ಸಿನೆಮಾ

Share This Article To your Friends

ಹಬ್ಬದ ಹಿಂದಿನ ಕಣ್ಣೀರು


ಹಬ್ಬದ ಹಿಂದಿನ ಕಣ್ಣೀರು

ಯುಗಾದಿ ಹಬ್ಬವನ್ನು ಎಲ್ಲರೂ ಆಚರಿಸ್ತಾರೆ.. ಆದ್ರೆ ಈ ದಿನದ ಯುಗಾದಿ ಹಬ್ಬವನ್ನು ಇಡೀ ನಾಡಿನ ಮತ್ತು ದೇಶದ ಜನತೆಯೇ ವಿಜೃಂಭಣೆಯಿಂದ ಆಚರಿಸ್ತಾರೆ. ಆದ್ರೆ ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರ ವಂಶದಲ್ಲಿ ಈ ಯುಗಾದಿಯು ಕಣ್ಣೀರು ತಂದಿದೆ.. ನಾಡೆಲ್ಲವೂ ಸಿಹಿ ಕಹಿಯಲ್ಲಿ ಮಿಂದೇಳುತ್ತಿರುವಾಗ ಕ್ರಾಂತಿಕಾರಿ ಹೋರಾಟಗಾರರ ಮನೆಯಲ್ಲಿ ಮಾತ್ರ ಕಣ್ಣೀರು ಹರಿಯುತ್ತಿದೆ. ಅವರ ಮನದಲ್ಲಿ ಸಂತೋ಼ವೇ ಇಲ್ಲ.. ಇದಕ್ಕೆ ಕಾರಣ ಇಂದಿನ ಜನರ ಮನಸ್ಥಿತಿ..

ಹೌದು.. ಯಾಕಂದ್ರೆ ಇದೇ ಮಾರ್ಚ 23 ರಂದು 1931 ರಂದು ಭಾರತದ ಧೀಮಂತ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖ ದೇವ್ ರನ್ನು ಬ್ರಿಟೀಷರು ಗಲ್ಲಿಗೆ ಏರಿಸ್ತಾರೆ.. ನಮ್ಮ ದೇಶದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದ ಈ ವೀರ ಯೋಧರು ದೇಶಕ್ಕಾಗಿ, ದೇಶದ ಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ರು..

ನೇಣುಗಂಬಕ್ಕೆ ಹತ್ತುವಾಗ ಬ್ರಿಟೀಷ್ ಅಧಿಕಾರಿಯೊಬ್ಬ ಭಗತ್ ಸಿಂಗ್ ಗೆ ಹೇಳಿದ್ರಂತೆ “ ನೀನು ಇದೇ ಜನರಿಗಾಗಿ ಸಾಯ್ತಾ ಇದ್ದೀಯ. ಆದ್ರೆ ನಿನ್ನನ್ನು ಕಾಪಾಡೋದಕ್ಕಾಗಲೀ ಅಥವಾ ನಿನ್ನನ್ನು ನೇಣು ಹಾಕಬೇಡಿ ಅಂತ ಕೂಗಿಕೊಳ್ಳೋರು ಕೂಡಾ ಗತಿ ಇಲ್ಲವಲ್ಲ ಇಂಥವರಿಗಾಗಿ ನೀನು ಪ್ರಾಣ ತ್ಯಾಗ ಮಾಡ್ತಾ ಇದ್ದೀಯಲ್ವಾ..? ಅಂತ.. ಆದ್ರೆ ಭಗತ್ ಸಿಂಗ್ ನಗುನಗುತ್ತಾ “ಈ ಒಬ್ಬ ಭಗತ್ ಸಿಂಗ್ ಈವತ್ತು ಸತ್ತರೆ ನೂರಾರು ಭಗತ್ ಸಿಂಗ್ ಗಳು ಈ ಮಣ್ಣಲ್ಲಿ ಹುಟ್ಟುತ್ತಾರೆ.. ಈ ಮಣ್ಣಿನಲ್ಲಿ ಆ ಗುಣ ಇದೆ”.. ಅಂತ ಹೇಳಿ ನಗುನಗುತ್ತಾ ನೇಣಿಗೆ ಶರಣಾದ್ರು..  ಅಂತಾ ಅಭಿಮಾನ ಇತ್ತು ಆ ಮೂವರು ವೀರ ಯೋಧರಿಗೆ., ಆದ್ರೆ ಇಂದು ನಾವು ಆ ಯೋಧರ ಪ್ರಾಣ ತ್ಯಾಗದ ಮಹತ್ವವನ್ನು ತಿಳಿಯದೇ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸ್ತಿದ್ರೆ ವೀರ ಯೋಧರ ಕುಟುಂಬಗಳಲ್ಲಿ ಅದೆಂಥಾ ನೋವಾಗಬಹುದು..?? “ ಅವರು ಮಾಡಿದ ಹೋರಾಟ, ತ್ಯಾಗ, ಬಲಿದಾನ ಕ್ಕೆ ನಾವೆಲ್ಲರೂ ಋಣಿಯಾಗಿರಬೇಕಾಗಿರುವುದು ಅವಶ್ಯಕ. ಯಾಕಂದ್ರೆ ಅಂದು ಅವರು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡದಿದ್ರೆ ನಾವು ಇಂದಿನ ಯುಗಾದಿಯನ್ನು ಕಾಣೋಕೇ ಸಾಧ್ಯವಾಗ್ತಾ ಇರಲಿಲ್ಲ..!! ಬ್ರಿಟೀಷರ ಅಡಿಯಾಳಾಗಿ ಬಿದ್ದಿರ್ತಾ ಇದ್ವಿ..!!

ದೇಶಕ್ಕಾಗಿ ದುಡಿದವರ, ಮಡಿದವರನ್ನು ಸ್ಮರಿಸಿ.. ಆರಾಧಿಸಿ.... ಇತರರಿಗೆ ಮಾದರಿಯಾಗಿ ಸಹಾಯ ಮಾಡಿ.. ದೀನದಲಿತರ ಉದ್ದಾರಕ್ಕಾಗಿ ಶ್ರಮಿಸಿ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು