ಸಿನೆಮಾ

Share This Article To your Friends

ಮಮುಟಿ ಈಗ ಶಿಖಾರಿಗೆ ಹೊರಟಿದ್ದಾರೆ.. !!


ಮಮುಟ್ಟಿ........ ಹೆಸರಿನಲ್ಲೇ ಧಮ್ ಇರೋ ಖಡಕ್ ನಟ..... (mamuti Dialogue) ಮಲಯಾಳಂ   ಸೂಪರ್ ಸ್ಟಾರ್  ಮಮುಟಿ  ಈಗ ಕನ್ನಡಕ್ಕೆ ಬರುತ್ತಿದ್ದಾರೆ..!! (song) ಹೌದು .. ಕನ್ನಡದ  'ಶಿಕಾರಿ' ಚಿತ್ರದಲ್ಲಿ ಮಮುಟಿ ಬಣ್ಣ ಹಚ್ತಾ ಇದ್ದಾರೆ. ಮಲಯಾಳಂ ನಲ್ಲಿ ಅತಿ ದೊಡ್ಡ ಹೆಸರು ಮಾಡಿರೋ ಮಮ್ಮುಟಿ ಗೆ ಕನ್ನಡದಲ್ಲಿ ಮಾರ್ಕೇಟ್ ಇದ್ಯಾ ಅಂತ ಸ್ವತಃ ಅವರನ್ನೇ ಕೇಳಿದ್ರೆ ಅವರು ಹೇಳೋದು ಏನ್ ಗೊತ್ತಾ..? ನನಗೆ ಕನ್ನಡದಲ್ಲಿ ಮಾರ್ಕೇಟ್ ಇಲ್ಲ ಅಂತ ಗೊತ್ತು ಆದ್ರೆ ಕೆ. ಮಂಜುರವರು ನನಗೆ ಸೂಕ್ತ ಸಂಭಾವನೆ ಕೊಟ್ಟಿದ್ದಾರೆ. ಆ ಸಂಭಾವನೆಗಾಗಿ ಕನ್ನಡ ಚಿತ್ರ ರಂಗದಲ್ಲಿ ಕೆಲಸ ಮಾಡ್ತಿದ್ದೀನಿ ಅಂತ ಹೇಳಿದ್ರು. ಇದರ ಅರ್ಥ ಮಮುಟಿ ಕನ್ನಡಕ್ಕೆ ಬಂದಿರೋದು “ಸಂಭಾವನೆಯ ಶಿಖಾರಿಗಾಗಿ” ಅನ್ನೋದು ಮಾತ್ರ ಸ್ಪಷ್ಟ..  ಈ ಶಿಖಾರಿ ಚಿತ್ರದಲ್ಲಿ  ಸ್ವತಃ ಮಮುಟಿಯವರೇ ಧ್ವನಿ ಕೊಟ್ಟಿದ್ದಾರೆ.  'ಗುಬ್ಬಚ್ಚಿಗಳು' ಚಿತ್ರವನ್ನು ನಿದೇರ್ಶಿಸಿರೋ  ಅಭಯ್ ಸಿಂಹ ಈ ಶಿಖಾರಿ ಚಿತ್ರವನ್ನು ನಿರ್ದೇಶಿಸ್ತಿದ್ದಾರೆ. ಇದು ಇವರ ಎರಡನೇ ಚಿತ್ರ.. ಇನ್ನು ಈ  'ಶಿಕಾರಿ'ಯಲ್ಲಿ ಮಮ್ಮುಟ್ಟಿ ನಾಯಕ ನಟನಾಗಿ ನಟಿಸ್ತಿದ್ರೆ  ಪೂನಮ್ ಬಾಜ್ವಾ ನಾಯಕಿಯಾಗಿ ಕಾಣಿಸಿಕೊಳ್ತಾ ಇದ್ದಾರೆ.  ಶಿಕಾರಿ ಚಿತ್ರ   ಕನ್ನಡದ ಸ್ವಮೇಕ್ ಚಿತ್ರವಲ್ಲ. ಇದು ಈಗಾಗಲೇ ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಅಲ್ಲಿ ಬಹಳಷ್ಟು ಹೆಸರನ್ನು ತಂದು ಕೊಡ್ತಿದೆ. ಆದ್ರೆ ಕನ್ನಡದಲ್ಲಿ ಇದೇ ಮಾರ್ಚ್ 30ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಅಂತಾರೆ ನಿರ್ಮಾಪಕ ಕೆ. ಮಂಜು..  

ಮಮುಟಿಯವರ ಶಿಖಾರಿಯಿಂದ ನಿರ್ಮಾಪಕ ಕೆ. ಮಂಜುರವರ ಜೋಳಿಗೆ ತುಂಬುತ್ತಾ ಅನ್ನೋದು ಸದ್ಯದ ಯಕ್ಷ ಪ್ರೆಶ್ನೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು