ಸಿನೆಮಾ

Share This Article To your Friends

ಅಪರಂಜಿ ರೆಡ್ಡಿಗಳ ರಹಸ್ಯ ಗಣಿಗಾರಿಕೆ ಎಲ್ಲಿ ನಡೆಯುತ್ತಿದೆ..?

ನಾವು ಅಪರಂಜಿ ಚಿನ್ನ. ನನ್ನ ಮಗ ಅನಿಲ್ ಲಾಡ್ ಕೂಡ ಅಪ್ಪಟ ಅಪರಂಜಿ. ೨೪ ಕ್ಯರೇಟ್ ಚಿನ್ನ. ಹೀಗೆ ಹೇಳಿದ್ದು ಪ್ರವಾಸೊದ್ಯಮ ಸಚಿವ ಜನಾರ್ಧನ ರೆಡ್ಡಿ. ನಮ್ಮಮೇಲೆ ಪ್ರತಿ ಪಕ್ಷಗಳು ಸುಖಾ-ಸುಮ್ಮನೆ ಆರೋಪ ಮಾಡುತ್ತಿವೆ. ನಾವು ಯಾವುದೇ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ನಾವು ಮತ್ತು ನಮ್ಮ ಕುಟುಂಬ ಅಪ್ಪಟ ಅಪರಂಜಿ ಎಂದು ಸ್ವತಃ ಅವ್ರೇ ಹೇಳಿಕೊಂಡಿದ್ದಾರೆ. ಆದರೆ ಅಪ್ಪಟ ಅಪರಂಜಿಯಂಥ ಮೈನಿಂಗ್ ಕಂಪನಿಯ ಮೇಲೆ ಹೈ ಕೊರ್ಟ್ ಯಾಕೆ ೯ ನೋಟೀಸ್ ನೀಡಿತ್ತು ಎಂದು ಅವರು ತಿಳಿಸಲಿಲ್ಲ. ಬಳ್ಳಾರಿಯಲ್ಲಿ ಅಕ್ರಮ ನಡೆಯುತ್ತಿಲ್ಲ ಎಂದು ಇಷ್ಟುದಿನ ಹೇಳುತ್ತಿದ್ದ ಜನಾರ್ಧನರೆಡ್ಡಿ ಈಗ ತಮ್ಮ ರಾಗವನ್ನೇ ಬದಲಿಸುತ್ತಿದ್ದಾರೆ. ಮೊನ್ನೆಯಷ್ಟೇ ದೆಹಲಿಗೆ ಹೋಗಿ “ತಾಯಿ”ಸುಶ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ್ ನಂತರ ನಮ್ಮ ಗಣಿಗಾರಿಕೆ ಕರ್ನಾಟಕದಲ್ಲಿಯೇ ಇಲ್ಲ. ಆಂಧ್ರಪ್ರದೇಶದಲ್ಲಿ ಮಾತ್ರ ನಮ್ಮ ಗಣಿಗಾರಿಗೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪಾಪ ರೆಡ್ಡಿಗಳಿಗೆ ಅವರ ಗಣಿಗಾರಿಕೆ ಎಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆಯೂ ಅರುವಿಲ್ಲ ಎಂದು ಕಾಣಿಸುತ್ತಿದೆ. ದೆಹಲಿಗೆ ಹೋಗಿ ಬಂದ ಮೇಲೆ ತಾಯಿ ಕಣ್ಣು ತೆರೆಸಿರ ಬಹುದು ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು