ಸಿನೆಮಾ

Share This Article To your Friends

ಸ್ವಾತಂತ್ರ ಹೋರಾಟದ ದಿಕ್ಕನ್ನೇ ಬದಲಿಸಿದ ಪುಟ್ಟ ಮಗು....!!ಹಿಂದೆಂದೂ ಕಾಣದಂಥ ವೈಭೋಗದಿಂದ ನಮ್ಮ ದೇಶ ರಾರಾಜಿಸ್ತಾ ಇತ್ತು.. ವಜ್ರ ವೈಢೂರ್ಯಗಳನ್ನು, ಮುತ್ತು ರತ್ನಗಳನ್ನು ಸೇರಿನಲ್ಲಿ ಅಳೆದು ಮಾರಲಾಗುತ್ತಿದ್ದ ವಿಶ್ವದ ಅತ್ಯಂತ ಶ್ರೀಮಂತ ದೇಶ ಅನ್ನೋ ಹಿರಿಮೆಗೆ “ನಮ್ಮ ಭಾರತ” ದೇಶ ಪಾತ್ರವಾಗಿತ್ತು.. ಅಷ್ಟೇ ಅಲ್ಲ, ಭಾರತದ “ಮೆಣಸು” ಭೂಮಂಡಲದಲ್ಲಿ ಎಲ್ಲೂ ಸಿಗ್ತಾ ಇರಲಿಲ್ಲ.. ಈ ಮೆಣಸಿಗಾಗಿಯೇ ವಿಶ್ವ ಎಲ್ಲಾ ದೇಶಗಳು ಹಾತೊರೀತಾ ಇದ್ದವು.. ರೋಮ್ ನ ಇತಿಹಾಸ ತಜ್ಞ “ಪ್ಲೀನಿ” “ರೋಮ್ ನ ಸಂಪತ್ತೆಲ್ಲವೂ ಭಾರತದ ಮೆಣಸಿಗಾಗಿಯೇ ಖರ್ಚಾಗುತ್ತಿದೆ” ಎಂದು ಕಣ್ಣೀರು ಹಾಕಿದ್ನಂತೆ.. ಅಬ್ಬಾ.. ಎಂಥಾಹಿರಿಮೆ ಅಲ್ವಾ ಭಾರತಕ್ಕೆ.??
    ಆದ್ರೆ ಭಾರತೀಯರು ಉದಾರವಾದಿಗಳು, ವಿಶಾಲ ಮನೋಭಾವದವರೂ ಆಗಿದ್ದರು.. ಆ ವಿಶಾಲ ಭಾವನೆಯೇ ನಮಗೆ ಮುಳ್ಳಾಯ್ತು.. ಸಾಂಬಾರು ಪದಾರ್ಥಗಳಿಗಾಗಿ ಬಂದ ಬ್ರಿಟೀಷರು ನಮ್ಮನ್ನೇ ಆಳೋಕೆ ಶುರು ಮಾಡಿದ್ರು.. ಅನ್ನೋದು ಬಹು ದೊಡ್ಡ ದುರಂತ ಸತ್ಯ...

ಬ್ರಿಟೀಷರ ಗುಲಾಮ ಗಿರಿಯ ವಿರುದ್ಧ ಅನೇಕ ದಂಗೆಗಳಾದವು.. ಕ್ರಾಂತಿಗಳು ನಡೆದವು.. ಆದ್ರೆ ಸೂಕ್ತ ನಾಯಕತ್ವದ ಕೊರತೆ ಮತ್ತು ಒಳ ಪಿತೂರಿಗಳಿಂದಾಗಿ ಆ ದಂಗೆಗಳು ವಿಫಲವಾದವು.. ದೇಶ ಕಂಗೆಟ್ಟು ಕುಳಿತಿತ್ತು.. ಮಹಾನ್ ಪುರುಷನ ಆಗಮನಕ್ಕಾಗಿ ದೇಶವೇ ಕಾಯ್ತಾ ಇದ್ದಾಗ ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬ ಬಾಲಕನ ಜನನವಾಗುತ್ತೆ.. “ಅಮ್ಮಾ” ಎನ್ನಲೂ ಬಾರದ ಆ ಮಗು ದೇಶದ ಭವಿಷ್ಯಕ್ಕೆ ಮುನ್ನುಡಿ ಹಾಕುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ.. ಅಂದು ಆ ಪುಟ್ಟ ಬಾಲಕನಾಗಿ ಹುಟ್ಟಿದ ತೇಜೋಕಾಂತಿಯ ಆ ಪುಟ್ಟ ಬಾಲಕನೇ “ಮಹಾತ್ಮಾ ಗಾಂಧೀಜಿ”


ಹೌದು.. ಮಹಾತ್ಮ ಗಾಂಧೀಜಿ ಹುಟ್ಟಿದ್ದು 1869 ಅಕ್ಟೋಬರ್ 2 ನೇ ತಾರೀಕು.. ಗುಜರಾತ್ ನ “ಪೋರ್ ಬಂದರ್” ನಲ್ಲಿ.. ತಂದೆ ಕರಮ್ ಚಂದ್ರ ಗಾಂಧಿ.. ಕರಮ್ ಚಂದ್ರ ಗಾಂಧಿ ಬ್ರಿಟೀಷ್ ಪ್ರಾಂತ್ಯದ ಕಾಥೀವಾಡದಲ್ಲಿ ಪ್ರಧಾನ ಮಂತ್ರಿಯಾಗಿದ್ದರು..
ಕರಮ್ ಚಂದ್ರ ಗಾಂಧಿಯವರಿಗೆ ಪುತಳಿಬಾಯಿಗಿಂತ ಮೊದಲೇ ಮೂರು ವಿವಾಹಗಳಾಗಿತ್ತು.. ಮೊದಲನೆಯ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿ ಹೋದರು.. ಎರಡನೆಯ ಹೆಂಡತಿಯೂ ಮಗುವಿನ ಜನನದ ಸಂದರ್ಭದಲ್ಲಿ ತೀರಿ ಹೋದರು.. ನಂತರ ಕರಮ್ ಚಂದ್ರ ಗಾಂಧೀ ಪುತಳೀಬಾಯಿಯನ್ನು ಮದ್ವೆ ಆದ್ರು.. ಆದ್ರೆ ಮೊದಲಿಬ್ಬರು ಪತ್ನಿಯರಂತೆ ಪುತಳೀ ಬಾಯಿ ಹೆರಿಗೆಯ ಸಮಯದಲ್ಲಿ ತೀರಿಕೊಳ್ಳಲಿಲ್ಲ.. ಯಾಕೆ..?? ಈ ಹಿಂದೆ ನಡೆದಂಥ ಸರಣಿ ಸಾವಿನ ಹಿಂದೆ ಬೇರೆ ರಹಸ್ಯ ಏನಿತ್ತು..?? ಕಾಯ್ತಾ ಇರಿ ಮುಂದಿನ ಎಪಿಸೋಡ್ ನಲ್ಲಿ..!!!!


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು