ಸಿನೆಮಾ

Share This Article To your Friends

ದುನಿಯಾ ಗೆದ್ದವ- ಇದು ವಿಜಯ್ ಸಿನಿ ದುನಿಯಾ ಇತಿಹಾಸ


1.    ದುನಿಯಾ ವಿಜಯ್ ಬಹಳಷ್ಟು ಕಷ್ಟ ಪಟ್ಟು ಚಿತ್ರ ರಂಗಕ್ಕೆ  ಎಂಟ್ರಿ ಕೊಟ್ರು.. ಆದ್ರೀಗ ವಿಜಯ್ ಕನ್ನಡದ ಆಕ್ಷನ್ ಕಿಂಗ್ ಆಗಿದ್ದಾರೆ.. ಇತ್ತೀಚೆಗಷ್ಟೇ ದುನಿಯಾ ವಿಜಯ್ ಅಭಿನಯದಭೀಮಾ ತೀರದಲಿಅನ್ನೋ ಸಿನೆಮಾ ರಿಲೀಸ್ ಆಯ್ತು.. ಆದ್ರೆ ಇದು ಬಹಳಷ್ಟು ವಿವಾದವನ್ನು ಎಬ್ಬಿಸಿತ್ತು,.. ಯಾಕಂದ್ರೆ ಸತ್ತ ವ್ಯಕ್ತಿಯ ಹೆಸರಲ್ಲಿ ಸಿನೆಮಾ ಮಾಡಿ ಹಣ ಮಾಡ್ತಾರೆ.. ಆದ್ರೆ ಕುಟುಂಬಕ್ಕೆ ಸಹಾಯ ಮಾಡೋದಿಲ್ಲ ಅಂತ  ಚಂದಪ್ಪ ಕುಟುಂಬದವರೊಂದಿಗೆ ಖ್ಯಾತ ಪತ್ರ ಕರ್ತ ರವಿ ಬೆಳಗೆರೆ ಕಠುವಾಗಿ  ವಿರೋಧಿಸಿದ್ರು.

2.     ದುನಿಯಾ ವಿಜಯ್ ಕನ್ನಡ ಸಿನಿ ರಂಗಕ್ಕೆ ಬಂದಿದ್ದು ಸಹ ನಟನಾಗಿ.. ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲಿ ಸಹ ನಟನಾಗಿ  ಎಂಟ್ರಿ ಕೊಟ್ರು…. ಶ್ರೀ ,  ರಂಗ SSLC  ಹೀಗೆ ಹಲವಾರು ಚಿತ್ರಗಳಲ್ಲಿ ಅಹ ನಟರಾಗಿ ಚಿತ್ರ ರಂಗದಲ್ಲಿ   ಕಾಣಿಸಿ ಕೊಂಡ್ರು.. ಕನ್ನಡ ಚಿತ್ರ ರಂಗದಲ್ಲಿ ಏನಾದ್ರೂ ಸಾಧಿಸಬೇಕು ಅಂತ  ಹಟ ತೊಟ್ಟು ರು.. ಇದಕ್ಕೆ ಮನೆಯವರೆಲ್ಲರೂ ವಿರೋಧಿಸಿದ್ರು. ಸಿನೆಮಾ ಅಂತ ಅಲಿಯೋದು ಬಿಟ್ಟು ಯಾವುದೋ ಒಂದು ಕೆಲಸ ನೋಡಿಕೋ ಅಂತ ಮನೆಯವರೆಲ್ಲಾ  ಬಯ್ದರು.. ಮನೆಯವರ ವಿರೋಧ  ಕಟ್ಟಿ ಕೊಂಡು ಸಿನಿರಂಗಕ್ಕೆ ಬಂದು ಸಾಧನೆ ಮಾಡಿದ ಸಾಧಕ ದುನಿಯಾ ವಿಜಯ್ .

3.    ಸಿನೆಮಾದಲ್ಲಿ  ಹೀರೋ ಆಗಬೇಕು ಅಂದ್ರೆ ಹೀಗೇ ಇರಬೇಕು ಅನ್ನೋ ಮಾತುಗಳಿದ್ದವು.. ಆದ್ರೆ  ಟ್ಯಾಲೆಂಟು ಮತ್ತು ಸಾಧಿದೋ ಛಲ ಇದ್ರೆ ನಾಯನಾಗಬಹುದು ಅನ್ನೋ ಮಾತನ್ನು ದುನಿಯಾ ವಿಜಯ್ ಸಾಧಿಸಿ ತೋರೊಸಿದ್ರು.. ದುನಿಯಾ ವಿಜಯ್ ಹುಟ್ಟಿದ್ದು ಜನವರಿ 2, 1974 ರಲ್ಲಿ..     ಪ್ರಸ್ತುತವಾಗಿ ದುನಿಯಾ ವಿಜಯ್ ಗೆ ಮದುವೆಯಾಗಿ ಮೂರು ಹೆಣ್ಣುಮಕ್ಕಳಿಗೆ ತಂದೆಯಾಗಿದ್ದಾರೆ..   ಸ್ಯಾಂಡಲ್ ವುಡ್ ಖ್ಯಾತ ನಟ  ಯೋಗೀಷ್ ರವರು ದುನಿಯಾ ವಿಜಯ್ ರವರ ಸಂಬಂಧಿಯಾಗಬೇಕು..4.    ದುನಿಯಾ ವಿಜಯ್  ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ಚಿತ್ರದುನಿಯಾ..” ಇದು ವಿಜಯ್ ರವರಿಗೆ ಹಿಟ್ ನೀಡದಿದ್ರೆ ವಿಜಯ್ ಪರಿಸ್ಥಿತಿ ಅತ್ಯಂತ ಅದೋಗತಿಗೆ ಹೋಗ್ತಾ ಇತ್ತು.. ಯಾಕಂದ್ರೆ ಮನೆಯವರೆಲ್ಲರ ವಿರೋಧವನ್ನು ಕಟ್ಟಿಕೊಂಡು ಬಂದಿದ್ದ ವಿಜಯ್ ಗೆ ದುನಿಯಾ ಚಿತ್ರ ಒಂಧೇ ಭರವಸೆಯ ಆಧಾರವಾಗಿತ್ತು..  ಆದ್ರೆ ವಿಜಯ್ ಗೆ ದುನಿಯಾ ಕೈಕೊಡಲಿಲ್ಲವಿಜಯ್ ರವರ ದುನಿಯಾವನ್ನೇ ಬದಲಾಯಿಸಿತು..    ಇನ್ನೊಂದು ಅಚ್ಚರಿ ಅಂದ್ರೆ ದುನಿಯಾ ಸಿನೆಮಾದಲ್ಲಿ ಮೊಟ್ಟ ಮೊದಲ ಬಾರಿಗೆ ವಿಜಯ್ ಮತ್ತು ಲೂಸ್ ಮಾದ ಯೋಗೀಶ್ ಒಂದೇ ಸಿನೆಮಾದಲ್ಲಿ ಅದೂ ಆರಂಭದಲ್ಲಿ ನಟಿಸಿರೋದು ನಿಜಕ್ಕೂ ಅದೃಷ್ಟವೇ ಸರಿ..5.    ಮೊದಲ ಚಿತ್ರದಲ್ಲೇ ಅತಿ ಹೆಚ್ಚು ಪ್ರಶಸ್ತಿಯನ್ನು ಗಳಿಸಿದ ಚಿತ್ರ ಅಂದ್ರೆ ಅದು ದುನಿಯಾ ಸಿನೆಮಾಅತ್ಯುತ್ತಮ ನಟ  ಪ್ರಶಸ್ತಿಗೆ ವಿಜಯ್ ಪ್ರಥಮ ಚಿತ್ರದಲ್ಲೇ  ಪ್ರಶಸ್ತಿಯನ್ನು ಪಡೆದರು.   ಚಿತ್ರದಲ್ಲಿ  ವಿಜಯ್ ಗೆ ಜೋಡಿಯಾಗಿದ್ದು ರಷ್ಮೀ.. ನಿರ್ದೇಶನ ಮಾಡಿದ್ದು ಸೂರಿ.. 2006 ರಲ್ಲಿ ಬಿಡುಗಡೆಯಾದ ಚಿತ್ರ ಸಂಪೂರ್ಣವಾಗಿ ಹೊಸಬರಿಂದ ಆಗಿರುವ ಚಿತ್ರವಾಗಿದ್ದು  ಅತ್ಯುತ್ತಮ ಗೀತೆ, ಅತ್ಯುತ್ತಮ ಸಂಗೀತ, ಅತ್ಯುತ್ತಮ ನಿರ್ದೇಶನ, ಕಥೇ, ಹೀಗೆ ಬಹಳಷ್ಟು  ಪ್ರಶಸ್ತಿಯನ್ನು ಗೆದ್ದು ದಾಖಲೆ ಮಾಡಿತ್ತು.. ಇದು ವಿಜಿ ಮತ್ತು ಎಲ್ಲಾ ಹೊಸಬರ ಜೀವನವನ್ನೇ ಬದಲಿಸಿತ್ತು.. ಧುನಿಯಾ  300 ದಿನಗಳ ಕಾಲ ಭರ್ಜರಿಯಾಗಿ ಪ್ರದರ್ಶಿತವಾಯ್ತು.. ತಮಿಳಿನ ಖ್ಯಾತ ನಟ ಸ್ಟೈಲ್ ಕಿಂಗ್ ಸೂಪರ ಸ್ಟಾರ ರಜಿನಿಕಾಂತ್ ದುನಿಯಾ ಚಿತ್ರವನ್ನು ನೋಡಿ ವಿಜಯ್ ರವರ ಸಾಹಸಕ್ಕೆ, ಮತ್ತು ಅವರ ಅಭಿನಯಕ್ಕೆ  ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ರು.

6.    ದುನಿಯಾ ಚಿತ್ರದ ನಂತರ ವಿಜಯ್ ಅಭಿನಯದ ಎರಡನೆಯ ಚಿತ್ರ ಯುಗ   ..  ನಂತರ ಚಂಡ,  ಸ್ಲಂಬಾಲ ಗಳಂತಹ ಸಾಲು ಸಾಲಾಗಿ  ಚಿತ್ರಗಳ ಆಫರ ಗಳು ಬಂದವು..   ಸ್ಲಂಬಾಲ ಚಿತ್ರ ದಲ್ಲಿ ನಟಿಸಿದ್ದ ನಾಯಕಿ ಶುಭಾ ಪೂಂಜಾ ಅದ್ಯಾಕೋ ವಿಜಯ್ ಗೆ ತುಂಬಾ ಹತ್ರ ಆಗಿ ಹೋದ್ರು..  ತದ ನಂತರ ಒಮ್ಮೆ ದುನಿಯಾ ವಿಜಯ್ ಮತ್ತು ಶುಭಾ ಪೂಂಜಾ ಇಬ್ರು ದೇವಸ್ತಾನವೊಂದರ ಪೂಜೆಯಲ್ಲಿ ಭಾಗವಹಿಸಿ ಹೋಮ ನಡೆಸಿದ್ದು ಬಯಲಿಗೆ ಬಂದಿತ್ತು.. ಇದರಿಂದ ಶುಭಾ ಮತ್ತು ವಿಜಿ ನಡುವೆ ಏನೇನೋ ಇದೆ ಅನ್ನೋ ಸುದ್ದಿಗಳು ಕೇಳಿ ಬಂದಿದ್ವು..7.    ಶುಭಾ ಪೂಂಜಾ ಮತ್ತು ದುನಿಯಾ ವಿಜಯ್ ಇಬ್ರೂ ಜೊತೆಯಲ್ಲಿ ಇದ್ದ ದೃಷ್ಯವನ್ನು ವರದಿ ಮಾಡಲು ಹೋ\ ಮಾಧ್ಯಮ ಪ್ರತಿನಿಧಿಗಳ  ಮೇಲೆ ವಿಜಯ್ ಹಲ್ಲೆ ನಡೆಸಿದ್ರು.. ಇದ್ರಿಂದ ವಿಜಯ್ ಮಾಧ್ಯಮ ಪ್ರತಿನಿಧಿಗಳ ಕೆಂಗಣ್ಣಿಗೂ ಗುರಿಯಾದ್ರು..  ಪ್ರಕರಣ ಪೋಲೀಸ್ ಮೆಟ್ಟಿಲೇರಿತು.. ನಂತರ ದುನಿಯಾ ವಿಜಯ್ ಸಾರ್ವಜನಿಕವಾಗಿ ಮಾಧ್ಯಮ ಮಿತ್ರರಿಗೆ ಕ್ಷಮೆ ಕೇಳಿದ್ರು.. ಮೂಲಕ  ವಿವಾದ ಅಂತ್ಯವಾಯಿತು..

8.    ವಿಜಯ್ ನಟನಾಗಿ ಕ್ಲಿಕ್ ಆಗುತ್ತಿರುವಂತೆಯೇ ಎಸ್ ನಾರಾಯಣ್ ವಿಜಯ್ ಜೊತೆ ಚಂಡ ಅನ್ನೋ ಸಿನೆಮಾವನ್ನು ಮಾಡಿದ್ರು.. ಆದ್ರೆ ಸಿನೆಮಾ ಮುಕ್ತಾಯದ ಹಂತದವರೆಗೆ ಬಂದಿತ್ತು.. ಡಬ್ಬಿಂಗ್ ಸಮಯದವರೆಗೆ ನಾಯಕ್ ಮತ್ತು ನಿದೇರ್ಶಕರ ಸಂಬಂಧ ಚೆನ್ನಾಗೇ ಇತ್ತು.. ಆದ್ರೆ ನಂತರ ಹಣ ನೀಡಲಿಲ್ಲ ಅಂತ ವಿಜಯ್ ಡಬ್ಬಿಂಗ್ ಗೆ ಹೋಗಲೇ ಇಲ್ಲ.. ಅಷ್ಟೇ ಅಲ್ಲಾ ಕೆಲ ಪುಂಡರು ಎಸ್ ನಾರಾಯಣ್ ರವರ ಮನೆ ಮೇಲೆ ಧಾಳಿ ನಡೆಸಿ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಪುಡಿ ಪುಡಿ ಮಾಡಿದ್ರು.. ಏನಿದೆಲ್ಲ ಅಂತ ಎಸ್ ನಾರಾಯಣ್ ರವರನ್ನು ಕೇಳಿದ್ರೆ ಇದು ವಿಜಯ್ ಜೊತೆಗಿರುವ ಗೂಂಡಾಗಳು ಮಾಡಿರೋ ಕಿತಾಪತಿ ಅಂತ ಹೇಳಿದ್ರು.. ನಂತರ ವಿಜಯ್ ಮತ್ತು ಎಸ್ ನಾರಾಯಣ್ ನಡುವೆ ಫಿಲಂ ಚೇಂಬರ ಗಣ್ಯರು ಸಂಧಾನ ನಡೆಸಿದ್ರು.. ನಂತರ ಸಿನೆಮಾ ಬಿಡುಗಡೆಯಾಯ್ತು..9.    ದುನಿಯಾ ವಿಜಯ್ ರವರನ್ನುಸ್ಯಾಂಡಲ್ ವುಡ್ ರಜಿನಿಕಾಂತ್ಅಂತಲೇ  ಕರೀತಾರೆ.. ಖ್ಯಾತವಾಗಿರೋ ಕನ್ನಡದ ವಿಜಯ್ ರವರ ದುನಿಯಾ ಸಿನೆಮಾ ನಿರ್ಮಾಣಕ್ಕೆ ಖರ್ಚಾಗಿರೋದು ಕೇವಲ 80 ಲಕ್ಷ ರೂಪಾಯಿಗಳು.. ಆದ್ರೆ ಸಿನೆಮಾ ಬಾಚಿಕೊಂಡ ಹಣ ಎಷ್ಟು ಗೊತ್ತಾ..? ಬರೋಬ್ಬರಿ 12 ಕೋಟಿ ರೂಪಾಯಿಗಳು.. ಜಂಗ್ಲೀ , ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್  ಜರಾಸಂಧಾ, ಚಿತ್ರಗಳ ಮೂಲಕ ದುನಿಯಾ ವಿಜಯ್ ತಮ್ಮ ದೇಹವನ್ನು ಬಾಲಿವುಡ್ ಸ್ಟಾರ  ಸಲ್ಲೂಮಿಯಾ ಥರ ಎಕ್ಸ್ ಪೋಸ್ ಮಾಡಿದ್ದಾರೆ.. ಅಷ್ಟೇ ಅಲ್ಲಾ ಸಿಕ್ಸ್ ಪ್ಯಾಕ್ ಅನ್ನು ಕೂಡಾ ತಂದು ಕೊಂಡು ತಮ್ಮ ಇಮೇಜನ್ನು ಹೆಚ್ಚಿಸಿಕೊಂಡಿದ್ದಾರೆ. ಈಗ ಭೀಮಾ ತೀರದಲ್ಲಿ ಅನ್ನೋ ವಿವಾದಾತ್ಮಕ ಸಿನೆಮಾ ಬಿಡುಗಡೆಯಾಗಿದ್ದು ವಿಜಿ ಅಭಿಮಾನಿಗಳು ಅದನ್ನು ನೋಡಿ ಖುಷಿ ಪಡ್ತಾ ಇದ್ದಾರೆ..10.  ಅವ್ವ, ಕರಿ ಚಿರತೆ, ದೇವ್ರು , ತಾಕತ್ ಶಂಕರ IPS, ಕಂಠೀರವ, ಗಳಂತಹ ಸಾಲು ಸಾಲು ಸಿನೆಮಾಗಳನ್ನು ಮಾಡಿದ ದುನಿಯಾ ವಿಜಯ್ ಗೆ ಸಿನೆಮಾಗಳು ಕೈ ಹಿಡಿಯಲಿಲ್ಲ.. ಆದ್ರೆ ಮಧ್ಯೆ ಮತ್ತೆ ದುನಿಯಾ  ಚಿತ್ರ ತಂಡ ಮತ್ತೆ ಒಂದಾಗಿತ್ತು.. ಸೂರಿ ಮತ್ತು ವಿಜಯ್ ಜೊತೆಗೂಡಿ ಜಂಗ್ಲೀ ಅನ್ನೋ ಸಿನೆಮಾವನ್ನು ಮಾಡಿದ್ರು.. ಜಂಗ್ಲಿಯ ಹಳೆ ಪಾತ್ರ ಹಾಡು  ಎಲ್ಲರನ್ನೂ ಮೋಡಿ ಮಾಡಿತ್ತು.. ನಾಯಕಿ ಐಂದ್ರತಾ ರೈ ರವರ ಸೆಕ್ಸಿ ಕುಣಿತಕ್ಕೆ ಜನರೆಲ್ಲಾ ಫಿದಾ ಆಗಿ ಬಿಟ್ಟಿದ್ರು..  ಜಂಗ್ಲೀ ಚಿತ್ರದ ಕಾಮಿಡಿ ಡೈಲಾಗ್ಸ್ ಗಳು ಪ್ರೇಕ್ಷರಿಗೆ ತುಂಬಾನೇ ಇಷ್ಟವಾಗಿತ್ತು.. ಜಂಗ್ಲಿ  ವಿಜಯ್ ಗೆ ಮತ್ತೊಮ್ಮೆ ಬ್ರೇಕ್ ನೀಡಿತ್ತು.

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು