ಸಿನೆಮಾ

Share This Article To your Friends

ರೆಡ್ಡಿ ಬಾಯ್ಬಿಟ್ಟ ಭಯಾನಕ ಸತ್ಯ..!!

ಮೈನಿಂಗ್ ಮಾಫಿಯಾದಲ್ಲಿ ಸಿಲುಕಿಕೊಂಡಿರುವ ಗಣಿಧಣಿ,  ಮಾಜಿ ಸಚಿವ ಜನಾರ್ದನ ರೆಡ್ಡಿ ಕಹಿ ಸತ್ಯವನ್ನು ತಡವಾಗಿ ಸಿಬಿಐ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಓಬುಳಾಪುರಂ ಮೈನಿಂಗ್ ಕಂಪೆನಿಯ ಒಡೆಯನಾದ ಗಾಲಿ ಜನಾರ್ಧನ ರೆಡ್ಡಿ ಮತ್ತು ಆತನ ಬಲಗೈ ಬಂಟ ಅಲಿಖಾನ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರತ್ಯೇಕವಾಗಿ ಗಂಗಾನಗರದ ಸಿಬಿಐ ಕಛೇರಿಯಲ್ಲಿ  ವಿಚಾರಣೆ ನಡೆಸಿದರು.. ಇಷ್ಟು ದಿನ ಏನನ್ನೂ ಹೇಳದ ರೆಡ್ಡಿ ಕೊನೆಗೂ ಕಹಿ ಸತ್ಯಾಂಶವನ್ನು ಕಕ್ಕಿದ್ದಾರೆ. ಇದು ನಿಜಕ್ಕೂ ಬೆಚ್ಚಿ ಬೀಳುವಂತಹ ಅಚ್ಚರಿಯಾದ ವಿಷಯವಾಗಿದೆ.
 
ಚೀನಾದಲ್ಲಿ ಕಬ್ಬಿಣ ಅದಿರುಗಳಿಗೆ ಅತಿಯಾಗಿ ಬೇಡಿಕೆ ಇತ್ತು.. ಅದಕ್ಕಾಗಿ ನಾವು ಅಕ್ರಮವಾಗಿ ಚೀನಾಗೆ ಅದಿರುಯುಕ್ತ ಮಣ್ಣನ್ನು ರವಾನಿಸಿ ಹಣ ಮಾಡಿದ್ದೆವು..
ಒಂದು ವರ್ಷದಲ್ಲಿ ಸುಮಾರು 80 ಲಕ್ಷ ಟನ್ ಕಬ್ಬಿಣ ಅದಿರನ್ನು ಚೀನಾಗೆ ರಫ್ತು ಮಾಡಲಾಗಿದೆ ಎಂಬ ಭಯಾನಕ ಸತ್ಯವನ್ನು ರೆಡ್ಡಿ ಬಾಯಿಬಿಟ್ಟಿದ್ದಾರೆ.

 ಚೀನಾದಲ್ಲಿನ ಒಲಿಂಪಿಕ್ ಕ್ರೀಡೆಯ ಕ್ರೀಡಾಂಗಣ ಮತ್ತು ವಸತಿ ಸಮುಚ್ಚಯ ನಿರ್ಮಿಸಲು ಉಕ್ಕಿನ ಅಗತ್ಯತೆ ಇತ್ತು. ಹೀಗಾಗಿ ಕಚ್ಚಾ ಅದಿರಿನ ಬೆಲೆ ಗಗನಕ್ಕೇರಿತು. ಅದಕ್ಕೆ ಶೇ.40ರಷ್ಟು ಕಬ್ಬಿಣದ ಅಂಶವಿರುವ ಅದಿರನ್ನು ಚೀನಾ ಗೆ  ರಫ್ತು ಮಾಡಿದ್ದೆವು.. ಇದರಿಂದ ನಮ್ಮ ಆದಾಯವೂ ಹೆಚ್ಚಾಯ್ತು..ಅಂತ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಅಷ್ಟೆ ಅಲ್ಲಾ ಅವರು ಮಾಡುತ್ತಿದ್ದ
ಅಕ್ರಮ ಗಣಿಗಾರಿಕೆಯನ್ನು ಮುಚ್ಚಿಹಾಕಲು ಅಧಿಕಾರಿಗಳಿಗೆ ಲಂಚವನ್ನೂ ನೀಡಿ ಅವರ ಸಹಾಯವನ್ನೂ ಪಡೆದರಂತೆ..!! ಇದರಿಂದ ಮೈನಿಂಗ್ ಮಾಫಿಯ ಎಗ್ಗು ಸಿಗ್ಗಿಲ್ಲದೇ ರಾಜಾರೋಷವಾಗಿ ನಡೆದುಕೊಂಡು ಹೋಗಲು ಸಹಾಯವಾಯ್ತು ಎಂಬ ಭಯಾನಕ ಸತ್ಯವನ್ನೂ ಕೂಡಾ ರೆಡ್ಡಿ ಬಾಯ್ಬಿಟ್ಟಿದ್ದಾರೆ. ಇಂಥಾ ಹಲವು ಭಯಾನಕ ಸತ್ಯಗಳ ಹಿಂದೆ ಅದೆಷ್ಟು ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋದು ಬೆಚ್ಚಿ ಬೀಳಿಸಿದ ಸತ್ಯವಾಗಿದೆ. ಒಟ್ಟಿನಲ್ಲಿ ಕರ್ನಾಟಕವನ್ನು ಬಗೆದು ತಿನ್ನೋಕೆ ರೆಡ್ಡಿಗಳು ಮತ್ತು ಅಧಿಕಾರಿಗಳು ಸರ್ವ ಸನ್ನದ್ಧರಾಗಿ ನಿಂತಿದ್ದರು ಅನ್ನೋದು ಮಾತ್ರ ದುರಂತ ಸತ್ಯ..


ಇಂಥಾ ಭ್ರಷ್ಟರ ಹಗರಣಗಳನ್ನು ಬಯಲಿಗೆಳೆದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಸಾಹಸ ಸಾಧನೆಗೆ ನಿಜಕ್ಕೂ ಕನ್ನಡಿಗರಾದ ನಾವು ಸಲಾಂ ಹೇಳಲೇಬೇಕು..!!

ಆದ್ರೆ ಬಯಲಿಗೆ ಬಾರದ ಇಂಥಾ ಅದೆಷ್ಟೋ ಹಗರಣಗಳು ಇನ್ನೂ ಕರ್ನಾಟಕದ ಭೂಗರ್ಭದಲ್ಲಿ ಹೂತುಕೊಂಡಿವೆ.. ಅವುಗಳೆಲ್ಲಾ ಹೊರಗೆ ಬಂದರೆ ಇನ್ನಷ್ಟು ಹೆಗ್ಗಣಗಳ ಹಗರಣ ಬಯಲಾಗಲಿದೆ..

 ಇನ್ನಾದ್ರೂ ಮುಂದಿನ ಚುನಾವಣೆಯಲ್ಲಿ ಯೋಗ್ಯರನ್ನು ಆರಿಸಿ.. ಅಯೋಗ್ಯರನ್ನು ಮತ್ತೆ  ಆರಿಸಿದ್ರೆ ಕರ್ನಾಟಕವನ್ನು ಬಗೆದು ತಿನ್ನೋ ಭೂ-ಭಕ್ಷಕರು ನಮ್ಮನ್ನೂ ಬಗೆದು    ತಿನ್ನೋದ್ರಲ್ಲಿ ಸಂಶಯವೇ ಇಲ್ಲ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು