ಸಿನೆಮಾ

Share This Article To your Friends

ಭೀಮಾ ತೀರದಲಿ..ನಡೆದಿದ್ದೇನು..? ವಾರ ಕನ್ನಡದಲ್ಲಿ ಎರಡು ಸಿನೆಮಾಗಳು ತೆರೆಗೆ  ಬಂದಿವೆ.. . ಸ್ಟಾರ ಡೈರೆಕ್ಟರ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಾಸ್ಯಮಯ ಚಿತ್ರ ದೇವ್ ಸನ್ ಆಫ್ ಮುದ್ದೇ ಗೌಡಾ ಮತ್ತು ಇದರ ಜೊತೆಯಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ ಭೀಮಾತೀರದ ವ್ಯಾಘ್ರ ಚಂದಪ್ಪನ ಕಥೆ.…  ಮತ್ತು   ದುನಿಯಾ ವಿಜಯ್ ಅಭಿನಯದ ಭೀಮಾ ತೀರದಲಿಬಿಡುಗಡೆಯ ನಂತರ ಚಿತ್ರದಲ್ಲಿ ವಾಸ್ತವತೆಯನ್ನು ತಿರುಚಲಾಗಿದೆ ಅನ್ನೋ ಆರೋಪದಿಂದ  ವಿವಾದಕ್ಕೆ ಈಡಾಗಿದೆ.. ಅಷ್ಟೇ ಅಲ್ಲಾನಾನು ಬರೆದ ಪುಸ್ತಕದಿಂದ ಕದ್ದು ಸಿನೆಮಾ ಮಾಡಲಾಗಿದೆಅಂತ ರವಿ ಬೆಳಗೆರೆ ವಾಗ್ವಾದಕ್ಕಿಳಿದಿದ್ದಾರೆ 
            ಚಿತ್ರದಲ್ಲಿ ಪ್ರಜ್ವಲ್ ಭೂಪಯ್ಯಾ, ದೊಡ್ಡಣ್ಣ, ಉಮಾಶ್ರೀ, ಶೋಭರಾಜ್ ಮೊದಲಾದ ಗಣ್ಯಾತಿ ಗಣ್ಯರೇ ಅಭಿನಯಿಸಿದ್ದಾರೆ. ಇದನ್ನು ನಿರ್ದೇಶಿಸಿರೋದು   ಖ್ಯಾತ ನಿದೇರ್ಶಕ ಓಂ ಪ್ರಕಾಶ್ ರಾವ್.. ಮತ್ತು  ನಿರ್ಮಾಣ ಮಾಡಿರೋರು  ನಿಮಾರ್ಪಕ ಅಣಜಿ ನಾಗರಾಜ್ ಅಷ್ಟೇ ಅಲ್ಲಾ ಸ್ವತಃ ಅಣಜಿ ನಾಗರಾಜ್ ಚಿತ್ರದ ಛಾಯಾಗ್ರಾಹಕರೂ ಕೂಡಾ ಹೌದು..  ಇದ್ರಲ್ಲಿ  ಸುಮಧುರ ಸಂಗೀತವಿದ್ದು   ಕೇಳುಗರನ್ನ ಆಕರ್ಶಿಸುತ್ತಿದೆ. ಅಭಿಮನ್ ರಾಯ್ ಸಂಗೀತದ ಹೊಣೆ ಹೊತ್ತು ಕೊಂಡಿದ್ದಾರೆ.. ಸಂಭಾಷಣೆ ಎಂ.ಎಸ್.ರಮೇಶ್  ಮತ್ತು ಸಂಕಲನ ಎಸ್. ಮನೋಹರ್  ರವರದ್ದು... (Song-3) ಭೀಮಾ ತೀರದಲಿ ಅನ್ನೋ ಶೀರ್ಷಿಕೆಯ ಕೆಳಗೆಚಂದಪ್ಪ ಎಂಬ ವ್ಯಾಘ್ರಅಂತ ಅಡಿ ಟಿಪ್ಪಣಿ ಇದೆ..  ಇದರ ಅರ್ಥ ಚಿತ್ರವು ಭೀಮಾ ತೀರದ ಒಬ್ಬ ಹಂತಕನ ಜೀವನ ಚರಿತರೆಯನ್ನು ಆಧರಿಸಿದೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ ..
ಕರಿ ಚಿರತೆ ವಿಜಯ್ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇದೊಂದು ಪಕ್ಕಾ  ಆಕ್ಷನ್ ಥ್ರಿಲ್ಲರ ಮೂವಿ ಆಗಿದೆ.. (Song-4)   ಚಿತ್ರಕ್ಕಾಗಿ ವಿಜಯ್  ಉತ್ತರ ಕರ್ನಾಟಕದ ಭಾಷೆಯನ್ನೂ ಕಲಿತಿದ್ದಾರೆ,… ಚಂದಪ್ಪ ತನ್ನ 34 ನೆಯ ವಯಸ್ಸಿನಲ್ಲಿ ಅಪರಾಧ ಚಟುವಟಿಕೆಯಲ್ಲಿ  ಭಾಗಿಯಾಗಿ  ಒಂದು ದಿನ ಎನ್ಕೌಂಟರ‍್  ಆಗ್ತಾನೆ.. ಆದ್ರೆ ಅವನು ನಿಜವಾಗಲು ತಪ್ಪು ಮಾಡಿದ್ದಾನಾ.? ಭೀಮಾ ತೀರದಲ್ಲಿ ಏನು ನಡೆದಿದೆ..? ಅನ್ನುವಂಥ ಎಲ್ಲಾ ವಿಷಯಗಳ ಮೇಲೆ ಸಿನೆಮ ಬೆಳಕು ಚೆಲ್ಲುತ್ತೆ.. ಅಷ್ಟೇ ಅಲ್ಲ ಭೀಮಾತೀರದಲಿ ಸಿನೆಮಾದ ಇನ್ನೊಂದು ವೈಶಿಷ್ಟ್ಯ ಏನಪ್ಪಾ ಅಂದ್ರೆ, ಬಿ.ಜೆ.ಪಿ. ಅಬಕಾರಿ ಮಂತ್ರಿ ರೇಣುಕಾಚಾರ್ಯ ಕೂಡ ಕೆಲವು ಸೀನ್ ನಲ್ಲಿ ಬಂದು ಹೋಗ್ತಾರೆ.... ಭೀಮಾ ತೀರದ   ವಿಭಿನ್ನ  ಗೆಟಪ್ ಅನ್ನು ನೀವು ನೋಡಬೇಕು ಅಂದ್ರೆ  ಸಿನೆಮಾ ನೋಡಿ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು