ಸಿನೆಮಾ

Share This Article To your Friends

ಹೆಣ್ಣಿನ ದಾರಿ.. ಹೇಗಿದೆ ಗೊತ್ತಾ..??

ಮಹಿಳೆ.. ...........   ತಾಯಿಯಾಗಿ, ತಂಗಿಯಾಗಿ ಮಡದಿಯಾಗಿ, ಗಂಡಿನ ಜೀವನವನ್ನು ಸುಧಾರಿಸುವ ಪರಿಪೂರ್ಣ ಜೀವ ಅದು.. ವೇದೋಪನಿಷತ್ತಿನಿಂದ  ಮೇಧಾ ಪಾಟ್ಕರ್ ವರೆಗೂ ನಾರಿ ಬೆಳೆದು ಬಂದಿದ್ದಾಳೆ.. ಅಕ್ಕಮಹಾದೇವಿಯ ದೈವ ಭಕ್ತಿಯಿಂದ ಹಿಡಿದು  ಕಲ್ಪನ ಚಾವ್ಲಾ ಳ ವೈಜ್ಞಾನಿಕ   ಸಂಶೋಧನೆಯವರೆಗೂ ಎಲ್ಲಾರಂಗದಲ್ಲೂ ಮಹಿಳೆಯರು ಧಾಪುಗಾಲು ಹಾಕುತ್ತಿದ್ದಾರೆ.. ಕ್ರಿ.ಪೂರ್ವ ದಿಂದಲೂ ಮಹಿಳೆಯರ ಸಾಧನೆ ಅಪಾರವಾಗಿದೆ. ವೈದಿಕ ಕಾಲದಲ್ಲಿ ಮೈತ್ರೇಯಿ ಗಾರ್ಗೇಯಿ, ಮಾರಿ ಮುತ್ತು ಗಳಂಥ ಮಹಿಳಾ ಕಣ್ಮಣಿಗಳು ಅಂದಿನ ಕಾಲದಲ್ಲಿಯೇ ವೇದೋಪನಿಷತ್ತುಗಳನ್ನು ರಚಿಸಿದ್ದರು. ಅಲ್ಲಿಯವೆರೆ ಯಾರೂ ಕೂಡಾ ವೇದೋಪನಿಷತ್ತುಗಳನ್ನು ಕೈಗೆತ್ತಿಕೊಂಡ ಮಹಿಳೆಯರಿರಲಿಲ್ಲ.. ಇದು ಮಹಿಳೆಯರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಚನಕಾರಲ್ಲಿ  ಪ್ರಥಮ ವಚನಕಾರ್ತಿ ಅಂತ ನಾವು ಅಕ್ಕ ಮಹಾದೇವಿಯನ್ನು ಕರೆಯುತ್ತೇವೆ,.. ತನ್ನ ವಚನಗಳಿಂದ ಇಡೀ ನಾಡಿನ ಜನತೆಯಲ್ಲಿನ ಅಂಧಕಾರವನ್ನು ತೊಡೆದು ಹಾಕಿದ ಮಹಾನ್ ವಚನಕಾರ್ತಿ.. ಹನ್ನೆರಡನೆಯ ಶತಮಾಬನದಲ್ಲಿ ಅತಿ ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಕ್ರಾಂತಿ ಧೂತರಲ್ಲಿ ಅಕ್ಕಮಹಾದೇವಿಯೂ ಕೂಡಾ ಒಬ್ಬರಾಗಿ ನಿಲ್ಲುತ್ತಾರೆ..
ಚಂದನವ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
 ಇದು ಅಕ್ಕ ಮಹಾದೇವಿಯ ವಚನದ ಒಂದು ಸಾಲು.. ಚಂದನ ಅಂದ್ರೆ ಗಂಧವನ್ನು ಎಷ್ಟು ತೇದರೂ ಕೂಡಾ ಅದು ನೊಂದುಕೊಂಡು ತನ್ನ ಸುಗಂಧವನ್ನು ಕಡಿಮೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ತನ್ನ ಗಂಧದ ಪರಿಮಳನ್ನು ಮತ್ತಷ್ಟು ಹೆಚ್ಚಿಸುತ್ತೆ.. ಎಂಬುದು ಈ  ಸಾಲಿನ  ತಾತ್ಪರ್ಯ.. ಮಹಿಳೆಯರು ಇದರಿಂದ ಅಕ್ಷರ ಸಹ ಪ್ರಭಾವಿತರಾಗಿದ್ದಾರೆ ಅಂತಲೇ ಹೇಳಬಹುದು.. ತಮ್ಮ ಮೇಲೆ ಶೋಷಣೆ ನಡೆಯುತ್ತಿದ್ದ ಸಂದರ್ಭದಿಂದಲೂ ಸಮಾಜದಲ್ಲಿ ಹೋರಾಟ ಮಾಡುತ್ತಾ ವಿವಿಧ ರಂಗದಲ್ಲಿ ಬೆಳೆದು ಸಾಧನೆ ಮಾಡಿದ್ದಾರೆ..
ಹದಿಮೂರನೆಯ ಶತಮಾನದಲ್ಲಿ ದೆಹಲಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಾ ಗುಲಾಮಿಸಂತತಿ ನಶಿಸಿ ಹೋಗುತ್ತಿದ್ದಂಥ ಸಮಯದಲ್ಲಿ ಧೀರಳಾಗಿ ಎದ್ದು ನಿಂತು ಪುರುಷ ಸಿಂಹಗಳಂತೆ ಹೋರಾಡಿದವಳು ಇಲ್ತಮಶ್ ನ ಮಗಳಾದ ರಜಿಯಾ ಸುಲ್ತಾನ.. ಇವಳು ದೆಹಲಿಯನ್ನು ಆಳಿದ ಪ್ರಥಮ ಮಹಿಳೆ ಅಂತ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾಳೆ..
ಅಷ್ಟೇ ಅಲ್ಲಾ ಬ್ರಿಟೀಷರ ದಬ್ಬಾಳಿಕೆಯನ್ನು ಸಹಿಸದೇ ದಿಟ್ಟವಾಗಿ ನಿಂತು ಎದುರಿಸಿದ  ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಕೂಡಾ ಮಹೋನ್ನತ ಸಾಧಕಿ.. ಕಿತ್ತೂರಿನ ರಾಣಿ ಚೆನ್ನಮ್ಮ ಕೂಡಾ ಕಚ್ಚೆ ಕಟ್ಟಿ ರಣರಂಗದಲ್ಲಿ ಹೋರಾಡಿ ಶತೃಗಳ ಹುಟ್ಟಡಗಿಸಿದ ಧೀಮಂತ ರಕ್ಷಕಿ...  ಹದಿನೇಳನೆಯ ಶತಮಾನದಲ್ಲಿ  ಚಿತ್ರ ದುರ್ಗದ ವೀರ ಮದಕರಿಯ ಕೋಟೆಯನ್ನು ಹೈದರಾಲಿಯ ಸೈನ್ಯ ಮುತ್ತಿಗೆ ಹಾಕಿದಾಗ ಪುರುಷನಂತೆ ಕಚ್ಚೆ ಹಾಕಿಕೊಂಡು ಶತೃ ಸೈನಿಕರ ರುಂಡವನ್ನು ಚೆಂಡಾಡಿದ ನಾರಿ ವೀರ ವನಿತೆ ಒನಕೆ ಓಬವ್ವಾ..!!  ವಿಪರ್ಯಾಸ ಅಂದ್ರೆ ಇವರೆಲ್ಲರೂ ಕೂಡಾ ಹಿತ ಶತೃಗಳ ತಂತ್ರ ಕುತಂತ್ರಕ್ಕೆ ಬಲಿಯಾದ ಬಲಿಪಶುಗಳು.


ಹಾಗಂತ ಹೆಣ್ಣಿನಲ್ಲಿನ ಆ ಧೀಮಂತತೆ ಕುಗ್ಗಿಲ್ಲ.. ಅಷ್ಟೇ ಯಾಕೆ ನಮ್ಮ ದೇಶವನ್ನು ಅದೆಷ್ಟೋ ಪುರುಷ ಸಿಂಹಗಳು ಆಳಿದರೂ ಕೂಡಾ ಇಂದಿರಾ ಗಾಂಧಿ ಮಾಡಿದ ಸಾಮಾಜಿಕ ಕಾರ್ಯಗಳನ್ನು ಯಾರೂ ಮಾಡಿಲ್ಲ ಅನ್ನೋದು ಹಳ್ಳಿ ಜನರ ಮಾತು,.. ಅವರು ಇಂದಿಗೂ ಇಂದಿರಾ ಗಾಂಧಿಯನ್ನ ನಮ್ಮವ್ವ ಅಂತಲೇ ಕರೀತಾರೆ.  ಇದು ಮಹಿಳಾ ಸಾಧನೆ ಮತ್ತು ಸಬಲೀಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಆಸ್ಟ್ರೇಲಿಯಾದಲ್ಲಿ ಇದುವರೆಗೆ ಕೇವಲ ಪುರುಷರೇ ಪ್ರಧಾನಿ ಗದ್ದುಗೆಯನ್ನು ಅಲಂಕರಿಸ್ತಾ ಇದ್ರು ಆದ್ರೆ ಈಗ ಪ್ರಸ್ತುತವಾಗಿ ಮತ್ತು ಪ್ರ ಪ್ರಥಮವಾಗಿ ಜೂಲಿಯಾ ಗಿಲಾರ್ಡ್ ಅನ್ನೋ ಮಹಿಳೆ ಆ ಸ್ಥಾನವನ್ನು ಅಲಂಕರಿಸುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.. ಪ್ರಪಂಚದಲ್ಲೇ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡವರು ಅಂದ್ರೆ ಸಿರಿಮಾವೋ ಬಂಡಾರೆ ನಾಯಕಿ.. ಇವರು ಶ್ರೀಲಂಕಾದ ಪ್ರಧಾನಿಯಾಗುವುದರ ಮೂಲಕ ವಿಶ್ವದ ಮಹಿಳಾ ಇತಿಹಾಸಕ್ಕೆ ಮುನ್ನುಡಿಯನ್ನು ಹಾಕಿದ ಧಿಟ್ಟಗಾರ್ತಿ.
ನಾರಿ ಕೇವಲ ಅಡಿಗೆ ಮನೆಗೆ ಮಾತ್ರವೇ ಸೀಮಿತ ಅಂತ ಹೇಳುತ್ತಿದ್ದ ಕಾಳ ಇದಲ್ಲ. ಅದೆಲ್ಲವನ್ನೂ ಮೀರಿ ಮಹಿಳೆ ಬೆಳೆಯುತ್ತಿದ್ದಾಳೆ.. ಅಡುಗೆ ಮನೆಯಲ್ಲಿರಬೇಕಿದ್ದ ಮಹಿಳೆ ಈಗ ಚಂದ್ರಲೋಕಕ್ಕೂ ಕಾಲಿಟ್ಟು ಬಂದಿದ್ದಾಳೆ.. ಕಲ್ಪನಾ ಚಾವ್ಲಾ ಮಾಡಿದ ಈ ಸಾಧನೆಗೆ ಸರಿಸಾಟಿ ಯಾರು..?? ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತ ಯಾಕೆ ಹೆಳ್ತಾರೆ ಗೊತ್ತಾ..? ಹೆಣ್ಣಿನಲ್ಲಿ ಕಲ್ಮಶ ಇಲ್ಲ. ತಾನು ಕಲಿತಿದ್ದನ್ನು ಸರಳವಾಗಿ ಸಮಾಧಾನವಾಗಿ ಹೇಳುವ ತಾಳ್ಮೆ ಹೆಣ್ಣಿಗೆ ಇದೆ..
ಯುಗೋಸ್ಲೋವಿಯಾದಿಂದ ಬಂದು ಭಾರತದ ತಾಯಿಯಾಗಿ ಜನರ ಕಣ್ ಮನಗಳಲ್ಲಿ ಚಿರಾಯುವಾಗಿ ಉಳಿದವರು ಮಾತೆ ಮದರ್ ಥೆರೆಸ್ಸಾ..!! ಮದರ್ ಥೆರೆಸ್ಸಾ ರವರಂಥ  ದಯಾಮಯಿ ಮತ್ಯಾರಾದ್ರೂ ಸಿಗ್ತಾರಾ..??  ಕೆಳ ಜಾತಿಯವರ ನೆರಳನ್ನೂ ಸೋಕಿಸಿಕೊಳ್ಳದಿರುವಂತಹ ಜನರು ಇದ್ದ ಕಾಲದಲ್ಲಿ ಎಲ್ಲಾ ಜನರ ಸೇವೆಯನ್ನು ಮಾಡಿ ಅದರಲ್ಲೂ ರೋಗಿಗಳ ಅಸಹಾಯಕರ, ಮಕ್ಕಳ ಸೇವೆಯನ್ನು ಅಸಹ್ಯವೆಂದು ಭಾವಿಸದೇ ಸೇವಾ ಮನೋಭಾವನೆಯಿಂದ ಅವರೆಲ್ಲರನ್ನೂ ಸತ್ಕರಿಸಿದ ಆ ಮಾತೆ ಭಾರತಕ್ಕೆ ರತ್ನ ಖಚಿತ ಕಿರೀಟವಿದ್ದಂತೆ. ರವೀಂದ್ರನಾಥ್ ಠಾಗೂರ್ ಮತ್ತು ಬಂಕಿಮ ಚಂದ್ರ ಚಟರ್ಜಿಯವರು ಬರೆದ ರಾಷ್ಟ್ರಗೀತೆ, ವಂದೇ ಮಾತರಂ ಅನ್ನು ಸುಮಧುರವಾಗಿ ಹಾಡಿ ದೇಶದ ಕೀರ್ತಿ ಮತ್ತು ಆ ಗೀತೆಗಳಿಗೆ ಜೀವ ತುಂಬಿದ ಕಂಠ ಗಂಗೂಬಾಯಿ ಹಾನಗಲ್ ರವರದ್ದು.. ಗಾನ ಕೋಗಿಲೆಯಾದ ಸುಮಧುರ ಕಂಠಸಿರಿಯಿಂದ  ಚಿಕ್ಕ ವಯಸ್ಸಿನಲ್ಲಿಯೇ ಅತಿ ದೊಡ್ಡ ಸಾಧನೆ ಮಾಡಿದ ಸಾಧಕಿ..
ಭಾರತದ ಪ್ರಥಮ ಮಹಿಳಾ ರಾಷ್ಟರಪತಿಯಾಗಿ , ಪ್ರಸ್ತುತ ದೇಶರ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಂಡು ದೇಶವನ್ನೇ ಮುನ್ನಡೆಸುತ್ತಿರುವುದು ಡಾ. ಪ್ರತಿಭಾ ಪಾಟೀಲ್. ಲೋಕ ಸಭೆಯ ಸ್ಪೀಕರ್ ಆಗಿ ಸಂಸತ್ತಿನ ಕಾರ್ಯಗಳನ್ನು ಯಾವುದೇ ತೊಂದರೆಗಳಿಲ್ಲದೇ ನಡೆಸಿಕೊಂಡು ಹೋಗುತ್ತಿರುವ ಕೀರ್ತಿ ಮೀರಾ ಕುಮಾರ್ ರವರಿಗೆ ಸಲ್ಲುತ್ತದೆ...
ಇನ್ನು ಸಾಹಿತ್ಯದಲ್ಲೂ ಕೂಡಾ ಮಹಿಳೆಯರು ಹಿಂದೆ ಉಳಿದಿಲ್ಲ.. ಅಕ್ಕ ಮಹಾದೇವಿಯಿಂದ ಹಿಡಿದು ಸರೋಜಿನಿ ನಾಯ್ಡುವರೆಗೂ  ಅದೆಷ್ಟೋ ಮಹಿಳೆಯರು ಸಾಹಿತ್ಯವನ್ನು ಅಭಿವೃದ್ದಿ ಪಡಿಸಿದ್ದಾರೆ..  ಬಿ.ಟಿ ಲಲಿತಾನಾಯಕ್, ವೈದೇಹಿ,  ಗೀತಾ ನಾಗಭೂಷಣ್, ಎಂ.ಕೆ ಇಂದಿರಾ, ನಳಿನಿ ವೆಂಕಪ್ಪಗೌಡ ಹೀಗೆ  ಬಹಳಷ್ಟು ಜನರು ಸಾಹಿತ್ಯದಲ್ಲಿ ಅತಿ ದೊಡ್ಡ ಸಾಧನೆ ಮಾಡಿದ್ದಾರೆ.. ಆಂದ್ರಪ್ರದೇಶದಲ್ಲಿ  ಸಾರಾಯಿಯ ದುರಂತಗಳು ಹೆಚ್ಚಾಗಿದ್ದಾಗ ಇಡೀ ಪ್ರಜಾ ಪ್ರತಿನಿಧಿಗಳೇ ಎಲ್ಲವನ್ನೂ ನೋಡಿ ತಣ್ಣಗೆ ಕುಳಿತಿದ್ದಾಗ, ಸಾರಾಯಿಯಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯ ಮಾಹಿತಿಯನ್ನು ನೀಡಿ ಇಡೀ ಮಹಿಳಾ ಕುಲವನ್ನೇ ಸಾರಾಯಿಯ ವಿರುದ್ಧ ಸೆಟೆದು ನಿಲ್ಲುವಂತೆ ಮಾಡಿದವರು  ಒಬ್ಬ ಸಾಮಾನ್ಯ ಶಾಲಾ ಶಿಕ್ಷಕಿ.. ಅವರ ಈ ಹೋರಾಟದ ಫಲವಾಗಿ ಈಗ ಪ್ರಸ್ತುತವಾಗಿ ದೇಶದೆಲ್ಲೆಡೆ ಸಾರಾಯಿ ನಿಷೇಧಕ್ಕೆ ತಡೆ ಹಾಕಲಾಗ್ತಿದೆ. ಇದರಿಂದ ಅದೆಷ್ಟೋ ಕುಟುಂಬಗಳು ಬದುಕುಳಿದಿವೆ.. ಇದು ಮಹಿಳೆಯ ಸಾಮಾಜಿಕ ಪ್ರಜ್ಞೆ ಮತ್ತು ಹೋರಾಟದ ಛಲವನ್ನು ಹಾಗೂ ಮಹಿಳೆಯ ವಿಶಾಲ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ..
ಅಷ್ಟೇ ಯಾಕೆ ದೇಶದಲ್ಲಿಯೇ ಪ್ರಥಮ ಮಹಿಳಾ ಐ.ಪಿ.ಎಸ್ ಅಧಿಕಾರಿಯಾಗಿಯ್ಕೆಯಾಗಿದ್ದು ಕಿರಣ್ ಬೇಡಿ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ನಿಂತಿರುವ ಈ ಸಂದರ್ಭದಲ್ಲಿ  ಭ್ಷ್ಟಾಚಾರದ ವಿರುದ್ಧ ದೊಡ್ಡ ಧ್ವನಿಯನ್ನೇ ಎತ್ತಿದ್ದಾರೆ.. ಇವರ ಜೊತೆಗೆ ಇನ್ನೊಬ್ಬ ಮಿಹಿಳೆಯಾದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕೂಡಾ ಜೊತೆಯಾಗಿದ್ದಾರೆ.. ಪೈಲೆಟ್ ನಿಂದ ಹಿಡಿದು ಬಸ್ ಕಂಡಕ್ಟರ್ ವರೆಗೆ, ಎಲ್ಲಾ ರಂಗಗಳಲ್ಲೂ ಕೂಡಾ ಮಹಿಳೆರು ಸಬಲರಾಗಿದ್ದಾರೆ. ಸಮರ್ಥರಾಗಿ ಬೆಳೆದಿದ್ದಾರೆ. ಮಹಿಳ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿಯೂ ಕೂಡಾ ಅನೇಕ ಸವಲತ್ತುಗಳಿವೆ.. ಸಂವಿಧಾನದ 14. 15. 16 ನೆ ವಿಧಿಗಳ ಅನ್ವಯ ಮಹಿಳೆಯರೂ ಪುರುಷರಷ್ಟೆ ಸಮಾನರು ಅಂತ ಸಂವಿಧಾನ ಹೇಳಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕಾನೂನು ಜಾರಿಯಾಗಿದೆ.. 2000 ನೆ ಇಸವಿಯಲ್ಲಿ  ಮಹಿಳೆಯರಿಗೆ ಹೆಚ್ಚು ಶಕ್ತಿಯನ್ನು ನೀಡುವಂತಹ ಸ್ತ್ರೀಶಕ್ತಿ ಸಂಘಗಳನ್ನು ಸ್ತಾಪಿಸಲಾಗಿದೆ.. ಮಹಿಳೆ ಎಂದೂ ಕೀಳಲ್ಲ.. ನಾವು ನೋಡುವ ದೃಷ್ಟಿ ಬದಲಾಗಬೇಕು.. 

ಹೊಸ ಜೀವವನ್ನು ಸೃಷ್ಟಿಸುವ ಸೃಷ್ಟಿಕರ್ತೆ ಹೆಣ್ಣು.. ಅಜ್ಞಾನವನ್ನು ತೊಡೆದು ಜ್ಞಾನವನ್ನು ಬಿತ್ತುವವಳು ಹೆಣ್ಣು.. ,ಮಡದಿಯಾಗಿ ಪತಿಯ ಸಾಧನೆಗಾಗಿ ಬೆನ್ನೆಲುಬಾಗಿ ನಂತು ಸ್ಪೂರ್ತಿ ತುಂಬುವವಳು ಹೆಣ್ಣು.. ಸಮಾಜದ ಸಂಬಂಧಗಳನ್ನು ಉತ್ತಮವಾಗಿ ಕಾಪಾಡಿಕೊಂಡು ಹೋಗುವಂಥ ಸಂಸ್ಕೃತವಂತೆ ಹೆಣ್ಣು..  ವಿಪರ್ಯಾಸ ಅಂದ್ರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹೆಣ್ಣುಮಕ್ಕಳು ಸಾಮಾಜಿಕ ಬಾಂಧವ್ಯವನ್ನು ಮರೆತು, ಅವಿಭಕ್ತ ಕುಟುಂಬವನ್ನು ಒಡೆದು ಅನಾಥರಂತೆ ಬದುಕುವ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ.. ಸಹನೆಯೇ ಇಲ್ಲದ, ಪ್ರೀತಿಸುವ ಪತಿಯನ್ನೇ ಕೇವಲವಾಗಿ ಕಾಣುವಂತಹ ಪರಿಸ್ಥಿತಿಗಳು ನಗರ ನಾರಿಯರಲ್ಲಿ ಹೆಚ್ಚಾಗ್ತಿದೆ.. ಇದು ಬಾಂಧವ್ಯವನ್ನು ಹಾಳು ಮಾಡುತ್ತದೆ.. ಜೀವನದಲ್ಲಿ ಹಣಕ್ಕಿಂದ ಬಾಂಧವ್ಯ ಮುಖ್ಯ ಎಂಬುದನ್ನು ಅರಿತಾಗಲೇ ನಿಜವಾದ ಬದುಕು,

ಮಹಿಳೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಆಕೆಗೆ ಎಲ್ಲೆಡೆಯಲ್ಲಿಯೂ ಗೌರವಿವದೆ.. ಸಾಫ್ಟ್ ವೇರ್ ಹಾರ್ಡ ವೇರ್ ನಂತಹ ಈ ವೇಗದ ಯುಗದಲ್ಲಿ,  ಮಹಿಳೆ ಕೂಡಾ ವೇಗವಾಗಿ ಬೆಳೀತಿದ್ದಾಳೆ.. ಸಾಫ್ಟ್ ವೇರ್ ರಂಗದ ದಿಗ್ಗಜ ಇನ್ಫೋಸ್ ನಾರಾಯಣ ಮೂರ್ತಿಯವರನ್ನು ಇಷ್ಟು ದೊಡ್ಡ ಸಾಧನೆ ಹೇಗೆ ಸಾಧ್ಯವಾಯ್ತು ಅಂತ ಕೇಳಿದ್ರೆ” ನನ್ನ  ಈ ಸಾಧನೆಗೆ ನನ್ನ ಅರ್ಧಾಂಗಿ ಸುಧಾ ಮೂರ್ತಿಯೇ ಕಾರಣ” ಅಂತ ಹೇಳಿದ್ರು..  ಇದಕ್ಕಿಂತ ಹೆಮ್ಮೆ ಹಿರಿಮೆ ಇನ್ನೇನಿದೆ ಅಲ್ವಾ..? ಹೆಣ್ಣೆ ನಿನಗೆ ನೀನೆ ಸರಿಸಾಟಿ..

ಇಂತಿ ಸವಿ ನೆನಪಿನ
ಶೇಖ್(ಸ್ಪಿಯ)ರ್
9980868898
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು