ಸಿನೆಮಾ

Share This Article To your Friends

ಚೆಲುವೆಯೇ ನಿನ್ನ ನೋಡಲು..!! ಹೀಗೊಂದು ವಿಭಿನ್ನ ತಿರುವುಗಳ ಪ್ರೇಮಕಥೆ

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ನ ಮಾಲೀಕ ವಂಜುನಾಥ ರಾಯರ ಒಬ್ಬನೇ ಮಗ. ರಘು...  ಅವನಿಗೆ   ಕೇವಲ 18 ವರ್ಷ ಆಗಿತ್ತು.. ತೋಟದಲ್ಲಿ ಕೆಲಸ ಮಾಡೋ ಕೂಲಿ ಬಸ್ಸಪ್ಪ ನಿಗೆ ತುಂಬಾನೇ ಹುಷಾರಿರಲಿಲ್ಲ.. ಹೀಗಾಗಿ ಅವರನ್ನು ನೋಡಿಕೊಂಡು ಬರೋಕೆ ಅಂತ ಅವರ ಗುಡಿಸಲಿಗೆ ಹೋದ.. ಅಲ್ಲಿ ಒಂದು ಸುಂದರ ಹುಡುಗಿ ಕಾಣಿಸಿದಳು.. ಕೆಸರಿನಲ್ಲಿ ಅರಳಿದ ಕಮಲದಂತಿದ್ದಳು. ಗುಲಾಬಿ ಗೂವಿನ ಬಣ್ಣದಂತಿದ್ದಳು, ಹೊಳೆವ ಚಂದ್ರನಿಗೆ ನಾಚಿಸುವಂತಿದ್ದಳು. ಅವಳಿಗೆ ಮನಸೋತ ರಘು ಅವಳ ಹತ್ರ ಹೋದ.. ಅಷ್ಟರಲ್ಲಿ ಬಸ್ಸಪ್ಪ ಗುಡಿಸಲಿನಿಂದ ಹೊರಗೆ ಬಂದ. “ ಇದೇನ್ ಚಿಕ್ ಧಣಿ..? ನೀವ್ ಇಲ್ಲೀಗಂಟಾ ಬಂದ್ ಬುಟ್ಟಿದ್ದೀರಾ..? ನನ್ನಿಂದೇನಾದ್ರೂ ತೆಪ್ ಆಯ್ತಾ ಅಂತ ಕೈ ಜೋಡಿಸಿ ಕೇಳಿದ. “ಹಾಗೇನು ಇಲ್ಲ ಬಸ್ಸಣ್ಣ, ನಿಮ್ಗ ಆರಾಮ್ ಇಲ್ಲ ಅಂತ ಗೊತ್ತಾಯ್ತು. ಅದಕ್ಕಾ ನೋಡ್ಕೊಂಡು ಹೋಗೋಣ ಅಂತ ಬಂದ್ಯ ಅಂದ.


“ರಮ್ಯಾ ಧಣಿಗಳಿಗೆ ಒಂದು ಲೋಟ ಮಜ್ಜಿಜೆ ತಗೊಂಡ್ ಬಾರವ್ವಾ” ಅಂತ ಕೂಗಿ ಹೇಳಿದ ಬಸ್ಸಪ್ಪ. ಆಗ ಆ ಚೆಲುವೆಯ ಹೆಸರು ರಮ್ಯಾ ಅಂತ ಗೊತ್ತಾಯ್ತು. ರಘುವಿನ ಕಣ್ಣು ಅವಳು ಬರುವ ಬಾಗಿಲಿನ ಕಡೆಗೇ ಇತ್ತು.. ರಮ್ಯಾ  ಬಂದು ಮಜ್ಜಿಗೆ ಕೊಟ್ಟಳು. ಆಗ ಬಸ್ಸಪ್ಪ “ ಚಿಕ್ ಬುದ್ದಿ ಇವರು ನನ್ ಒಬ್ಳೆ ಮಗ್ಳು ರಮ್ಯಾ. ಮಗ್ಳೇ ಇವರು ನಮ್ ಚಿಕ್ ಧಣಿಗಳು” ಅಂತ ಹೇಳಿದ. ಆಗ ರಮ್ಯಾ “ಮೌನವಾಗಿ ನಮಸ್ಕಾರ ಮಾಡಿದಳು.” ಇವನೂ ನಮಸ್ಕಾರ ಮಾಡಿದ. ಮಜ್ಜಿಗೆ ಕುಡಿದು  “ನಾನಿನ್ನು ಬರ್ತೀನಿ ಬಸ್ಸಪ್ಪ. ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ” ಅಂತ ಹೇಳಿ ಅಲ್ಲಿಂದ ಹೊರಟ., ಹೋಗೋಕೆ ಮುಂಚೆ ಅವನ ಕಣ್ಣುಗಳು ಅವಳನ್ನೇ ಹುಡುಕ್ತಾ ಇತ್ತು. ಆದ್ರೆ ಅವಳು ಕಾಣಿಸಲಿಲ್ಲ. ಬೇಜಾರಾಗಿ ಹೋಗ್ತಾ ಇದ್ದ. ನಂತರ ಸ್ವಲ್ಪ ದೂರ ಹೋಗಿ ತಿರುಗಿ ನೋಡಿದ. ರಮ್ಯಾ ಅದೊಂದು ಮೂಲೆಯ ಕಿಟಕಿಯಿಂದ ನೋಡ್ತಾ ಇದ್ದಳು. ಅದನ್ನು ಕಂಡ ರಘು ಗೆ ತುಂಬಾ ಖುಷಿ ಆಯ್ತು.. ಅಲ್ಲಿಂದಲೇ ನಸು ನಗು ಬೀರುತ್ತಾ ಟಾಟಾ ಮಾಡಿದ. ಅವಳೂ ನಗುತ್ತಲೇ ಟಾಟಾ ಮಾಡಿದಳು.

          ಮತ್ತೊಂದು ದಿನ ರಘು  ಹೊಳೆಯ ಹತ್ರ ಬರ್ತಾ ಇದ್ದ. ಅವಳು ಅಲ್ಲೆ ಬಟ್ಟೇ ಒಗೀತಾ ಇದ್ಳು.. ಇವನು ಅವಳ ಹತ್ರ  ಹೋಗಿ ರಮ್ಯಾ ಅಂದ.. ಅವಳು ಹಿಂದೆ ತಿರುಗಿ ನೋಡಿದಳು.. ಭಯದಿಂದ ಗಡಗಡ ನಡುಗ್ತಾ ಇದ್ದಳು. “ ಯಾಕೆ ಇಷ್ಟೋಂದು ಭಯ ಪಡ್ತಾ ಇದ್ದೀಯಾ..? ನಾನು ಹಾಗೆ ಹೋಗ್ತಾ ಇದ್ದೇ ನೀನು ಕಂಡೆ. ಅದಕ್ಕೆ ಮಾತಾಡಿಸಿದೆ. ಭಯ ಪಡಬೇಡ.. ಚನ್ನಾಗಿದಿಯಾ? ಆಂದ. ಅವಳು ಏನೂ ಮಾತಾಡದೇ ಭಯದಿಂದ ತಲೆ ತಗ್ಗಿಸಿ ಹೂ ಅಂತ ತಲೆ ಅಲ್ಲಾಡಿಸಿದಳು. ಬಟ್ಟೆ ಎಲ್ಲಾ ಒಗೆದು ಆಯ್ತಾ ಅಂತ ಕೇಳಿದ. ಅದಕ್ಕೂ ಅವಳು ತಲೆ ತಗ್ಗಿಸೀನೇ ಹೂ ಅಂದಳು. ಅವನು ಅವಳ ಕಣ್ಣುಗಳನ್ನು ನೋಡಬೇಕು ಅಂತ ತುಂಬಾ ಆಸೆ ಆಯ್ತು ಅವಳ ಗಲ್ಲವನ್ನು ಹಿಒಡಿದು ಮೇಲಕ್ಕೆತ್ತಿದ. ಅವಳಲ್ಲಿ ಭಯ ಹೆಚ್ಚಾಯ್ತು.. “ ರಮ್ಯಾ ನನ್ನ ಮದುವೆ ಆಗ್ತೀಯ“ ಅಂತ ಕೇಳಿದ. ಅವಳಿಗೆ ಇನ್ನಷ್ಟು ಭಯ ಆಯ್ತು. ಅಲ್ಲಿಂದ ಓಡಿ ಹೋದಳು. ನಂತರ ಸ್ವಲ್ಪ ದೂರ ಹೋಗಿ ನಿಂತು ಮತ್ತೊಮ್ಮೆ ರಘು ಕಡೆಗೆ ತಿರುಗಿ ನೋಡಿದಳು. ನಗು ಬೀರಿದಳು. ಟಾಟಾ ಮಾಡಿದಳು.

ತನ್ನ ಪ್ರೀತಿ ತನಗೆ ಸಿಗುತ್ತೆ ಅಂತ ಖಾತ್ರಿ ಆಯ್ತು. ನಂತರ ರಘು ನೇರವಾಗಿ ಬಸ್ಸಪ್ಪನ ಹತ್ರ ಬಂದ “ ಬಸ್ಸಪ್ಪ ನಿಮ್ಮ ಹತ್ರ ಒಂದು ವಿಷ್ಯಾ ಹೇಳಬೇಕಿತ್ತು” ಇದೇನ್ ಬುದ್ದೀ ಈ ಬಡವನ ಹತ್ರ ಅಂತದ್ದು..? ಹೇಳಿ ಅಂದ ಆಗ ರಘು “ನಾನು ನಿಮ್ಮ ಮಗಳು ರಮ್ಯಾನ ತುಂಬಾ ಇಷ್ಟಾ ಪಡ್ತಿದ್ದೀನಿ.. ದಯವಿಟ್ಟು ನನಗೆ ಕೊಟ್ಟು ಮದುವೆ ಮಾಡಿ. ಅಂತ  ಕೇಳಿದ ಬಸ್ಸಪ್ಪ ಬುದ್ದಿ ಇದೆಲ್ಲಾ ಆಗದೇ ಇರೋದು ಬುಟ್ ಬುಡಿ ಅಂತ ಹೇಳಿದ ಬಸ್ಸಪ್ಪ.. ಆದ್ರೆ ರಘು ಕೇಳಲಿಲ್ಲ. ನಿಮ್ಮ ಮಗಳಿಗೂ ಇಷ್ಟ ಇದೆ. ಆದ್ರೂ ನೀವ್ ಯಾಕೆ ಒಪ್ತಾ ಇಲ್ಲ ಅಂತ ರಘು ದುಖದಿಂದ ಹೇಳಿದ.. “ ನನ್ ಮಗಳನ್ನು ಕರೆದು ನೀವೇ ಕೇಳಿ ಅಂದ ಬಸ್ಸಪ್ಪ.. “ ರಮ್ಯಾಳನ್ನು ಕರೆದು “ಹೇಳವ್ವಾ ನೀನು ಚಿಕ್ ಬುದ್ದಿಯವರನ್ನು ಮದ್ವೆ ಆಗ್ತೀನಿ ಅಂತ ಬಾಯ್ ಬುಟ್ ಹೇಳು ನೋಡೋಣ ಅಂದ. ಅವಳು ಏನನ್ನೂ ಹೇಳದೇ ಕಣ್ಣೀರು ಹಾಕ್ತಾ ಇದ್ಳು. ಅತ್ತು ಗೋಗರೀತಾ ಇದ್ಳು. “ ಹೇಳು ರಮ್ಯಾ “ನನ್ನ ಮದ್ವೆ ಆಗೋಕೆ ಒಪ್ಪಿಗೆ ಇದೆ ಅಂತ ಹೇಳು.. ಮನಸು ಬಿಚ್ಚಿ ಹೇಳು.. ಅಂತ ರಘು ಕೇಳ್ತಾನೆ ಆದ್ರೆ ಇದ್ರಿಂದ ಅವಳಿಗೆ ಮತ್ತಷ್ಟು ದುಃಖ ಹೆಚ್ಚಾಗುತ್ತೆ.. ಒಳಗೆ ಹೋಗಿ ಜೋರಾಗಿ ಅಳೋಕೆ ಶುರು ಮಾಡ್ತಾಳೆ. ಆಗ ಒಳಗೆ ಬಂದ ರಘು ಹೇಳು ರಮ್ಯಾ ಈಗ ನೀನು ಮೌನವಾಗಿದ್ರೆ ಹೇಗೆ ಬಾಯಿ ಬಿಟ್ಟು ಹೇಳು ಅಂತ ಅವಳನ್ನು ಬೇಡಿಕೊಳ್ತಾನೆ.. ಆಗ ಅವಳು ಮತ್ತಷ್ಟು ಕಣ್ಣೀರು ಹಾಕಿ ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ತಾಳೆ.. ನಂತರ ಒಳಗೆ ಬಂದ ಬಸ್ಸಪ್ಪ “ಅವಳು ಏನೂ ಹೇಳಲ್ಲ ಬುದ್ದಿ.. ಅವಳ ಜೀವನಕ್ಕೆ ಆ ಕಣ್ಣೀರೇ ಜೋಡಿ..  ಯಾಕಂದ್ರೆ ಮಾತಾಡೋ ಶಕ್ತಿ ಆ ದ್ಯವ್ರು ನನ್ ಮಗಳಿಗೆ ಕೊಟ್ಟಿಲ್ಲ ಅಂತ ಬಸ್ಸಪ್ಪ ಕಣ್ಣೀರು ಹಾಕ್ತಾ ಹೇಳ್ತಾನೆ. ಅದಿಕ್ಕೆ ಬುದ್ದಿ ನನ್ ಮಗ್ಳಿಗೆ ಇಷ್ಟು ವರ್ಷ ಆದ್ರೂ ಯಾರೂ ಮದ್ವೆ ಆಗ್ಲಿಲ್ಲ..  ಆದ್ರೆ ಈಗ ನಿಮ್ಮ ಮೇಲೆ ಮನಸಿದ್ರೂ ಹೇಳೋಕೆ ಆಗ್ತಿಲ್ಲ.. ಅಂತಾನೆ. ಇದನ್ನು ಕೇಳಿದ ರಘುಪತಿರಾಯನಿಗೆ ಬೆಟ್ಟವೇ ಕಳಚಿ ಮೇಲೆ ಬಿದ್ದಂತಾಗುತ್ತದೆ.. ದಿಗ್ಭ್ರಾಂತನಾಗಿ ನಿಂತು ಬಿಡ್ತಾನೆ.


ಆದ್ರೆ ನಂತರ ಪ್ರೀತಿಸಿದ್ದು ರಮ್ಯಾಳ ಮನಸ್ಸನ್ನು. ಅವಳು ಹೇಗೆ ಇದ್ರು ನಾನು ಸ್ವೀಕರಿಸ್ತೀನಿ ಅಂತಾನೆ. ರಘು ವಿನ ತಂದೆ ಮಂಜುನಾಥ ರಾಯರೂ ಒಪ್ಪುತ್ತಾರೆ. ಒಂದಿನ ಮಂಜುನಾಥ ರಾಯರು  ಬಸ್ಸಪ್ಪ ಮತ್ತು ಅವನ ಮಗಳನ್ನು ಅವರ ಮನೆಗೆ ಊಟಕ್ಕೆ ಕರೀತಾನೆ.. ನೀವು ಊಟ ಮಾಡಿ ನಾನು ನಾನ್ ಸ್ವಲ್ಪ ತೋಟದಲ್ಲಿ ಹೋಗಿ ಬರ್ತೀನಿ ಅಂತ ಹೇಳಿ ಅವರು ಹೋಗ್ತಾರೆ. ನಂತರ ರಘು  ಒಳಗೆ ಬರ್ತಾನೆ.. ಇವರು ಊಟ ಮಾಡ್ತಿರೋದನ್ನು ನೋಡಿದ ಅವನು ರಮ್ಯಾ ಹತ್ರ ಬರ್ತಾನೆ. ಬಸ್ಸಪ್ಪ ಊಟದ ತಟ್ಟೆ ತೊಳೆಯಲು ಎದ್ದು ಹೋಗಿರ್ತಾನೆ..  ಆಗ ರಘು ನೀನೇ ನಿನ್ ಕೈಯ್ಯಾರೆ ನನಗೆ ಊಟ ಮಾಡಿಸು ರಮ್ಯಾ ಅಂತ ಹೇಳ್ತಾನೆ.. ಅದಕ್ಕೆ ಅವಳು ನಗು ನಗುತ್ತಾ ನಾಚಿಕೆಯಿಂದ ಊಟ ಮಾಡಿಸ್ತಾಳೆ. ಅದು ಕೊನೆಯ ತುತ್ತು. ರಮ್ಯಾ ತನ್ನ ಕೈಯಲ್ಲಿ ತುತ್ತು ಹಿಡ್ಕೊಂಡು ರಘು ಗೆ ತಿನ್ನಿಸ್ತಾಳೆ ಆದ್ರೆ ಕೈ ತೆಗಿಯೋದಿಲ್ಲ. ಕೈ ತೆಗಿ ರಮ್ಯಾ.. ಅಂದ್ರೂ ತೆಗಿಯೋದಿಲ್ಲ . ಯಾಕಂದ್ರೆ ಅಷ್ಟರಲ್ಲಿ ಅವಳ ಪ್ರಾಣ ಪಕ್ಷಿ ಹಾರಿ ಹೋಗಿರುತ್ತೆ.. ಇದೇನ್ ಆಯ್ತು..?? ಅಂತ ಭ್ರಾಂತಿ ಗೊಂಡು ಅವಳನ್ನು ಎಬ್ಬಿಸ್ತಾನೆ. ಅದ್ರೆ ಜೀವ ಇರಲ್ಲ.. ಮಾವ ಮಾವ ಅಂತ ಕೂಗಿ ಹೊರಗೆ ಬರ್ತಾನೆ.  ಆದ್ರೆ ತಟ್ಟೆ ತೊಳೆಯೋಕೆ ಬಂದಿದ್ದ ಬಸ್ಸಪ್ಪ ಆ ವಿಷದಿಂದಾಗಿ ಅದೇ ಜಾಗದಲ್ಲೇ ಪ್ರಾಣ ಬಿಡ್ತಾನೆ..  ಇದನ್ನು ಕಂಡ ರಘು ಮತ್ತೆ ಓಡಿ ರಮ್ಯಾ ಹತ್ರಾ ಬರ್ತಾನೆ ಆದ್ರೆ ಅವನಿಗೆ ಕಣ್ಣು ಮಂಜಾಗುತ್ತೆ.. ಹೊಸ್ತಇಲಿಗೆ ಎಡವಿ ರಮ್ಯಾ ಹತ್ರ ಬೀಳ್ತಾನೆ.. ರಮ್ಯಾ ರಮ್ಯಾ ಅಂತ ತೆವಳುತ್ತಾ ಬರ್ತಾನೆ.. ಅವಳ ಕೈ ಮೇಲೆ ಕೈ ಇಡ್ತಾನೆ.. ಅಷ್ಟರಲ್ಲಿ ರಘು ಕೂಡಾ ಪ್ರಾಣ ಬಿಡ್ತಾನೆ.. ಯಾಕಂದ್ರೆ ಅವರನ್ನು ತನ್ನ ಮಗನಿಂದ ದೂರ ಮಾಡೋದಕ್ಕಾಗಿ ಮಂಜುನಾಥ ರಾಯರು ಆ ಊಟದಲ್ಲಿ ವಿಷ ಹಾಕಿರ್ತಾರೆ.. ನಂತರ ಮನೆಗೆ ಬಂದ ಮಂಜುನಾಥರಾಯರು ತನ್ನ ಮಗನೂ ಸತ್ತಿರೋದನ್ನು ನೋಡಿ ಆತಂಕಗೊಳ್ತಾನೆ. ಒಬ್ಬನೇ ಮಗನನ್ನು ಕಳೆದುಕೊಂಡು ದುಖ ತಡೆಯಲಾಗದೆ ಅವನೂ ನೇಣಿಗೆ ಶರಣಾಗ್ತಾನೆ.. ಜಮೀನ್ದಾರೀ ಮನೆತನ ದುರಂತವಾಗಿ ಅಂತ್ಯವಾಗುತ್ತದೆ.
Share this article :

+ comments + 1 comments

ಶೇಖರ‍್ ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ ಇದನ್ನೆ ಮುಂದುವರಿಸಿ.......... ಕಥೆನು ಚನ್ನಾಗಿದೆ ನಾನು ಹೇಳ್ತಿರೋದು ಕಥಾ ವಸ್ತುವಿನ ಬಗ್ಗೆ ಮಾರಾಯ ಎನಪ್ಪ ಇಂಥ ದುರಂತ ಕತೆಗೆ ಚೆನಾಗಿದೆ ಅಂತಾನಲ್ಲಾ ಅಂತ ತಿಳ್ಕೋಬೇಡ Good Luck

Post a Comment

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು