ಸಿನೆಮಾ

Share This Article To your Friends

ರವಿಮಾಮನ ದಶಮುಖ


Film-Dashamukha

ಕನಸುಗಾರನ ಬಹು ನಿರೀಕ್ಷಿತ ಚಿತ್ರ“ದಶಮುಖ“ ತೆರೆ ಈ ವಾರ ತೆರೆಗೆ ಬಂದಿದೆ. ಈ ದಶಮುಖ ಚಿತ್ರವನ್ನು ನಿರ್ಮಾಣ ಮಾಡಿರೋದು ಎಂ.ಬಿ.ಬಾಬು ಮತ್ತು ನಿರ್ದೇಶನ ಮಾಡಿರೋದು “ಡೆಡ್ಲೀ ಸೋಮ ಮತ್ತು ಮಾದೇಶ” ಅನ್ನೋ ಎರಡು ಹಿಟ್ ಚಿತ್ರಗಳನ್ನು ನೀಡಿದ ರವಿ ಶ್ರೀವತ್ಸ.. ಮತ್ತು  ಸಂಗೀತದ ಹೊಣೆ ಹೊತ್ತಿರೋದು ವಿ.ಶ್ರೀಧರ‍್ ಸಂಭ್ರಮ್ (Song-1) ಕ್ರೇಜೀಸ್ಟಾರ‍್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರೋ ಈ ದಶಮುಖದಲ್ಲಿ ಖ್ಯಾತ ನಟ , ಅನಂತ್‍ನಾಗ್ ,  ಕಿರುತೆರೆ ಕಲಾವಿದೆಯಾದ ಮಾಳವಿಕಾ, ಅವಿನಾಶ್ , ದತ್ತಣ್ಣ , ಸತೀಶ್ , ರವಿಕಾಳೆ , ಅಚ್ಯುತ್‍ಕುಮಾರ್  ರವರು  ಇದ್ದಾರೆ,.. (Song-2) ಅಷ್ಟೇ ಅಲ್ಲಾ.. “ಆದಿನಗಳು” ಸಿನೆಮಾದಿಂದ  ಖ್ಯಾತಿಯಾದ “ಚೇತನ್ “ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹು ತಾರಾಗಣ ಇರುವ ದಶಮುಖನ ಮತ್ತೊಂದು ವಿಶೇಷ ಅಂದ್ರೆ  ಡೈನಾಮಿಕ್ ಸ್ಟಾರ‍್ ದೇವರಾಜ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ..  ಮತ್ತು ಇಷ್ಟು ದಿನ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಸರಿತಾ ಈ ಚಿತ್ರದ ಮೂಲಕ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.. (song-3)

1957 ರಲ್ಲಿ ಬಂದ ಹಾಲಿವುಡ್ ನ “12 ಆಂಗ್ರೀ ಎಂಗ್ ಮ್ಯಾನ್”ಸಿನೆಮಾವನ್ನು   ನೇರವಾಗಿ ಭಟ್ಟಿ ಇಳಿಸಲಾಗಿದೆ ಅಂತಾರೆ ನೋಡಿದ ಜನರು.. ಇದೊಂದು ನ್ಯಾಯ ಅನ್ಯಾಯಗಳ ನಡುವಿನ ಸಂಶೋಧನೆಯಾಗಿದೆ..(Song-4)  ಹತ್ತು ಜನರ ಮಧ್ಯೆ ನಡೆಯುವ ಈ ರಹಸ್ಯ ನ್ಯಾಯ ಅನ್ಯಾಯಗಳಲ್ಲಿ ಕೇಂದ್ರ ಬಿಂದು “ಚೇತನ್” ಇವರ ಸುತ್ತಮುತ್ತಲೇ ಈ ಸಿನೆಮಾ ಸುತ್ತಾಡುತ್ತಂತೆ..(Song-5)

ಒಟ್ನಲ್ಲಿ ಈ ದಶ ಮುಖ ಈವಾರ ತೆರೆಗೆ ಬಂದಿದ್ದು ಜನರು ಥಿಯೆಟರ‍್ ಗಳಿಗೆ ನಿಧಾನವಾಗಿ ಬರ್ತಿದ್ದಾರೆ.. ದಶಮುಖನ ದಶಾವತಾರ ಜನರಿಗೆ ಹಿಡಿಸುತ್ತಾ ಅನ್ನೋದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು