ಸಿನೆಮಾ

Share This Article To your Friends

ಮಾನವೀಯತೆ ಮರೆತ ಜನರಿಗೆ ದುಡ್ಡೇ ಮುಖ್ಯ.. ಬಡ ಕುಟುಂಬದ ಕಣ್ಣೀರಲ್ಲ..!!

ಭೀಮಾ ತೀರದಲಿ ಈಗ ಅತ್ಯಂತ ವಿವಾದಾತ್ಮಕ ಚಿತ್ರವಾಗಿದೆ.. ಇಷ್ಟು ದಿನಗಳ ಕಾಲ ಸಿನೆಮಾ ಪೋಸ್ಟರ್ ಗಳನ್ನ  ನೋಡಿಕೊಂಡು ಸುಮ್ಮನಿದ್ದ ರವಿ ಬೆಳಗೆರೆ ಈಗ ಇದ್ದಕ್ಕಿದ್ದಂತೆ ಸಿಡಿದೆದ್ದಿದ್ದಾರೆ.. ಆದ್ರೆ ಇದರ ಹಿಂದಿನ ರಹಸ್ಯವಾದ್ರೂ ಏನು ಎಂದು ಹುಡುಕಿದಾಗ ಅಲ್ಲೊಂದು ಭಯಾನಕ ಅಂಶವೊಂದು ಹೊರಬಿತ್ತು.. ಈ ಭೀಮಾ ತೀರದಲಿ ಸಿನೆಮಾದಲ್ಲಿ ಚೆಂದಪ್ಪನಿಗೆ ದುಡ್ಡು ಕೊಟ್ಟು, ಅವನ ಕೈಯ್ಯಲ್ಲಿ ಗನ್ ಕೊಟ್ಟು ಕೆಟ್ಟವರನ್ನೆಲ್ಲಾ ಸುಟ್ಟು ಹಾಕು ಅಂತ ಹೇಳ್ತಾನೆ.. ಇದನ್ನು ನಾನು ನ್ಯೂಸ್ ಮಾಡಿ  ಜಾಗೃತಿ ಮೂಡಿಸ್ತೀನಿ ಅಂತ ಆ ಪತ್ರಕರ್ತ ಹೇಳ್ತಾನೆ.. ಹಾಗೆಯೇ ಆ ಪತ್ರ ಕರ್ತ ಹೇಳಿದಂತೆ ಚಂದಪ್ಪ ಕೆಟ್ಟವರನ್ನು ಮಟ್ಟ ಹಾಕ್ತಾ ಹೋಗ್ತಾನೆ.. ಆದ್ರೆ ಈ ಸಿನೆಮಾದಲ್ಲಿನ ಈ ದೃಷ್ಯವನ್ನು ನೋಡಿದ್ರೆ  ನಿಜ ಜೀವನದಲ್ಲಿ ಚೆಂದಪ್ಪನ ಬೆನ್ನ ಹಿಂದೆ ಇದ್ದ ಬಲಿಷ್ಟ ಕೈ ಅಂದ್ರೆ ರವಿ ಬೆಳಗೆರೆ ಅನ್ನೋ ಗಾಸಿಪ್ ಗಳೂ ಕೇಳಿ ಬಂದಿವೆ.. ಆದ್ರೆ ವಾಸ್ತವಿಕತೆಯೇ ಬೇರೆ.. ರವಿ ಬೆಳಗೆರೆ ಯವರು ಖ್ಯಾತ ಪತ್ರಕರ್ತರು.. ಇವರಿಗೆ ಎಲ್ಲರೊಡನೆ ಸಂಪರ್ಕ ಇರೋದು ಸಾಮಾನ್ಯ.. ಆದ್ರೆ ಹಣ ಕೊಟ್ಟು ಕೊಲೆ ಮಾಡು ಅಂತ ಹೇಳೋ ಕೆಟ್ಟ ಪತ್ರಕರ್ತರ ಪಟ್ಟಿಗೆ ಸೇರಿದವರಲ್ಲ.. ರವಿ ಬೆಳಗೆರೆಯವರು ಸಾಮಾಜಿಕ ಸಂಶೋಧಕರು.. ಪಾತಕ ಲೋಕದ ಕರಾಳ ಮುಖವನ್ನು ಬಿಚ್ಚಿಟ್ಟವರು.. ಖೈದಿಗಳ, ಆರೋಪಿಗಳ, ಮತ್ತು ಭೂಗತ ಲೋಕದ ಅಧಿಪತಿಗಳ ಜೀವನವನ್ನು ಮತ್ತು ಅವರು ಆ ಹಂತಕ್ಕೆ ಹೋಗಲು ಕಾರಣವಾದ ಸನ್ನಿವೇಶವನ್ನು ಸೂಕ್ಷ್ಮವಾಗಿ ತಿಳಿಸಿದವರು ರವಿ ಬೆಳಗೆರೆ..

ಈ ಮೂಲಕ ಮುಂದಿನ ಸಮಾಜವನ್ನು ಹೇಗೆ ಸರಿ ಪಡಿಸಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲಿದವರು.. ಪಾತಕಿಗಳೊಡನೆ ಮಾತಾಡಿ, ಅವರಿರುವ ಜಾಗದಲ್ಲಿ ಹೋಗಿ ಅವರು ಇಂಥಾ ಪ್ರವೃತ್ತಿಗಿಳಿಯಲು ಕಾರಣ ಏನು ಎಂದು ತಿಳಿದುಕೊಳ್ಳುವುದು ಅಷ್ಟು ಸುಲಭದ ಕಾರ್ಯವಲ್ಲ.. ಆದ್ರೆ ಆ ಸಾಹಸವನ್ನು ಮಾಡಿದವರು ರವಿ ಬೆಳಗೆರೆ.
ಭೀಮಾ ತೀರದ ಜನರ ಜೀವನನ್ನು ಹತ್ತಿರ ದಿಂದ ಕಂಡಿರೋ ಏಕೈಕ ವ್ಯಕ್ತಿ .. ಭೀಮಾ ತೀರದ  ಜನರ ಕ್ರೂರ ದೃಷ್ಯಗಳನ್ನು ಕಣ್ಣಾರೆ ಕಂಡು ಅವರಿಗೆ ಸಹಾಯ ಮಾಡಿರುವ ವ್ಯಕ್ತಿ…  ನಿಜವಾಗ್ಲೂ ಭೀಮಾ ತೀರದಲ್ಲಿನ ಜನರು ಕಣ್ಣೀರಿನಲ್ಲಿ ಕೈ ತೊಳೀತಾ ಇದ್ದಾರೆ.. ದ್ವೇಷ  ಅಸೂಯೆಗಳಿಂದ ರಕ್ತ ಪಾತಗಳು ನಡೀತಿವೆ.. ಅಲ್ಲಿನ ಮಕ್ಕಳ ಸ್ಥಿತಿಯಂತೂ ಅಧೋಗತಿಗೆ ತಲುಪಿದ್ದಾರೆ.. ಅದ್ರಲ್ಲಿಚಂದಪ್ಪ” ಅನ್ನೋ ವ್ಯಕ್ತಿಯ ಕುಟುಂಬವೂ ಕೂಡಾ ಒಂದಾಗಿದೆ..
ಅಂಥಾ ಸಂದರ್ಭದಲ್ಲಿ ಆ ಕುಟುಂಬದ ಮಕ್ಕಳನ್ನು ದತ್ತು ತೆಗೆದು ಕೊಂಡು ಸಾಕ್ತಾ ಇರೋದು ರವಿ ಬೆಳಗೆರೆ.. ಯಾವ ಬಂಧ-ಬಾಂಧವ್ಯವೇ ಇಲ್ಲದಂಥ ಸ್ಲಂ ಜನರ ಮಕ್ಕಳನ್ನು ತಮ್ಮ ಸ್ವಂತ ಮನೆಯಲ್ಲಿ ಇಟ್ಟುಕೊಂಡು ಅವರಿಗೆ ಊಟೋಪಚಾರವನ್ನು ನೀಡೋದರೊಂದಿಗೆ ಅವರನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡ್ತಿದ್ದಾರೆ

ಇದ್ರಲ್ಲಿ ರವಿ ಬೆಳಗೆರೆಯವರ ನಿಸ್ವಾರ್ಥ ಎಷ್ಟಿದೆ ಅಥವಾ ಸ್ವಾರ್ಥ ಏನಿದೆ ಅನ್ನೋದನ್ನು ಹುಡುಕೋದು ನಿರಾಧಾರ.. ಆದ್ರೆ ರವಿ ಬೆಳಗೆರೆಯವರು ಎಂಟು ಜನರ ಬಾಳಿಗೆ ದಾರಿ ದೀಪವಾಗಿದ್ದಾರೆ.. ಮತ್ತು  ಕಷ್ಟದಲ್ಲಿರುವವರ, ಸಾವಿನ ಮನೆಯಲ್ಲಿನ  ಕುಟುಂಬಕ್ಕೆ ಲಕ್ಷ ಲಕ್ಷ ಕೊಟ್ಟು ಸಹಾಯ ಹಸ್ತ ಚಾಚಿದ್ದಾರೆ..  ಅಷ್ಟೇ ಅಲ್ಲಾ   ಚಂದಪ್ಪ ಎಂಬ ವ್ಯಕ್ತಿ ಯಾರು ಅಂತಲೇ ಗೊತ್ತಿಲ್ಲದಿರುವಾಗ ಆ ಚಂದಪ್ಪನನ್ನು ಹುಡುಕಿ ಅವರೊಂದಿಗೆ ಚರ್ಚೆ ಮಾಡಿ ಸಂದರ್ಶನ ಮಾಡಿದ್ದು ರವಿ ಬೆಳಗೆರೆ.. ಯಾವುದೋ ಒಬ್ಬ  ಪುಡಿ ರೌಡಿಯನ್ನು ಸಂದರ್ಶನ ಮಾಡೋದು ಕಷ್ಟ ಇರುವಾಗ ರವಿ ಬೆಳೆಗೆರೆ ಭೀಮಾ ತೀರಕ್ಕೆ ಹೋಗಿ ಅಲ್ಲಿನ ಪರಿಸ್ತಿತಿಯನ್ನು ಅರ್ಥ ಮಾಡಿಕೊಂಡು ಚಂದಪ್ಪನ ಮನ ಒಲಿಸುವ ಪ್ರಯತ್ನವನ್ನು ಪಟ್ಟಿದ್ದು ರವಿ ಬೆಳಗೆರೆ..  ಹೀಗಿರುವಾಗ  ಅಷ್ಟೋಂದು ಕಷ್ಟ ಪಟ್ಟು ಮಾಹಿತಿ ಕಲೆ ಹಾಕಿದ ವರನ್ನು ಕಡೆಗಣಿಸಿ ಸಿನೆಮಾ ಮಾಡಿರೋದು ಸೂಕ್ತವಲ್ಲ.

ಆದ್ರೆ ರವಿ ಬೆಳಗೆರೆಗೆ ಇದ್ಯಾವುದರ ಬಗ್ಗೆಯೂ ಬೇಸರವಿಲ್ಲ. ಆದ್ರೆ ಭೀಮಾ ತೀರದ ಜನರ ಕಥೆಯನ್ನು ಇಟ್ಟುಕೊಂಡು ದುಡ್ಡು ಮಾಡೋಕೆ ಹೊರಟಿರೋ ಚಿತ್ರೋದ್ಯಮ ಅಲ್ಲಿನ ಜನರ ಪರಿಸ್ಥಿತಿಯನ್ನು ಸುಧಾರಿಸೋದಕ್ಕಾಗಿ ಏನಾದ್ರೂ ಸಹಾಯ ಮಾಡಲಿ ಅನ್ನೋ ಹೆಬ್ಬಯಕೆಯನ್ನು ತೋರಿಸ್ತಾ ಇದ್ದಾರೆ.. ಇದು ಒಳ್ಳೆಯ ಸಂಗತಿ ಆಗಿದೆ.. ಇದು ಮಾನವೀಯತೆ ಅಂದ್ರೆ..

ಚೆಂದಪ್ಪನ ಅನ್ನೋ ಕ್ರೂರ ವ್ಯಕ್ತಿ ಕಥೆಯನ್ನು ಇಟ್ಟುಕೊಂಡು ಭೀಮಾತೀರದಲಿ ಚಿತ್ರವೂ ಕೂಡಾ ಒಳ್ಳೆಯ ಸಂದೇಶವನ್ನೇ ಸಾರಿದೆ..  ದುನಿಯಾ ವಿಜಯ್ ಅಭಿನಯ, ಓಂ ಪ್ರಕಾಶ್ ರಾವ್ ರವರ ಅತ್ಯುತ್ತಮ ನಿರ್ದೇಶನ ಮತ್ತು ಅಣಜಿ ನಾಗರಾಜ್ ರವರ ನಿರ್ಮಾಣ ಕೂಡಾ ಅತ್ಯುತ್ತಮವಾಗಿ ಬಂದಿದೆ.. ನಾನು ಇದನ್ನು ಪ್ರಶಂಸುತ್ತೇನೆ. ಆದ್ರೆ ಚಂದಪ್ಪ ಅನ್ನೋ ವ್ಯಕ್ತಿಯ  ಜೀವನ ಚರಿತ್ರೆಯನ್ನು ಇಟ್ಟು ಕೊಂಡು ಸಿನೆಮಾ ಮಾಡ್ತಿರೋ ಚಿತ್ರ ತಂಡ ಈ ಬಡ ಕುಟುಂಬಕ್ಕೆ ಮಾಡಿದ್ದಾದ್ರೂ ಏನು..?  ಅವರ ನೋವಿನ ಜೀವನವನ್ನು ಇಟ್ಟುಕೊಂಡು ದುಡ್ಡು ಮಾಡೋಕೆ ಹೊರಟಿರೋ ಚಿತ್ರ ತಂಡ  ಚಂದಪ್ಪನ ಕುಟುಂಬಕ್ಕೆ ಸಹಾಯದ ಹಸ್ತವನ್ನೇ ಚಾಚಲಿಲ್ಲ..??? ಚಿತ್ರ ತಂಡಕ್ಕೆ ಒಂದು ಸಾಮಾನ್ಯ ಪ್ರಜ್ಞೆಯೂ ಇಲ್ವಾ..? ಚಿತ್ರ ತೆಗೆಯುವ ಮನುಷ್ಯರಿಗೆ ಕರುಣೆ, ಪ್ರೀತಿ, ನೋವು ತುಂಬಿದ ಜನರ ಪರಿಸ್ಥಿತಿ  ಅರ್ಥವೇ ಆಗೋದಿಲ್ವಾ..? ಅನ್ನೋದು ನಮ್ಮ ಪ್ರೆಶ್ನೆ..ಆದ್ರೆ ಈ ವಿವಾದಗಳ ಸುಳಿಯಲ್ಲಿ ಸಿಲುಕಿದ ಚಿತ್ರ ತಂಡ ಭೀಮಾತೀರದ ಜನರ ಕಷ್ಟಗಳಿಗೆ ಸ್ಪಂದಿಸಲು ನಿರ್ಧರಿಸದೆ..  ದುನಿಯಾ ವಿಜಯ್ ಭೀಮಾ ತೀರದ ಜನರಿಗೆ ಸಹಾಯ ಹಸ್ತವನ್ನು ಚಾಚ್ತಾ ಇದ್ದಾರೆ..  ಮತ್ತು ನಿರ್ಮಾಪಕ ಹಾಗೂ ನಿದೇರ್ಶಕರು ಭೀಮಾತೀರದ ಬಡ ಜನರಿಗೆ ಯಾವ  ರೀತಿಯ ಸಹಾಯ ಮಾಡ್ತಾರೆ ಅನ್ನೋದು ಕಾಲವೇ ನಿರ್ಧರಿಸಲಿದೆ.. ಆಡಿದ ಮಾತು ಕೇವಲ ಮಾತುಗಳಾಗಿ ಉಳಿಯದಿರಲಿ ಅನ್ನೋದು ನಮ್ಮೆಲ್ಲರ ಆಶಯ.
ಶ್ರಮಿಕರಿಗೆ ಬೆಲೆ ಇರಲಿ..  ಬಡವರ ಬಗ್ಗೆ ಕಾಳಜಿ ಇರಲಿ.. ದುಡ್ಡು ಮಾಡೋದು ಒಂದೇ ಜೀವನವಲ್ಲ.. ದುಡ್ಡಿಗಿಂತಲೂ ದೊಡ್ಡದಾದದ್ದು ಮಾನವೀಯತೆ.. ಅದು ಎಲ್ಲರಿಗೂ ಇರಲಿ.. ಸಹಾಯ ಮಾಡದ ಮನುಷ್ಯ ಬದುಕಿದ್ದೂ ಸತ್ತಂತೆ..  ವ್ಯರ್ಥ ಜೀವನ ಸಾಗಿಸೋ ಬದಲು ಬದುಕಿರುವಾಗ ನಾಲ್ಕು ಜನರಿಗೆ ಸಹಾಯ ಮಾಡಿದ್ರೆ ನಾವು  ಸತ್ತಿದ್ದರೂ ಬದುಕಿದ್ದಂತೆ..

                                                                                               
ಇತಿ ಸವಿ ನೆನಪಿನ
ಶೇಖ್ (ಸ್ಪಿಯ)ರ‍್

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು