ಸಿನೆಮಾ

Share This Article To your Friends

ಖುರ್ಷಿದ್ ಕುತಂತ್ರ..?

ಚುನಾವಣೆ ಗೆಲ್ಲೋಕೆ ಖುರ್ಷಿದ್ ಕುತಂತ್ರ..?
ಪೊಳ್ಳು ಮಾತಿಗೆ ನಂಬಿದ್ರೆ ದೇಶ ಅತಂತ್ರ..?
ನಿಜವಾಗ್ಲೂ ಸಿಕ್ಕಿದ್ಯಾ ನಮಗೆ ಸ್ವತಂತ್ರ..?

ಕೋಮುವಾದಿಗಳನ್ನು ಹುಟ್ಟುಹಾಕುತ್ತಿರುವ ಸಲ್ಮಾನ್ ಖುರ್ಷಿದ್..
ಹೌದು... ಕಾನೂನು ಮತ್ತು ಅಲ್ಪ ಸಂಖ್ಯಾತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಖುರ್ಷಿದ್ ಈಗ ಆ ಅಲ್ಪಸಂಖ್ಯಾತರನ್ನು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎತ್ತಿ ಕಟ್ಟುತ್ತಿದ್ದಾರೆ..ಮುಸಲ್ಮಾನರನ್ನು ತಮ್ಮತ್ತ ಸೇಳೆಯುವ ಉದ್ದೇಶದಿಂದ ಜಾತಿ ರಾಜಕಾರಣ ಮಾತ್ರವಲ್ಲ, ಧರ್ಮ ರಾಜಕಾರಣ ಮಾಡಿ ದೇಶವನ್ನು ಮತ್ತೆ ಇಬ್ಬಾಗ ಮಾಡುವ ತಂತ್ರಕ್ಕೆ ಮುನ್ನುಡಿ ಹಾಕುತ್ತಿದ್ದಾರೆ..

ಉತ್ತರಪ್ರದೇಶದ ಫಾರುಕಾಬಾದ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪತ್ನಿ ಲೂಯಿಸ್ ಪರ ಚುನಾವಣಾ ಪ್ರಚಾರದ ವೇಳೆ ಮುಸಲ್ಮಾನರಿಗೆ ಶೇಕಡಾ 9 ರಷ್ಟು ಮೀಸಲಾತಿ ದೊರಕಿಸುವುದಾಗಿ ಪೊಳ್ಳು ಬರವಸೆ ನೀಡಿದ್ದಾರ.. ಆದ್ರೆ ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ಕೇಂದ್ರ ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿತ್ತು.

 ಮುಸಲ್ಮಾನರಿಗೆ ಸರ್ಕಾರೀ ವ್ಯವಸ್ಥೆಯಲ್ಲಿ ಹೆಚ್ಚಿನ ಸೌಲಭ್ಯ ಕೊಡಿಸಲಾಗುವುದು ಅಂತ ಪೊಳ್ಳು ಭರವಸೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.. ಆದ್ರೆ ಇದುವರೆಗೂ ಇವರು ತಮ್ಮವರಿಗೆ ಆಗಲೀ ಅಥವಾ ಇತರೆ ಅಲ್ಪ ಸಂಖ್ಯಾತರಿಗೇ ಆಗಲಿ ಇವರು ಅದೇನು ಮಾಡಿದ್ದಾರೆ..? ಈಗ ತನ್ನ ಹೆಂಡತಿ ಚುನಾವಣೆಗೆ ನಿಲ್ಲುತ್ತಿದ್ದಾಳೆ.. ಹೇಗಾದ್ರೂ ಮಾಡಿ ಅವರನ್ನು ಗೆಲ್ಲಿಸಬೇಕು.. ಇದೇ ಖುರ್ಷಿದ್ ಕುತಂತ್ರ.. ಆದ್ರೆ ಇವರಿಗೆ ನಿಜವಾಗಲೂ ದೇಶಾಭಿಮಾನ ಮತ್ತು ಜನರಿಗೆ ಒಳ್ಳೆಯದು ಮಾಡುವ ಉದ್ದೇಶ ಇದ್ಯಾ...? ಅಕಸ್ಮಾತ್ ಏನಾದ್ರೂ ಒಳ್ಳೆದು ಮಾಡೋ ಉದ್ದೇಶ ಇದ್ರೆ ಮೊದಲು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲಿ.. ಆಗ ಕೇವಲ ಮುಸಲ್ಮಾನರು ಮಾತ್ರವಲ್ಲ ಇಡೀ ಭಾರತೀಯರೆಲ್ಲರೂ ಆರಾಮಾಗಿರ‍್ತಾರೆ.. ಅದನ್ನು ಬಿಟ್ಟು ಕೇವಲ ಚುನಾವಣಾ ಗಿಮಿಕ್ ಗೋಸ್ಕರ ಇಂಥಾ ಹೇಳಿಕೆಯನ್ನು ನೀಡಿ ನಮ್ಮಲ್ಲಿರುವಂಥ ಜಾತ್ಯಾತೀತ ಭಾವನೆಗೆ ಧಕ್ಕೆ ತಂದು ದೇಶದ ಶಾಂತಿಗೆ ಧಕ್ಕೆ ನೀಡುವ ಮಾತುಗಳನ್ನು ಆಡೋದು ಸೂಕ್ತವಲ್ಲ.. ದೇಶ ಒಡೆಯುವವರನ್ನು ನಾವು ಉಗ್ರಗಾಮಿಗಳು ಅಂತ ಕರಿಯೋದಾದ್ರೆ, ಇಂಥವರನ್ನು ಏನಂತ ಕರೀಬಹುದು...?

ನಿಮ್ಮ ಸವಿ ನೆನಪಿನ
ಶೇಖ್(ಸ್ಪಿಯ)ರ‍್
9980868898
9738627263
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು