ಸಿನೆಮಾ

Share This Article To your Friends

ಬದುಕಲಿ ಹ್ಯಾಂಗ..??


ನಂದು ಬೆಂಗಳೂರು ಗ್ರಾಮಾಂತರದಲ್ಲಿ ಇರುವಂತಹ ಒಂದು ಪುಟ್ಟ ಹಳ್ಳಿ..  ಹೊಸದಾಗಿ ಬಿ.ಎಡ್ ಕಾಲೇಜಿಗೆ ಸೇರಿಕೊಂಡಿದ್ದರಿಂದ ಯಾರ ಪರಿಚಯವೂ ಆಗಿರಲಿಲ್ಲ. ಅದೊಂದು ದಿನ ಟ್ಯಾಲೆಂಟ್ಸ್ ಡೇ ಅಂತ ಮಾಡಿದ್ರು. ಆವತ್ತು ಎಲ್ಲರೂ ತಮ್ಮ ತಮ್ಮ  ಪ್ರತಿಭೆಯನ್ನು ಸ್ಟೇಜ್ ಮೇಲೆ ಹೋಗಿ ತೋರಿಸ್ತಾ ಇದ್ರು.  ಆಗ ಎಲ್ಲರಿಗಿಂತ ವಿಭಿನ್ನವಾಗಿ ಇಡೀ ಕಾಲೇಜನ್ನೇ ನಕ್ಕು ನಗಿಸಿ ಎಲ್ಲರ ಮನದಲ್ಲಿ ಉಳಿದ ಏಕೈಕ ಹುಡುಗ ಅಂದ್ರೆ ರವಿವರ್ಮ..

 ಅವನ ಮಾತುಗಳನ್ನು ಕೇಳ್ತಾ ಕೇಳ್ತಾ ನನ್ನನ್ನು ನಾನೇ ಮರೆತುಹೋದೆ..ಆ ಒಂದು ಮಾತಿನಿಂದಲೇ ಅವನ ಮೇಲೆ ನನಗೆ ಪ್ರೇಮಾಂಕುರವಾಗಿಬಿಟ್ಟಿತ್ತು..          ಆದ್ರೆ ಅದನ್ನು ನಾನು ಹೇಗೆ ಹೇಳಲಿ.? ಅವನಿಗೆ ನಾನು ಯಾರು ಅಂತಾನೇ ಗೊತ್ತಿಲ್ಲ. ಎರಡನೆಯ ಸೆಮಿಸ್ಟರ್ ಸಮಯದಲ್ಲಿ  ನಮ್ಮನ್ನು ಒಂದು ಶಾಲೆಗೆ ಟ್ರೈನಿಂಗ್ ಹಾಕಿದ್ರು.. ರವಿ ಕೂಡಾ ನಮ್ಮ ಶಾಲೆಗೆ ಟ್ರೈನಿಂಗ್ ಬಂದ್ರು..  ಒಬ್ರು ಪಾಠ ಮಾಡ್ತಿದ್ರೆ, ಉಳಿದವರೆಲ್ಲರೂ  ಅವರ ಪಾಠವನ್ನು ಕೇಳಿ ಅವರು ಮಾಡಿದ ತಪ್ಪುಗಳನ್ನು ಹೇಳಬೇಕಿತ್ತು.. ಆ ರವಿವರ್ಮನ ತನ್ನ ಚಿತ್ರಕಲೆಯಿಂದಲೇ ಎಲ್ಲರ ಮನ ಗೆದ್ದಿದ್ದ. ಆದ್ರೆ ಈ ರವಿವರ್ಮ ತನ್ನ ಮಾತಿನ ಚಾಣಾಕ್ಷತೆಯಿಂದಲೇ ಎಲ್ಲರ ಮನ ಗೆದ್ದು ಬಿಟ್ಟಿದ್ದ. ಅವನು ಪಾಠ ಮಾಡುತ್ತಿದರುವ ಶೈಲಿಯನ್ನು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ತಾ ಇತ್ತು. ಆದ್ರೂ ಅವರನ್ನು ಮಾತಾಡಿಸಬೇಕಲ್ವಾ ಅಂತ ಏನಾದ್ರೂ ಒಂದು ತಪ್ಪನ್ನು ಹೇಳ್ತಾ ಇದ್ದೆ.. ”ಸರ್ ನೀವು ಪಾಠ ಮಾಡುವಾಗ ಬರೀ ನಗಿಸ್ತಾ ಪಾಠ ಮಾಡ್ತೀರ ಇದ್ರಿಂದ ಸ್ಟೂಡೆಂಟ್ಸ್ ಗೆ ಪಾಠದ ಕಡೆ ಜ್ಞಾನ ಇರೋದಿಲ್ಲ ಅಂತ ಹೇಳ್ತಿದ್ದೆ”. ಆಗ ಅವರು ತಾನು ಮಾಡಿದ ಪಾಠದ ಬಗ್ಗೆ ಮಕ್ಕಳಿಗೆ ಪ್ರೆಶ್ನೆ ಕೇಳ್ತಾ ಇದ್ರು. ಅಚ್ಚರಿ ಅಂದ್ರೆ ಮಕ್ಕಳು ಒಂದೂ ತಪ್ಪಿಲ್ಲದೇ ಉತ್ತರ ಹೇಳ್ತಾ ಇದ್ರು. ನಾವು ಸುಮ್ಮನಾಗ್ತಾ ಇದ್ದೆ.

          ನನಗೆ ಸವರ ಮೇಲಿನ ಪ್ರೀತಿ  ಹೆಚ್ಚಾಯ್ತು. ಫೋನ್ ನಂಬರ್ ತಗೊಂಡೆ. ಆಗಾಗ ಫೋನ್ ಮಾಡ್ತಿದ್ದೆ, ತುಂಬಾ ಹತ್ರ ಆದ್ವಿ. ಅದು ಸೆಪ್ಟೆಂಬರ್ 23 ನೇ ತಾರೀಕು. ನಮ್ಮ ಟ್ರೈನಿಂಗ್ ನ ಕೊನೆಯ ದಿನ. ಕಾಲೇಜ್ ಗೆ ಹೋದ್ರೆ ನಾವಿಬ್ರೂ ಈ ಥರ ಇರೋದಕ್ಕೆ ಆಗೋದಿಲ್ಲ ಅಂತ ಮನಸಿಗೆ ನೋವಾಯ್ತು. ಆ ರಾತ್ರಿ ರವಿಗೆ ಫೋನ್ ಮಾಡಿ ಎರಡು ಗಂಟೆ ಅತ್ತಿದ್ದೀನಿ.. ಆದ್ರೆ ಪ್ರೀತಿಸ್ತೀನಿ ಅಂತ ಹೇಳೋ ಧೈರ್ಯ ಮಾತ್ರ ಆಗಲಿಲ್ಲ..  ಪ್ರತಿ ದಿನ ಸಂಜೆ ಕಾಲೇಜು ಬಿಟ್ಟ ಮೇಲೆ ನಾವು ಜೊತೆಯಾಗ್ತಾ ಇದ್ವಿ..

ಆವತ್ತು ನಮ್ಮ ಬಿ.ಎಡ್ ನ ಕೊನೆಯ ದಿನ..  ರವಿ ನನಗೆ ಒಂದು ಪುಟಾಣಿ ಕಪ್ಪೆ ಚಿಪ್ಪಿನಲ್ಲಿ ಎರಡು ಜೋಡಿ ಹಕ್ಕಿಗಳು ಇರೋ ಗಿಫ್ಟ್ ಕೊಟ್ಟ. ನಾನು ರಾಧಾಕೃಷ್ಣ ಜೋಡಿ ಗೊಂಬೆ ಕೊಟ್ಟೆ. ಅವನು ನನ್ನಿಂದ ದೂರ ಹೋಗ್ತಾ ಇದ್ದ. ಆದ್ರೆ ಅವನ ಕಣ್ಣಲ್ಲಿ ಅದ್ಯಾಕೋ ನೀರಿತ್ತು, ನಾನು ಏನೂ ಮಾತಾಡಲಿಲ್ಲ. ಯಾಕಂದ್ರೆ ನಾನು ಮಾತಾಡೋಕೆ ಶುರು ಮಾಡಿದ್ರೆ ನಾನು ಅಳುನೇ ಬರ್ತಿತ್ತು.. ಅವನು ಹೋದ..  ನನಗೆ ತಡಿಯೋಕೆ ಆಗಲಿಲ್ಲ.. ಫೋನ್ ಮಾಡಿದೆ.. ಯಾಕೋ ಅಳ್ತಾ ಇದ್ದೆ ಅಂತ ಕೇಳಿದೆ..ಅದಕ್ಕೆ ಅವು ಏನ್ ಮಾಡ್ಲಿ ಲಕ್ಷ್ಮಿ..? ಜೀವನ ಪೂರ್ತಿ ಜೊತೆಯಾಗಿ ಇರ್ತಾರೆ ಅಂತ ಅಂದುಕೊಂಡಿದ್ದೆ. ಆದ್ರೆ ಅವರ ಈ ಜೀವದ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಹೋಗ್ತಿದ್ದಾರೆ. ಅವನೂ ಅಳ್ತಾ ಇದ್ದ.. ನನಗೆ ಅವನ ದುಖ ನೋಡೋಕೆ ಆಗಲಿಲ್ಲ.. ನಿನ್ನ ಬಿಟ್ಟು ನಾನು ಬದುಕೋದಿಲ್ಲ ಕಣೋ.. ನಾಳೆಯಿಂದ ನೀನು ಸಿಗೋದಿಲ್ಲ. ನಾನು ಸತ್ತೋಗ್ತೀನಿ ಅಂತ ಅಳ್ತಾ ಇದ್ದೆ. ಮನದ ಪ್ರೀತಿ ಕಣ್ಣೀರಿನ ಮೂಲಕ ಹೊರಗೆ ಬಂತು. ಅವನು “ಲಕ್ಷ್ಮಿ ನಿನ್ನ ನೋಡಬೇಕು ಅನಿಸ್ತಿದೆ. ಎಲ್ಲಿದ್ದೀಯ ಅಂತ ಅಂದ. ಬಸ್ಟಾಪ್ ನಲ್ಲಿ ನೀನು ಕುಳಿತಿದ್ದ ಜಾಗದಲ್ಲೇ ನಿನಗಾಗಿ ಕಾಯ್ತಾ ಇದ್ದೀನಿ ಬಾ ಅಂದಳು.. ಅವನು ಬಸ್ ನಿಂದ ಇಳಿದು ಓಡೋಡಿ ಬಂದ. ಆ ಖುಷಿ ಅವನ ಪ್ರೀತಿ ನೋಡಿ ನಾನು ಅವನಲ್ಲಿಗೆ ಓಡಿ ಹೋದೆ. ಆದ್ರೆ ಬ್ರೇಕ್ ಫೈಲ್ ಆಗಿದ್ದ ಗಾಡಿ ದಿಢೀರನೆ ಬಂದು ನನ್ನ ರವಿವರ್ಮನ ಜೀವಕ್ಕೆ ಕುತ್ತು ತಂದು ಬಿಟ್ಟಿತು,., ನನ್ನ ತೊಡೆಯ ಮೇಲೆ ಮಲಗುತ್ತಾ “ಲಕ್ಷ್ಮೀ ನಾನು ಬದುಕಿರೋವರೆಗೂ ನಿನ್ನ ಜೊತೆ ಇರಬೇಕು ಅಂತ ಆಸೆ ಇತ್ತು. ಆದ್ರೆ ನಿನ್ನ ಮಡಿಲಲ್ಲೇ ಪ್ರಾಣ ಬಿಡ್ತಾ ಇದ್ದೀನಿ.. ನಿನ್ನ ಜೀವನ ಪೂರ್ತಿ ನಿನ್ನ ಜೊತೆ ಇರೋಕೆ ಆಗ್ತಾ ಇಲ್ಲ.. ಕ್ಷಮಿಸು ಅಂತ ಅಂದ.. ಅದು ಕೊನೆಯ ಉಸಿರು.. ನನ್ನ ಪ್ರೀತಿ ನನ್ನ ಮಡಿಲಲ್ಲೆ ಕೊನೆಯುಸಿರು ಎಳೀತು.. ಸದಾ ಎಲ್ಲರನ್ನು ನಕ್ಕು ನಗಿಸ್ತಾ ಇದ್ದ ಆ ಜೀವ ಜೀವನ ಪರ್ಯಂತ ದುಃಖ ತುಂಬಿ ಹೋಯ್ತು.. ಆ ಜೀವಾನ ಬಿಟ್ಟು ನಾ ಹೇಗೆ ಬದುಕಿರಲಿ .,..??
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು