ಸಿನೆಮಾ

Share This Article To your Friends

ರೆಡ್ಡಿಗಳಿಗೆ ರಿವರ್ಸ್ ಆದ ರೇಣುಕಾಚಾರ್ಯ.

ಖಾಸಗೀ ಹೊಟೆಲ್ ನಲ್ಲಿ ನಡೀತು ಗುಪ್ತ್ ಗುಪ್ತ್ ಸಭೆ…!

ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಖಾಸಗಿ ಹೊಟೆಲ್ ನಲ್ಲಿ ಬಿಜೆಪಿಯ ರೇಣುಕಾಚಾರ್ಯ ಬೆಂಬಲಿಗರ ಗುಪ್ತ ಸಭೆ ನಡೆದಿದೆ. ಈ ಮೊದಲು ರೆಡ್ಡಿ ಬ್ರದರ್ಸ್ ಜೊತೆ ಗುರುತಿಸಿಕೊಂಡಿದ್ದ ರೇಣುಕಾಚಾರ್ಯ ಈಗ ಸ್ವಂತ ಬಣವನ್ನು ಹುಟ್ಟುಹಾಕಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಶಾಸಕರು ಇವರ ಜೊತೆಯಲ್ಲಿದ್ದು ತಮ್ಮ ಬೆಂಬಲವನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲು ಗುಪ್ತ ಸಭೆ ಸೇರಿದ್ದೇವೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.


ಮುಖ್ಯ ಮಂತ್ರಿಯವರಿಗೆ ಮಾತ್ರ ತಮ್ಮ ಬೆಂಬಲವಿದೆ ಅವರೇ ನಮ್ಮ ಮುಖಂಡರು ಎಂದು ಹೇಳಿದ್ದಾರೆ. ಆಗಸ್ಟ್ 2ರಂದು ದಾವಣೆಗೆರೆಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಜೊತೆಗಿರಲಿದ್ದೇವೆ. ರೆಡ್ಡಿಗಳು ಹೇಳಿದಂತೆ ಕೇಳುವುದಿಲ್ಲ. ನಮ್ಮ ನಾಯಕರು ಯಡಿಯೂರಪ್ಪನವರು ಅವರು ಹೇಳಿದಂತೆ ಕೇಳುತ್ತೇವೆ. ನಮ್ಮ25 ಶಾಸಕರೂ ಮುಖ್ಯಮಂತ್ರಿಗಳ ಜೊತೆಗಿದ್ದೇವೆ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್, ಬಾಲಚಂದ್ರ ಜಾರಕಿ ಹೋಳಿ, ಬೇಳೂರ ಗೋಪಾಲಕೃಷ್ಣ, ಹರೀಶ್ ನಂಜುಂಡ ಸ್ವಾಮಿ, ನಾಯಕ್,ಲಕ್ಷ್ಮೀ ನಾರಾಯಣ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರೆಡ್ಡಿಗಳ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತದೆ. ಅವರ ಜೊತೆಗೆ ನಾವು ಇದ್ದರೆ ಜನರ ಪ್ರೆಶ್ನೆಗೆ ಉತ್ತರ ನೀಡಲಾಗುವುದಿಲ್ಲ ರೆಡ್ಡಿಗಳಂಥ ಲಜ್ಜೆಗೆಟ್ಟವರ ಬಗ್ಗೆ ಕೇಳಬೇಡಿ ಎಂದು ರೇಣುಕಾಚಾರ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರೆಡ್ಡಿಗಳು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು ಬಿಜೆಪಿಯ ಮುಖಂಡರು ಯಾರೂ ಪಾಲ್ಗೊಳ್ಳುತ್ತಿಲ್ಲ. ಕೇವಲ ಸಚಿವ ತ್ರಯರು ಹಾಗೂ ಬಳ್ಳಾರಿಯ ಬಿಜೆಪಿಯ ಕಾರ್ಯಕರ್ತರು ಭಾಗವಹಿಸುತ್ತ್ತಿದ್ದಾರೆ. ಬಳ್ಳಾರಿಯಲ್ಲಿ ಸಮಾವೇಶವನ್ನು ನಡೆಸುತ್ತಿರುವುದರ ಹಿಂದೆಯೇ ಬಂಡಾಯ ಮುಖಂಡರು ಇಂತಹ ಗುಪ್ತ ಸಭೆಗಳು ನಡೆಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು