿ ಅನ್ನೋ ಹುಡುಗಿಗಗಿ ಇಬ್ಬರು ಪ್ರೇಮಿಗಳು ನಡೆಸುವ ಹೋರಾಟವೇ ಈ ಸಿನೆಮಾದ ತಿರುಳಾಗಿತ್ತು..  ಇದ್ರಲ್ಲಿ ಉಪ್ಪಿಗೆ ನಾಯಕಿಯಾಗಿ ಜೊತೆಯಾಗಿದ್ದು   ಸ್ವತಃ ಅವರ ಪತ್ನಿ ಪ್ರಿಯಾಂಕರವರೇ. ಆದ್ರೆ ಆಗ ಇನ್ನು ಮದುವೆ ಆಗಿರಲಿಲ್ಲ..7.    ಸಾಧು ಕೋಕಿಲಾ ನಿದೇರ್ಶನದ ರಕ್ತ ಕಣ್ಣೀರು ಸಿನೆಮಾ ಭಾರೀ ಯಶಸ್ಸನ್ನು ಗಳಿಸಿತು.. ರಕ್ತ ಕಣ್ಣೀರು ಚಿತ್ರದ “ಐ ಲೈಕ್ ಇಟ್ ಐ ಲೈಕ್ ಇಟ್” ಅನ್ನೋ ಡೈಲಾಗ್ ಎಲ್ಲರ ಬಾಯಲ್ಲಿ ಗುನುಗ್ತಾ ಇತ್ತು.. ಈ ಚಿತ್ರ ಅತ್ಯುತ್ತಮ ಕಥೆಯನ್ನು ಬಿತ್ತರಿಸಿತ್ತು.. ಕಾಂತಾಳ ಜೋಳಿಗೆಯನ್ನು ತುಂಬಿದ ಉಪೇಂದ್ರ ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿದ್ರು.. ಉಪೇಂದ್ರ ರವರ “ಬುದ್ದಿವಂತ” ಸಿನೆಮಾ ಕೂಡಾ ಇಂಥದ್ದೇ ವಿಭಿನ್ನವಾದ ಡೈಲಾಗ್ ನಿಂದ ಜನಪ್ರಿಯವಾದ ಸಿನೆಮಾ ಆಗಿದೆ. ಇದ್ರಲ್ಲಿ 5 ಜನ ನಾಯಕಿಯರಿದ್ದು  ಸುಮನಾ ರಂಗನಾಥ್ ರವರು ಬಹಳ ದಿನಗಳ ನಂತರ ಬುದ್ದಿವಂತಸಿನೆಮಾದ ಮೂಲಕ ಬಣ್ಣ ಹಚ್ಚಿದ್ರು. ಹಾಡುಗಳು ಮತ್ತು ಡೈಲಾಗ್ ಗಳು ಕೇಳುಗರಿಗೆ “ಚಿತ್ರಾನ್ನ” ಉಣಬಡಿಸಿದಂತಿತ್ತು..8.     ರಕ್ತ ಕಣ್ಣೀರು ಸಿನೆಮಾದಲ್ಲಿ ಡೈಲಾಗ್ ಗಳಿಂದಲೇ ಹೆಸರು ಮಾಡಿದ ನಟನಿಗೆ ಅದಕ್ಕೆ ತದ್ವಿರುದ್ಧವಾ ಪಾತ್ರ ಸಿಕ್ಕಿದ್ದು “ಅನಾಥರು” ಸಿನೆಮಾದಲ್ಲಿ..  ನೀವು ನಂಬ್ತೀರೋ ಬಿಡ್ತೀರೋ ಈ ಸಿನೆಮಾದಲ್ಲಿ ಉಪೇಂದ್ರ ಮಾತೇ ಆಡೋದಿಲ್ಲ..  ಮಾತಿಲ್ಲದೇ ಎಲ್ಲರನ್ನು ಮೆಚ್ಚಿಸಿದ ನಟ ಉಪೇಂದ್ರ..ಇದ್ರಲ್ಲಿ ನಟ ದರ್ಶನ್ ಕೂಡ ಉಪ್ಪಿಗೆ ಜೋಡಿಯಾಗಿದ್ರು. ನಟಿ ಮತ್ತು ನಿರ್ಮಾಪಕಿಯಾದ  ರಾಧಿಕಾ ಕುಮಾರ ಸ್ವಾಮಿಯವರು ದರ್ಶನ್ ರವರ ಜೋಡಿಯಾಗಿ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ.9.    ಕನ್ನಡ ಸಿನೆಮಾದಂತೆ ತೆಲುಗು ಸಿನೆಮಾದಲ್ಲೂ ಸಕ್ರಿಯವಾಗಿ ಕಾಣಿಸಿಕೊಂಡ ನಟ ಉಪೇಂದ್ರ.. ತೆಲುಗಿನಲ್ಲೂ  ರಾ ಒಕ್ಕೇ ಮಾಟ, ಅನ್ನೋ ಚಿತ್ರಗಳು  ಸೇರಿದಂತೆ ಬಹಳಷ್ಟು ಸಿನೆಮಾಗಳನ್ನು ಮಾಡಿದ್ದಾರೆ..  ತಮಿಳಿನ ಸತ್ಯಂ ಹೆಸರಿನ ಸಿನೆಮಾದಲ್ಲೂ ಕೂಡ ನಟಿಸಿದ್ದಾರೆ. ಅಷ್ಟೇ ಅಲ್ಲಾ  ಇಂದ್ರಜಿತ್ ಲಂಕೇಶ್ ನಿದೇರ್ಶನದ “ಐಶ್ವರ್ಯ” ಚಿತ್ರದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯೊಂದಿಗೆ ನಟಿಸಿದ್ರು. ಹೀಗೆ ಸಿನಿ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ದಕ್ಷಿಣ ಭಾರತದ ಅತ್ಯಮೂಲ್ಯ ನಟ ಉಪೇಂದ್ರ.10.   ಉಪೇಂದ್ರ ರವರ ಇತ್ತೀಚಿನ ಸೂಪರ್ ಹಿಟ್ ಚಿತ್ರ “ಸೂಪರ್” ಪ್ರಸ್ತುತ ರಾಜಕೀಯ ಹಗರಣವನ್ನು ಇಟ್ಟುಕೊಂಡು ಅದು ಇಲ್ಲದಿದ್ದರೆ ನಮ್ಮ ದೇಶ ಎಷ್ಟು ಸಮೃದ್ಧವಾಗಿರುತ್ತದೆ ಎಂದು ತೋರಿಸಿದ್ರು. ಈ ಸಿನೆಮಾ ಕಥೆಗಾಗಿ ಅತ್ಯುತ್ತಮ “ಕಥೆ” ವಿಭಾಗದಲ್ಲಿ  ರಾಜ್ಯ ಪ್ರಶಸ್ತಿಯನ್ನು ಗಳಿಸಿತು..  ಸಿನೆಮಾದ ಹೆಸರನ್ನು ಚಿಹ್ನೆಯ ಮೂಲಕ ತೋರಿಸಿದರು. ಮತ್ತು ಸಿನೆಮಾದ ಪಾತ್ರದಾರಿಗಳು ಮತ್ತಿತರೇ ಹೆಸರುಗಳನ್ನು ವಿಭಿನ್ನವಾಗಿ ಮಂಡಿಸಿದ ಉಪೇಂದ್ರ ಈ ಚಿತ್ರದ ನಟರೂ ಹೌದು ನಿದೇರ್ಶಕರೂ ಹೌದು.  ಈ ಹಿಂದೆ ಉಪೇಂದ್ರ ನಿದೇರ್ಶನದ ಓಂ, ಶ್ ಸಿನೆಮಾ ಗಳು ಕೂಡಾ ಭಾರೀ ಯಶಸ್ಸನ್ನು ತಂದು ಕೊಟ್ಟಿತ್ತು.. ಓಂ ಸಿನೆಮಾ ಕಥೆಗಾಗಿ ಫಿಲಂಪೇರ್ ಪ್ರಶಸ್ತಿಯನ್ನು ಮತ್ತು ರಾಜ್ಯ ಚಲನಚಿತ್ರ ಅಕಾಡೆಮಿಯ ಅತ್ಯುತ್ತಮ ನಿದೇರ್ಶಕರು ಅನ್ನೋ ಪ್ರಶಸ್ತಿಯನ್ನು ಬಾಚಿಕೊಂಡ್ರು ಉಪೇಂದ್ರ.

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು