ಸಿನೆಮಾ

Share This Article To your Friends

ಬಟ್ಟೆ ಕದ್ದುಕೊಂಡು ಹೋದಳಂತೆ “ನಿಂಬೇ ಹುಳಿ” ಸಿನೆಮಾ ಹೀರೋಹಿನ್


ಬಟ್ಟೆ ಕದ್ದುಕೊಂಡು ಹೋದಳಂತೆ “ನಿಂಬೇ ಹುಳಿ” ಸಿನೆಮಾ ಹೀರೋಹಿನ್

 ಕನ್ನಡದಲ್ಲಿ ನಿಂಬೇ ಹುಳಿ ಅನ್ನೋ ಚಿತ್ರ ಚಿತ್ರೀಕರಣ ಹಂತದಲ್ಲಿದೆ. ಇದ್ರಲ್ಲಿ ಮೂವರು ನಾಯಕಿಯರಿದ್ದಾರೆ. ಅದ್ರಲ್ಲಿನ ಮುಂಬೈ ನಟಿ ಕೋಮಲ್ ಝಾ ಚಿತ್ರೀಕರಣದ ಬಟ್ಟೆಗಳನ್ನು ಹಾಗೆ ಎಗರಿಸಿಕೊಂಡು ಬಾಂಬೆ ಗೆ ಹೋಗಿದ್ದಾರಂತೆ.. ಹೀಗೆ ಹೇಳಿದ್ದು ಸ್ವತಃ ನಿಂಬೆ ಹುಳಿ ಚಿತ್ರದ ನಿದೇರ್ಶಕ ಕಂ  ನಾಯಕ ಹೇಮಂತ್ ಹೆಗ್ಡೆ.. ಸಿನೆಮಾ ಚಿತ್ರೀಕರಣದ ಸಮಯದಲ್ಲಿ ಕೋಮಲ್ ಝಾ ಗೆ ಬರೀ ಹಳೇ ಬಟ್ಟೆಗಳನ್ನೇ ಹಾಕಿಸ್ತಾ ಇದ್ರಂತೆ ನಿದೇರ್ಶಕರು.. ಅದಕ್ಕೆ ಮುಂಬೈ ಬೆಡಗಿಗೆ ಕೋಪ ಬಂತಂತೆ.. ಅದಕ್ಕಾಗಿ ನಿಮ್ ಸಹವಾಸಾನೆ ಬೇಡ ಅಂತ ಅದೇ ಸಿನೆಮಾ ಡ್ರೆಸ್ ನಲ್ಲಿ ಮುಂಬೈಗೆ ಹೋದ್ರಂತೆ ಕೋಮಲಮ್ಮ.. ಇದ್ಯಾಕ್ರೀ ಹಿಂಗಾಯ್ತು ನಿಮ್ಮ ಸಿಮ್ಮ ಸಿನೆಮಾದಲ್ಲಿ ಅಂತ ನಿದೇರ್ಶಕರನ್ನು ಕೇಳಿದ್ರೆ ಅವರು ಹೇಳಿದ್ದೇನು ಗೊತ್ತಾ..? ಅದೆಲ್ಲಾ ಸುಳ್ಳು ಸ್ವಾಮಿ..“ ಅವಳು ಹಾಕಿಕೊಂಡಿದ್ದು  12 ಸಾವಿರ ರೂಪಾಯಿಗಳ ಡ್ರೆಸ್.. ಕೊಳೆ  ಬಟ್ಟೆಗಳಲ್ಲ.. ಅದು ಕೊಳೆ ಬಟ್ಟೆ ಆಗಿದ್ರೆ ಆಯಮ್ಮ ಇಲ್ಲೆ ಅದನ್ನು ಬಿಸಾಕಿ ಹೋಗಬುದಿತ್ತಲ್ವಾ..? ಅದನ್ನು ಹಾಕಿಕೊಂಡು ಬಾಂಬೆ ವರೆಗೂ ಯಾಕ್ ಹೋದಳು ಅಂತ ಲಾ ಪಾಯಿಂಟ್ ಹಾಕಿದ್ರು. ಹೋಗೋಳು ಹೋದಳು ನಮ್ ಕಾಸ್ಟೂಮ್ ಹೊಡ್ಕೊಂಡು ಹೋದಳು.. ಈಗ ಮತ್ತೆ ಅದೇ ಕಾಸ್ಟೂಮ್ ಮಾಡಬೇಕಲ್ವಾ ಅಂತ ನಿರ್ದೇಕರು ತಲೆ ಕೆಡಿಸಿಕೊಂಡಿದ್ದಾರೆ.. ಅದೇನೋ ಅಂತಾರಲ್ವಾ.. ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮತ್ಯಾರಿಗೋ ಮತ್ತೇನೋ ಚಿಂತೆ ಅಂತ.. ಹಾಗೇ ಡೈರೆಕ್ಟರಿಗೆ ಅರಿವೆ ಚಿಂತೆ.. ಹೀರೋಯಿನ್ ಗೆ ಇನ್ನೇನೋ ಚಿಂತೆ.. ಪಾಪ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು